ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಕನ್ನಡ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ!

Published : Apr 08, 2025, 11:09 PM ISTUpdated : Apr 09, 2025, 10:54 AM IST
ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಕನ್ನಡ ಧಾರಾವಾಹಿ ನಟಿ ಪ್ರಿಯಾಂಕಾ ಚಿಂಚೋಳಿ!

ಸಾರಾಂಶ

ನಟಿ ಪ್ರಿಯಾಂಕಾ ಚಿಂಚೋಳಿ ಲಂಡನ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 2021ರಲ್ಲಿ ರಾಕೇಶ್ ಕುಮಾರ್ ಜೊತೆ ವಿವಾಹವಾದ ಪ್ರಿಯಾಂಕಾ, ತದನಂತರ ವಿದೇಶಕ್ಕೆ ತೆರಳಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ರಿಯಾಂಕಾ ಅವರ ತಾಯ್ತನದ ವಿಷಯ ತಿಳಿದು ಅನೇಕರು ಶುಭ ಹಾರೈಸಿದ್ದಾರೆ. (50 words)

ʼಹರ ಹರ ಮಹಾದೇವʼ, ʼಮನಸೆಲ್ಲಾ ನೀನೆʼ ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚಿಂಚೋಳಿ ಈಗ ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೀಮಂತಕ್ಕೆ ಆಗಮಿಸಿದ್ದ ಕಿರುತೆರೆ ಗಣ್ಯರು! 
ಮಾರ್ಚ್‌ 28ರಂದು ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಫೋಟೋ ಹಂಚಿಕೊಂಡು ಅವರು ಈ ವಿಷಯ ತಿಳಿಸಿದ್ದಾರೆ. ಕಳೆದ ಜನವರಿಯಲ್ಲಿ ಅವರು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದರು. ನಟಿ ಶೋಭಿತಾ ಶಿವಣ್ಣ, ಸೂರಜ್‌ ಹೆಗಡೆ ಸೇರಿದಂತೆ ಕಿರುತೆರೆ ಗಣ್ಯರು ಈ ಸೀಮಂತಕ್ಕೆ ಆಗಮಿಸಿ, ಶುಭ ಹಾರೈಸಿದ್ದರು.

Koutilya Review:ಕಪ್ಪು ಹಣ, ಮಾದಕ ವಸ್ತುಗಳ ಘಾಟಿನಲ್ಲಿ ಕೌಟಿಲ್ಯ

ಕೋರ್ಟ್‌ ಮ್ಯಾರೇಜ್!‌ 
ಇನ್ನು ನಟಿ ಪ್ರಿಯಾಂಕಾ ಅವರು 2021ರಲ್ಲಿ ಮೊದಲು ರಾಕೇಶ್‌ ಕುಮಾರ್‌ ಎನ್ನುವವರ ಜೊತೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಮೇಲೆ ಕೋರ್ಟ್‌ ಮ್ಯಾರೇಜ್‌ ಮಾಡಿಕೊಂಡಿದ್ದರು. ಆ ನಂತರ ರೆಸಾರ್ಟ್‌ವೊಂದರಲ್ಲಿ ಅದ್ದೂರಿಯಾಗಿ ಸಂಗೀತ, ಹಳದಿ, ಮದುವೆ, ಆರತಕ್ಷತೆ ಮಾಡಿಕೊಂಡಿದ್ದರು. ಪ್ರಿಯಾಂಕಾ ನಿಶ್ಚಿತಾರ್ಥ, ಮದುವೆ ಕಾರ್ಯಕ್ರಮದಲ್ಲಿ ಎರಡು ಕುಟುಂಬಸ್ಥರು, ಕಿರುತೆರೆ ಗಣ್ಯರು ಆಗಮಿಸಿದ್ದರು. 

