ನಿರೂಪಕಿ Anupama Gowdaಗೆ ಕೊರೋನಾ ಪಾಸಿಟಿವ್!

Suvarna News   | Asianet News
Published : Jan 16, 2022, 01:04 PM IST
ನಿರೂಪಕಿ Anupama Gowdaಗೆ ಕೊರೋನಾ ಪಾಸಿಟಿವ್!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಕೊರೋನಾ ಸೋಂಕು ದೃಢಪಟ್ಟಿದೆ, ಎಂದು ಹಂಚಿಕೊಂಡ ಜನಪ್ರಿಯ ನಿರೂಪಕಿ...

ಕನ್ನಡ  ಕಿರುತೆರೆ ಲೋಕದ ಜನಪ್ರಿಯ ನಿರೂಪಕಿ ಅನುಪಮಾ ಗೌಡ (Anupama Gowda) ಇಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೊರೋನಾ ಸೋಂಕು ತಗುಲಿರುವುದರ ಬಗ್ಗೆ ಬರೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಅನುಪಮಾ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಿದ್ದರು, ಹೀಗಾಗಿ ನೀವು ತುಂಬಾ ಬೇಗ ಚೇತರಿಸಿಕೊಳ್ಳುವಿರಿ, ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

'ನನಗೆ ಕೋವಿಡ್‌19 ಪಾಸಿಟಿವ್ (Covid Positive) ಎಂದು ತಿಳಿದು ಬಂದಿದೆ. ನಾನು ಈಗ ಒಕೆ, ಐಸೋಲೇಟ್ (Isolate) ಆಗಿರುವೆ. ಹಾಗೇ ಎಲ್ಲಾ ರೀತಿಯ ಕೋವಿಡ್‌ ಪ್ರೋಟೋಕಾಲ್‌ ಅನ್ನು ಪಾಲಿಸುತ್ತಿರುವೆ. ವೈದ್ಯರ ಸಲಹೆ ಪಡೆದುಕೊಳ್ಳುತ್ತಿರುವೆ. ಎರಡು ಮೂರು ದಿನಗಳ ಹಿಂದೆ ನನ್ನ ಸಂಪರ್ಕಕ್ಕೆ ಬಂದಿರುವವರು ದಯವಿಟ್ಟು ಕೋವಿಡ್ ಟೆಸ್ಟ್‌ ಮಾಡಿಸಿಕೊಳ್ಳಿ,' ಎಂದು ಬರೆದುಕೊಂಡಿದ್ದಾರೆ. 

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ (Nanamma SuperStar) ಕಾರ್ಯಕ್ರಮವನ್ನು ಅನುಪಮಾ ನಿರೂಪಣೆ ಮಾಡುತ್ತಾ, ತಮ್ಮ ಯುಟ್ಯೂಬ್ ಚಾನೆಲ್ (Youtube Channel) ನಡೆಸಿಕೊಂಡು ಹೋಗುತ್ತಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್‌ ಟೀಂನಲ್ಲಿರುವ ಯಶಸ್ವಿನಿ ಮಾಸ್ಟರ್ ಆನಂದ್ ಅವರಿಗೂ ಕೊರೋನಾ ಪಾಸಿಟಿವ್ ಆಗಿದೆ. 

ನಿರೂಪಕಿ Anupama Gowda ವರ್ಕೌಟ್‌, ದಿನಚರಿ ಹೀಗಿರುತ್ತಂತೆ!

'ನನಗೆ ಮತ್ತು ನನ್ನ ಗಂಡ ಮಾಸ್ಟರ್ ಆನಂದ್ ಅವರಿಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ. ನಾವು ಈಗ ಹೋಮ್ ಕ್ವಾರಂಟೈನ್ (Home Quarantine) ಆಗಿದ್ದೀನಿ. ನಮ್ಮ ಸಂಪರ್ಕಕ್ಕೆ ಬಂದಿರುವವರು ದಯವಿಟ್ಟು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ,' ಎಂದು ಯಶಸ್ವಿನಿ (Yashaswini Master Anand) ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.  ಆನಂದ್ ಪುತ್ರಿ ವಂಶಿಕಾ (Vanshika Master Anand) ಮತ್ತು ಪುತ್ರ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. 

