ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಮಾಳವಿಕಾ ಶರತ್‌ನ ಸ್ವಂತ ತಾಯಿಯಲ್ಲ ಎಂಬ ಟ್ವಿಸ್ಟ್ ಸಿಕ್ಕಿದೆ. ದೇವರ ಪ್ರಸಾದ ತಿಂದ ಶರತ್ ತಂದೆ ದಾಕ್ಷಾಯಿಣಿ ಎಂದು ಹೇಳಿದ್ದು, ಮಾಳವಿಕಾಳನ್ನು ಗೊಂದಲಕ್ಕೀಡು ಮಾಡಿದೆ. ಹಾಗಾದರೆ ದಾಕ್ಷಾಯಿಣಿಯೇ ಶರತ್ ತಾಯಿನಾ?
ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಮೊದಲ ಬಿಗ್ ಟ್ವಿಸ್ಟ್ ಸಿಕ್ಕಿದೆ. ಧಾರಾವಾಹಿ ಆರಂಭದಿಂದಲೂ ಮಾಳವಿಕಾಳೇ ಶರತ್ ತಾಯಿ ಎಂದು ತೋರಿಸಲಾಗುತ್ತದೆ. ಶರತ್ ನನ್ನ ಮಗನೇ ಎಂದು ಹಲವು ಬಾರಿ ಹೇಳಿಕೊಂಡು ಬಂದಿದ್ದಳು.ಆದರೆ ಇಂದು ಪ್ರಸಾರವಾದ ಸೀರಿಯಲ್‌ನಲ್ಲಿ ಮಾಳವಿಕಾ ಸ್ವಂತ ತಾಯಿ ಅಲ್ಲ ಅನ್ನೋದರ ಸುಳಿವು ನೀಡಲಾಗಿದೆ. ಕುಡಿದುಕೊಂಡು ಬಂದು ತರುಣ್ ಗಲಾಟೆ ಮಾಡಿದಾಗಲೂ ತಾನು ಮಗ ಶರತ್ ಪರವಾಗಿಯೇ ನಿಲ್ಲುತ್ತೇನೆ ಎಂದು ಹೇಳಿದ್ದಳು. ಸಾನ್ವಿಗೆ ಆಕೆಯ ಸ್ನೇಹಿತೆ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಸಾದ ನೀಡಿರುತ್ತಾಳೆ. ತಾಯಿಗೆ ಪ್ರಸಾದ ನೀಡಲು ಸಾನ್ವಿ ಬಂದಿರುತ್ತಾಳೆ. ಅದು ದೇವರ ಪ್ರಸಾದ ಎಂದು ತಿಳಿಯುತ್ತಲೇ ಮಾಳವಿಕಾ ಹಿಂದೇಟು ಹಾಕುತ್ತಾಳೆ. ಕೈ ತೊಳೆದುಕೊಂಡು ತೆಗೆದುಕೊಳ್ಳುವೆ. ದೇವರಕೋಣೆಯಲ್ಲಿಟ್ಟರು ಎಂದು ಹೇಳಿರುತ್ತಾಳೆ. ಆದ್ರೆ ಪೋನ್‌ನಲ್ಲಿ ಮಾತನಾಡುತ್ತಾ ಪ್ರಸಾದವನ್ನ ಡೈನಿಂಗ್ ಟೇಬಲ್ ಮೇಲಿಟ್ಟಿರುತ್ತಾಳೆ.
ಅಲ್ಲೇ ಇದ್ದ ತರುಣ್ ಸಹ ಪ್ರಸಾದವನ್ನು ತಿಂದಿರುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಶರತ್ ತಂದೆ, ಏನಿದು ಎಂದು ಕೇಳುತ್ತಾನೆ? ಪ್ರಸಾದದ ವಿಭೂತಿಯನ್ನು ಹಣೆಗೆ ಹಚ್ಚಿಕೊಳ್ಳುತ್ತಿದ್ದಂತೆ ಆತನ ನಡವಳಿಕೆಯಲ್ಲಿ ದೀರ್ಘ ಬದಲಾವಣೆ ಕಂಡು ಬರುತ್ತದೆ. ಈ ಬದಲಾವಣೆ ಕಂಡ ತರುಣ್ ಮತ್ತು ಸಾನ್ವಿ ಒಂದು ಕ್ಷಣ ಆತಂಕಕ್ಕೆ ಒಳಾಗುತ್ತಾರೆ. ಪತಿ ವಿಚಿತ್ರ ನಡೆದುಕೊಳ್ಳುತ್ತಿದ್ದಂತೆ ಅಲ್ಲಿಗೆ ಬರೋ ಮಾಳವಿಕಾ ಏನಾಯ್ತು ಎಂದು ಕೇಳುತ್ತಾಳೆ. ಚೆನ್ನಾಗಿಯೇ ಮಾತನಾಡುತ್ತಿದ್ದರು. ದೇವರ ಪ್ರಸಾದ ಹಚ್ಚಿಕೊಳ್ಳುತ್ತಿದ್ದಂತೆ ಹೀಗೆ ಆಯ್ತು ಎಂದು ತರುಣ್ ಹೇಳುತ್ತಾನೆ.
