ಬ್ಯಾಂಕ್ ಲೋನ್ ಪಡೆಯಲು ಚಿತ್ರ ತಾರೆಯರು ಎಷ್ಟೆಲ್ಲಾ ಕಷ್ಟಪಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ
ಬಣ್ಣದ ಲೋಕದ ತಾರೆಯರಿಗೆ ಎಲ್ಲವೂ ಸುಲಭವೇ ಅಂದುಕೊಳ್ಳುವುದು ಸಾಮಾನ್ಯ ಜನರ ಅಭಿಮತ. ಚಿಟಿಕೆ ಹೊಡೆದರೆ ಸಾಕು, ಎಲ್ಲವೂ ತಂತಾನೇ ಬಂದು ಬಿಡುತ್ತದೆ, ಇವರಿಗೆ ಎಲ್ಲೇ ಹೋದರೂ ಎಲ್ಲಾ ಕೆಲಸಗಳೂ ಸಲೀಸು ಎನ್ನುವವರೇ ಹೆಚ್ಚು. ಸಿನಿಮಾ ಕ್ಷೇತ್ರಗಳಲ್ಲಿ ಟಾಪ್ಮೋಸ್ಟ್ ಸ್ಥಾನಕ್ಕೆ ಹೋದವರಿಗೆ ಈ ಮಾತು ನಿಜವೂ ಆಗಬಹುದು. ಆದರೆ ಚಿಕ್ಕ ಪುಟ್ಟ ಕಲಾವಿದರೆ ಅಥವಾ ಕಿರುತೆರೆ ಕಲಾವಿದರ ಜೀವನ ಹೇಳಿಕೊಳ್ಳುವಷ್ಟು ಸುಲಭವಲ್ಲ. ಇವರ ಸ್ಥಿತಿ ಯಾವತ್ತಿದ್ದರೂ ಅತಂತ್ರವೇ ಎಂದು ಹಲವು ಕಲಾವಿದರು ಇದಾಗಲೇ ಹೇಳಿದ್ದುಂಟು. ಅಷ್ಟಕ್ಕೂ ಬಣ್ಣದ ಲೋಕವೇ ಹಾಗಲ್ಲವೆ? ಯಾವಾಗ ಟಾಪ್ ಸ್ಥಾನಕ್ಕೆ ಏರುತ್ತಾರೆ, ಯಾವಾಗ ಮೂಲೆ ಗುಂಪಾಗುತ್ತಾರೆ ಎಂದು ಅರಿಯುವುದು ಕಷ್ಟವೇ. ಅದೇಷ್ಟೋ ತಾರೆಯರು ತಮ್ಮ ಕೊನೆಯ ಕ್ಷಣಗಳನ್ನು ಬೀದಿಯಲ್ಲಿ ಕಳೆದದ್ದು, ಬೀದಿ ಬದಿಯ ಹೆಣವಾಗಿ ಬಿದ್ದದ್ದು, ಅವರನ್ನು ನೋಡಲು ಯಾರೂ ಬರದೇ ಇರುವ ಬಗ್ಗೆ ಆಗಾಗ್ಗೆ ಸುದ್ದಿಗಳು ಬರುತ್ತಲೇ ಇರುತ್ತವೆ.
ಇದು ಒಂದೆಡೆಯಾದರೆ, ಹಿರಿತೆರೆಯಾಗಲೀ, ಕಿರುತೆರೆಯಾಗಲೀ ಕಲಾವಿದರಿಗೆ ಸಂಭಾವನೆ ಇದೆಯೇ ಹೊರತು ಸಂಬಳ ಇರುವುದಿಲ್ಲ. ಇದೇ ಕಾರಣಕ್ಕೆ ಬ್ಯಾಂಕ್ಗಳಿಂದ ಸಾಲ ತೆಗೆದುಕೊಳ್ಳುವುದು ಬಲು ಕಷ್ಟ. ಸಂಬಳ ಪಡೆಯುವ ಚಿಕ್ಕ ಪುಟ್ಟ ನೌಕಕರೇ ತಮಗೆ ಬೇಕಾದಷ್ಟು ಸಾಲ ಪಡೆಯಲು ಹರಸಾಹಸ ಮಾಡಬೇಕು ಎನ್ನುವುದು ಬೇರೆ ವಿಷಯ ಬಿಡಿ. ಹತ್ತಾರು ದಾಖಲೆಗಳು, ಸಂಬಳ ನೋಡಿ ಸಾಲ ನೀಡುವುದು... ಇತ್ಯಾದಿ ಪ್ರಕ್ರಿಯೆಗಳಿಂದ ಬೇಕಾದಷ್ಟು ಸಾಲ ಸಿಕ್ಕವರು ಅದೃಷ್ಟವಂತರೇ ಎನ್ನಬಹುದು. ಇದೀಗ ಅದೇ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ.
