ಭೂಮಿಕಾ ಕೈಯಲ್ಲಿ ಬಂದೇ ಬಿಡ್ತು ಚಪ್ಪಲ್ಲು! ಇನ್ನು ಮುಗೀತು ವಿಷಕನ್ಯೆ ಕಥೆ...

Published : May 08, 2025, 10:16 PM ISTUpdated : May 09, 2025, 10:36 AM IST
ಭೂಮಿಕಾ ಕೈಯಲ್ಲಿ ಬಂದೇ ಬಿಡ್ತು ಚಪ್ಪಲ್ಲು! ಇನ್ನು ಮುಗೀತು ವಿಷಕನ್ಯೆ ಕಥೆ...

ಸಾರಾಂಶ

ಲಚ್ಚಿ ಅಪಹರಣದಲ್ಲಿ ಶಕುಂತಲಾಳ ಪಾತ್ರವನ್ನು ಭೂಮಿಕಾ ಅನುಮಾನಿಸಿದ್ದಾಳೆ. ಲಚ್ಚಿ ಕಂಡ ಚಪ್ಪಲಿ ಶಕುಂತಲಾಳದ್ದೇ ಎಂದು ಭೂಮಿಕಾಗೆ ತಿಳಿದಿದೆ. ಜೈದೇವ್ ಗೌತಮ್‌ನ ನೌಕರರನ್ನು ವಜಾಗೊಳಿಸಿದ್ದರೂ, ಗೌತಮ್ ಸತ್ಯ ತಿಳಿದು ಅವರನ್ನು ಮರಳಿ ಕರೆಸಿ ಬೋನಸ್ ನೀಡಿದ್ದಾನೆ.

ತನ್ನ ಲಾಕೆಟ್​ನಲ್ಲಿ ಮೈಕ್​ ಫಿಕ್ಸ್​ ಮಾಡಿರುವುದು ಶಕುಂತಲಾನೇ ಎನ್ನುವುದು ಭೂಮಿಕಾಗೆ ಇನ್ನೇನು ತಿಳಿಯುವುದರಲ್ಲಿತ್ತು. ಇದು ಶಕುಂತಲಾಗೆ ಗೊತ್ತಾಗಿ ಮನೆಯವರ ತಲೆಯನ್ನು ಬೇರೆ ಕಡೆ ತಿರುಗಿಸುವುದಕ್ಕಾಗಿ ಸುಧಾ ಮಗಳು ಲಚ್ಚಿಯನ್ನು ಕಿಡ್ನಾಪ್​ ಮಾಡಲಾಗಿತ್ತು. ಜೈದೇವ್​ ಬೇರೆ ದನಿಯಲ್ಲಿ ಗೌತಮ್​ಗೆ ಕರೆ ಮಾಡಿ ಹಣ ತರಲು ಹೇಳಿದ್ದ. ಆದರೆ ಇದನ್ನು ಮಾಡಿಸಿರುವುದು ಜೈದೇವ್​, ಶಕುಂತಲಾ ಎನ್ನುವ ಸಣ್ಣ ಗುಮಾನಿ ಕೂಡ ಮನೆಯಲ್ಲಿ ಯಾರಿಗೂ ಬರುವುದಿಲ್ಲ. ಹಣದ ಆಸೆಗಾಗಿ ಲಚ್ಚಿಯನ್ನು ಅಪಹರಣ ಮಾಡಿರುವುದಾಗಿ ಅಂದುಕೊಳ್ಳಲಾಗಿತ್ತು.  ಅದೇ ಜಾಗಕ್ಕೆ ಶಕುಂತಲಾ ಮತ್ತು ಸಹೋದರ ಬಂದಿದ್ದರು.  ಇದೇ ವೇಳೆ ಲಚ್ಚಿ ತನ್ನ ಕಣ್ಣಿಗೆ ಕಟ್ಟಿರೋ ಪಟ್ಟಿಯಿಂದ ಸೂಕ್ಷ್ಮವಾಗಿ ತಲೆಯನ್ನು ಮೇಲಕ್ಕೆ ಮಾಡಿ ಅಲ್ಲಿ ಯಾರಿರುವುದು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಳು. ಆಗ ಆಕೆಗೆ ಶಕುಂತಲಾಳ ಕಾಲು, ಸೀರೆಯ ತುದಿ ಕಾಣಿಸಿದೆ. ಯಾರೋ ಮಹಿಳೆ ಬಂದಿದ್ದಾಳೆ ಎನ್ನುವುದು ಆಕೆಗೆ ತಿಳಿದಿತ್ತು.  

