ಸತ್ತು ಹೋಗಿದ್ದೀನಿ ಅಂತ ತಮಟೆ ಹೊಡೀತಾರೆ, ನನ್ನ ಹೆಣಕ್ಕೆ ನಾನೇ ತಮಟೆ ಹೊಡೀಬಾರ್ದು: ಕಿರಿಕ್ ಕೀರ್ತಿ

Published : Mar 22, 2023, 02:19 PM IST
ಸತ್ತು ಹೋಗಿದ್ದೀನಿ ಅಂತ ತಮಟೆ ಹೊಡೀತಾರೆ, ನನ್ನ ಹೆಣಕ್ಕೆ ನಾನೇ ತಮಟೆ ಹೊಡೀಬಾರ್ದು: ಕಿರಿಕ್ ಕೀರ್ತಿ

ಸಾರಾಂಶ

ಕಿರಿಕ್ ಕೀರ್ತಿ ತಮಟೆ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್. ನಾಲ್ಕು ಚಕ್ರ ಕಾರು ಕೊಟ್ಟಿರುವ ದೇವರು ನಾಲ್ಕು ರಿಂಗ್ ತಂದು ಮುಂದೆ ಇಡಲ್ವಾ?

ಬಿಗ್ ಬಾಸ್ ಸ್ಪರ್ಧಿ ಸೋಷಿಯಲ್ ಮೀಡಿಯಾ ಸ್ಟಾರ್ ಕಿರಿಕ್ ಕೀರ್ತಿ ವೈಯಕ್ತಿಕ ಮತ್ತು ವೃತ್ತಿ ಜೀವನದ ಬಗ್ಗೆ ಖಾಸಗಿ ಸಂದರ್ಶಶನದಲ್ಲಿ ನೀಡಿರುವ ಹೇಳಿಕೆಗಳು ಟ್ರೋಲ್ ಮತ್ತು ಮೀಮ್ಸ್‌ ಫೇಜ್‌ಗಳಲ್ಲಿ ವೈರಲ್ ಆಗುತ್ತಿದೆ. ಯಾವ ವಿಚಾರಕ್ಕೆ ಕೀರ್ತಿ ಈ ರೀತಿ ಹೇಳಿಕೆ ಕೊಟ್ಟು?

ಕಿರಿಕ್ ಕೀರ್ತಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಆಗಿದೆ, ಹೆಂಡತಿ ಬಿಟ್ಟು ಹೋಗಿದ್ದಾರೆ, ಇಬ್ರು ಡಿವೋರ್ಸ್ ಮಾಡಿಕೊಂಡಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿದೆ. ಸಾಕಷ್ಟು ರೀತಿಯಲ್ಲಿ ಕೀರ್ತಿ ಸ್ಪಷ್ಟನೆ ಕೊಟ್ಟರೂ ಕೆಲವರು ಸೋಷಿಯಲ್ ಮೀಡಿಯಾ ಹುಳಗಳು ಬೇಕೆಂದು ಗಾಸಿಪ್ ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ...

ಘಟನೆಯಿಂದ ಹೊರ ಬರಲು ಔಷಧಿ ತೆಗೆದುಕೊಂಡ ಕಿರಿಕ್ ಕೀರ್ತಿ;ನಾನು 100% ಗ್ರೇಟ್‌ ಅಲ್ಲ ಅಂದಿದ್ಯಾಕೆ?

