Lakshmi Baramma Serial: ಲಕ್ಷ್ಮೀ ಮನಸ್ಸು ಛಿದ್ರ ಆಯ್ತು; ಕಾವೇರಿ ತಂತ್ರಕ್ಕೆ ಮಹಾತಂತ್ರ ಹೂಡಿದ್ನಾ ವೈಷ್ಣವ್!‌

Published : Feb 19, 2025, 10:51 AM ISTUpdated : Feb 19, 2025, 11:21 AM IST
Lakshmi Baramma Serial: ಲಕ್ಷ್ಮೀ ಮನಸ್ಸು ಛಿದ್ರ ಆಯ್ತು; ಕಾವೇರಿ ತಂತ್ರಕ್ಕೆ ಮಹಾತಂತ್ರ ಹೂಡಿದ್ನಾ ವೈಷ್ಣವ್!‌

ಸಾರಾಂಶ

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವೈಷ್ಣವ್‌ ಇನ್ನೊಂದು ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈ ವಿಷಯ ಕೇಳಿ ಲಕ್ಷ್ಮೀ ಮನಸ್ಸು ಛಿದ್ರ ಆಗಿದೆ.   

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಿತ್ಯ ಕಳೆದಂತೆ ಕಥೆ ಸಂಕೀರ್ಣವಾಗುತ್ತಿದೆ. ಕೀರ್ತಿ ಜೊತೆ ಬ್ರೇಕಪ್‌ ಆದ್ಮೇಲೆ ಲಕ್ಷ್ಮೀ ಜೊತೆ ವೈಷ್ಣವ್‌ ಮದುವೆ ಆಯ್ತು. ಈಗ ಲಕ್ಷ್ಮೀಯಿಂದ ಸಂಬಂಧ ಕಡಿದುಕೊಂಡಿರೋ ವೈಷ್ಣವ್‌ ಇನ್ನೊಂದು ಮದುವೆ ಆಗ್ತಾನಂತೆ.

ಎಲ್ಲರ ಜೀವನ ಹಾಳಾಯ್ತು! 
ಹೌದು, ನನ್ನನ್ನು ಮದುವೆಯಾದ ಗಂಡ, ನನ್ನನ್ನು ಪ್ರೀತಿಸೋ ಪತಿ ಈಗ ಬೇರೆ ಹುಡುಗಿಯನ್ನು ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈ ವಿಷಯ ಲಕ್ಷ್ಮೀ ಮನಸ್ಸನ್ನು ಛಿದ್ರ ಮಾಡಿದೆ. ಅತ್ತೆ ಕಾವೇರಿ ಮೋಸ, ಕುತಂತ್ರಕ್ಕೆ ಕೀರ್ತಿ ಜೀವನ ಹಾಳಾಗಿದೆ, ಈಗ ಲಕ್ಷ್ಮೀ-ವೈಷ್ಣವ್‌ ಜೀವನ ಕೂಡ ಹಳ್ಳ ಹಿಡಿಯುತ್ತಿದೆ.

ಮೇಘನಾ ಜೊತೆ ಸರಳವಾಗಿ ಎಂಗೇಜ್‌ ಆದ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಶಮಂತ್‌ ಬ್ರೊ ಗೌಡ

ಲಕ್ಷ್ಮೀ ಮೇಲೆ ವೈಷ್ಣವ್‌ ಮುನಿಸು! 
ನನ್ನಿಂದ ಲಕ್ಷ್ಮೀ ಒಂದಷ್ಟು ವಿಷಯ ಮುಚ್ಚಿಟ್ಟಳು ಅಂತ ವೈಷ್ಣವ್‌ ಅವಳ ಮೇಲೆ ಕೋಪ ಮಾಡಿಕೊಂಡಿದ್ದಾನೆ. ಇನ್ನೊಂದು ಕಡೆ ತನ್ನ ತಾಯಿ ನಿರಪರಾಧಿ ಅಂತ ಅವನು ನಂಬಿದ್ದಾನೆ. ಆದರೆ ನನ್ನ ಕೀರ್ತಿ ಸಂಬಂಧ ಮುರಿದು, ಲಕ್ಷ್ಮೀ ಜೊತೆ ಮದುವೆ ಮಾಡಿಸಿದ್ದು ಈ ಮಹಾತಾಯಿ ಅಂತ ಅವನಿಗೆ ಅರ್ಥ ಆಗ್ತಿಲ್ಲ. ಎಲ್ಲ ಧಾರಾವಾಹಿಗಳಲ್ಲಿಯೂ ಕೂಡ ಬೇರೆಯವರು ಏನೇ ಮಾಡಿದ್ರೂ ಅದನ್ನು ಬೇಗ ಕ್ಷಮಿಸಲಾಗುತ್ತದೆ ಆದರೆ ಪತ್ನಿಯೋ ಅಥವಾ ಹೀರೋಯಿನ್‌ ಮಾಡಿದ್ದೇ ತಪ್ಪಾಗಿ ಕಾಣುತ್ತದೆ. ಇಲ್ಲಿಯೇ ಇದೇ ಕಥೆ. 