ತೂಕ ಇಳಿಸಲು ತಣ್ಣೀರಿನ ಶವರ್ ಬಾತ್: ಹೇಗೆ? ಏಕೆ? ಫಿಟ್ನೆಸ್ ತಜ್ಞೆ ಶ್ವೇತಾ ಸುಲಭದ ಟಿಪ್ಸ್
ನಿರೂಪಕಿ ರ‍್ಯಾಪಿಡ್ ರಶ್ಮಿ ಅವರು ನಡೆಸಿಕೊಡುವ ಷೋನಲ್ಲಿ ಅವರು ಮನೆ ಕಟ್ಟಲು ಬ್ಯಾಂಕ್ ಸಾಲ ಪಡೆಯಲು ಅನುಭವಿಸಿದ ಕಷ್ಟದ ಕುರಿತು ಹೇಳಿಕೊಂಡಿದ್ದಾರೆ. ಬ್ಯಾಂಕ್ನವರು ಬಂದಾಗ ಪ್ಯಾಷನ್ ಇರುವವರಿಗೆ ಸಾಲ ಕೊಡುವುದಿಲ್ಲ ಎನ್ನುವ ಮಾತಿದೆ. ಇದನ್ನು ನೀವು ಒಪ್ಪುತ್ತೀರಾ ಎಂದು ರಶ್ಮಿ ಅವರು ನಮ್ರತಾಗೆ ಕೇಳಿದಾಗ, ತಮ್ಮ ಕಹಿ ಅನುಭವವನ್ನು ಅವರು ಬಿಚ್ಚಿಟ್ಟರು. ಎಂಟರ್ಟೇನ್ಮೆಂಟ್ ಇಂಡಸ್ಟ್ರಿಯವರಿಗೆ ಮನೆಗೆ ಲೋನ್ ಬೇಕು ಎಂದರೆ ಸಿಗೋದು ತುಂಬಾ ಕಷ್ಟ. ನನಗೆ ಅದರ ಕೆಟ್ಟ ಅನುಭವವಾಗಿದೆ ಎಂದರು. ಹೋದ ಬ್ಯಾಂಕ್ಗಳೆಲ್ಲವೂ ಸಾಲ ಕೊಡಲೇ ಇಲ್ಲ. ಎಲ್ಲರೂ ರಿಜೆಕ್ಟ್ ಮಾಡಿದ್ರು. ಇದಕ್ಕೆ ಕಾರಣ ನಾನು ಮನರಂಜನಾ ಉದ್ಯಮದವಳು ಎನ್ನುವುದು ಎಂದು ಹೇಳಿದರು.
ನಮಗೆ ಸಂಬಳ ಇರದ ಕಾರಣ ಈ ಸಮಸ್ಯೆ. 2-3 ತಿಂಗಳು ಹಲವು ಬ್ಯಾಂಕ್ ಓಡಾಟ ಮಾಡಿದ ಮೇಲೆ ಒಂದು ಬ್ಯಾಂಕ್ ಸಾಲ ಕೊಟ್ಟಿತು. ಐಟಿ ನೋಡಿ, ಅದೂ ಇದೂ ಡಾಕ್ಯುಮೆಂಟ್ಸ್ ತೋರಿಸಿದ ಬಳಿಕ ಅವರು ಕನ್ವಿನ್ಸ್ ಆದರು. ಕೊನೆಗೆ ರಿಯಾಲಿಟಿ ಷೋಗೆ (ಬಹುಶಃ ಬಿಗ್ಬಾಸ್ಗೆ ಇದ್ದಿರಬಹುದು) ಹೋಗ್ತಾ ಇದ್ದೇನೆ ಎಂದೆಲ್ಲಾ ಹೇಳಿದ ಮೇಲೆ ಅವರು ಹಾಗೂ ಹೀಗೂ ಸಾಲ ಕೊಟ್ಟರು. ಆ ಎಕ್ಸ್ಪೀರಿಯನ್ಸ್ ಹಾರಿಬಲ್. ನಾನು ನಟಿ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಅನುಭವಿಸಬೇಕಾಯಿತು ಎಂದಿದ್ದಾರೆ.
ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಹೇಳಿದ್ದೇನು?