ಬಳಿಕ ಮನೆಗೆ ಬಂದಾಗ ಶಕುಂತಲಾ ಕಾಲಿನಲ್ಲಿಯೂ ಅದೇ ಚಪ್ಪಲಿ ಇರುವುದನ್ನು ನೋಡಿದ್ದಳು. ಆದರೆ ಏನೂ ಹೇಳದೇ ಸುಮ್ಮನಾಗಿದ್ದಳು. ಈಗ  ಕೊನೆಗೂ ಈ ವಿಷಯ ಭೂಮಿಕಾಗೆ ತಿಳಿದಿದೆ. ಲಚ್ಚಿ ತಾನು ಕಂಡಿರುವ ಚಪ್ಪಲ್​ ಚಿತ್ರ ಬಿಡಿಸಿ ಅದನ್ನು ಭೂಮಿಕಾಗೆ ಕೊಟ್ಟಿದ್ದಾಳೆ. ಆಗ ಭೂಮಿಕಾ ಏನು ಎಂದು ಕೇಳಿದಾಗ, ತನ್ನನ್ನು ಕಿಡ್​ನ್ಯಾಪ್​  ಮಾಡಿರುವ ಮಹಿಳೆ ಹಾಗೂ ಶಕುಂತಲಾ ಅಜ್ಜಿಯ ಚಪ್ಪಲಿ ಸೇಮ್​ ಇರುವುದನ್ನು ಲಚ್ಚಿ ಹೇಳಿದ್ದಾಳೆ. ಆದರೆ ಆ ಸಂದರ್ಭದಲ್ಲಿ ಭೂಮಿಕಾಗೆ ಏನು ಮಾಡುವುದು ಎಂದು ತಿಳಿಯಲಿಲ್ಲ. ಆದರೂ ಸಂದೇಹ ಶುರುವಾಗಿದೆ. ಆದರೆ ಸ್ಟೋರಿ ಇಲ್ಲಿಗೇ ಮುಗಿದು ಬಿಡತ್ತಾ? ಸದ್ಯ ಚಪ್ಪಲಿ ಭೂಮಿಕಾ ಕೈಯಲ್ಲಿ ಬಂದಿರೋ ಕಾರಣ, ಶಕುಂತಲಾಳ ಜಾಡನ್ನು ಆಕೆ ಬೇಧಿಸಬಲ್ಲಳೇ ಎನ್ನುವ ಪ್ರಶ್ನೆ ಇದೆ.

ಹೆಂಡ್ತಿ ಒಡವೆ ಕೇಳಿದ್ರೆ 'ಈ ತಿಂಗಳು ಆಗಲ್ಲ' ಅನ್ನೋ ಗಂಡಂದಿರು ನೋಡಬೇಕಾದ ವಿಡಿಯೋ ಇದು!

ಆದರೆ, ಅದಕ್ಕೂ ಮುಖ್ಯವಾಗಿ, ತನ್ನನ್ನು ಕಂಡರೆ ಲಚ್ಚಿ ಭಯ ಪಡುವುದನ್ನು ಶಕುಂತಲಾನೋಡಿದ್ದಾಳೆ. ಅವಳಿಗೆ ಡೌಟ್​ ಬಂದಿದೆ. ಅಪಹರಣ ಮಾಡಿಸಿರುವುದು ತಾನೇ ಎಂದು ಲಚ್ಚಿಗೆ ಗೊತ್ತಾಗಿರಬಹುದಾ ಎನ್ನಿಸಿದೆ. ಈಗ ಬೇರೆ ಚಪ್ಪಲಿ ಚಿತ್ರ ಇದೆ. ಅದು ಶಕುಂತಲಾ ಕೈಗೆ ಸಿಕ್ಕು ಎಲ್ಲಾ ತಿಳಿಯುವಮೊದಲೇ ಉಲ್ಟಾ ಹೊಡೆದು ಸೀರಿಯಲ್​ ಇನ್ನಷ್ಟು ಎಳೆಯುವ ಸಾಧ್ಯಯೂ ಅಷ್ಟೇ ದಿಟವಾಗಿದೆ. ಇನ್ನು ಸೀರಿಯಲ್​ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ನೋಡಬೇಕಿದೆಯಷ್ಟೇ. 
 
ಅದೇ ಇನ್ನೊಂದೆಡೆ, ಗೌತಮ್​ನ ಅನುಮತಿ ಪಡೆಯದೇ ಗೌತಮ್​ಗೆ ಬೆಂಬಲ ಆಗಿ ನಿಂತಿರೋ ಎಲ್ಲಾ ಕೆಲಸಗಾರರನ್ನೂ ಜೈದೇವ ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದ.  ಆನಂದ್​ನನ್ನೂ ಕೆಲಸದಿಂದ ತೆಗೆದಿದ್ದ. ಅವನು ಏನೋ ನೆಪ ಹೇಳಿ ರಿಸೈನ್​ ಮಾಡಿ ಹೋಗಿದ್ದ. ಆದರೆ ಜೈದೇವನ ಎಲ್ಲಾ  ಲೆಕ್ಕಾಚಾರ ಉಲ್ಟಾ ಆಗಿದೆ. ಸತ್ಯ ಗೌತಮ್​ಗೆ ಗೊತ್ತಾಗಿದೆ. ಇದು ಜೈದೇವನ ಕುತಂತ್ರ ಎನ್ನುವುದು ಸದ್ಯ ತಿಳಿದಿಲ್ಲ. ಆದರೆ, ಹೀಗೆ ಮಾಡಿರುವುದು ಸರಿಯಲ್ಲ ಎನ್ನುತ್ತಲೇ ಎಲ್ಲರನ್ನೂ ವಾಪಸ್​ ಕರೆಸಿಕೊಂಡಿದ್ದಾನೆ. ಸಾಲದು ಎನ್ನುವುದಕ್ಕೆ ಎಲ್ಲರನ್ನೂ ಕೆಲಸದಿಂದ ತೆಗೆದ ತಪ್ಪಿಗೆ ಬೋನಸ್​ ಬೇರೆ ಕೊಟ್ಟು ಜೈದೇವನ ಹೊಟ್ಟೆ ಉರಿಸಿದ್ದಾನೆ. ಮುಂದೇನಗತ್ತೋ ಕಾದು ನೋಡಬೇಕಿದೆ. 

ಗರ್ಭಿಣಿಯಾದ್ರೂ ಹೊಟ್ಟೆ ಬರಿಸಿಕೊಳ್ಳದೇ ಮಗು ಮಾಡಿಕೊಳ್ಳಲು ಸಾಧ್ಯನಾ? ಸಾಧ್ಯ ಅಂತಿದ್ದಾರೆ ಈ ನಟಿಯರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