Lakshmi Baramma Serial: ಕೀರ್ತಿ, ಲಕ್ಷ್ಮೀ ಬಿಟ್ಟು ಬೇರೆ ಹುಡುಗಿ ಜೊತೆ ಮದುವೆಯಾಗಲು ವೈಷ್ಣವ್‌ ರೆಡಿ!

Published : Jan 28, 2025, 01:27 PM ISTUpdated : Jan 28, 2025, 01:54 PM IST
Lakshmi Baramma Serial: ಕೀರ್ತಿ, ಲಕ್ಷ್ಮೀ ಬಿಟ್ಟು ಬೇರೆ ಹುಡುಗಿ ಜೊತೆ ಮದುವೆಯಾಗಲು ವೈಷ್ಣವ್‌ ರೆಡಿ!

ಸಾರಾಂಶ

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಕಾವೇರಿ ಮನೆಗೆ ಬಂದಿದ್ದು, ಲಕ್ಷ್ಮೀ ಮನೆಯಿಂದ ಹೊರಗಡೆ ಹೋಗುವ ಹಾಗೆ ಆಗಿದೆ. ಹಾಗಾದರೆ ಮುಂದೆ ಏನಾಗಲಿದೆ? 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಕುತಂತ್ರಿ ಕಾವೇರಿ ಹೊರಗಡೆ ಬಂದಿದ್ದಾಳೆ. ಆದರೆ ಲಕ್ಷ್ಮೀ ಮನೆಯಿಂದ ಹೊರಗಡೆ ಹೋಗುವ ಪರಿಸ್ಥಿತಿ ಬಂದಿದೆ. ಇನ್ನು ವೈಷ್ಣವ್ ಕೂಡ ಪತ್ನಿಗೆ ಬೆಂಬಲ ಕೊಡ್ತಿಲ್ಲ. ಇಷ್ಟು ದಿನಗಳ ಕಾಲ ಜೈಲಿನಲ್ಲಿದ್ದ ಕಾವೇರಿ ಈಗ ಮನೆಗೆ ಬಂದಿದ್ದಾರೆ. ಜೈಲಿನಲ್ಲಿದ್ದಾಗಲೇ ಕಾವೇರಿ ಲಾಯರ್‌ ಭೇಟಿ ಮಾಡಿ ಪ್ರಕರಣ ಒಪನ್‌ ಮಾಡಿಸಿ ನಿರಪರಾಧಿ ಅಂತ ಸಾಬೀತುಪಡಿಸಿಕೊಂಡಿದ್ದಾಳೆ.

ಮಾತು ಕೇಳದ ಕಾವೇರಿ! 
ಕೋರ್ಟ್‌ ಪ್ರಕರಣ ಮುಗಿದು, ಎಲ್ಲರೂ ಮನೆಗೆ ಬಂದರು. ಈಗ ಕಾವೇರಿ ತನ್ನ ಆಟ ಶುರು ಮಾಡಿದ್ದಾಳೆ. ಲಕ್ಷ್ಮೀ ಮೋಸ ಮಾಡಿದ್ದಾಳೆ, ಸಾಕಷ್ಟು ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದಾಳೆ ಅಂತ ಕಾವೇರಿ ಪದೇ ಪದೇ ಹೇಳುತ್ತಿದ್ದಾಳೆ. ಒಟ್ಟಿನಲ್ಲಿ ಲಕ್ಷ್ಮೀಯನ್ನು ಎಲ್ಲರ ಎದುರು ಕೆಟ್ಟವಳನ್ನಾಗಿ ಮಾಡೋದು ಕಾವೇರಿ ಪ್ಲ್ಯಾನ್.‌ ಇನ್ನೊಂದು ಕಡೆ ಲಕ್ಷ್ಮೀಯನ್ನು ಕಾವೇರಿಯೇ ಮನೆಯಿಂದ ಹೊರಗಡೆ ಹಾಕಿದ್ದಾಳೆ. ಸುಪ್ರೀತಾ, ಅಜ್ಜಿ ಯಾರು ಹೇಳಿದರೂ ಕಾವೇರಿ ಕೇಳಲಿಲ್ಲ.

ಈ ಸರಳತೆಯಿಂದ Bigg Boss ಹನುಮಂತಗೆ ಭಾರೀ ಲಾಭ ಆಯ್ತು, ಲಕ್ಷ ಲಕ್ಷ ಹಣ ಉಳೀತು!

ಮನೆಯವರು ಶಾಕ್!‌ 
ಇನ್ನು ಗೇಟ್‌ನಲ್ಲಿದ್ದ ಲಕ್ಷ್ಮೀಯನ್ನು ವೈಷ್ಣವ್‌ ತಡೆದು ನಿಲ್ಲಿಸಿದ್ದಾನೆ. ಆದರೆ ಲಕ್ಷ್ಮೀ ಮನೆಯಿಂದ ಹೊರಗಡೆ ಹೋಗಬೇಕೋ, ಬೇಡವೋ ಎನ್ನುವುದರ ಬಗ್ಗೆ ವೈಷ್ಣವ್‌ ಮಾತನಾಡ್ತಿಲ್ಲ. ನಾನು ನಂಬಿದ ಗಂಡ ನಾನು ಮನೆಯಿಂದ ಹೋಗಬೇಕೋ? ಬೇಡವೋ ಎಂಬ ಬಗ್ಗೆ ಮಾತನಾಡದರಿರೋದು ಲಕ್ಷ್ಮೀಗೆ ಶಾಕ್‌ ತರಿಸಿದೆ. ಇನ್ನು ಮನೆಯವರು ಕೂಡ ಶಾಕ್‌ ಆಗಿದ್ದಾರೆ, ಹಾಗಾದರೆ ಮುಂದೆ ಏನು?

