ಯಾವ ನಟನೂ ನಂಬರ್ ಹಂಚಿಕೊಳ್ಳುವುದಿಲ್ಲ ಆದರೆ ಪುನೀತ್‌ ಕೊಡುತ್ತಿದ್ದರು: Body Builder Mamatha

Suvarna News   | Asianet News
Published : Jan 17, 2022, 12:37 PM IST
ಯಾವ ನಟನೂ ನಂಬರ್ ಹಂಚಿಕೊಳ್ಳುವುದಿಲ್ಲ ಆದರೆ ಪುನೀತ್‌ ಕೊಡುತ್ತಿದ್ದರು: Body Builder Mamatha

ಸಾರಾಂಶ

20 ಸೆಕೆಂಡ್ ಆನ್‌ಸ್ಕ್ರೀನ್‌ ದೃಶ್ಯಕ್ಕೆ ಮೂರು ದಿನ ಪುನೀತ್‌ ಜೊತೆ ಚಿತ್ರೀಕರಣ ಮಾಡಿದ ಬಾಡಿ ಬಿಲ್ಡರ್ ಮಮತಾ. 

ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್ (Body Builder), ನನ್ನಮ್ಮ ಸೂಪರ್ ಸ್ಟಾರ್ (Nanamma Super Star) ಸ್ಪರ್ಧಿ ಮಮತಾ (Mamata) ಅವರು ಯುವರತ್ನ ಸಿನಿಮಾದಲ್ಲಿ 20 ಸೆಕೆಂಡ್‌ಗಳ ಕಾಲ ಮಾಸ್ ದೃಶ್ಯವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. ಅಪ್ಪು (Puneeth Rajkumar) ಅವರ ಕೊನೆಯ ಸಿನಿಮಾದಲ್ಲಿ ನಾನು ನಟಿಸಿರುವ ಎಂದು ಹೆಮ್ಮೆ ಪಡುತ್ತಿರುವ ಮಮತಾ, ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ 3 ದಿನಗಳ ಕಾಲ ಮಾಡಿದ ಚಿತ್ರೀಕರಣ ಹೇಗಿತ್ತು? ಅಪ್ಪು ಮಮತಾ ಅವರಿಗೆ ಯಾವ ರೀತಿ ಸ್ಪೂರ್ತಿ ತುಂಬುತ್ತಿದ್ದರು, ಎಂಬುದನ್ನು ಹಂಚಿಕೊಂಡಿದ್ದಾರೆ. 

ಮಮತಾ ಮಾತು:
'ನನ್ನ ಮೊದಲ ಸಿನಿಮಾವೇ ಯುವರತ್ನ (Yuvarathna). ಅದು ನನಗೆ ಸಿಕ್ಕ ಆಶೀರ್ವಾದ. ಅವರ ಕೊನೆಯ ಸಿನಿಮಾ ನನಗೆ ಮೊದಲ ಸಿನಿಮಾ. ಮೊದಲು ಅವರನ್ನು ಭೇಟಿ ಮಾಡಲು ಹೋದಾಗ ಅವರು ಶಾಕ್ ಆಗಿದ್ದರು. ಹೇಗೆ ಬಾಡಿ ಬಿಲ್ಡ್‌ ಮಾಡುತ್ತೀರಾ, ಅಂತ ಕೇಳಿದ್ದರು. ಅವರನ್ನು ಒಬ್ಬ ನಟನಾಗಿ ನೋಡುವುದಕ್ಕಿಂತ ಒಬ್ಬ ವ್ಯಕ್ತಿಯಾಗಿ ಇಷ್ಟ ಪಡುತ್ತೇನೆ. ನಾನು ಒಂದೇ ದಿನ ಸೆಟ್ಟಿಗೆ ಹೊಂದಿಕೊಳ್ಳುವಂತೆ ಮಾಡಿದ್ದರು. ಆರು ತಿಂಗಳಾದ ಮೇಲೆ ಅವರು ಹೇ ಮಮತಾ ಹೇಗಿದ್ದೀಯಾ, ಅಂತ ಕೇಳಿದ್ದರು,' ಎಂದು ಮಮತಾ ಕನ್ನಡದ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

January 26ರಂದು ಅಪ್ಪು ಅಭಿಮಾನಿಗಳಿಗೆ ಗುಡ್‌ ನ್ಯೂಸ್; James ಫಸ್ಟ್ ಲುಕ್ ರಿವೀಲ್?

