
ಲಕ್ಷಣ (Lakshana) ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಾ ಜನರಿಗೆ ಇಷ್ಟವಾಗುವ ಜೊತೆ, ಯಾಕೋ ಓವರ್ ಆಯಿತು ಅನಿಸುವಷ್ಟು ಕಿರಿಕಿರಿಯೂ ಆಗುತ್ತಿದೆ. ಸಮಯ ಬದಲಾದರೂ ಜನರು ಲಕ್ಷಣ ಧಾರಾವಾಹಿಯನ್ನು ಇಷ್ಟಪಡುತ್ತಿದ್ದಾರೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ. ಹುಟ್ಟಿದ ಕೂಡಲೆ ಶ್ವೇತಾ ಮತ್ತು ನಕ್ಷತ್ರ ಡೆವಿಲ್ ಕೈವಾಡದಿಂದ ಅದಲು ಬದಲಾಗುತ್ತಾರೆ. ಚಂದ್ರಶೇಖರ್ ಮಗಳು ನಕ್ಷತ್ರ ತುಕಾರಾಂ ಮನೆಯಲ್ಲಿ ಬೆಳೆದರೆ, ತುಕಾರಾಂ ಮಗಳು ಶ್ವೇತಾ, ಚಂದ್ರಶೇಖರ್ ಮನೆ ಸೇರುತ್ತಾಳೆ. 20 ವರ್ಷಗಳ ಬಳಿಕ ಶ್ವೇತಾ - ಭೂಪತಿಗೆ ಮದುವೆ ನಿಶ್ಚಯ ಆಗುತ್ತದೆ. ಆಗಲೇ ನಿಜಾಂಶ ತಿಳಿದು ನಕ್ಷತ್ರಳ ಜೊತೆ ಭೂಪತಿ ಮದುವೆಯಾಗುತ್ತದೆ. ಆಗ ಶ್ವೇತಾ ಸಿಟ್ಟಿಗೇಳುತ್ತಾಳೆ. ನಕ್ಷತ್ರ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ವೇತಾ ಮುಂದಾಗುತ್ತಾಳೆ. ಇದಕ್ಕಾಗಿ ಶಕುಂತಲಾ ದೇವಿ ಮನೆ ಸೇರಿ ಕುತಂತ್ರ ಬುದ್ಧಿ ತೋರುವುದು ಧಾರಾವಾಹಿಯ ಕಥೆ.
ಕೆಲ ದಿನಗಳ ಹಿಂದೆ ಈ ಧಾರಾವಾಹಿ ಟ್ವಿಸ್ಟ್ ಪಡೆದಿತ್ತು. ಭೂಪತಿ ಮತ್ತು ನಕ್ಷತ್ರ ಡಿವೋರ್ಸ್ ಡ್ರಾಮಾ ಮಾಡಿದ್ದರು. ಭೂಪತಿ ಕೈಯಿಂದ ತಾಳಿ ಕಟ್ಟಿಸಿಕೊಳ್ಳಲು ಶ್ವೇತಾ ಮಾಸ್ಟರ್ ಪ್ಲಾನ್ ಮಾಡಿದ್ದಳು. ಹೀಗೆ ‘ಲಕ್ಷಣ’ ಶುರುವಿಂದಲೂ ಜನಪ್ರಿಯವಾಗಿಯೇ ಮುಂದುವರೆದುಕೊಂಡು ಬಂದಿದೆ. ಇದರ ಸ್ಟೋರಿ ಲೈನ್‌ನಲ್ಲೇ ಹೊಸತನ ಇದ್ದು, ಹೆಚ್ಚು ಲ್ಯಾಗ್‌ಗಳಿಲ್ಲದೇ ಕಥೆಯನ್ನು ಡಿಫರೆಂಟ್ ಆಗಿ ನರೇಟ್ ಮಾಡೋ ರೀತಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದೀಗ ಧಾರಾವಾಹಿಗೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ, ಇದಾಗಲೇ ಸಾಕಷ್ಟು ನಾಟಕ ಮಾಡಿರುವ ಶ್ವೇತಾ ತನ್ನ ನಾಟಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದಾಳೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಲಕ್ಷ್ಮಿ ನರಸಿಂಹಸ್ವಾಮಿ
ಹೌದು. ಶ್ವೇತಾಳ ನಾಟಕಕ್ಕೆ ಇದಾಗಲೇ ಪ್ರೇಕ್ಷಕರು ಸಿಟ್ಟಿಗೆದ್ದಿರುವ ನಡುವೆಯೇ ಆತ್ಮಹತ್ಯೆಗೆ ಮುಂದಾಗುವ ನಾಟಕವನ್ನು ಶ್ವೇತಾ ತೆಗೆದುಕೊಂಡಿದ್ದಾಳೆ. ಇದಕ್ಕಾಗಿ ಡೆತ್ನೋಟ್ ಕೂಡ ಬರೆದು ಇಟ್ಟಿದ್ದಾರೆ. ಆ ನೋಟ್ ಉದ್ದೇಶಪೂರ್ವಕವಾಗಿ ಶಕುಂತಲಾ ದೇವಿ (Shakuntala Devi) ಅವರ ಕಣ್ಣಿಗೆ ಬೀಳುವಂತೆ ಮಾಡಿದ್ದಾಳೆ. ಅವಳ ಯೋಜನೆಯಂತೆ ಡೆತ್ನೋಟ್ ಶಕುಂತಲಾ ದೇವಿ ಅವರ ಕೈ ಸೇರಿದೆ. ಇದನ್ನು ಓದಿದ ಅವರು ಸಿಕ್ಕಾಪಟ್ಟೆ ಗಾಬರಿಗೊಂಡಿದ್ದಾರೆ. ಶ್ವೇತಾಳ ಕುತಂತ್ರ ಬುದ್ಧಿ ಅರಿಯದ ಶಕುಂತಲಾ ದೇವಿ ಅವರು, ನಿಜವಾಗಿಯೂ ಶ್ವೇತಾ ಮನನೊಂದೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದುಕೊಂಡು ಬಿಟ್ಟಿದ್ದಾರೆ. ತಡ ಮಾಡದೇ ಅವರು ಮನೆಯವರಿಗೆ ವಿಷಯ ತಿಳಿಸಿ ಆತ್ಮಹತ್ಯೆಯನ್ನು ತಡೆಯಲು ಹೊರಟಿದ್ದಾರೆ.