ಲಕ್ಷ್ಮೀ ವಾದ ಏನು?
ನಾನು ಈ ಮನೆ ಬಿಟ್ಟು ಹೋಗೋದಿಲ್ಲ, ಕೋರ್ಟ್‌ನಲ್ಲಿ ಕಾವೇರಿ ಅತ್ತೆ ಪರ ತೀರ್ಪು ಬಂತು ಅಂದಮಾತ್ರಕ್ಕೆ ಅವರು ಒಳ್ಳೆಯವರಲ್ಲ. ಕಾವೇರಿ ಅತ್ತೆ ಕೊಲೆ ಪ್ರಯತ್ನ ಮಾಡಿದ್ದು, ಮೋಸ ಮಾಡಿದ್ದು ನನಗೆ ಗೊತ್ತಿದೆ, ಮನೆಯವರಿಗೆ ಒಳ್ಳೆಯದಾಗಲಿ ಅಂತ ನಾನು ಕೆಲ ವಿಷಯಗಳನ್ನು ಮುಚ್ಚಿಟ್ಟಿದ್ದೆ ಅಷ್ಟೇ ಎಂದು ಲಕ್ಷ್ಮೀ ವಾದ ಮಾಡಿದ್ದಾಳೆ.

BBK 11 ಮನೆಗೆ ಹೋಗೋ ಮುನ್ನ ತ್ರಿವಿಕ್ರಮ್‌ಗೆ ಲವ್ವರ್‌ ಇದ್ರಾ? ಉತ್ತರ ಕೊಟ್ಟ‌ ತ್ರಿವಿಕ್ರಮ್!‌

ವೈಷ್ಣವ್‌ಗೆ ಮತ್ತೊಂದು ಮದುವೆ! 
ಈಗಾಗಲೇ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್‌ ಆಗಿದೆ. ಅದರಲ್ಲಿ ವೈಷ್ಣವ್‌ ಮತ್ತೆ ಮದುವೆ ಆಗುತ್ತಿದ್ದಾನೆ. ಲಕ್ಷ್ಮೀಗೆ ಡಿವೋರ್ಸ್‌ ಕೊಟ್ಟು, ಕೀರ್ತಿಯನ್ನು ಬಿಟ್ಟು ವೈಷ್ಣವ್‌ ಇನ್ನೋರ್ವ ಹುಡುಗಿಯನ್ನು ಮದುವೆ ಆಗುತ್ತಿದ್ದಾನೆ. ಆದರೆ ಆ ಹುಡುಗಿಯ ಮುಖ ತೋರಿಸಿಲ್ಲ. ಇನ್ನೊಂದು ಕಡೆ ಕೀರ್ತಿ ಜೊತೆ ವೈಷ್ಣವ್‌ ಮದುವೆ ಆಗಬಾರದು ಅಂತಲೇ ಕಾವೇರಿಯು ಲಕ್ಷ್ಮೀಯನ್ನು ತನ್ನ ಸೊಸೆಯಾಗಿ ಮಾಡಿಕೊಂಡಳು. ಈಗ ಲಕ್ಷ್ಮೀ ತನ್ನ ದಾರಿಗೆ ಅಡ್ಡ ಆಗುತ್ತಿದ್ದಾಳೆ ಅಂತ ಅವಳು ಇನ್ನೊಂದು ಹುಡುಗಿ ಜೊತೆ ಮಗನ ಮದುವೆ ಮಾಡಿಸುವ ಪ್ಲ್ಯಾನ್‌ ಮಾಡಲೂಬಹುದು. ಮಗ-ಸೊಸೆ ಚೆನ್ನಾಗಿರೋದು ವೈಷ್ಣವ್‌ಗೆ ಇಷ್ಟವೇ‌ ಇಲ್ಲ. ಆದರೆ ಅವಳಿಗೆ ತಾನು ಏನು ತಪ್ಪು ಮಾಡುತ್ತಿದ್ದೀನಿ ಎನ್ನುವ ಅರಿವು ಕೂಡ ಇಲ್ಲ.‌ ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಏನಾಗಲಿವೆ? ಏನು ಟ್ವಿಸ್ಟ್‌ ಕಾದಿವೆ ಎಂಬ ಕುತೂಹಲ ಜೋರಾಗಿದೆ. ಇನ್ನು ಕಲರ್ಸ್‌ ಕನ್ನಡ ವಾಹಿನಿಯ ಧಾರಾವಾಹಿಗಳು ಒಳ್ಳೆಯ ಟ್ವಿಸ್ಟ್‌ ಕೊಡುತ್ತಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಿದೆ. ಏನಂತೀರಾ? 

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌, ವೈಷ್ಣವ್‌ ಪಾತ್ರದಲ್ಲಿ ಶಮಂತ್‌ ಬ್ರೊ ಗೌಡ, ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ, ವಿಧಿ ಪಾತ್ರದಲ್ಲಿ ಲಾವಣ್ಯಾ ಹಿರೇಮಠ, ಸುಪ್ರೀತಾ ಪಾತ್ರದಲ್ಲಿ ರಜನಿ ಪ್ರವೀಣ್ ಅವರು ನಟಿಸುತ್ತಿದ್ದಾರೆ.‌ ಈ ಧಾರಾವಾಹಿ ಆರಂಭದ ದಿನಗಳಲ್ಲಿ ಒಳ್ಳೆಯ ಟಿಆರ್‌ಪಿ ಪಡೆದಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?