'ನನ್ನ ತಂದೆ ತಾಯಿ ಚೆನ್ನಾಗಿದ್ದಾರೆ ಆರಾಮ್ ಆಗಿದ್ದಾರೆ. ನಾನು Go with the flow ವ್ಯಕ್ತಿ. ತುಂಬಾ ಲೆಕ್ಕಾಚಾರ ಹಾಕಿ ಜೀವನ ನಡೆಸುವುದಿಲ್ಲ. ಎಲ್ಲ ದೇವರ ನಿರ್ಧಾರ ಯಾರು ನೋಡಿಲ್ಲ ಲೆಕ್ಕ ಮಾಡಿಲ್ಲ ಅಂದ್ರೂ ದೇವರು ನೋಡುತ್ತಾರೆ ನಿರ್ಧಾರ ಮಾಡುತ್ತಾರೆ. ನಾನೇ ಸರಿ ಎಂದು ಜಗಳ ಮಾಡಿ ಪೊಲೀಸ್ ಸ್ಟೇಷನ್‌ನಲ್ಲಿ ಫೈಟ್ ಮಾಡು ಕೋರ್ಟ್‌ನಲ್ಲಿ ಫೈಟ್‌ ಮಾಡು ಏನ್ ಬೇಕಿದ್ದರೂ ಮಾಡಿ ಆದರೆ ದೇವರ ಮುಂದೆ ಫೈಟ್ ಮಾಡಲು ಆಗುತ್ತಾ?. ಒಳ್ಳೆ ಸಿನಿಮಾ ಒಳ್ಳೆ ಕಾರ್ಯಕ್ರಮಗಳನ್ನು ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತೀನಿ ಸಾವಿರಾರು ಯೋಚನೆಗಳಿದೆ. ಸದ್ಯಕ್ಕೆ ವಿವಿಧ ಕ್ಷೇತ್ರದಲ್ಲಿರುವ ಸಾಕಷ್ಟು ಸ್ನೇಹಿತರು ನನ್ನ ಜೊತೆ ನಿಂತಿದ್ದಾರೆ. ಜೀವನದಲ್ಲಿ ಈ ಘಟನೆ ಎದುರಿಸಿದ ನಂತರ ನನ್ನ ಶಕ್ತಿ ನನ್ನ ಗುಂಪು ಅರ್ಥವಾಗಿದೆ. ನೆಗೆಟಿವ್ ಆಗುತ್ತಿದ್ದಂತೆ ಪಾಸಿಟಿವ್ ಕೂಡ ಅವರ ಹಿಂದೆ ಬರುತ್ತದೆ. ಪಾಸಿಟಿವ್‌ ಜನರು ಪಾಸಿಟಿವ್ ಜೀವನ ಪಾಲಿಸುತ್ತಿರುವ ಕಾರಣ ಯಾರಿಗೂ ಹೆದರಿಕೊಳ್ಳುವುದಿಲ್ಲ ಬೆದರಿಕೊಳ್ಳುವುದಿಲ್ಲ ಕುಗ್ಗುವುದಿಲ್ಲ ಯಾರಿಗೂ ಭಯ ಪಡುವುದಿಲ್ಲ..ನನಗೆ ಗೊತ್ತು ಕರೆಕ್ಟ್‌ ಆಗಿ ಬದುಕಿದ್ದೀನಿ, ಕರೆಕ್ಟ್‌ ಆಗಿ ಬದುಕುತ್ತೀನಿ ಹಾಗೂ ಮುಂದಕ್ಕೂ ಕರೆಕ್ಟ್‌ ಆಗಿ ಜೀವನ ನಡೆಸುತ್ತೀನಿ' ಎಂದು ಕಿರಿಕ್ ಕೀರ್ತಿ ಖಾಸಗಿ ಸಂದರ್ಶನದದಲ್ಲಿ ಮಾತನಾಡಿದ್ದಾರೆ.

