
ಅವಳು ಚಿನ್ನುಮರಿ, ಇವನು ಸೈಕೋ ಜಯಂತ್. ಆರಂಭದಲ್ಲಿ ಜಯಂತ್ ಚಿನ್ನುಮರಿ ಅರ್ಥಾತ್ ಜಾಹ್ನವಿಯನ್ನು ಲವ್ ಮಾಡುವ ಪರಿ ನೋಡಿ ಎಷ್ಟೋ ಹೆಣ್ಣುಮಕ್ಕಳು ನನಗೂ ಇದೇ ರೀತಿ ಹುಚ್ಚನಂತೆ ಪ್ರೀತಿಸುವ ಗಂಡ ಬೇಕು ಅಂದುಕೊಂಡವರೇ. ಚಿನ್ನುಮರಿ ಎಷ್ಟು ಲಕ್ಕಿ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದರು. ಅಷ್ಟಕ್ಕೂ, ಬಹುತೇಕ ಹುಡುಗ-ಹುಡುಗಿಯರಿಗೆ ತಾವು ಮದುವೆಯಾಗುವವರು ನನ್ನನ್ನು ಸಿಕ್ಕಾಪಟ್ಟೆ ಪ್ರೀತಿಸಬೇಕು ಎನ್ನುವ ಮನದಾಳದ ಆಸೆ ಇದ್ದೇ ಇರುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಈ ವಿಷ್ಯದಲ್ಲಿ ಒಂದು ಹೆಜ್ಜೆ ಮುಂದೆ ಎನ್ನಬಹುದು. ದೊಡ್ಡ ಶ್ರೀಮಂತನಾಗಿರಬೇಕು, ವೆಲ್ ಸೆಟ್ಲ್ಡ್ ಆಗಿರಬೇಕು. ಫಾರಿನ್ ರಿಟರ್ನ್ ಆಗಿರಬೇಕು, ಇಂತಿಷ್ಟು ಆಸ್ತಿ ಮಾಡಿರಬೇಕು... ನಾನು ಜೀವನಪೂರ್ತಿ ಅವನ ದುಡ್ಡಿನಲ್ಲೇ ಮಜಾ ಮಾಡಬೇಕು... ಹೀಗೆಲ್ಲಾ ಅಂದುಕೊಳ್ಳುವ ಒಂದು ವರ್ಗದ ಹೆಣ್ಣುಮಕ್ಕಳಿದ್ದರೆ, ಇನ್ನು ಹಲವರು ನನ್ನ ಗಂಡನಾಗುವವ ನನ್ನನ್ನು ಬಿಟ್ಟು ಬೇರೆ ಯಾರನ್ನೂ ಅವರು ಪ್ರೀತಿಸಬಾರದು. ನನ್ನನ್ನು ಬಿಟ್ಟು ಹೋಗಬಾರದು. ನನ್ನನ್ನು ಬಿಟ್ಟು ಯಾರನ್ನೂ ನೋಡಬಾರದು, ನನ್ನನ್ನು ಹುಚ್ಚುನಂತೆ ಪ್ರೀತಿಸಬೇಕು... ಹೀಗೆ ಕನಸುಗಳಿಗೆ ಕೊನೆಯೇ ಇಲ್ಲ. ಇಂಥವರು ಜಯಂತ್ನನ್ನು ನೋಡಿ ಆರಂಭದಲ್ಲಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದರೆ, ಆ ಬಳಿಕ, ದೇವರೇ ನನಗೆ ಇಂಥ ಗಂಡ ಮಾತ್ರ ಬೇಡಪ್ಪಾ ಎಂದುಕೊಂಡರು.
ಅಂಥ ಕ್ಯಾರೆಕ್ಟರ್ ಜಯಂತ್ದು. ಇಂಥವರಿಗೆ OLD ಸಮಸ್ಯೆ ಇರುತ್ತದೆ. ಹಾಗೆ ನೋಡಿದರೆ ನಮ್ಮ ಸೊಸೈಟಿಯಲ್ಲೂ ಇಂಥಾ ಮನಸ್ಥಿತಿಯರವರು ಒಂದಿಷ್ಟು ಜನ ಇದ್ದಾರೆ. OLD ಎಂದರೆ Obsessive Love Disorder. ಅಂದ್ರೆ ಪ್ರೇಮದ ವಿಚಿತ್ರ ಗೀಳು ಎನ್ನುವುದು. ಅಂದರೆ ಇಂಥವರಿಗೆ ಪತ್ನಿ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಅಂಥವರಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ-ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾಡಿದರೆ ಅದನ್ನು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್ ಕ್ಯಾರೆಕ್ಟರ್ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ. ಈ ಕ್ಯಾರೆಕ್ಟರ್ ಅನ್ನು ನೋಡಿ ನೋಡಿ ಚಿನ್ನುಮರಿಯ ರಿಯಲ್ ಅಮ್ಮನೂ ಸುಸ್ತಾಗಿ ಹೋಗಿದ್ದರು ಎನ್ನುವ ವಿಷಯವನ್ನು ನಟಿ ಚಂದನಾ ಅನಂತಕೃಷ್ಣ ಹೇಳಿದ್ದಾರೆ.