'ಅವರು ತುಂಬಾ ಹಂಬಲ್ (Humbe Person). ಅವರು ಸತ್ತಿಲ್ಲ. ಅದನ್ನು ನಾನು ಇವತ್ತೂ ನಂಬಿಲ್ಲ. ಅವರು ಎಲ್ಲೋ ಶೂಟಿಂಗ್ ಮಾಡಿಕೊಂಡು ಇದ್ದಾರೆ, ಅಂತಾನೇ ಅಂದುಕೊಂಡಿದ್ದೇನೆ. ಅವರು ಸಾಕಷ್ಟು ಪಾಠಗಳನ್ನು ಕಲಿಸಿಕೊಟ್ಟು ಹೋಗಿದ್ದಾರೆ. ಜೀವನದಲ್ಲಿ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಏನೇ ಆದರೂ ನಾವು ಇನ್ನೊಬ್ಬರಿಗೆ ದಾನ ಧರ್ಮ ಮಾಡಿ, ಇನ್ನೊಬ್ಬರ ಖುಷಿಯಲ್ಲಿ ನಮ್ಮ ಖುಷಿಯನ್ನು ಕಾಣಬೇಕು ಅಂತ ಹೇಳಿಕೊಟ್ಟು ಹೋಗಿದ್ದಾರೆ. ಅದನ್ನು ನಾವು ಪಾಲಿಸಬೇಕು ಅಷ್ಟೆ' ಎಂದು ಮಮತಾ ಹೇಳಿದ್ದಾರೆ. 

ಅಪ್ಪು ಸಮಾಧಿಗೆ ಭೇಟಿ, ಬೆಂಗಳೂರಿಗೆ ಪಾದ ಯಾತ್ರೆ ಮಾಡಿದ ವಿಶೇಷ ಚೇತನ ಅಭಿಮಾನಿ

'ಓಲಂಪಿಕ್ಸ್ ನನ್ನ ಮುಂದಿನ ಗುರಿ ಅಂತ ಸರ್‌ಗೆ ನಾನು ಹೇಳಿದ್ದೆ. ನಿನಗೆ ಏನೇ ಸಹಾಯ ಬೇಕು ಅಂದರೂ ನನಗೆ ಕಾಲ್ ಮಾಡು, ಅಂತ ಹೇಳಿದ್ದರು. ನನಗೆ ಫೋನ್ ನಂಬರ್ ಕೂಡ ಕೊಟ್ಟಿದ್ದರು. ಯಾವ ಹೀರೋ ಕೂಡ ಫೋನ್ ನಂಬರ್ ಶೇರ್ ಮಾಡುವುದಿಲ್ಲ. ಅವರು ಫೋನ್ ನಂಬರ್ ಕೊಟ್ಟು, ಸಹಾಯ ಬೇಕಿದ್ದರೆ ಹೇಳು ಅಂತ ಹೇಳಿದ್ದರು. ವೀಸಾ (Visa), ಫ್ಲೈಟ್ ಟಿಕೆಟ್ (Flight tickets) ಏನೇ ಇದ್ದರೂ ಫೋನ್ ಮಾಡು ಅಂದಿದ್ದರು,' ಎಂದು ಮಮತಾ ಪುನೀತ್ ಅವರೊಟ್ಟಿಗೆ ನಡೆದ ಮಾತುಕತೆಯನ್ನು ಹಂಚಿಕೊಂಡಿದ್ದಾರೆ. 

'ಯುವರತ್ನದಲ್ಲಿ ಕಿಕ್ ಮಾಡುವ ದೃಶ್ಯ ಇತ್ತು. ಕಿಕ್ ಮಾಡಬೇಕಾದರೆ, ಅವರಿಗೆ ತಗುಲಿತ್ತು. ಆಗ ಅವರಿಗೆ ಸ್ವಲ್ಪ ನೋವಾಗಿತ್ತು. ಆ ಮೇಲೆ ಒಂದು ನನಗೆ ಇದಕ್ಕಿಂತ ಹೆಚ್ಚಿಗೆ ಫೋರ್ಸ್ ಹಾಕಬೇಕು. ಆಗಲೇ ಸೀನ್ ಚೆನ್ನಾಗಿ ಬರುವುದು, ಎಂದು ಹೇಳಿದ್ದರು. ಇಷ್ಟು ದೊಡ್ಡ ನಟನಿಗೆ ಒದ್ದು ಬಿಟ್ಟೆನಲ್ಲಾ ಅಂತ ನನಗೆ ನೋವು ಕಾಡುತ್ತಿತ್ತು. ನಾನು ಸಾರಿ ಕೇಳಿದೆ, ಅದಕ್ಕೆ ಅವರು ಇನ್ನೂ ಫೋರ್ಸ್‌ ಬೇಕು ಅಂದಿದ್ದರು. ನಾನು ಯುವರತ್ನ ಚಿತ್ರದಲ್ಲಿ ಕಾಣಿಸಿಕೊಂಡಿದ್ದು 20 ಸೆಕೆಂಡ್ಸ್ ಇರಬಹುದು. ಅದನ್ನು ನಾನು ಕೊನೆ ಉಸಿರು ಇರುವವರೆಗೂ ನೆನಪಿಸಿಕೊಳ್ಳುತ್ತೇನೆ,' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?