ನಟಿ ಅದಿತಿ ಪ್ರಭುದೇವ ಅವರು ಇದೀಗ ಎರಡು ತಿಂಗಳ ಬಾಣಂತಿ. ಇವರು ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಅಭಿಮಾನಿಗಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಲರ್ಸ್ ಕನ್ನಡ ಚಾನೆಲ್ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್ ಪ್ರೊಮೋಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಿಯಾಲಿಟಿ ಷೋ ವೀಕ್ಷಕರು ಈ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ರಿಯಾಲಿಟಿ ಷೋಗೆ ಸಂಬಂಧಿಸಿದಂತೆ ಪ್ರತಿದಿನ ಕುತೂಹಲ ಎನ್ನುವ ಪ್ರೊಮೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಇದೇ ಜೂನ್ 8 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
ಈ ಷೋಗೆ ಸೃಜನ್ ಲೋಕೇಶ್ ಮತ್ತು ತಾರಾ ಅನುರಾಧ ಅವರು ತೀರ್ಪುಗಾರರಾಗಿ ಬರುವುದರ ಕುರಿತು ಮೊದಲೇ ತಿಳಿಸಲಾಗಿದೆ. ಇದೀಗ ಮೂರನೆಯ ತೀರ್ಪುಗಾರರು ಯಾರು ಎಂಬ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅಷ್ಟರಲ್ಲಿ ಸೃಜನ್ ಲೋಕೇಶ್ ಅವರು ಈ ಪ್ರಶ್ನೆ ಕೇಳಿದಾಗ, ಪ್ರಭುದೇವ ಅವರಿಗೆ ಕಾಲ್ ಮಾಡುವುದಾಗಿ ತಾರಾ ಹೇಳಿದ್ದರು. ಹಾಗಿದ್ದರೆ ಈ ರಿಯಾಲಿಟಿ ಷೋಗೆ ನಟ ಪ್ರಭುದೇವ್ ಅವರು ಎಂಟ್ರಿ ಕೊಡಲಿದ್ದಾರೆಯೇ ಎನ್ನುವ ಕುತೂಹಲ ಫ್ಯಾನ್ಸ್ದ್ದಾಗಿತ್ತು. ಇದೀಗ ಮತ್ತೊಂದು ಪ್ರೊಮೋ ಬಿಡುಗಡೆಯಾಗಿದೆ, ಅದರಲ್ಲಿ ನಟಿ ಅದಿತಿ ಪ್ರಭುದೇವ ಅವರ ಆಗಮನವಾಗಿದೆ.
ನಟಿ ಅದಿತಿ ಪ್ರಭುದೇವ ಮೊದಲ ಮಗಳಿಗೆ ಮೊದಲ ವರ್ಷದ ಹುಟ್ಟುಹಬ್ಬ! ಸೆಲಬ್ರೇಷನ್ ಹೇಗಿದೆ ನೋಡಿ...
ಇದರ ಪ್ರೊಮೋ ನೋಡುತ್ತಿದ್ದಂತೆಯೇ ಅಭಿಮಾನಿಗಳು ನಟಿಯ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣ, ಎರಡು ತಿಂಗಳ ಹಿಂದಷ್ಟೇ ನಟಿ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗೆ ನೋಡುವುದಾದರೆ ಈಕೆಯಿನ್ನೂ ಬಾಣಂತಿ. ಆದರೆ ಇದರ ನಡುವೆಯೇ ಶೂಟಿಂಗ್ಗೆ ಬಂದಿರುವುದು ಹಾಗೂ ರಿಯಾಲಿಟಿ ಷೋನಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನಟಿಯ ಫ್ಯಾನ್ಸ್ ಮುನಿಸು ತೋರುತ್ತಿದ್ದಾರೆ. ಮಗುವಿಗೆ ಈ ಸಂದರ್ಭದಲ್ಲಿ ಅಮ್ಮನ ಅವಶ್ಯಕತೆ ಇರುತ್ತದೆ. ರಿಯಾಲಿಟಿ ಷೋಗಳ ಶೂಟಿಂಗ್ ಎಂದರೆ ಅದು ಸುದೀರ್ಘವಾದದ್ದು. ದಿನಪೂರ್ತಿ ಶೂಟಿಂಗ್ ನಡೆಯುತ್ತದೆ. ಮಗುವನ್ನು ನೋಡಿಕೊಳ್ಳಲು ಅಜ್ಜಿ ಇದ್ದರೂ ಅಮ್ಮನಿಗೆ ಅವಳದ್ದೇ ಆದ ಕೆಲವು ಜವಾಬ್ದಾರಿಗಳು ಇರುತ್ತವೆ. ಅದನ್ನು ಮರೆತು ನೀವು ಇದರಲ್ಲಿ ಇಷ್ಟು ಬೇಗ ಪಾಲ್ಗೊಳ್ಳುವುದು ಯಾಕೋ ಸರಿ ಕಾಣುತ್ತಿಲ್ಲ ಎಂದು ಕಮೆಂಟಿಗರು ಹೇಳುತ್ತಿದ್ದಾರೆ.