ಮೊದಲು ಮೀಟ್ ಆದಾಗ್ಲೇ ಹೈಫೈ ಇಂಗ್ಲಿಷ್ ಮಾತಾಡಿ ನನ್ನನ್ನು ಅಳಿಸೇ ಬಿಟ್ರು: ಲಕ್ಷ್ಮೀ ನಿವಾಸ ಚಿನ್ನುಮರಿ ಕಥೆ ಕೇಳಿ!
ಕೀರ್ತಿ ಎಂಟರ್ಟೇನ್ಮೆಂಟ್ ಕ್ಲೀನಿಕ್ಗೆ ತಮ್ಮ ರಿಯಲ್ ಪತಿ ಪ್ರತ್ಯಕ್ಷ್ ಹುತ್ತಿನಗದ್ದೆ ಜೊತೆ ನಟಿ ಚಂದನಾ ಅವರು ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ನಮ್ಮದು ಅರೇಂಜ್ಡ್ ಮ್ಯಾರೇಜೆ. ಆದರೆ ಪ್ರತ್ಯಕ್ಷ್ ಜೊತೆ ಮದುವೆ ಫಿಕ್ಸ್ ಆದಾಗ, ನನ್ನಮ್ಮನಿಗೆ ಲಕ್ಷ್ಮೀ ನಿವಾಸದ ನನ್ನ ಗಂಡ ಜಯಂತನೇ ಕಾಡತೊಡಗಿದ್ದ. ಅವನನ್ನು ನೋಡಿ ರಿಯಲ್ನಲ್ಲಿಯೂ ಗಂಡ ಹಾಗೆಯೇ ಇದ್ದುಬಿಟ್ಟರೆ ಎನ್ನುವ ಭಯ ಶುರುವಾಗಿತ್ತು. ಅದಕ್ಕಾಗಿಯೇ ಅವರು ನನ್ನ ಬಳಿ, ಪ್ರತ್ಯಕ್ಷ್ ಹತ್ತಿರ ಸರಿಯಾಗಿ ಮಾತನಾಡಿದ್ದಿ ತಾನೆ, ಆತ ಜಯಂತ್ ಇದ್ದಂತೆ ಇಲ್ಲ ತಾನೆ, ಸರಿಯಾಗಿ ಎಲ್ಲಾ ವಿಚಾರಿಸಿದ್ದಿ ತಾನೇ ಎಂದೆಲ್ಲಾ ಪ್ರಶ್ನೆ ಕೇಳಿದ್ದರು. ಹೌದಮ್ಮಾ. ಮಾತನಾಡಿದ್ದೇನೆ. ಭಯ ಪಡಬೇಡ ಎಂದರೂ ಅವರಿಗೆ ಅದೇನೋ ಅಳುಕು ಇತ್ತು ಎಂದು ಚಂದನಾ ಹೇಳಿದ್ದಾರೆ. ಈಗ ಮದುವೆಯಾದ ಮೇಲೆ ಪ್ರತ್ಯಕ್ಷ್ ಅವರನ್ನು ನನಗಿಂತಲೂ ಜಾಸ್ತಿ ಪ್ರೀತಿಸ್ತಾರೆ ನನ್ನಮ್ಮ ಎಂದೂ ಹೇಳಿದ್ದಾರೆ ನಟಿ.
ನಟಿ ಚಂದನಾ ಅವರು ಚಿನ್ನುಮರಿ ಆಗುವ ಮುನ್ನ, ರಾಜಾ ರಾಣಿ ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರ ಫೇಮಸ್ ಆಗಿದ್ದು, ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ. ಬಿಗ್ ಬಾಸ್ ಕನ್ನಡ 7 ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ಇವರು ಸ್ಪರ್ಧಿಸಿದ್ದರು. ಹೂಮಳೆ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ. ಪ್ರತ್ಯಕ್ಷ್ ಚಿಕ್ಕಮಗಳೂರಿನವರು. ಇವರ ತಂದೆ ಉಯದ್ ಅವರು, ಕೆಲ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು. 1987ರಲ್ಲಿ ತೆರೆ ಕಂಡಿದ್ದ ಆರಂಭ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದವರು. ಅಗ್ನಿಪರ್ವ , ಶುಭ ಮಿಲನ , ಜಯಭೇರಿ , ಉದ್ಭವ , ಅಮೃತ ಬಿಂದು , ಶಿವಯೋಗಿ ಅಕ್ಕಮಹಾದೇವಿ , ಉಂಡು ಹೋದ ಕೊಂಡು ಹೋದ , ಕ್ರಮ ಮುಂತಾದ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಬಳಿಕ ಅವರು, ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮುಂದುವರೆಸಿದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ. 2022ರಲ್ಲಿ ಅವರು ನಿಧನರಾಗಿದ್ದು, ಪ್ರತ್ಯಕ್ಷ್ ಅವರೂ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದಾರೆ.
ಲಕ್ಷ್ಮಿನಿವಾಸದ ಚಿನ್ನುಮರಿಯ ರಿಯಲ್ ಗಂಡನನ್ನು ಮದ್ವೆಗೆ ರೆಡಿ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.