15 ವರ್ಷಗಳ ನಂತರ ಮುಂಗಾರು ಮಳೆ ಸ್ಕ್ರಿಪ್ಟ್ ಓದಿದ ಗಣೇಶ್. ಬೆಳಂಬೆಳಗ್ಗೆ ಭಟ್ಟರ ಜೊತೆ ಹೆಜ್ಜೆ ಹಾಕ್ತಿದ್ದ ಜ್ಞಾನಿ ಯಾರು ಗೊತ್ತಾ?
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಗೋಲ್ಡನ್ ಗ್ಯಾಂಗ್ (Golden Gang) ಕಾರ್ಯಕ್ರಮದಲ್ಲಿ ಮುಂಗಾರು ಮಳೆ (Munagaru Male) ತಂಡ ಪಾಲ್ಗೊಂಡಿತ್ತು. ಈ ವೇಳೆ ಯೋಗರಾಜ್ ಭಟ್ (Yogaraj Bhat) ಬಗ್ಗೆ ಯಾರಿಗೂ ತಿಳಿಯದ ಸತ್ಯ ಹಂಚಿಕೊಂಡಿದ್ದಾರೆ ಹಾಗೆಯೇ ಅವರ ಪತ್ನಿ ಇಡೀ ತಂಡಕ್ಕೆಂದು ಇಡುತ್ತಿದ್ದ ಪಾಕೆಟ್ ಮನಿ (Pocket Money) ವಿಚಾರ ರಿವೀಲ್ ಆಗಿದೆ.
ಯೋಗರಾಜ್ ಭಟ್ ಅವರ ನಿವಾಸದಲ್ಲಿ ಮುಂಗಾರು ಮಳೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿತ್ತು. ಇಡೀ ತಂಡ ಅವರ ಮನೆಯಲ್ಲಿ ಸಂಜೆವರೆಗೂ ಇದ್ದು ಕೆಲಸ ಮಾಡುತ್ತಿದ್ದರಂತೆ ಹಾಗೆ ಹೇಳುತ್ತಿದ್ದ ಹಾಗೆ ಯೋಗರಾಜ್ ಭಟ್ ಅವರ ಪತ್ನಿ ರೇಣುಕಾ ಅವರು 15 ವರ್ಷಗಳ ಹಿಂದಿನ ಮುಂಗಾರು ಮಳೆ ಸ್ಕ್ರಿಪ್ಟ್ ಬುಕ್ ಹಿಡಿದುಕೊಂಡು ವೇದಿಕೆ ಮೇಲೆ ಆಗಮಿಸಿದ್ದರು.
'ಮನೆಯಲ್ಲಿ ನೀವು ಸ್ಕ್ರಿಪ್ಟ್ ಮಾಡುತ್ತಿದ್ದ ಕಾರಣ ಮನೆಯಲ್ಲಿ ಮೇಡಂ ಏನೂ ಹೇಳುತ್ತಿಲಿಲ್ವಾ?' ಎಂದು ಗಣೇಶ್ ಪ್ರಶ್ನೆ ಮಾಡಿದ್ದಾರೆ. 'ಮನೆಯಲ್ಲಿ ಒಂದು ಸನ್ನಿ ಇತ್ತು ಆ ಸ್ಕೂಟರ್ (Scooter) ಹಾಕೊಂಡು ಕೆಲಸಕ್ಕೆ ಹೋಗುತ್ತಿದ್ದಳು ಅಗ ಪ್ರೀತಂ ಗುಬ್ಬಿ (Preetham Gubbi) ಎಂಟ್ರಿ ಕೊಡುತ್ತಿದ್ದರು. ಒಂದು ಮಜಾ ಏನ್ ಅಂದ್ರೆ ಇಡೀ ಕುಕ್ಕರ್ (Cooker) ತುಂಬಾ ಬೆಯಿಸಿ ಇಡುತ್ತಿದ್ದಳು ಯಾವ್ ಯಾವ್ ತಿನ್ತವೋ ಗೊತ್ತಿಲ್ಲ ಅಂತ. ಸೂರಿ (Suri), ದುನಿಯಾ ವಿಜಯ್ (Duniya Vijay), ಕಿಟ್ಟಿ, ನಾಗಶೇಖರ (Naga Shekar) ತುಂಬಾ ಜನರು ಸೇರುತ್ತಿದ್ದ ಮನೆ ಅದು' ಎಂದು ಯೋಗರಾಜ್ ಹೇಳಿದ್ದಾರೆ.
'ಪ್ರೀತು ನೀನು ತುಂಬಾ ಸಲ ಭಟ್ರು ಮನೆಗೆ ಹೋಗುತ್ತಿದ್ದೆ ಈ ವಿಚಾರ ರೇಣುಕಾ ಮೇಡಂಗೆ ಗೊತ್ತಿತ್ತಾ?' ಎಂದು ಗಣೇಶ್ ಕೇಳಿದ್ದಾರೆ. 'ಮೇಡಂ ಅವರಿಗೆ 100% ಗೊತ್ತಿತ್ತು ಏಕೆಂದರೆ ಅವರೇ ದಿನ ನಮಗೆ ಪಾಕೆಟ್ ಮನಿ ಇಟ್ಟು ಹೋಗುತ್ತಿದ್ದರು' ಎಂದು ಪ್ರೀತಂ ನಕ್ಕಿದ್ದಾರೆ.