ಹೊಸ ಮನೆಗೆ ಕಾಲಿಟ್ಟರು!
ಪ್ರಿಯಾಂಕಾ ಅವರು ಪರಿಚಯಸ್ಥರ ಮೂಲಕ ರಾಕೇಶ್‌ ಕುಮಾರ್‌ ಪರಿಚಯ ಆಗಿತ್ತು. ರಾಕೇಶ್‌ ಕುಮಾರ್‌ ಅವರು ವಿದೇಶದಲ್ಲಿ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ ಎನ್ನಲಾಗಿದೆ. ಮದುವೆಯಾದ ಬಳಿಕ ಪ್ರಿಯಾಂಕಾ ಅವರು ಕೆಲ ದಿನಗಳ ಕಾಲ ಮಾತ್ರ ಭಾರತದಲ್ಲಿದ್ದರು. ಆನಂತರ ಅವರು ವಿದೇಶಕ್ಕೆ ತೆರಳಿದ್ದರು. ಮತ್ತೆ ಬೆಂಗಳೂರಿಗೆ ಬಂದಿದ್ದ ಅವರು 2024 ಸೆಪ್ಟೆಂಬರ್‌ನಲ್ಲಿ ಹೊಸ ಮನೆ ಖರೀದಿಸಿ ಗೃಹ ಪ್ರವೇಶ ಮಾಡಿದ್ದರು. ಆಮೇಲೆ ಸೀಮಂತಕ್ಕೆಂದು ಅವರು ಬೆಂಗಳೂರಿಗೆ ಬಂದಿದ್ದರು. 

ಕೆಲ ತಿಂಗಳುಗಳ ಹಿಂದೆ ಲಂಡನ್‌ನ ಪಾರ್ಕ್‌ನಲ್ಲಿ ತಾಯಿ ಮಡಿಲಲ್ಲಿ ಮಲಗಿರುವ ಫೋಟೋ ಹಂಚಿಕೊಂಡಿದ್ದ ಪ್ರಿಯಾಂಕಾ ಅವರು ತಾವು ಕೂಡ ತಾಯಿಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ನು ಲಂಡನ್‌ನಲ್ಲಿಯೇ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ರಾಕೇಶ್‌ ಕುಮಾರ್‌ ಹಾಗೂ ಪ್ರಿಯಾಂಕಾ ತಾಯಿ ಅವರ ಆರೈಕೆ ಮಾಡುತ್ತಿರುವಂತೆ ಕಾಣುತ್ತಿದೆ.

Koutilya ಆಡಿಯೋ ಬಿಡುಗಡೆ: 'ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳೂ ವಿಲನ್‌ಗಳೇ' ಎಂದ ಅರ್ಜುನ್‌ ರಮೇಶ್‌

ಅನೇಕರಿಂದ ಶುಭಾಶಯ 
ಪ್ರಿಯಾಂಕಾ ಚಿಂಚೋಳಿ ಈಗ ಹೆಣ್ಣು ಮಗುವಿನ ತಾಯಿ. ಈ ವಿಷಯವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಂತೆ, ಅನೇಕರು ಪ್ರಿಯಾಂಕಾಗೆ ಶುಭ ಹಾರೈಸಿದ್ದಾರೆ. 

ವಿದೇಶಕ್ಕೆ ತೆರಳಿದ ಮೇಲೆ ನಟನೆಯಿಂದ ದೂರ ಆಗಿದ್ದ ಪ್ರಿಯಾಂಕಾ ಅವರು, “ಭಾರತದಿಂದ ವಿದೇಶಕ್ಕೆ ಹೋಗೋದು ನಿಜಕ್ಕೂ ತುಂಬ ಕಷ್ಟ. ಇನ್ನು ನಮ್ಮವರನ್ನು, ನಟನೆಯನ್ನು ಬಿಟ್ಟು ಹೋಗೋದು ಸಿಕ್ಕಾಪಟ್ಟೆ ಕಷ್ಟ. ನಾನು ನಿಜಕ್ಕೂ ಬೆಂಗಳೂರನ್ನು ಮಿಸ್‌ ಮಾಡಿಕೊಳ್ತೀನಿ” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ʼಮನಸಾರೆʼ, ʼಮನಸೆಲ್ಲಾ ನೀನೆʼ ಮುಂತಾದ ಧಾರಾವಾಹಿಗಳಲ್ಲಿ ಪ್ರಿಯಾಂಕಾ ನಟಿಸಿದ್ದರು. ಅದರ ಜೊತೆಗೆ ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಗುಲ್ಬರ್ಗಾ ಮೂಲದ ಪ್ರಿಯಾಂಕಾಗೆ ತಂದೆ ಇಲ್ಲ, ತಾಯಿ ಆರೈಕೆಯಲ್ಲಿ ಅವರು ಬೆಳೆದಿದ್ದಾರೆ. ಇನ್ನು ಮಾಡೆಲ್‌ ಆಗಿದ್ದ ಪ್ರಿಯಾಂಕಾಗೆ ʼಹರ ಹರ ಮಹಾದೇವʼ ಧಾರಾವಾಹಿ ಸತಿ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