ನಾ ನಿನ್ನ ಬಿಡಲಾರೆ ಶೂಟಿಂಗ್ ಸೆಟ್‌ನಲ್ಲಿ ತಪ್ಪಿದ ದುರಂತ; ಅಪಾಯದಿಂದ ಪಾರಾದ ದುರ್ಗಾ!

Published : Feb 19, 2025, 09:20 AM ISTUpdated : Feb 19, 2025, 09:57 AM IST
ನಾ ನಿನ್ನ ಬಿಡಲಾರೆ ಶೂಟಿಂಗ್ ಸೆಟ್‌ನಲ್ಲಿ ತಪ್ಪಿದ ದುರಂತ; ಅಪಾಯದಿಂದ ಪಾರಾದ ದುರ್ಗಾ!

ಸಾರಾಂಶ

Naa Ninna Bidalaare Serial Durga: 'ನಾ ನಿನ್ನ ಬಿಡಲಾರೆ' ಧಾರಾವಾಹಿಯ ದುರ್ಗಾ ಅಪಾಯದಿಂದ ಪಾರಾಗಿದ್ದಾಳೆ. ಇದು ಧಾರಾವಾಹಿ ಮೇಕಿಂಗ್ ವಿಡಿಯೋದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಲೇಖನವು ಚಿತ್ರೀಕರಣದ ಸಮಯದಲ್ಲಿ ಸಂಭವಿಸಿದ ಒಂದು ಅಪಾಯದ ಬಗ್ಗೆಯೂ ಇದು ಬೆಳಕು ಚೆಲ್ಲುತ್ತದೆ.

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಸೋಮವಾರರಿಂದ ಶುಕ್ರವಾರದವರೆಗೆ  ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿರುವ 'ನಾ ನಿನ್ನ ಬಿಡಲಾರೆ'  ಧಾರಾವಾಹಿ ಜನರಿಗೆ ಹತ್ತಿರವಾಗುತ್ತಿದೆ. ಚಿತ್ರದ ಮೇಕಿಂಗ್ ಸೀನ್‌ಗಳು ಸೋಶಿಯಲ್ ಮೀಡಯಾದಲ್ಲಿಯೂ ವೈರಲ್ ಆಗುತ್ತಿವೆ. ಆರಂಭದಲ್ಲಿ ತನ್ನ ಪ್ರೋಮೋದಿಂದಲೇ  ನಾ ನಿನ್ನ ಬಿಡಲಾರೆ ವೀಕ್ಷಕರ ಗಮನ ಸೆಳೆದಿತ್ತು. ಕಲ್ಯಾಣಿಯಲ್ಲಿ ಬೀಳುವ ಮಗುವಿನ ರಕ್ಷಣೆಯಿಂದ  ಹಿಡಿದು ಸಾಹಸ ದೃಶ್ಯಗಳಿಂದಲೇ ಧಾರಾವಾಹಿ ಆರಂಭವಾಗಿತ್ತು.  ಸತ್ತರೂ ಮಗಳ ರಕ್ಷಣೆಗಾಗಿ ಆಕೆಯ ಸುತ್ತಲೇ ಸುತ್ತವ ಅಂಬಿಕಾ ಮತ್ತು ಆಕೆಯ ಪತಿಯನ್ನು ಮದುವೆಯಾಗಲು ಕುತಂತ್ರ ಮಾಡುವ ಮಾಯಾ ಮತ್ತು ಈ ಮಾಯಾಗೆ ಸಾಥ್ ಕೊಡುತ್ತಿರೋ ಮಾಳವಿಕಾ. ಇದು ಧಾರಾವಾಹಿಯ ಒಂದು ಭಾಗ. ಮತ್ತೊಂದು ಭಾಗ ಅಂದ್ರೆ ತಾಯಿ ದುರ್ಗಾದೇವಿಯ ಮುಖ ನೋಡಲು ಇಷ್ಟಪಡದ ದುರ್ಗಾಪುರದ ದುರ್ಗಾ ಕಥೆ.  

ಈ ವಾರ ಪ್ರಸಾರವಾದ ಸಂಚಿಕೆಯಲ್ಲಿ ದುರ್ಗಾ ಕಲ್ಯಾಣಿಗೆ ಇಳಿದು ಅಮೃತೇಶ್ವರ ಸ್ವಾಮೀಜಿ ಬೆಂಬಲಿಗರು ಕಲ್ಯಾಣಿಗೆ ಹಾಕಿರುವ ಶ್ರೀಚಕ್ರವನ್ನು ತೆಗದುಕೊಂಡು ಬರುತ್ತಾಳೆ. ಇದರಲ್ಲಿ ಕಲ್ಯಾಣಿಯ ಆಳದಲ್ಲಿ ಈಜುತ್ತಾ ದುರ್ಗಾ ತೆರಳುತ್ತಾಳೆ. ಶ್ರೀಚಕ್ರ ತಂದು ದೇವಸ್ಥಾನದಲ್ಲಿ ದುರ್ಗಾ ಪೂಜೆ ನೆರವೇರಿಸುತ್ತಾಳೆ. ನಂತರ ಕೆಂಡದ ಮಡಿಕೆ ಹೊತ್ತು ದುರ್ಗಾ ಊರ ಪ್ರದಕ್ಷಿಣೆ ಹಾಕಬೇಕು. ಈ ವೇಳೆ ಅಮೃತೇಶ್ವರ ಕಾರ್ ಬಂದರೂ ನಿಲ್ಲದ ದುರ್ಗಾ ಅದರ ಮೇಲೆ ಹತ್ತಿ ಹೋಗುತ್ತಾಳೆ. ಈ ರೀತಿಯಾಗಿ ಅಮೃತೇಶ್ವರ ದುರಂಹಕಾರದ ಮೇಲೆ ಹೆಜ್ಜೆ ಇಟ್ಟ ದುರ್ಗಾ ಊರಿನ ಜಾತ್ರೆ ಮಾಡುತ್ತಾಳೆ. 

