ಸೀತಾ-ರಾಮರ ಎಂಗೇಜ್​ಮೆಂಟ್​ಗೆ ಕ್ಷಣಗಣನೆ- ಅದ್ಧೂರಿ ಅಲಂಕಾರ... ಆಮಂತ್ರಣ ಸಿಕ್ಕಿದ್ಯಾ?

Published : May 28, 2024, 01:19 PM IST
ಸೀತಾ-ರಾಮರ ಎಂಗೇಜ್​ಮೆಂಟ್​ಗೆ ಕ್ಷಣಗಣನೆ- ಅದ್ಧೂರಿ ಅಲಂಕಾರ... ಆಮಂತ್ರಣ ಸಿಕ್ಕಿದ್ಯಾ?

ಸಾರಾಂಶ

ಸೀತಾ-ರಾಮರ ಎಂಗೇಜ್​ಮೆಂಟ್​ಗೆ ಕ್ಷಣಗಣನೆ ಆರಂಭವಾಗಿದ್ದು, ಅದ್ಧೂರಿ ಅಲಂಕಾರ ಮಾಡಲಾಗಿದೆ. ಇನ್ನಾದರೂ ಸುಸೂತ್ರವಾಗಿ ನೆರವೇರತ್ತಾ ಮದುವೆ?  

ಎಲ್ಲಾ ಅಡೆ ತಡೆಗಳನ್ನು ಮೀರಿ ಸೀತಾ ಮತ್ತು ರಾಮ್​ ಎಂಗೇಜ್​ಮೆಂಟ್​ ನಡೆಯುತ್ತಿದೆ. ಕೊನೆಗೂ ವೀಕ್ಷಕರು ಕಾಯುತ್ತಿದ್ದ ಆ ಶುಭ ಗಳಿಗೆ ಬಂದೇ ಬಿಟ್ಟಿದೆ.  ಅಭಿಮಾನಿಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಈ ಕುರಿತು ಜೀ ಕನ್ನಡ ವಾಹಿನಿ ಪ್ರೊಮೋ ಬಿಡುಗಡೆ ಮಾಡಿದೆ. ಇದರಲ್ಲಿ ಸೀತಾ ಮತ್ತು ರಾಮ ಎಂಗೇಜ್​ಮೆಂಟ್​ಗೆ ಅದ್ಧೂರಿ ಸೆಟ್​ ಹಾಕಲಾಗಿದೆ.  ಸಿಹಿ ಕುಣಿದು ಕುಣಿದು ಕುಪ್ಪಳಿಸುತ್ತಿದ್ದಾಳೆ. ಅಮ್ಮ ಮತ್ತು ಫ್ರೆಂಡ್​ ನಿಶ್ಚಿತಾರ್ಥಕ್ಕೆ ಅವಳೇ ಮುಂದಾಳತ್ವ ವಹಿಸಿದ್ದಾಳೆ. ಅತ್ತ ತಾತ ದೇಸಾಯಿ ಅವರೂ ತಾವು ಈ ಮದುವೆಗೆ ಮುನ್ನುಡಿ ಬರೆಯುವುದಾಗಿ ಹೇಳಿದ್ದಾರೆ. ಕೆಲ ತಿಂಗಳ ಹಿಂದೆ  ಕಾರಟಗಿಯಲ್ಲಿ ನಡೆದ ಪ್ರೇಮ ಸಂಗಮ ರಿಯಾಲಿಟಿ ಷೋನಲ್ಲಿ ಸೀತಾ ಮಂಡಿಯೂರಿ ರಾಮನಿಗೆ ಪ್ರೇಮ ನಿವೇದಿಸಿದ್ದಳು.  ಸೀತಾ ರಾಮ ಸೀರಿಯಲ್​ನಲ್ಲಿಯೂ ಹೀಗೇ ಆಗಲಪ್ಪ ಎಂದು ಕೆಲವರು ಆಶಿಸುತ್ತಿದ್ದರೆ, ನೀವಿಬ್ಬರೂ ನಿಜ ಜೀವನದಲ್ಲಿಯೂ ಒಂದೇ ಆಗಿ ಅಂದಿದ್ದರು ಕೆಲವರು.