ಲಕ್ಷ್ಮೀ ಸತ್ಯ ಹೇಳಬಹುದಿತ್ತು! 
ವೈಷ್ಣವ್‌ ಈ ರೀತಿ ಬದಲಾಗಿರೋದು ಲಕ್ಷ್ಮೀಗೆ ಬೇಸರ ತಂದಿದೆ. ಗಂಡನ ಬಳಿ ಲಕ್ಷ್ಮೀ ಎಲ್ಲ ಸತ್ಯವನ್ನು ಹೇಳಬಹುದಿತ್ತು. ಆದರೆ ಅವಳು ಆ ರೀತಿ ಮಾಡಲಿಲ್ಲ. ಇದೇ ವೈಷ್ಣವ್‌ಗೆ ಬೇಸರ ತಂದಿದೆ. 

ʼಲಕ್ಷ್ಮೀ ಬಾರಮ್ಮʼ ಶಮಂತ್‌ ಬ್ರೊ ಗೌಡ ಹುಡುಗಿ ಮೇಘನಾ ಬಗ್ಗೆ ಗೊತ್ತಿಲ್ಲದ ಮಾಹಿತಿ!

ಸಾಮೂಹಿಕ ಮದುವೆ! 
ಈಗ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವೈಷ್ಣವ್-ಲಕ್ಷ್ಮೀ ಅತಿಥಿಯಾಗಿ ಹೋಗಬೇಕಿದೆ. ನಾನು ಲಕ್ಷ್ಮೀ ಜೊತೆ ಅಲ್ಲಿಗೆ ಹೋಗ್ತೀನಿ ಅಂತ ವೈಷ್ಣವ್‌ ಹೇಳಿದ್ದಾನೆ. ಇದರ ಹಿಂದೆ ಏನು ಕಾರಣ ಇದ್ಯೋ ಏನೋ! ಇನ್ನೊಂದು ಕಡೆ ಸಾಮೂಹಿಕ ವಿವಾಹದಲ್ಲಿ ನಾನು ಮದುವೆ ಆಗ್ತೀನಿ ಅಂತ ವಿಧಿ ಹೇಳುತ್ತಿದ್ದಾಳೆ. ಒಟ್ಟಿನಲ್ಲಿ ಈ ಮದುವೆಯಿಂದ ಏನಾದರೂ ಬದಲಾವಣೆ ಆಗತ್ತಾ? ತಿರುವು ಸಿಗತ್ತಾ ಎಂದು ಕಾದು ನೋಡಬೇಕಿದೆ. 

ಮತ್ತೊಂದು ಮದುವೆ ಆಗತ್ತಾ?
ವೈಷ್ಣವ್‌ ಇನ್ನೊಂದು ಮದುವೆ ಆಗೋಕೆ ಸಾಧ್ಯವೇ ಇಲ್ಲ. ಇಷ್ಟುದಿನ ಕಾವೇರಿ ಅಂದುಕೊಂಡ ಹಾಗೆ ಎಲ್ಲ ಆಗುತ್ತಿರಬಹುದು. ಆದರೆ ಇಂದಲ್ಲ, ನಾಳೆ ಅವಳ ಕರ್ಮಕಾಂಡ ಎಲ್ಲವೂ ಬಯಲಾಗುತ್ತದೆ. ಇನ್ನು ಕೀರ್ತಿಗೆ ಹಳೆ ನೆನಪು ಬಂದರೆ ಮಾತ್ರ ಎಲ್ಲ ಸತ್ಯ ಬಟಾ ಬಯಲಾಗುವುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. 

ಸಿಸಿಎಲ್‌ನಲ್ಲಿ ಚಂದನ್‌ ಕುಮಾರ್‌ ಬ್ಯುಸಿ; ಮನೆಯಲ್ಲಿರೋ ಹುಡುಗನ ಜೊತೆ ʼವ್ಯಾಲಂಟೈನ್ಸ್‌ ಡೇʼ ಆಚರಿಸಿದ Kavitha Gowda!

ಕಾವೇರಿ ಮಾಡಿದ ಮೋಸ ಎಲ್ಲವೂ ಬಯಲಾಗೋದು ಕಷ್ಟ ಇದೆ. ಈ ಸತ್ಯ ಎಲ್ಲ ಹೊರಗಡೆ ಬಂದ್ಮೇಲೆ ಕಾವೇರಿ ಬದಲಾಗೋದಿಲ್ಲ. ಕಾವೇರಿ ಇನ್ನೊಂದು ಆಟ ಶುರು ಮಾಡ್ತಾಳೆ. ಹೀಗಾಗಿ ಲಕ್ಷ್ಮೀಗೆ ಯಾವಾಗ ಜಯ ಸಿಗತ್ತೋ ಏನೋ! ಒಟ್ಟಿನಲ್ಲಿ ಕಥೆ ಯಾವ ಸ್ವರೂಪ ಪಡೆದುಕೊಳ್ತಿದೆ ಎಂದು ವೀಕ್ಷಕರಿಗೆ ಅರ್ಥ ಮಾಡಿಕೊಳ್ಳೋದು ಕಷ್ಟ ಆಗಿದೆ. 

ಪಾತ್ರಧಾರಿಗಳು
ವೈಷ್ಣವ್‌ ಪಾತ್ರದಲ್ಲಿ ಶಮಂತ್‌ ಬ್ರೊ ಗೌಡ, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌, ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ, ವಿಧಿ ಪಾತ್ರದಲ್ಲಿ ಲಾವಣ್ಯಾ ಹಿರೇಮಠ, ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌ ಅವರು ನಟಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?