ಸಮುದ್ರದಲ್ಲಿ ಬಿದ್ರೂ ಬದುಕಿದ ಲಕ್ಷ್ಮೀನಿವಾಸ ಜಾನು ಗೆಟಪ್ಪೇ ಚೇಂಜು: ಸೀರೆ ಬದ್ಲು ಫ್ರಾಕ್- ಭಾವನಾ ಜೊತೆ ಸ್ಟೆಪ್​

Published : Apr 09, 2025, 12:29 PM ISTUpdated : Apr 09, 2025, 01:01 PM IST
ಸಮುದ್ರದಲ್ಲಿ ಬಿದ್ರೂ ಬದುಕಿದ ಲಕ್ಷ್ಮೀನಿವಾಸ ಜಾನು ಗೆಟಪ್ಪೇ ಚೇಂಜು: ಸೀರೆ ಬದ್ಲು ಫ್ರಾಕ್- ಭಾವನಾ ಜೊತೆ ಸ್ಟೆಪ್​

ಸಾರಾಂಶ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರವು ಕುತೂಹಲ ಮೂಡಿಸಿದೆ. ನಟಿ ದಿಶಾ ರಿಯಲ್ ಲೈಫ್‌ನಲ್ಲಿ ಮಾಡೆಲ್ ಆಗಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್ ಪಡೆದಿದ್ದಾರೆ. ಚಿನ್ನುಮರಿ ಪಾತ್ರಧಾರಿ ಚಂದನಾ ಅನಂತಕೃಷ್ಣ ರಂಗಭೂಮಿ ಕಲಾವಿದೆ, ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಬಿಗ್ ಬಾಸ್ ಮತ್ತು ರಾಜಾ ರಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಲಕ್ಷ್ಮೀ ನಿವಾಸದ ಚಿನ್ನುಮರಿ ಜಾಹ್ನವಿ ಶ್ರೀಲಂಕಾದ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದು ಸದ್ಯ ಸೀರಿಯಲ್​ನಲ್ಲಿ ವಿಶ್ವನ ಮನೆ ತಲುಪಿದ್ದಾಳೆ. ವಿಶ್ವನ ಕಾರಿನ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದ ಜಾನು, ಅವನಿಗೂ ಅರಿವಿಲ್ಲದೇ ಮನೆಗೆ ಬಂದಿದ್ದಾಳೆ. ಅತ್ತ ತನ್ನ ಪತ್ನಿ ಸತ್ತೇ ಹೋದಳು ಎಂದು ಜಯಂತ್​ ಗೋಗರೆಯುತ್ತಿದ್ದಾನೆ. ಅತ್ತ ಗಂಡ ಸಿದ್ದೇಗೌಡ್ರ ಜೊತೆ ಮೋಸದಿಂದ ಮದುವೆಯಾಗಿರುವ ಕಾರಣಕ್ಕೆ ಗಂಡನ ಕಂಡರೆ ಕೋಪಗೊಂಡಿದ್ದ ಜಾನು ಅಕ್ಕ ಭಾವನಂತೆ ಆತನ ಮೇಲೆ ಲವ್​ ಶುರುವಾಗಿದೆ. ಈ ಮೂಲಕ ಸದ್ಯ, ಲಕ್ಷ್ಮೀ ನಿವಾಸ ಸೀರಿಯಲ್​ ಇದೀಗ ಸಾಕಷ್ಟು ಕುತೂಹಲ ಹಂತ ತಲುಪಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್​ ಸ್ಟೋರಿ. ಇನ್ನೊಂದೆಡೆ ಭಾವನಾ ಮತ್ತು ಸಿದ್ದೇಗೌಡ್ರು ಸ್ಟೋರಿ. ತಂಗಿ ಗಂಡನಿಂದ ಬೇರೆಯಾಗುತ್ತಿದ್ದರೆ, ಅಕ್ಕ ಗಂಡನ ಹತ್ತಿರ ಬರುತ್ತಿದ್ದಾಳೆ. ಅತ್ತ ದಾಂಪತ್ಯದಲ್ಲಿ ವಿರಸ, ಇತ್ತ ಸರಸ... 