ಇನ್ನು ಈ ಷೋ ಕುರಿತು ಹೇಳುವುದಾದರೆ, ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಇದೇ ಜೂನ್ 8 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಅನುಪಮಾ ಗೌಡ ಮತ್ತೆ ನಿರೂಪಕಿಯಾಗಿ ಆಗಮಿಸಲಿದ್ದಾರೆ. ಈ ಮೊದಲು ಬಿಡುಗಡೆಯಾದ ಪ್ರೊಮೋದಲ್ಲಿ ಜಡ್ಜ್ ಗಳು ಮತ್ತು ನಿರೂಪಕಿಯನ್ನು ಪರಿಚಯಿಸಲಾಗಿತ್ತು. ತಾರಾ ಅವರು ಏನೋ ಸೃಜಾ ಹೊಸ ಗಾಳಿ ಬೀಸ್ತಿರೋ ಹಾಗಿದೆ ಎಂದಾಗ, ಸೃಜನ್ ನನಗೂ ಹಾಗೆ ಅನಿಸ್ತಿದೆ ಅಂತಾರೆ, ಆವಾಗ ಹಿಂದಿನಿಂದ ಮೆಲ್ಲಗೆ ಬರೋ ಅನುಪಮಾ ಗೌಡ, ಹೊಸಬಳೇನು ಅಲ್ಲ, ಎಷ್ಟು ವರ್ಷಗಳಿಂದ ಇಲ್ಲೇ ಇದ್ದೀನಿ ಎನ್ನುವ ಮೂಲಕ ಇವರೇ ನಿರೂಪಕಿ ಎಂದು ತೋರಿಸಲಾಗಿತ್ತು. ಇದೀಗ ಅದಿತಿ ಪ್ರಭುದೇವ ಅವರ ಆಗಮನದ ಬಗ್ಗೆ ತಿಳಿಸಲಾಗಿದೆ. ಅನುಪಮಾ ನಿರೂಪಕಿಯಾಗಿದ್ದಾರೆ ಅಂದ್ರೆ, ಈ ಸೀಸನ್ ಅರ್ಧ ಗೆದ್ದಂಗೆ ಎಂದು ಕೆಲವರು ಹೇಳಿದರೆ, ಹೆಚ್ಚಿನ ಜನರು ಅನುಪಮಾರನ್ನು ಮತ್ತೆ ಕಲರ್ಸ್ ಕನ್ನಡದಲ್ಲಿ ನೋಡೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರೊಮೋ ತುಂಬಾ ಕ್ಯೂಟ್ ಆಗಿದೆ ಅಂತಾನೂ ಜನ ಹೇಳ್ತಿದ್ದಾರೆ. ಇನ್ನು ಈ ಸೀಸನ್ ಹೇಗಿರಲಿದೆ ಎನ್ನುವ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಯಾವುದಕ್ಕೂ ಜೂನ್ 8ರವರೆಗೂ ಕಾದು ನೋಡಬೇಕು.
ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..