'ನನ್ನ ಜೊತೆ ಮರೆಯಲಾಗದ ಒಂದು ಘಟನೆ ನಡೆದಿದೆ. ನಾವು ಮುಂಗಾರು ಮಳೆಗೆಂದು ಆಫೀಸ್ ಮಾಡಿದೆವು. ರಾತ್ರಿ 9 ಗಂಟೆ ನಾವು ಸೇರಿದಾಗ. ಭಟ್ರು ಎಸ್ಟೀಮ್ (Esteem Car) ಓಡಿಸಿಕೊಂಡು ಬಂದ್ರು. ನಾನು ಗೇಟ್ ಬಳಿ ನಿಂತಿದ್ದೆ ಕಾರು ಡೋರ್ ಹಾಕಿಕೊಂಡು ಬಂದೂ ನಾನು ನೋಡ್ತೀನಿ ಅವರ ಒಂದು ಕಾಲಿನಲ್ಲಿ ಚಪ್ಪಲಿ (Slipper) ಇದೆ, ಮತ್ತೊಂದು ಕಾಲಿನಲ್ಲಿ ಶೂ (Shoes) ಇದೆ. ಈ ತರ ನಿಮಗೆ Absent ಮೈಂಡ್ ಆದಾಗ ಬೇರೆ ಅವರ ಮನೆ ಬಾಗಿಲು ತಟ್ಟಿದ್ದೀರಾ?' ಎಂದು ಕೇಳಿದ್ದಾರೆ ಗಣೇಶ್. 'ಅದೊಂದು ಮಾಡಿಲ್ಲ ನನ್ನ ಪುಣ್ಯಕ್ಕೆ' ಎಂದು ರೇಣುಕಾ ಅವರು ಹೇಳಿದ್ದಾರೆ.
ಮೊಸಳೆ ಪಕ್ಕದಲ್ಲಿದ್ದರೂ ಚಿತ್ರೀಕರಣ; Golden Gangನಲ್ಲಿ ಸತ್ಯ ರಿವೀಲ್ ಮಾಡಿದ ನಿರ್ದೇಶಕರು!'ನನಗೆ ಒಬ್ಬ ಹುಚ್ಚ ದಿನ escort ಮಾಡುತ್ತಿದ್ದ. ಮೈ ತುಂಬಾ ಮೊಸರು ಪ್ಯಾಕೆಟ್ (Curd Packet) ಕಟ್ಟಿಕೊಂಡಿರುತ್ತಿದ್ದ. ಬೆಳಗ್ಗೆ 6.30ಕ್ಕೆ ಒಂದು ಬೀಡಿ ಅಂಗಡಿ ಇತ್ತು, ಅಲ್ಲಿ ಒಂದು ಟೀ ಕುಡಿದುಕೊಂಡು ಬಂದು, ಎರಡು ಹೂದ್ಬತ್ತಿ ತಂಗೊಂಡು ಬರ್ತಿದ್ದೆ. ಒಂದೊಂದು ಸಲ ತೀರಾ ಕತ್ತಲು ಇರುತ್ತಿತ್ತು. ಯಾರೂ ಇಲ್ಲ ಅಂದ್ರೆ ಟವಲ್‌ನಲ್ಲಿ (Towel) ಹೋಗೋದು. ಆ ಕಡೆಯಿಂದ ಒಬ್ಬ ಹುಚ್ಚ ನನ್ನ ರೀತಿಯೇ ನಡೆದುಕೊಂಡು ಬರುತ್ತಿದ್ದ, ಎನೋ ನಾವಿಬ್ಬರು ತುಂಬಾ ದಿನಗಳಿಂದ ಪರಿಚಯ ಅಂದುಕೊಂಡು ಸ್ಮೈಲ್ ಮಾಡುತ್ತಿದ್ದ. ನನ್ನ ವಾಕಿಂಗ್ ಸ್ಟೈಲ್ ಫಾಲೋ ಮಾಡಿಕೊಂಡು, ಮನೆ ತನಕ ಬಂದು ಹೋಗುತ್ತಿದ್ದ' ಎಂದು ಭಟ್ಟರು ಹೇಳಿದ್ದಾರೆ.
ದಿನ ಯೋಗರಾಜ್ ಭಟ್ಟರಿಗೆ 50 ರೂ ಯಾಕೆ ಇಡುತ್ತಿದ್ದೀರಿ, ಎಂದು ಪ್ರಶ್ನಿಸಿದ್ದಾಗ ಪತ್ನಿ ಏನಾದರೂ ಎಮರ್ಜೆನ್ಸಿ ಬಂದ್ರೆ ಅಂತ ಎಂದರು. 50 ರೂ.ನಲ್ಲಿ ಯಾವ ಎಮರ್ಜೆನ್ಸಿ ಬರುತ್ತೆ ಮೇಡಂ ಎಂದು ಪ್ರಶ್ನಿಸಿದ್ದಾಗ ಕೈ ಸನ್ನೆಯಲ್ಲಿ ಸಿಗರೇಟ್‌ಗೆ ಎಂದು ಹೇಳಿದ್ದಾರೆ. ಶನಿವಾರದ ಎಪಿಸೋಡ್ ವೀಕ್ಷಕರ ಗಮನ ಸೆಳೆದಿದೆ.