 

ಕೆಲವು ದಿನಗಳ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಪುಟಾಣಿ ಸಮನ್ವಿ (Samanvi) ರಸ್ತೆ ಅಪಘಾತದಿಂದ ಮೃತ ಪಟ್ಟಿದ್ದಾಳೆ. ಬನಶಂಕರಿ (Banashankari) ಚಿತ್ತಾಗರದಲ್ಲಿ ಸಮನ್ವಿ ಅಂತಿಮ ಕಾರ್ಯ ಮಾಡಿದ್ದು, ಇಡೀ ನನ್ನಮ್ಮ ಸೂಪರ್ ಸ್ಟಾರ್ ತಂಡ ಆಗಮಿಸಿತ್ತು. ಹೀಗಾಗಿ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು, ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆನಂದ್ ಕುಟುಂಬ ಭಾಗಿಯಾಗಿರಲಿಲ್ಲ. 

ಕೊರೋನಾ ಸೋಂಕು ಹೆಚ್ಚಾಗುತ್ತಿದೆ, ಬೆಂಗಳೂರಿನಲ್ಲಿ  22 ಸಾವಿರ ಕೇಸ್‌ ದಾಖಲಾಗಿದೆ.ಕಳೆದ ತಿಂಗಳು ನಟ ಅರ್ಜುನ್ ಸರ್ಜಾಗೆ (Arjun Sarja) ಪಾಸಿಟಿವ್ ಆಗಿತ್ತು, ಆನಂತರ ನಟಿ ನಿಶ್ವಿತಾ ನಾಯ್ಡು (Nishvika Naidu), ಜೈ ಜಗದೀಶ್ ಹಿರಿಯ ಪುತ್ರಿ ವೈಭವಿ, ಲತಾ ಮಂಗೇಶ್ಕರ್, ಸುಸೇನ್ ಖಾನ್, ಕೀರ್ತಿ ಶೆಟ್ಟಿ, ನೆಹ್ಹಾ ಪೆಂಡ್ಸೆ ಸೇರಿದಂತೆ ಹಲವು ಸೆಲೆಬ್ರಿಟಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. 

ನಟಿ Nishvika Naiduಗೆ ಕೊರೋನಾ ಪಾಸಿಟಿವ್!

'ಕೊರೋನಾದಿಂದ ಚೇತರಿಸಿಕೊಳ್ಳುವುದು ತುಂಬಾನೇ ಕಷ್ಟ. ನನ್ನನ್ನು ಫಿಸಿಕಲಿ ವೀಕ್ ಮಾತ್ರವಲ್ಲದೇ ಮೆಂಟಲಿನೂ ತುಂಬಾನೇ ವೀಕ್ ಮಾಡಿದೆ. ನಾನು 2022ರ ಆರಂಭಕ್ಕೆ ತುಂಬಾನೇ ಪ್ಲ್ಯಾನ್ ಮಾಡಿಕೊಂಡಿದ್ದೆ, ಈ ಕೋವಿಡ್‌ ನನ್ನ ಕಾನ್ಫಿಡೆನ್ಸ್‌ ಅನ್ನು ಕಡಿಮೆ ಮಾಡಿದೆ. ಕೆಲಸ ಮಾಡುತ್ತಲೇ ಇರಬೇಕು, ಎಂದು ನಿರ್ಧರ ಮಾಡಿಕೊಂಡಿದ್ದೆ. ಆದರೆ ಈ ಸಮಯದಲ್ಲಿ ನಾನು ಚಿಂತಿಸಿರುವೆ, ಏನು ಮಾಡಬೇಕು. ನನಗೆ ಎನೆಲ್ಲಾ ಬೇಕು ಎಂದು ಪ್ಲ್ಯಾನ್ ಮಾಡಲು ಸಮಯ ಸಿಕ್ಕಿತ್ತು. ಕೆಲವೊಂದು ಕೆಟ್ಟ ಅಭ್ಯಾಸ ಮತ್ತು ಕೆಟ್ಟ ವ್ಯಕ್ತಿಗಳನ್ನು ದೂರ ಮಾಡಬೇಕು ಅಂದುಕೊಂಡಿರುವೆ. ಕಮ್‌ಬ್ಯಾಕ್ ತುಂಬಾನೇ ಸ್ಟ್ರಾಂಗ್ ಆಗಿರಲಿದೆ. ನನ್ನ ಬಗ್ಗೆ ಹೆಚ್ಚಿಗೆ ಕೇರ್ ಮಾಡಿದ ವೈದ್ಯರು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳು' ಎಂದು ವೈಭವಿ ಜಗದೀಶ್ (Vaibhavi Jai Jagadish) ಬರೆದುಕೊಂಡಿದ್ದಾರೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?