ತಿಂಗಳಿಗೆ 1 ಲಕ್ಷ ದುಡಿಯೋ ಹುಡುಗ ಬೇಕು ಅನ್ನೋ ಹುಡ್ಗೀರ್‌ ಮೇಲೆ ಶಾಲಿನಿ ಗರಂ; ಯೋಗ್ಯತೆ ಬೇಡ್ವಾ?

Published : Mar 22, 2023, 11:26 AM IST
ತಿಂಗಳಿಗೆ 1 ಲಕ್ಷ ದುಡಿಯೋ ಹುಡುಗ ಬೇಕು ಅನ್ನೋ ಹುಡ್ಗೀರ್‌ ಮೇಲೆ ಶಾಲಿನಿ ಗರಂ; ಯೋಗ್ಯತೆ ಬೇಡ್ವಾ?

ಸಾರಾಂಶ

ಲವ್ ಮಾಡಿ 6 ತಿಂಗಳು ಆಗಿಲ್ಲ ಬ್ರೇಕಪ್ ಎನ್ನುವ ಪ್ರೇಮಿಗಳಿಗೆ ಕಿವಿ ಮಾತು ಹೇಳಿದ ನಿರೂಪಕಿ ಶಾಲಿನಿ. ಹುಡುಗರು ನಿಮ್ಮ ಮೇಲೆ ಯಾಕೆ ದುಡ್ಡು ಸುರಿಯಬೇಕು? 

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಶಾಲಿನಿ ಸತ್ಯನಾರಾಯಣ್ ಲವ್ ಆಂಡ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಒಂದು ಲಕ್ಷ ದುಡಿಯುವ ಹುಡುಗಬೇಕು ಅಂದ್ರೆ ನಿಮ್ಮ ಯೋಗ್ಯತೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.

'ಯಾವುದೇ ಸಂಬಂಧ ಅಗಲಿ ನಾವು ಏನು ಕೊಡುತ್ತೀವಿ ಅದೇ ವಾಪಸ್ ಸಿಗುತ್ತದೆ. ನೀವು ಹೇಗೆ ಒಬ್ಬ ವ್ಯಕ್ತಿಯನ್ನು ಟ್ರೀಟ್ ಮಾಡುತ್ತೀರಾ ಅವರು ಕೂಡ ನಿಮ್ಮನ್ನು ಹಾಗೆ ಟ್ರೀಟ್ ಮಾಡುತ್ತಾರೆ.  ನಾವು ಒಬ್ಬರನ್ನು ಕೇವಲವಾಗಿ ನೋಡಿದರೆ ಅವರು ಕೂಡ ನಮ್ಮನ್ನು ಹಾಗೆ ನೋಡಿಕೊಳ್ಳುತ್ತಾರೆ. ಆ  ಕಾಲದಲ್ಲಿ ಹುಡುಗ ಪ್ರೀತಿ ಬೇಡ ಅಂದ್ರೆ ಹುಡುಗಿಗೆ ಇಂಟ್ರೆಸ್ಟ್‌ ಇದ್ದರೆ ಒಪ್ಪಿಸಿ ಪ್ರೀತಿಯನ್ನು ಮುಂದುವರೆಸುತ್ತಿದ್ದರು. ಈಗ Give and Take ಪಾಲಿಸಿ ಹೆಚ್ಚಾಗಿದೆ...What you give is what you get ಅಷ್ಟು ಸಿಂಪಲ್' ಎಂದು ಶಾಲಿನಿ ಮಾತನಾಡಿದ್ದಾರೆ.

ಏನ್ರೀ ಸ್ಟೈಲ್‌ ನಿಮ್ದು; ಶಾಲಿನಿ ವಿಚಿತ್ರ ಬ್ಲೌಸ್‌ ನೋಡಿ ನೆಟ್ಟಿಗರು ಶಾಕ್

'ಈಗಿನ ಕಾಲದ ಹೆಣ್ಣು ಮಕ್ಕಳು ನಾನು ಪ್ರೀತಿಸುವ ಹುಡುಗ ಅಥವಾ ಮದುವೆ ಆಗುವ ಹುಡುಗ ತಿಂಗಳಿಗೆ ಒಂದುವರೆ ಲಕ್ಷ ಹಣ ದುಡಿಯಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಇದನ್ನು ನಾನು ತಪ್ಪು ಎಂದು ಹೇಳುವೆ. ಹುಡುಗ ಆಗಲಿ ಹುಡುಗಿ ಆಗಲಿ ನೀವು ಯಾವಾಗ ಇನ್ನೊಬ್ಬರು ನನ್ನನ್ನು ನೋಡಿಕೊಳ್ಳಬೇಕು, ನನ್ನ ಇಷ್ಟಗಳಿಗೆ ದುಡ್ಡು ಸುರಿಯಬೇಕು ಎಂದು ಹೇಳುತ್ತಾರೆ ಆ ಪ್ರೀತಿಯ ತಳಪಾಯ ಸರಿ ಇರುವುದಿಲ್ಲ ನನ್ನ ಪ್ರಕಾರ. ಯಾರೋ ಒಬ್ಬ ಹುಡುಗ ನಿಮ್ಮ ಮೇಲೆ ದುಡ್ಡು ಸುರಿಯಬೇಕು? ನೀವು ದುಡಿದು ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವ ಯೋಗ್ಯತೆ ಇಲ್ಲ ಅಂದ್ಮೇಲೆ ಆ ಭಾರವನ್ನು ಬೇರೆ ಅವರ ಮೇಲೆ ಹಾಕುವುದಿಲ್ಲ. ನಿಮ್ಮ ಖುಷಿಗೆ ಬೇರೆ ಯಾರೋ ಯಾಕೆ ಜವಾಬ್ದಾರಿ ತೆಗೆದುಕೊಳ್ಳಬೇಕು? ನನ್ನ ಖುಷಿಗೆ ನಾನು ಜವಾಬ್ದಾರಿ ನನ್ನ ಖುಷಿ ನಾನು ಕಂಡುಕೊಳ್ಳಬೇಕು ಅದನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು' ಎಂದು ಶಾಲಿನಿ ಹೇಳಿದ್ದಾರೆ.

