
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್ ವಿಶೇಷ ಕಥೆಯನ್ನು ಹೊಂದಿದೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ವಿಭಿನ್ನ ಕಥೆ ಇದಾಗಿದೆ. ಬೇರೊಬ್ಬರನ್ನು ಪ್ರೀತಿಸುವ ನಾಯಕಿಯನ್ನು ಅನಿವಾರ್ಯ ಕಾರಣಗಳಿಂದ ಮದುವೆಯಾಗುವ ನಾಯಕ ಈ ಅಣ್ಣಯ್ಯ. ಪತ್ನಿಗೆ ಆಕೆಯ ಲವರ್ ಜೊತೆ ಸೇರಿಸುವುದು ಇವನ ಉದ್ದೇಶ, ಆದರೆ ಎಲ್ಲರ ಕಣ್ಣಿಗೆ ಮಾತ್ರ ಇವರು ಆದರ್ಶ ದಂಪತಿ. ಆದರೆ ಪತಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡುತ್ತಲೇ ಮನೆಯವರ ವಿಶ್ವಾಸ ಗಳಿಸುತ್ತಿದ್ದಾಳೆ ನಾಯಕಿ. ಈ ದಂಪತಿ ಒಂದಾಗ್ತಾರಾ ಅಥ್ವಾ ನಾಯಕಿ ಲವರ್ ಜೊತೆ ಹೋಗ್ತಾಳಾ ಎಂದೆಲ್ಲಾ ಪ್ರಶ್ನೆಗಳನ್ನು ಹೊತ್ತು ಸಾಗುತ್ತಿದೆ ಅಣ್ಣಯ್ಯ ಸೀರಿಯಲ್. ಇದರ ನಾಯಕಿಯೇ ನಿಶಾ ರವಿಕೃಷ್ಣನ್. ಗಟ್ಟಿಮೇಳದಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದ ನಿಶಾ, ಇಲ್ಲಿ ಲವರ್ಗಾಗಿ ಕಾಯುತ್ತಿರುವ ಪತ್ನಿ ಪಾರು ರೋಲ್ ಮಾಡುತ್ತಿದ್ದಾರೆ.
ಈಗ ನಟಿಯ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ನಿಶಾ ಮದುಮಗಳಂತೆ ಕಾಣಿಸುತ್ತಿದ್ದಾರೆ. ಗುಡ್ ಟು ಗೋ ಯುಟ್ಯೂಬ್ ಚಾನೆಲ್ನಲ್ಲಿ ಇವರ ವಿಡಿಯೋ ಹಂಚಿಕೊಳ್ಳಲಾಗಿದೆ. ಅಷ್ಟಕ್ಕೂ ಇದು ಅಣ್ಣಯ್ಯ ಸೀರಿಯಲ್ ತೆರೆಮರೆಯ ಕಥೆ. ಅಂದರೆ ಸೀರಿಯಲ್ ಶೂಟಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋ. ಇದರಲ್ಲಿ ನಿಶಾ ಮತ್ತು ಅಣ್ಣಯ್ಯ ಸೀರಿಯಲ್ನ ಬಳಗವನ್ನು ನೋಡಬಹುದು. ಈ ಸೀರಿಯಲ್ನಲ್ಲಿ ನಿಶಾ ಅವರು ನಿರ್ವಹಿಸುತ್ತಿರುವ ಪಾತ್ರ ಪಾರುವಿನ ಮದ್ವೆ ಟೈಮ್ನಲ್ಲಿ ತೆಗೆದಿರುವಂಥದ್ದು. ಈ ಸಮಯದಲ್ಲಿ ನಟಿ, ರಿಯಲ್ ಮತ್ತು ರೀಲ್ ಮದ್ವೆಗಳ ಬಗ್ಗೆ ಮಾತನಾಡಿದ್ದಾರೆ. ಇದು ನನಗೆ ಎಂಟನೇ ಮದ್ವೆ ಇರಬಹುದು. ತೆಲಗು ಮತ್ತು ಕನ್ನಡ ಸೀರಿಯಲ್ಗಳಲ್ಲಿ ಸಾಕಷ್ಟು ಬಾರಿ ಮದ್ವೆಯಾಗಿದ್ದೇನೆ. ಅದಕ್ಕಾಗಿಯೇ ಮದ್ವೆ ಎಂದರೆ ಬೇಜಾರು ಆಗಿಹೋಗಿದೆ ಎಂದು ತಮಾಷೆ ಮಾಡಿದ್ದಾರೆ.
ನಿಮ್ಮ ಬಯೋಪಿಕ್ಗೆ ನಟ ಯಾರಾಗ್ಬೇಕು ಎಂಬ ಪ್ರಶ್ನೆಗೆ ಶಿವರಾಜ್ ಕುಮಾರ್ ಕೊಟ್ಟ ಉತ್ತರ ನೋಡಿ...
ಇನ್ನು ನಟಿಯ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರಿನ್ನೂ ಸಿಂಗಲ್. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್ ಲೈಫ್ನಲ್ಲಿ ಸಿಂಪಲ್ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ. ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.
ಐದು ವರ್ಷ ಈ ಸೀರಿಯಲ್ ತೆರೆ ಕಂಡಿದೆ. ಈ ಬಳಿಕ ನಿಶಾ ತೆಲುಗು ಸೀರಿಯಲ್ನಲ್ಲಿ ಕಾಣಿಸಿಕೊಂಡರು. ಕನ್ನಡದ ಅಣ್ಣಯ್ಯದಲ್ಲಿ ಪಾರು ಆಗಿ ಹಾಗೂ ತೆಲಗುಇನ ಅಮ್ಮಯ್ಯಿಗಾರು ಸೀರಿಯಲ್ನಲ್ಲಿಯೂ ನಟಿಸುತ್ತಿದ್ದಾರೆ. ನಿಶಾ ಅವರು ಹುಟ್ಟಿದ್ದು ಬೆಂಗಳೂರೇ. ಆದರೆ, ಮೂಲತಃ ಕೇರಳದವರು. ‘ಅಣ್ಣಯ್ಯ’ ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ಮಾತಿಗೆ ಸಿಕ್ಕಿರುವ ನಟಿ ಮತ್ತು ಅವರ ತಂಡ ಅಣ್ಣಯ್ಯ ಸೀರಿಯಲ್ ಕುರಿತು ಹಲವು ತಮಾಷೆಯ ಮಾತುಗಳನ್ನಾಡಿದ್ದು, ಅವುಗಳನ್ನು ಈ ವಿಡಿಯೋದಲ್ಲಿ ನೋಡಬಹುದು.
ಇವತ್ತು ರಾತ್ರಿಯ ಮಜಾ.. ಎಂದು ಡಾನ್ಸ್ ಮಾಡಿದ ಹಿಟ್ಲರ್ ಕಲ್ಯಾಣ ಸೀರಿಯಲ್ ಅಂತರಾ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.