ಅಷ್ಟರಲ್ಲೇ ಶರತ್ ತಂದೆ ದಾಕ್ಷಾಯಿಣಿ ಎಂದು ಹೆಸರು ಹೇಳುತ್ತಾನೆ. ಆ ಕ್ಷಣದಲ್ಲಿ ಅಲರ್ಟ್ ಆದ ಮಾಳವಿಕಾ, ಡಾಕ್ಟರ್‌ಗೆ ಫೋನ್ ಮಾಡಿ ಎಂದು ಸಾನ್ವಿ ಮತ್ತು ತರುಣ್‌ನನ್ನ ಅಲ್ಲಿಂದ ಕಳುಹಿಸುತ್ತಾಳೆ. ನಂತರ ಗಂಡನ ಕೈ ಮೇಲೆ ತನ್ನ ಕೈಯಿರಿಸಿ ತನ್ನ ಮಂತ್ರದಿಂದ ಸರಿ ಮಾಡುತ್ತಾಳೆ. ಇಷ್ಟು ವರ್ಷದ ಬಳಿಕ ಗಂಡ ದಾಕ್ಷಾಯಿಣಿ ಹೆಸರು ಹೇಳಿದ್ಯಾಕೆ ಅನ್ನೋ ಗೊಂದಲದಲ್ಲಿ ಮಾಳವಿಕಾ ಸಿಲುಕಿದ್ದಾಳೆ. ಮತ್ತೊಂದೆಡೆ ಸಾನ್ವಿ, ಅಮ್ಮನ ಹೆಸರು ಹೇಳಿದ್ಯಾಕೆ ಎಂದು ಅನ್ನುತ್ತಾಳೆ. ಈ ಮೂಲಕ ಶರತ್ ಮತ್ತು ಸಾನ್ವಿಯ ಸ್ವಂತ ತಾಯಿ ಮಾಳವಿಕಾ ಅಲ್ಲವಾ? ಹಾಗಾದ್ರೆ ದಾಕ್ಷಾಯಿಣಿಯೇ ಶರತ್ ತಾಯಿನಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ.
ಇದನ್ನೂ ಓದಿ: 'ನಾ ನಿನ್ನ ಬಿಡಲಾರೆ' ಶೂಟಿಂಗ್ ಹೇಗೆ ಆಗಿದೆ ಗೊತ್ತಾ? | Neetha Ashok serial comeback | Suvarna News
ದಮಯಂತಿಗೆ ಪಾಠ ಕಲಿಸಿದ ದುರ್ಗಾ
ಹಿತಾ ಕೈಯಲ್ಲಿದ್ದ ಆಹಾರವನ್ನು ಕಿತ್ತುಕೊಂಡು ದಮಯಂತಿ ತಿನ್ನುತ್ತಿರುತ್ತಾಳೆ. ಇದನ್ನು ನೋಡಿದ ದುರ್ಗಾ, ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾಳೆ. ಮಗು ಶಾಲೆಯಿಂದ ಬಂದಿದೆ. ಹಸಿವು ಅಂತ ಸ್ಯಾಂಡ್‌ವಿಚ್ ತಿಂತಿದ್ರೆ ಅದನ್ನು ಕಿತ್ತುಕೊಳ್ಳುತ್ತೀರಿ. ಇದು ತಪ್ಪು ಅಲ್ಲವಾ ಎಂದು ಬೈದಿದ್ದಾಳೆ. ನಮ್ಮನೆ ಮಗು, ನಾನು ಏನು ಬೇಕಾದ್ರು ಮಾಡುವೆ ಎಂದ ದಮಯಂತಿಗೆ ತಕ್ಕ ಪಾಠ ಕಲಿಸಿದ್ದಾಳೆ ದುರ್ಗಾ. ಇದರಿಂದ ಕೋಪಗೊಂಡಿರುವ ದಮಯಂತಿ, ಮಾಯಾ ಜೊತೆ ಸೇರಿ ದುರ್ಗಾಳನ್ನು ಕೆಲಸದಿಂದ ತೆಗೆಯಲು ಪ್ಲಾನ್ ಮಾಡಿದ್ದಾಳೆ.
ಇದನ್ನೂ ಓದಿ: 'ನಾ ನಿನ್ನ ಬಿಡಲಾರೆ' ಅಂತಿದ್ದಾರೆ ನಟಿ ನೀತಾ ಅಶೋಕ್; ನಿಜಕ್ಕೂ ಏನ್ ಅಯ್ತು?