ನನ್ನ ಡ್ರೆಸ್‌ ಡಿಸೈನ್ ಮಾಡೋದು, ಅಕೌಂಟ್ ನೋಡಿಕೊಳ್ಳುವುದು ಅವಳೇ; ಭಾವಿ ಪತ್ನಿ ಬಗ್ಗೆ ಶಮಂತ್

Published : Feb 24, 2025, 02:47 PM ISTUpdated : Feb 24, 2025, 02:55 PM IST
ನನ್ನ ಡ್ರೆಸ್‌ ಡಿಸೈನ್ ಮಾಡೋದು, ಅಕೌಂಟ್ ನೋಡಿಕೊಳ್ಳುವುದು ಅವಳೇ; ಭಾವಿ ಪತ್ನಿ ಬಗ್ಗೆ ಶಮಂತ್

ಸಾರಾಂಶ

'ಬಾ ಗುರು..ಬಾ ಗುರು' ಖ್ಯಾತಿಯ ಶಮಂತ್ ಗೌಡ ಮತ್ತು ಮೇಘನಾ ಮೇ ಅಥವಾ ಜೂನ್‌ನಲ್ಲಿ ವಿವಾಹವಾಗಲಿದ್ದಾರೆ. ಎಂಟು ವರ್ಷಗಳ ಪ್ರೀತಿಯ ನಂತರ, ಕುಟುಂಬದ ಒಪ್ಪಿಗೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮೇಘನಾ ಮೇಕಪ್ ಸ್ಟುಡಿಯೋ ಹೊಂದಿದ್ದು, ಶಮಂತ್ ಅವರ ಕಾರ್ಯಕ್ರಮಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಪಾತ್ರದಿಂದ ಶಮಂತ್ ಜನಪ್ರಿಯತೆ ಗಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ 'ಬಾ ಗುರು..ಬಾ ಗುರು' ಎಂಬ ಟ್ರೆಂಡ್ ಸೃಷ್ಟಿ ಮಾಡಿದ ಶಮಂತ್ ಗೌಡ ಮತ್ತು ಗೆಳತಿ ಮೇಘನಾ ಇದೇ ವರ್ಷ ಮೇ ಅಥವಾ ಜೂನ್‌ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಖತ್ ಸಿಂಪಲ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಶಮಂತ್ ಗೌಡ ತಮ್ಮ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದರು. ಮಹಿಳಾ ಅಭಿಮಾನಿಗಳು ಶಮಂತ್‌ರನ್ನು ನೋಡಿದರೆ ಸಾಕು ಫಿದಾ ಆಗುತ್ತಿದ್ದರು. ತಮ್ಮ ಕ್ರಶ್‌ ಈಗ ಮದುವೆ ಆಗುತ್ತಿದ್ದಾರೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಮದುವೆ ಮತ್ತು ತಮ್ಮ ಹುಡುಗಿ ಬಗ್ಗೆ ಶಮಂತ್ ರಿವೀಲ್ ಮಾಡಿದ್ದಾರೆ. 

