ಸೊಸೆಗೆ ಠಕ್ಕರ್‌ ಕೊಡೋ ಥರ ವೆಸ್ಟರ್ನ್‌ ಡ್ಯಾನ್ಸ್‌ ಮಾಡಿದ 'ಲಕ್ಷ್ಮೀ ನಿವಾಸ' ಮಾನಸಾ ಮನೋಹರ್‌ರ ಚಿಲ್ಲೆಸ್ಟ್‌ ಅತ್ತೆ!

Published : Apr 09, 2025, 01:19 PM ISTUpdated : Apr 09, 2025, 02:44 PM IST
ಸೊಸೆಗೆ ಠಕ್ಕರ್‌ ಕೊಡೋ ಥರ ವೆಸ್ಟರ್ನ್‌ ಡ್ಯಾನ್ಸ್‌ ಮಾಡಿದ 'ಲಕ್ಷ್ಮೀ ನಿವಾಸ' ಮಾನಸಾ ಮನೋಹರ್‌ರ ಚಿಲ್ಲೆಸ್ಟ್‌ ಅತ್ತೆ!

ಸಾರಾಂಶ

ʼಜೊತೆ ಜೊತೆಯಲಿʼ ಧಾರಾವಾಹಿ ನಟಿ ಮಾನಸಾ ಮನೋಹರ್‌ ಅವರು ಅತ್ತೆ ಜೊತೆಗೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಈಗ ಎಲ್ಲರ ಗಮನಸೆಳೆಯುತ್ತಿದೆ. 

ʼಜೊತೆ ಜೊತೆಯಲಿʼ ,ʼಲಕ್ಷ್ಮೀ ನಿವಾಸʼ ಧಾರಾವಾಹಿ ಖ್ಯಾತಿಯ ನಟಿ ಮಾನಸಾ ಮನೋಹರ್‌ ಅವರು ಈಗ ಕುಟುಂಬದ ಜೊತೆಗೆ ಊಟಿ, ಗೋವಾ ಪ್ರವಾಸದಲ್ಲಿದ್ದಾರೆ. ಈಗಾಗಲೇ ತನ್ನಂತೆ ಅತ್ತೆ ಕೂಡ ಮಾಡರ್ನ್‌ ಡ್ರೆಸ್‌ ಹಾಕಿಕೊಂಡಿರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಅವರು ಅತ್ತೆ ಜೊತೆಗೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಶೇರ್‌ ಮಾಡಿದ್ದಾರೆ.

ಅತ್ತೆ ಜೊತೆಗೆ ಸೊಸೆ ರೀಲ್ಸ್!‌ 
ಈಗ ರೀಲ್ಸ್‌ಗಳದ್ದೇ ಕಾಲ. ಕಲಾವಿದರು, ಜನಸಾಮಾನ್ಯರು ಕೂಡ ರೀಲ್ಸ್ ಮಾಡಿ, ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ತಾರೆ. ಅಂತೆಯೇ ನಟಿ ಮಾನಸಾ ಮನೋಹರ್‌ ಕೂಡ ರೀಲ್ಸ್‌ ಮಾಡುತ್ತಿರುತ್ತಾರೆ. ಈ ಬಾರಿ ಅವರು ಅತ್ತೆ ಜೊತೆಗೆ ರೀಲ್ಸ್‌ ಮಾಡಿದ್ದಾರೆ.

ಅಬ್ಬಬ್ಬಾ..ಸೊಸೆಗೆ ತಕ್ಕಂತೆ ಮಾಡರ್ನ್‌ ಡ್ರೆಸ್‌ ಹಾಕಿದ ʼಲಕ್ಷ್ಮೀ ನಿವಾಸʼ ನಟಿ ಮಾನಸಾ ಮನೋಹರ್ ಅತ್ತೆ! ಗೋವಾ Photos

ಚಿಲ್ಲೆಸ್ಟ್‌ ಅತ್ತೆ! 
ಅತ್ತೆ ಕೂಡ ಮಾನಸಾ ರೀತಿ ಮಾಡರ್ನ್‌ ಡ್ರೆಸ್‌ ಹಾಕಿದ್ದರು. ಗೋವಾದಲ್ಲಂತೂ ಅವರು ಬೋಲ್ಡ್‌ ಡ್ರೆಸ್‌ ಹಾಕಿದ್ದರು. ಈಗ ಸೊಸೆ ಜೊತೆಗೆ ಅತ್ತೆಯೂ ಕೂಲಿಂಗ್‌ ಗ್ಲಾಸ್‌ ಹಾಕಿ ಡ್ಯಾನ್ಸ್‌ ಮಾಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಮಾನಸಾ ಅವರು “ನಾನು ಚಿಲ್‌ ಆದರೆ, ನಮ್ಮತ್ತೆ ಚಿಲ್ಲೆಸ್ಟ್”‌ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋಕ್ಕೆ ಸಾಕಷ್ಟು ಜನರು ಪಾಸಿಟಿವ್‌ ಆಗಿ ಕಾಮೆಂಟ್‌ ಮಾಡಿದ್ದಾರೆ. ಇನ್ನು ಈ ವಿಡಿಯೋ ಮಾನಸಾ ಪತಿ ಪ್ರೀತಂ ಕೂಡ ಪ್ರತಿಕ್ರಿಯಿಸಿದ್ದು, “ನನ್ನ ಹುಡುಗಿಯರು” ಎಂದು ಹೇಳಿದ್ದಾರೆ. 