ಇದು ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್​ ಕಥೆಯಾದ್ರೆ, ಇನ್ನು ರಿಯಲ್​ ಲೈಫ್​ನಲ್ಲಿ ಭಾವನಾ ಮತ್ತು ಚಿನ್ನುಮರಿ ಒಟ್ಟಿಗೇ ಇದ್ದು, ಇಬ್ಬರೂ ಸೇರಿ ಸಕತ್​ ರೀಲ್ಸ್ ಮಾಡಿದ್ದಾರೆ. ಇವರಿಬ್ಬರನ್ನು ಸೀರಿಯಲ್​  ನೋಡಿದವರು, ರಿಯಲ್​  ಆಗಿ ನೋಡಿದ್ರೆ ಅಬ್ಬಬ್ಬಾ ಎನ್ನೋದು ಗ್ಯಾರೆಂಟಿ. ಏಕೆಂದರೆ ಈ ಸೀರಿಯಲ್​ನಲ್ಲಿ ಇವರಿಬ್ಬರೂ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಕ್ಯಾರೆಕ್ಟರ್​ಗೆ ಅದು ತಕ್ಕದ್ದು. ಆದರೆ ರಿಯಲ್​ ಲೈಫ್​ನಲ್ಲಿ ಇಬ್ಬರೂ ಸಕತ್​ ಹಾಟ್​. ಅದರಲ್ಲಿಯೂ ಭಾವನಾ ಪಾತ್ರಧಾರಿ ದಿಶಾ ಅವರು ಒಂದು ಕೈ ಮೇಲೆ. ವಿಭಿನ್ನ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ ಗೆಟಪ್​ನಲ್ಲಿ ಇಬ್ಬರೂ ಭರ್ಜರಿ ಸ್ಟೆಪ್​ ಹಾಕಿದ್ದಾರೆ.

ಪತಿ ಎದುರು ಲಕ್ಷ್ಮೀನಿವಾಸ ಚಿನ್ನುಮರಿ ನವರಸ ಪ್ರದರ್ಶನ! ಪತ್ನಿಯ ಅಭಿನಯಕ್ಕೆ ಮನಸೋತ ಪ್ರತ್ಯಕ್ಷ್

ಅಂದಹಾಗೆ, ಈ ಸೀರಿಯಲ್​ನಲ್ಲಿ ಗರತಿ ಗೌರಮ್ಮನ ರೀತಿ ಇರೋ ಭಾವನಾ ಅರ್ಥಾತ್​ ದಿಶಾ  ಕುರಿತು ಹೇಳುವುದಾದರೆ ಇವರು ಬೆಳ್ಳಿ ಪರದೆಯ ಮೇಲೂ ಮಿಂಚಿದ್ದಾರೆ.  ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ  ನಟಿಸಿದ್ದಾರೆ.  'ಹಂಬಲ್ ಪೊಲಿಟಿಷಿಯನ್ ನಾಗರಾಜ್' ವೆಬ್ ಸೀರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ಒಂದು ವಿಶೇಷ ಎಂದರೆ ಈಚೆಗಷ್ಟೇ ದಿಶಾ ಅವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್‌ ಲಭಿಸಿತ್ತು. 2024ನೇ ಸಾಲಿನ ಪ್ರಶಸ್ತಿ ಇವರ ಪಾಲಿಗೆ ಬಂದಿದೆ. ನಟಿಯ  ನಟನಾ ಪಯಣವನ್ನು ಗಮನಿಸಿ, ಈ ಪ್ರಶಸ್ತಿ ನೀಡಲಾಗಿದೆ.   

ಇನ್ನು ಚಿನ್ನುಮರಿಯ ರಿಯಲ್​ ಹೆಸರು ಚಂದನಾ ಅನಂತಕೃಷ್ಣ. ಅವರಿಗೆ ಕೆಲ ತಿಂಗಳ ಹಿಂದಷ್ಟೇ ಉದ್ಯಮಿ ಯಶಸ್​ ಜೊತೆ ಮದ್ವೆಯಾಗಿದೆ. ಇವರದ್ದು ಅರೇಂಜ್ಡ್​ ಮ್ಯಾರೇಜ್​. ಅಂದಹಾಗೆ, ಚಂದನಾ ಕೇವಲ ಕಿರುತೆರೆ ಕಲಾವಿದೆಯಷ್ಟೇ ಅಲ್ಲದೇ,  ರಂಗಭೂಮಿ ಕಲಾವಿದೆಯೂ ಹೌದು. ಜೊತೆಗೆ ಅದ್ಭುತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು. ನಟಿ ಚಂದನಾ ಅವರು ಚಿನ್ನುಮರಿ ಆಗುವ ಮುನ್ನ,  ರಾಜಾ ರಾಣಿ  ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರ ಫೇಮಸ್​ ಆಗಿದ್ದು,   ಬಿಗ್ ಬಾಸ್   ಮನೆಗೆ ಹೋಗಿ ಬಂದ ಮೇಲೆ.  ಬಿಗ್ ಬಾಸ್ ಕನ್ನಡ 7  ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ಇವರು ಸ್ಪರ್ಧಿಸಿದ್ದರು.  ಹೂಮಳೆ  ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ  ಲಕ್ಷ್ಮೀ ನಿವಾಸ  ಸೀರಿಯಲ್‌ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.  

ಸಮುದ್ರದಲ್ಲಿ ಬಿದ್ದ 'ಲಕ್ಷ್ಮೀನಿವಾಸ' ನಟಿ ಲಿಪ್​ಸ್ಟಿಕ್​- ಹಣೆಬೊಟ್ಟಿಗೆ ಇನ್ನಿಲ್ಲದ ಬೇಡಿಕೆ! ಮಹಿಳೆಯರಿಂದ ಭಾರಿ ಒತ್ತಾಯ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?