ಒಟ್ಟಿನಲ್ಲಿ ಸೀರಿಯಲ್​ನಲ್ಲಿ ಇಬ್ಬರೂ ಒಂದಾಗುವ ಕಾಲ ಬಂದಿದೆ.  ಇವರಿಬ್ಬರೂ ಒಂದಾಗುವ ಲಕ್ಷಣಗಳು ಕಾಣದೇ ಇದ್ದ ಸಮಯದಲ್ಲಿ ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಇವರಿಬ್ಬರ ನಿಶ್ಚಿತಾರ್ಥಕ್ಕೆ ಯಾವುದೇ ಅಡೆ ತಡೆ ಬಾರದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಏಕೆಂದರೆ,  ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದಾಗಲೇ ಒಂದೋ ಭಾರ್ಗವಿ, ಇಲ್ಲವೇ ಚಾಂದನಿಯಿಂದ ಏನೇನೋ ಸಮಸ್ಯೆಗಳು ಆಗುತ್ತಲೇ ಇವೆ. ಅದೇ ಇನ್ನೊಂದೆಡೆ ಸಿಹಿಯ ಹುಟ್ಟಿನ ರಹಸ್ಯ ಮಾತ್ರ ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಈಕೆ ಸೀತಾಳ ಮಗಳೇ ಅಲ್ಲ ಎನ್ನುವ ವೀಕ್ಷಕರ ಅನಿಸಿಕೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಮ್​  ಜೊತೆಗೆ ಇರುವಾಗಲೇ ಈ ಗುಟ್ಟನ್ನು ಸೀತಾ ಹೇಳುತ್ತಿಲ್ಲಾ ಯಾಕೆ ಎಂದು ಸೀರಿಯಲ್​ ಫ್ಯಾನ್ಸ್​ ಪ್ರಶ್ನೆ ಮಾಡುತ್ತಿರುವ ಹೊತ್ತಲ್ಲೇ ಸಿಹಿಯ ಗುಟ್ಟನ್ನು ವಾಯ್ಸ್​ ಮೆಸೇಜ್​ ಮೂಲಕ ಸೀತಾ ಮಾಡಿ ಕಳುಹಿಸಿದ್ದಳು. ಆದರೂ ಸಿಹಿಯ ಗುಟ್ಟು ರಹಸ್ಯವಾಗಿಯೇ ಇದೆ.

ಪ್ರಿಯಾ- ಅಶೋಕ್​ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು? ವಿಡಿಯೋ ಮೂಲಕ ಫುಲ್​ ಡಿಟೇಲ್ಸ್​ ನೀಡಿದ ನಟಿ
 
ಇದೀಗ ಭಾರ್ಗವಿನೂ ವಿಧಿಯಿಲ್ಲದೇ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾಳೆ. ಆದರೆ ಮದುವೆಯಾದ ಮೇಲೆ ಸೀತಾ  ಮತ್ತು ರಾಮ್​ನನ್ನು ಬೇರೆ ಮಾಡುವುದಾಗಿ ಹೇಳಿದ್ದಾಳೆ. ಸೀತಾಳಿಗೆ ಆಗರ್ಭ ಶ್ರೀಮಂತಿಕೆ ಇಷ್ಟವಿಲ್ಲ. ಇದನ್ನೇ ದಾಳವಾಗಿಸಿಕೊಂಡು ಅವರ ಸಂಸಾರ ಛಿದ್ರ ಮಾಡುವುದಾಗಿ ಹೇಳಿದ್ದಾಳೆ. ಮುಂದೇನು ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದೆ.

ಇದಾಗಲೇ ಸೀತಾಳ ಮದುವೆ ರುದ್ರಪ್ರತಾಪನ ಜೊತೆ ನಡೆಯುತ್ತಿತ್ತು. ವಿಧಿಯಿಲ್ಲದೇ ರಾಮ್​ ಇದಕ್ಕೆ ಒಪ್ಪಿಗೆ ಕೊಟ್ಟಿದ್ದ. ಏಕೆಂದರೆ ಇಬ್ಬರೂ ಪ್ರೀತಿ ನಿವೇದನೆ ಮಾಡಿಕೊಂಡಿರಲಿಲ್ಲ.  ಆದರೆ ಮದುವೆ ಇನ್ನೇನು ನಡೆಯುತ್ತದೆ ಎನ್ನುವಾಗ ರುದ್ರಪ್ರತಾಪನ ವಿಷಯ ಗೊತ್ತಾಗಿ ಮದುವೆ ನಿಂತಿತು. ಇದೇ ಸಿಟ್ಟಿನಿಂದ ಇದೀಗ ರುದ್ರಪ್ರತಾಪ ಅಶೋಕನ ತಂಗಿಯನ್ನು ಪ್ರೀತಿಸಿದಂತೆ ನಾಟಕವಾಡಿ ಆಕೆಯ ಕುತ್ತಿಗೆಗೆ ಅರಿಶಿಣದ ಕೊಂಬು ಕಟ್ಟಿಬಿಟ್ಟಿದ್ದಾನೆ. ವೈದ್ಯೆಯಾಗಿರುವ ಆಕೆಗೆ ಮೋಸವೂ ತಿಳಿಯುವುದಿಲ್ಲವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. 

ಸಖಿಯೇ, ನನ್ನ ಕಣ್ಣನ್ನು ನೀನಾಗೇ ಓದಿಬಿಡು.. ಎಂದ ಸೀತಾರಾಮ ಅಶೋಕ: ನಾನ್‌ ರೆಡಿ ಅಂತಿದ್ದಾರೆ ಲಲನೆಯರು...


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ
Bigg Boss: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