ತಪ್ಪಿದ ದುರಂತ
ಇದೀಗ ಈ ಎಲ್ಲಾ ದೃಶ್ಯಗಳ ಚಿತ್ರೀಕರಣದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಕಲ್ಯಾಣಿ ಮೆಟ್ಟಿಲು ಇಳಿಯುವಾಗ ದುರ್ಗಾ ಜಾರಿದ್ದಾರೆ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ದುರ್ಗಾ ರಕ್ಷಣೆ  ಮಾಡಿದ್ದಾರೆ. ಇಲ್ಲಾಂದ್ರೆ ದುರ್ಗಾ ಗಾಯಗೊಳ್ಳುವ ಸಾಧ್ಯತೆಗಳಿದ್ದವು. ಸಿಬ್ಬಂದಿಯ ಮುಂಜಾಗ್ರತೆಯಿಂದ ಅಪಾಯ ತಪ್ಪಿದೆ. ಹಾಗೆ ಕಲ್ಯಾಣಿಯಲ್ಲಿ ದುರ್ಗಾ ನಡಗುತ್ತಲೇ ಕಲ್ಯಾಣಿಯಲ್ಲಿ ಮುಳುಗೋದನ್ನು ಗಮನಿಸಬಹುದು.  ಆದ್ರೆ ಕಲ್ಯಾಣಿಯಲ್ಲಿ ಈಜುತ್ತಾ ಹೋಗಿ ಶ್ರೀಚಕ್ರ ತರುವ ದೃಶ್ಯವನ್ನು ಸಂಪೂರ್ಣವಾಗಿ ಗ್ರೀನ್ ಮ್ಯಾಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಗೆ ಕಾರ್ ಮೇಲೆ ಹತ್ತಿ ಇಳಿಯುವ ಸನ್ನಿವೇಶದಲ್ಲಿ ರೂಪ್ ಸಹಾಯವನ್ನು ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: ಅಮೃತಧಾರೆ ಚಿತ್ರೀಕರಣದಲ್ಲಿ ಏನಾಯ್ತು ನೋಡಿ: ವೈರಲ್ ಆಯ್ತು ವಿಡಿಯೋ

ಇನ್ನು ಧಾರಾವಾಹಿ ಪ್ರೋಮೋ ಶೂಟಿಂಗ್ ನದಿ ತೀರದಲ್ಲಿ ನಡೆದಿತ್ತು. ಇಲ್ಲಿ ಹರಿಯುವ ನದಿಯಲ್ಲಿಳಿದ ದುರ್ಗಾ ರಕ್ಷಣೆಗಾಗಿ ಸುತ್ತಲೂ ಜನರು ನಿಂತಿದ್ದರು. ಪ್ರೋಮೋ ಮೇಕಿಂಗ್ ವಿಡಿಯೋ ಸಹ ವೈರಲ್ ಆಗಿತ್ತು. ಬಿಡುಗಡೆಯಾದ ಎರಡೇ ವಾರದಲ್ಲಿ ನಾ ನಿನ್ನ ಬಿಡಲಾರೆ ವೀಕ್ಷಕರಿಗೆ ಹತ್ತಿರವಾಗುತ್ತಿದೆ. 

ಮುಕ್ತಿ ಸಿಗದೇ ಮಗಳ ರಕ್ಷಣೆಗಾಗಿ ಹೋರಾಡುತ್ತಿರುವ ಅಂಬಿಕಾ ಮತ್ತು  ತಾಯಿ ದುರ್ಗೆ ಮೇಲೆ ಮುನಿಸಿಕೊಂಡಿರುವ ದುರ್ಗಾಳಿಗೆ ಇರೋ ಸಂಬಂಧ ಸುತ್ತ ಧಾರಾವಾಹಿ ಸಾಗುತ್ತಿದೆ. ಇಬ್ಬರು ಒಡಹುಟ್ಟಿದವರು ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ರೆ ಇವರಿಬ್ಬರು ಬೇರೆಯಾಗಲು ಕಾರಣ ಏನು? ಮಾಳವಿಕಾಗೂ ಮತ್ತು ದುರ್ಗಾಪುರಕ್ಕೂ ಇರೋ ಸಂಬಂಧ ಏನು ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. 

ಇದನ್ನೂ ಓದಿ: ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ? ಜೈದೇವ್ ಮಾತು ಕೇಳಿ ಬೆಕ್ಕಸ ಬೆರಗಾಗಿ ನ್ಯಾಯ ಬೇಕೆಂದ ವೀಕ್ಷಕರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!