'8 ವರ್ಷಗಳ ರಿಲೇಷನ್‌ಶಿಪ್‌ ನಂತರ ಹೊಸ ಅಧ್ಯಾಯ ಶುರು ಮಾಡಲು ಖುಷಿಯಾಗುತ್ತಿದೆ. ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಮೇಘನಾಳನ್ನು ಮೊದಲು ಭೇಟಿ ಮಾಡಿದ್ದು. ಅಲ್ಲಿ ಪರಿಚಯವಾಗಿದ್ದು ಆನಂತರ ಸ್ನೇಹವಾಗಿತ್ತು, ಸ್ನೇಹ ಬೆಳೆದು ಪ್ರೀತಿಯಾಗಿ ಬದಲಾಗಿತ್ತು. ನಮ್ಮ ಕ್ಲೋಸ್‌ ಸರ್ಕಲ್‌ಗೆ ಮಾತ್ರ ನಮ್ಮ ಪ್ರೀತಿ ವಿಚಾರ ತಿಳಿದಿತ್ತು. ನಮ್ಮಿಬ್ಬರ ಫ್ಯಾಮಿಲಿ ಒಪ್ಪಿಗೆ ಪಡೆದು ಅವರ ಆಶೀರ್ವಾದದಿಂದ ಈ ಸಂಬಂಧವನ್ನು ಮತ್ತೊಂದು ಅಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದು. ನಮ್ಮ ಮದುವೆಯನ್ನು ಮತ್ತಷ್ಟು ಸ್ಪೆಷಲ್ ಮಾಡಲು ಇಬ್ಬರ ಫ್ಯಾಮಿಲಿ ಪ್ಲ್ಯಾನ್ ಮಾಡುತ್ತಿದೆ. ನಮ್ಮ ಸ್ನೇಹ ಪ್ರೀತಿಗೆ ತಿರುಗಿತ್ತು ಇಲ್ಲಿ ಒಬ್ಬರನ್ನೊಬ್ಬರು ಫೋರ್ಸ್ ಮಾಡಿಲ್ಲ' ಎಂದು ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಶಮಂತ್ ಮಾತನಾಡಿದ್ದಾರೆ.

ಇವತ್ತು ಒಟ್ಟಿಗೆ ಇದ್ದು ನಾಳೆ ಬ್ರೇಕಪ್ ಮಾಡಿಕೊಳ್ಳುವ ಲವರ್ಸ್‌ಗೆ ಖಡಕ್ ಉತ್ತರ ಕೊಟ್ಟ ರಾಗಿಣಿ ಪ್ರಜ್ವಲ್

'ಮೇಘನಾ ಸ್ವಂತವಾಗಿ ಮೇಕಪ್ ಸ್ಟುಡಿಯೋ ಹೊಂದಿದ್ದಾಳೆ. ನಮ್ಮ ಫೀಲ್ಡ್‌ ಹೇಗೆ ನಡೆಯುತ್ತದೆ ಎಂದು ಆಕೆಗೆ ಚೆನ್ನಾಗಿ ಗೊತ್ತಿದೆ. ಅಲ್ಲದೆ ನನ್ನ ಕಾರ್ಯಕ್ರಮಗಳಿಗೆ ಸೀರಿಯಲ್‌ಗಳಿಗೆ ಅವಳೇ ಕಾಸ್ಟ್ಯೂಮ್ ಡಿಸೈನ್ ಮಾಡುವುದು ಹಾಗೂ ನನ್ನ ಸೋಷಿಯಲ್ ಮೀಡಿಯಾ ಪೇಜ್‌ಗಳನ್ನು ಹ್ಯಾಂಡಲ್ ಮಾಡುವುದು. ಆಕೆಯ ಸಪೋರ್ಟ್‌ನಿಂದ ನನ್ನ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಕೆಲಸ ಸುಲಭವಾಗಿತ್ತು. ನನ್ನ ಜೀವನದ ಹೊಸ ಅಧ್ಯಾಯ ಶುರು ಮಾಡಲು ಖುಷಿಯಾಗಿದ್ದೀನಿ' ಎಂದು ಶಮಂತ್ ಹೇಳಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಶಮಂತ್ ಗೌಡ ತಮ್ಮ ಹಾಡುಗಳ ಮೂಲಕ ಸಿಕ್ಕಾಪಟ್ಟೆ ಜನರ ಪ್ರೀತಿಯ ಪಡೆದರು ಅಲ್ಲಿಂದ ಕೈ ತುಂಬಾ ಆಫರ್‌ಗಳು ಹರಿದು ಬಂತು. ಈಗ ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ವೈಷ್ಣವ್‌ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

ಮಂತ್ರಾಲಯಕ್ಕೆ ಭೇಟಿ ನೀಡಿದ ಶಿವರಾಜ್‌ಕುಮಾರ್ ಫ್ಯಾಮಿಲಿ; ಫೋಟೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!