'ನನ್ನ ಎಲ್ಲಾ ಸ್ನೇಹಿತರ ಜೊತೆ ಮಾತನಾಡುತ್ತಿಲ್ಲ ನನ್ನ ಎಲ್ಲಾ ಸ್ನೇಹಿತರ ಜೊತೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲ. ನಮ್ಮ ಸಾವಿನ ತಮಟೆಯನ್ನು ನಾವೇ ಹೊಡೆದುಕೊಳ್ಳಬಾರದು ಅದಕ್ಕೆ ಬೇರೆ ಅರ್ಥ ಬರುತ್ತೆ..ನಮ್ಮ ಹೆಣ ಎತ್ಕೊಂಡು ಹೋಗುವಾಗ ನಾವೇ ಬಂದು ತಮಟೆ ಹೊಡೀಬಾರ್ದು. ನಾವು ಸೈಲೆಂಟ್‌ ಆಗಿರಬೇಕು ಹೊಡೆಯುವವರು ಎಷ್ಟು ಬೇಕಿದ್ದರೂ ತಮಟೆ ಹೊಡೆದುಕೊಳ್ಳಲಿ. ತಮಟೆ ಹರಿದು ಹೋಗಬೇಕು ಇಲ್ಲ ನಿನ್ನ ಕೈ ನೋವು ಬರಬೇಕು ಅಷ್ಟೇ ಅಲ್ವಾ? ಜೋರಾಗಿ ಹೊಡಿ ತಮಟೆ. ಈಗ ನಾನು ನೆಮ್ಮದಿಯಾಗಿ ಮಲಗಿಕೊಂಡಿರುವೆ ನೆಮ್ಮದಿಯಾಗಿ ಎಂಜಾಯ್ ಮಾಡುತ್ತಿರುವೆ ಅಷ್ಟೆ. ಅವನು ಸತ್ತಿದ್ದಾನೆ ಎಂದುಕೊಂಡು ತಮಟೆ ಹೊಡೆದರೆನೇ ಅವನು ಎಚ್ಚರಿಕೆ ಆಗುವುದು. ಸತ್ತಿದ್ದಾನೆ ಎಂದು ತಮಟೆ ಹೊಡೆಯುತ್ತಾರೆ ಆದರೆ ನಾನು ಅದೇ ಸೌಂಡ್‌ಗೆ ಎಚ್ಚರವಾಗುತ್ತಿರುವುದು' ಎಂದು ಕೀರ್ತಿ ಹೇಳಿದ್ದಾರೆ.

ಆ ನಾಲ್ಕು ವ್ಯಕ್ತಿಗಳಿಗೆ ನಾನು ಹೇಳುತ್ತಿರುವುದು ಅರ್ಥವಾಗುತ್ತದೆ: ವದಂತಿಗಳಿಗೆ ಬ್ರೇಕ್ ಹಾಕಿದ ಕಿರಿಕ್ ಕೀರ್ತಿ

'ನಾನು ಇಂಡಸ್ಟ್ರಿಯಲ್ಲಿ ಇದ್ದೀನಿ ಇಂಡಸ್ಟ್ರಿಯಲ್ಲೇ ಇರ್ತೀನಿ ಇಲ್ಲೇ ಬದುಕುತ್ತೀನಿ ಇಲ್ಲೇ ಸಾಧನೆ ಮಾಡುತ್ತೀನಿ ಇಲ್ಲೇ ಸಾಯುತ್ತೀನಿ. ಏನೂ ಇಲ್ಲದೇ ಇಲ್ಲಿ ತನಕ ಬಂದಿರುವವನು ನಾನು ...ಇಲ್ಲಿ ತನಕ ಬಂದವನು ಮುಂದಕ್ಕೆ ಹೋಗಲ್ವಾ?400 ರೂಪಾಯಿ ಇಡ್ಕೊಂಡು  ನಾಲ್ಕು ಚಕ್ರ ಕೆಂಪು ಬಸ್‌ನಲ್ಲಿ ಓಡಾಡುತ್ತಿದ್ದವನನ್ನು ದೇವರು ನಾಲ್ಕು ಚಕ್ರ ಕಾರಿನಲ್ಲಿ ಪ್ರಯಾಣ ಮಾಡಲು ತಂದು ಬಿಟ್ಟಿದ್ದಾನೆ. ನಾಲ್ಕು ಚಕ್ರ ಕೊಟ್ಟಿರುವ ದೇವರು ಕಾರಿನ ಮುಂದೆ ನಾಲ್ಕು ರಿಂಗ್‌ ಕೊಡಲ್ವಾ? ಸಾಧನೆ ಮಾಡೇ ಮಾಡುತ್ತೀನಿ' ಎಂದಿದ್ದಾರೆ ಕೀರ್ತಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?