ಧಾರಾವಾಹಿಗಳಲ್ಲಿ ನಟನೆ! 
ʼಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾನಸಾ ಮನೋಹರ್‌ಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿತ್ತು. ಅನೇಕರು ಈ ಪಾತ್ರವನ್ನು ಮೆಚ್ಚಿಕೊಂಡಿದ್ದರು. ಅದಾದ ಬಳಿಕ ಅವರು ʼಲಕ್ಷ್ಮೀ ನಿವಾಸʼ, ʼಶಾಂಭವಿʼ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

ಸಮುದ್ರದಲ್ಲಿ ಬಿದ್ರೂ ಬದುಕಿದ ಲಕ್ಷ್ಮೀನಿವಾಸ ಜಾನು ಗೆಟಪ್ಪೇ ಚೇಂಜು: ಸೀರೆ ಬದ್ಲು ಫ್ರಾಕ್- ಭಾವನಾ ಜೊತೆ ಸ್ಟೆಪ್​

ತೂಕ ಇಳಿಕೆ
ಕೊರೊನಾ ವೈರಸ್‌ ಸೋಂಕು ಬಂದು ಲಾಕ್‌ಡೌನ್‌ ಆದ ಸಮಯದಲ್ಲಿ ಮಾನಸಾ ಮನೋಹರ್‌ ಅವರು ತೂಕ ಇಳಿಕೆ ಮಾಡಿಕೊಂಡಿದ್ದಾರೆ. ಆ ಸಮಯದಲ್ಲಿ ಅವರು 12kg ತೂಕ ಇಳಿಸಿಕೊಂಡಿದ್ದರು. ಡಯೆಟ್‌ ಹಾಗೂ ವರ್ಕೌಟ್‌ ಮಾಡಿ ಅವರು ಸಣ್ಣ ಆಗಿದ್ದರು. ಅದಾದ ಬಳಿಕ ಡಿಫರೆಂಟ್‌ ಆಗಿ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದರು.

ಎರಡನೇ ಮದುವೆ
ಈ ಹಿಂದೆ ಮದುವೆಯಾಗಿದ್ದ ಮಾನಸಾ ಮನೋಹರ್‌ ಅವರು ಡಿವೋರ್ಸ್‌ ಪಡೆದಿದ್ದರು. ಅದಾದ ಬಳಿಕ ಪ್ರೀತಂ ಎನ್ನುವವರ ಜೊತೆ ಎರಡನೇ ಮದುವೆಯಾಗಿದ್ದಾರೆ. ಬೆಂಗಳೂರಿನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ಮದುವೆ ನಡೆದಿದೆ. ಆ ನಂತರ ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದರು. ಪ್ರೀತಂ ಅವರು ಫುಟ್‌ಬಾಲ್‌ ಅಕಾಡೆಮಿ ನಡೆಸುತ್ತಿದ್ದಾರೆ. ಪ್ರೀತಂ ಹಾಗೂ ಮಾನಸಾ ಅವರು ಮ್ಯಾನಿಫೆಸ್ಟೇಶನ್‌ನಲ್ಲಿ ನಂಬಿಕೆ ಇಟ್ಟಿದ್ದರು. ಇದರಿಂದಲೇ ನಮಗೆ ನಮ್ಮ ಪ್ರೀತಿ ಸಿಕ್ಕಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾವು ಸದಾ ಪಾಸಿಟಿವ್‌ ಆಗಿ ಯೋಚಿಸ್ತೀವಿ ಎಂದು ಪ್ರೀತಂ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. 

ಸೋಶಿಯಲ್‌ ಮೀಡಿಯಾ ಮೂಲಕ ಇವರಿಬ್ಬರ ಪರಿಚಯ ಆಗಿದೆ. ಪ್ರೀತಂ ಅವರೇ ಮಾನಸಾಗೆ ಮೆಸೇಜ್‌ ಮಾಡಿ, ಹೀಗೆ ಮಾತುಕತೆ ಮುಂದುವರೆದಿತ್ತು. ಆ ವೇಳೆ ಮಾನಸಾ ಅವರು ನಟಿ ಎನ್ನೋದು ಪ್ರೀತಂಗೆ ಗೊತ್ತಿರಲಿಲ್ಲ. ನೇರವಾಗಿ ಮಾತನಾಡಿಕೊಂಡಿರೋದು ಇವರಿಬ್ಬರ ಸಂಬಂಧಕ್ಕೆ ಬುನಾದಿ ಎನ್ನಬಹುದು. ಆನಂತರದಲ್ಲಿ ಮಾನಸಾ ಅವರ ಜನ್ಮದಿನದಂದೇ ಪ್ರೀತಂ ಅವರು ಮದುವೆ ಆಗ್ತೀರಾ ಅಂತ ಕೇಳಿದ್ದರು. ಆ ನಂತರದಲ್ಲಿ ಮಾನಸಾ ಕೂಡ ಒಪ್ಪಿಗೆ ಸೂಚಿಸಿ, ಎರಡೂ ಕುಟುಂಬದವರು ಮಾತನಾಡಿಕೊಂಡು ಮದುವೆ ಮಾಡಿಸಿದ್ದಾರೆ. ಒಟ್ಟಿನಲ್ಲಿ ಈ ಜೀವನ ತುಂಬ ಚೆನ್ನಾಗಿದೆ, ಪ್ರೀತಂ ರೀತಿ ಹುಡುಗನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ ಎಂದು ಮಾನಸಾ ಹೇಳಿದ್ದರು.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!