ಭೂಪತಿ, ಅಜ್ಜಿ, ನಕ್ಷತ್ರ ಹಾಗೂ ಮೌರ್ಯ (Mourya) ಎಲ್ಲರೂ ಕೆರೆಯ ಬಳಿ ಬರುತ್ತಾರೆ. ಶ್ವೇತಾಳ ಪ್ಲ್ಯಾನ್ ಸಕ್ಸಸ್ ಆಗುತ್ತದೆ. ಆತ್ಮಹತ್ಯೆಗೆ ಮುಂದಾದವರಂತೆ ನಾಟಕ ಮಾಡುತ್ತಾಳೆ. ಎಲ್ಲರೂ ಅದನ್ನು ತಡೆಯಲು ಮುಂದಾದರೂ ಶ್ವೇತಾ ಯಾರ ಮಾತನ್ನೂ ಕೇಳುವುದಿಲ್ಲ. ಯಾರು ಎಷ್ಟೇ ಕರೆದರೂ, ಶ್ವೇತಾ ವಾಪಸ್ ಬರುವುದಿಲ್ಲ. ಆಗ ಮೌರ್ಯ ಕೆರೆಯಲ್ಲಿ ಹಾವುಗಳಿವೆ ಎಂದು ಹೇಳಿ ಒಂದು ಕಟ್ಟಿಗೆ ತುಂಡನ್ನು ಎಸೆಯುತ್ತಾನೆ. ಶ್ವೇತಾ ಅದನ್ನು ಹಾವು ಎಂದು ತಿಳಿದು ಆಯತಪ್ಪಿ ಕೆರೆಗೆ ಬಿದ್ದು ಮುಳುಗುವ ಸ್ಥಿತಿಯಲ್ಲಿ ಇರುತ್ತಾಳೆ. ಯಾರೂ ಆಕೆಯನ್ನು ಕಾಪಾಡುವ ಧೈರ್ಯ ಮಾಡುವುದಿಲ್ಲ. ನೀರಿಗೆ ಬಿದ್ದರೆ ಕೆಲವರು ಬಚಾವ್ ಮಾಡಲು ಬರಬೇಕೆನ್ನುವ ಕಾರಣಕ್ಕೆ ಕೆಲವರನ್ನು ಶ್ವೇತಾ ನೇಮಿಸಿಯೂ ಇರುತ್ತಾಳೆ. ಆದರೆ ಅಲ್ಲಿ ಅವರೂ ಕಾಣುವುದಿಲ್ಲ.
ಮುಂದೇನಾಗುತ್ತದೆ ಎನ್ನುವುದೇ ಈಗಿರುವ ಕುತೂಹಲ. ಆದರೆ ಈ ಪ್ರೋಮೋ ನೋಡಿದ ಪ್ರೇಕ್ಷಕರು ಬಿದ್ದು ಸಾಯಲಿ ಬಿಡಿ ಎಂದು ಹೇಳಿದರೆ, ಇನ್ನು ಕೆಲವರು ಈಕೆಗೆ ಡ್ರಾಮಾ ಅತಿಯಾಯ್ತು, ಯಾರೂ ಕಾಪಾಡಬಾರದು ಎಂದಿದ್ದಾರೆ. ಇದು ಯಾಕೋ ಓವರ್ ಅಂತಿರೋ ನೆಟ್ಟಿಗರು ಆಕೆಯನ್ನು ರಕ್ಷಣೆ ಮಾಡಬೇಡಿ ಎಂದೂ ಹೇಳುತ್ತಿದ್ದಾರೆ.
ತುಂಡೈಕ್ಲು ನಿದ್ದೆಗೆಡಿಸಿದ ಕನ್ನಡತಿ ಧಾರಾವಾಜಹಿ ನಟಿ ಸಾರಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.