Small Screen
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟ ಶಮಂತ್ ಬ್ರೊ ಗೌಡ ಅವರು ತಾವು ಮದುವೆಯಾಗುವ ಹುಡುಗಿಯನ್ನು ಪರಿಚಯಿಸಿದ್ದಾರೆ. ಮೇಘನಾ ಯಾರು? ಹೇಗೆ ಭೇಟಿಯಾಯ್ತು ಎಂದು ಕೆಲವರಿಗೆ ಕುತೂಹಲ ಇರಬಹುದು.
ಕಾಲೇಜಿನ್ ಇವೆಂಟ್‌ವೊಂದರಲ್ಲಿ ಶಮಂತ್ ಬ್ರೊ ಗೌಡ ಹಾಗೂ ಮೇಘನಾ ಅವರು ಪರಿಚಯ ಆಗಿದ್ದರು. ಆ ಪರಿಚಯ ಸ್ನೇಹವಾಗಿ, ಪ್ರೀತಿ ಹುಟ್ಟಿ ಈಗ ಮದುವೆಯಾಗಲು ರೆಡಿ ಆಗಿದ್ದಾರೆ.
ಮೇಘನಾ ಹಾಗೂ ಶಮಂತ್ ಬ್ರೊ ಗೌಡ ಅವರಿಗೆ ಪರಿಚಯ ಆಗಿ ಆರು ವರ್ಷಗಳಾಯ್ತು. ಶಮಂತ್ ಅವರು ʼಬಿಗ್ ಬಾಸ್ʼ ಶೋ ಹೋಗುವ ಮುನ್ನವೇ ಮೇಘನಾ ಪರಿಚಯ ಆಗಿ ಮೂರು ವರ್ಷಗಳಾಗಿತ್ತು.
ಮೇಘನಾ ಅವರು ಮಾಡೆಲ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಮೇಕಪ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.
ಚಿತ್ರರಂಗದಲ್ಲಿ ಮೇಘನಾ ಅವರು ಮಾಡೆಲ್ ಆಗಿ ಕೆಲಸ ಮಾಡಲು, ಸಂಭಾವನೆ ವಿಷಯ ಮುಂತಾದವುಗಳ ಬಗ್ಗೆ ಮಾತನಾಡಲು ಶಮಂತ್ ಅವರು ಸಲಹೆ ನೀಡಿದ್ದಾರಂತೆ. ಈ ಬಗ್ಗೆ ಮೇಘನಾ ಅವರೇ ಹೇಳಿಕೊಂಡಿದ್ದಾರೆ.
ಶಮಂತ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷಗಳ ಮೇಲಾಯ್ತು. ಇವರು ವೃತ್ತಿ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಮೇಘನಾಗೆ ತುಂಬ ಚೆನ್ನಾಗಿಯೇ ಗೊತ್ತಿದ್ದು, ಪ್ರತಿ ಹಂತದಲ್ಲೂ ಸಾಥ್ ನೀಡಿದ್ದಾರೆ.
ಯಾರ ಬಳಿಯೂ ಅಷ್ಟಾಗಿ ಮಾತನಾಡದ ಶಮಂತ್ ಅವರು ಮೇಘನಾ ಮುಂದೆ ತಮ್ಮ ಜೀವನದ ಕಷ್ಟ-ನಷ್ಟಗಳ ಬಗ್ಗೆ ಮಾತನಾಡುತ್ತಾರೆ ಎಂದು ಕೆಲ ವರ್ಷಗಳ ಹಿಂದೆ ಮೇಘನಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.