ಮಹಾಭಾರತದ 'ಶಕುನಿ ಮಾಮಾ' ಸ್ಥಿತಿ ಗಂಭೀರ! ಎಂಜಿನಿಯರ್​ ಆಗಿದ್ದವರು 'ಶಕುನಿ'ಯಾದದ್ದು ಹೇಗೆ?

By Suvarna NewsFirst Published Jun 2, 2023, 4:06 PM IST
Highlights

1988ರಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತದಲ್ಲಿನ ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 
 

ಶಕುನಿ (Shakuni) ಎಂದಾಕ್ಷಣ ಎಲ್ಲರ ಕಣ್ಮುಂದೆ ಬರುವುದು 1988ರಿಂದ 1990ರ ವರೆಗೆ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿ. ಇದಾದ ಬಳಿಕ ಮಹಾಭಾರತದ ಕುರಿತು ವಿಭಿನ್ನ ಭಾಷೆಗಳಲ್ಲಿ ಹಲವಾರು ಧಾರಾವಾಹಿ, ಚಲನಚಿತ್ರಗಳು ಬಂದರೂ ಮಹಾಭಾರತವನ್ನು ನೋಡಿದ ವೀಕ್ಷಕರಿಗೆ ಶಕುನಿ ಎಂದಾಕ್ಷಣ ನೆನಪಾಗುವುದು 80ರ ದಶಕದ ಶಕುನಿ ಮಾಮಾ ಅವರೇ. ಅವರು ಹೆಸರು ಗೂಫಿ ಪೈಂಟಲ್. ಕುಳ್ಳಗಿನ ದೇಹ, ಒಂದು ಕಣ್ಣನ್ನು ಸಣ್ಣಗೆ ಮಾಡಿಕೊಂಡು ಕುಂಟುತ್ತಾ ಬರುವ ಆ ಪಾತ್ರವನ್ನು ಮರೆಯುವುದು ಅಸಾಧ್ಯವೆಂದೇ ಹೇಳಬೇಕು. ಇವರ ಈ ಪಾತ್ರ ಅದೆಷ್ಟು ಪ್ರೇಕ್ಷಕರ ಮನಸ್ಸಿಗೆ ನಾಟಿತ್ತು ಎಂದರೆ ಹೋದಲ್ಲಿ, ಬಂದಲ್ಲಿ ಗೂಫಿ ಪೈಂಟಲ್​ (Gufi Paintal) ಅವರನ್ನು ಜನರು ಕೆಂಗಣ್ಣಿನಿಂದ ನೋಡುತ್ತಿದ್ದರಂತೆ. ನಿಜವಾಗಿಯೂ ಇವರು ಕೆಟ್ಟವರು ಎನ್ನುವ ರೀತಿಯಲ್ಲಿ ನೋಡುವಷ್ಟು ಗೂಫಿ ಅವರು ಪಾತ್ರಕ್ಕೆ ಜೀವ ತುಂಬಿದವರು. ಈಗ ಅವರಿಗೆ 78 ವರ್ಷ ವಯಸ್ಸು. ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎನ್ನಲಾಗಿದೆ. ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಟೀನಾ ಘಾಯ್ ಇದನ್ನು ಖಚಿತಪಡಿಸಿದ್ದಾರೆ. ಆದಾಗ್ಯೂ, ಗೂಫಿ ಕುಟುಂಬವು ವಿವರಗಳನ್ನು ನೀಡಲು ನಿರಾಕರಿಸಿದೆ. ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟಿ ಹೇಳಿದ್ದಾರೆ.  ಗೂಫಿ ಪೈಂಟಲ್ ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಬುಧವಾರ (ಮೇ 31) ರಾತ್ರಿಯಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದು ತಿಳಿಸಿದ್ದಾರೆ.
   
ಗೂಫಿ ಅವರ ಬಗ್ಗೆ ಹಲವರಿಗೆ ತಿಳಿಯದ ಕೆಲವು ಕುತೂಹಲದ ಘಟನೆಗಳಿವೆ. ಹಿಂದಿ ಚಲನಚಿತ್ರಗಳ ಹೊರತಾಗಿ, 1980 ರ ದಶಕದಲ್ಲಿ ಗೂಫಿ ಪೈಂಟಲ್ ಕೆಲವು ಟಿವಿ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದರು.  ಅಕ್ಟೋಬರ್ 4, 1944 ರಂದು ಪಂಜಾಬ್‌ನ ತರ್ನ್ ತರನ್‌ನಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಗುಫಿ ಪೈಂಟಲ್ ಅವರು ನಟನೆಗೆ ಮುಂದಾಗುವ ಮೊದಲು ಎಂಜಿನಿಯರ್ ಆಗಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಎಂಜಿನಿಯರಿಂಗ್‌ನಲ್ಲಿ ಮಾತ್ರ ಪ್ರಾರಂಭಿಸಿದರು. 1969 ರಲ್ಲಿ ಅವರ ತಮ್ಮನ ಜೊತೆ  ಮುಂಬೈ ತಲುಪಿದರು. ಇಲ್ಲಿ ಅವರು ಮಾಡೆಲಿಂಗ್ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

Nitish Bhardwaj: ಶ್ರೀಕೃಷ್ಣನ ಪಾತ್ರಕ್ಕೆ ಒಪ್ಪಿಸಿತ್ತು ಸಮೋಸಾ, ಒಂದು ಕಪ್​ ಟೀ!

ಬಿಆರ್ ಚೋಪ್ರಾ ಅವರ ಧಾರಾವಾಹಿ ಮಹಾಭಾರತದಲ್ಲಿ ಮಾಮಾ ಶಕುನಿ (Mama Shakuni) ಪಾತ್ರದಲ್ಲಿ ಗೂಫಿ ಪೈಂಟಲ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಆದರೆ, ಅವರು ಶ್ರೀ ಚೈತನ್ಯ ಮಹಾಪ್ರಭು ಎಂಬ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. 2010 ರಲ್ಲಿ, ಮಹಾಭಾರತದ ಸಹನಟ ಪಂಕಜ್ ಧೀರ್ ಅವರ ಮುಂಬೈ ಮೂಲದ ನಟನಾ ಶಾಲೆ ಅಭಿನಯ್ ಆಕ್ಟಿಂಗ್ ಅಕಾಡೆಮಿಯಲ್ಲಿ ಗೂಫಿ ಪೈಂಟಲ್ ಸೌಲಭ್ಯಗಳ ಮುಖ್ಯಸ್ಥರಾಗಿಯೂ ಕೆಲಸ ಮಾಡಿದರು. ಈ ಪಾತ್ರಕ್ಕೆ ಅವರು ಶಕುನ ಮಾಮ ಪಾತ್ರಕ್ಕೆ ಆ ಕಾಲದಲ್ಲಿ ಪಡೆದದ್ದು  3000 ರೂಪಾಯಿಗಳು ಮಾತ್ರ. 

ಶಕುನಿ ಮಾಮನ ಪಾತ್ರ ಹೇಗೆ ಸಿಕ್ಕಿತು?
ತಮಗೆ ಶಕುನಿ ಪಾತ್ರ ಹೇಗೆ ಸಿಕ್ಕಿತು ಎಂಬ ಬಗ್ಗೆ ಖುದ್ದು ಗೂಫಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಎಂಜಿನಿಯರಿಂಗ್​ (Engineering) ತೊರೆದು ಮಾಡೆಲಿಂಗ್​ ಆಯ್ದುಕೊಂಡ ಸಂದರ್ಭವದು.  ಮಹಾಭಾರತದ ಲೇಖಕ ರಾಹಿ ಮಾಸೂಮ್ ರಜಾ ಅವರು ಗುಫಿ ಪೈಂಟಲ್ ಅವರಿಗೆ ಈ ಪಾತ್ರವನ್ನು ನೀಡಿದಾಗ, ಆ ಸಮಯದಲ್ಲಿ ಅವರು ಈ ಪಾತ್ರಕ್ಕೆ ಹೌದು ಎಂದು ಹೇಳಬೇಕೋ ಬೇಡವೋ ಎಂದು ಸಾಕಷ್ಟು ಗೊಂದಲಕ್ಕೊಳಗಾಗಿದ್ದರಂತೆ.  ಏಕೆಂದರೆ  ಶಕುನಿ ಎಂದರೆ ನೆಗೆಟಿವ್​ ರೋಲ್​. ಹೀಗೆ ಮಾಡಿದರೆ  ಸಮಾಜವು ತಮ್ಮ  ದ್ವೇಷಿಸಲು ಪ್ರಾರಂಭಿಸುತ್ತದೆ ಎಂದು ಅಂದುಕೊಂಡರಂತೆ. ಆಮೇಲೆ ಕೆಲ ದಿನಗಳ  ಯೋಚನೆಗಳ ನಂತರ ಈ ಪಾತ್ರಕ್ಕೆ ಒಪ್ಪಿಕೊಂಡೆ ಎಂದಿದ್ದರು ಗೂಫಿ. 

'ಶ್ರೀರಾಮ'ನೇ ಸ್ಮೋಕ್​ ಮಾಡಿದಾಗ... ಕಹಿ ಘಟನೆ ನೆನಪಿಸಿಕೊಂಡ ನಟ Arun Govil

click me!