'ರಿಲೇಶನ್‌ಶಿಪ್‌ ಆಗಲಿ ಅಥವಾ ಮದುವೆ ಆಗಲಿ ನಿಮ್ಮ ಖುಷಿಯ ಜವಾಬ್ದಾರಿ ನೀವು ತೆಗೆದುಕೊಳ್ಳಿ ಅವರ ಖುಷಿಯ ಜವಾಬ್ದಾರಿ ಅವರು ತೆಗೆದುಕೊಳ್ಳಲಿ. ನೀವಿಬ್ಬರೂ ಒಟ್ಟಿಗೆ ಖುಷಿಯಾಗಿರಿ' ಎಂದಿದ್ದಾರೆ.

ನಿರೂಪಕಿ ಶಾಲಿನಿ ಬ್ಯಾಗಲ್ಲಿ ಏನೆಲ್ಲಾ ಫನ್ನಿ ಐಟಂಗಳಿವೆ?

'ನನ್ನ ಸಂಪೂರ್ಣ ಕಾರ್ಡ್‌ಗಳು ಪತಿ ಅನಿಲ್ ಬಳಿ ಇರುತ್ತದೆ ಅನಿಲ್ ಹಣ ನನ್ನ ಬಳಿ ಇರುತ್ತದೆ. ಯಾರ ದುಡ್ಡು ಎಲ್ಲಿ ಕೊಡುತ್ತೀವಿ ಇಬ್ಬರಿಗೂ ಗೊತ್ತಿರುವುದಿಲ್ಲ. ನಾನು ಶೂಟಿಂಗ್ ಬರುವಾಗ ನನ್ನ ಕಾರ್ಡ್‌ ಕೊಟ್ಟಿರುತ್ತೀನಿ. ಎಷ್ಟೋ ಸಲ ಗಂಡ ಶಾಪಿಂಗ್ ಮಾಡುವಾಗ ಹಣ ಇರುವುದಿಲ್ಲ ಅಂದ್ರೆ ಲಿಂಕ್ ನನಗೆ ಕಳುಹಿಸುತ್ತಾರೆ  ಅಗ ಡಿಜಿಟಲ್ ಪೇಮೆಂಟ್ ನಾನು ಮಾಡುವೆ. ನಮ್ಮಿಬ್ಬರ ನಡುವೆ ದುಡ್ಡಿನ ವ್ಯತ್ಯಾಸ ಅಥವಾ ದುಡ್ಡಿನ ಹಕ್ಕು ಜಮಾಯಿಸುವುದು ಮಾಡಲ್ಲ. ನಾನಾಗೇ ಎಷ್ಟು ದುಡಿಯುವೆ ಎಂದು ಅನಿಲ್‌ಗೆ ಹೇಳುವವರೆಗೂ ಆತ ಕೇಳುವುದಿಲ್ಲ ನನ್ನ ಅಂಕೌಂಟ್‌ನಲ್ಲಿ ಎಷ್ಟಿದೆ ಎಂದು ನಾನಾಗೇ ಹೇಳುವವರೆಗೂ ಅನಿಲ್ ಕೇಳುವುದಿಲ್ಲ. ನಾವಿಬ್ಬರೂ ಒಟ್ಟಿಗೆ ದುಡಿದೂ ಒಟ್ಟಿಗೆ ಖರ್ಚು ಮಾಡಿ ಜೀವನ ನಡೆಸುತ್ತೀವಿ' ಎಂದು ಶಾಲಿನಿ ಮಾತನಾಡಿದ್ದಾರೆ.

'ಇತ್ತೀಚಿನ ದಿನಗಳಲ್ಲಿ ಬ್ರೇಕಪ್ ಅನ್ನೋದು ತುಂಬಾ ಕಾಮನ್ ಆಗಿದೆ. ಪ್ರೇಮಿಗಳಿಗೆ ಹೊರ ಬರಲು ಸುಲಭ ದಾರಿ ಬೇಕು. ಕಾಂಪ್ರಮೈಸ್, ಅಜೆಸ್ಟ್‌ ಹಾಗೂ ಬಿಟ್ಟು ಕೊಡದೇ ಇರುವುದನ್ನು ಜನರು ಮರೆತು ದುರಭಿಮಾನ ಬೆಳಸಿಕೊಳ್ಳುತ್ತಿದ್ದಾರೆ. ನಮಗೆ ಸ್ವಾಭಿಮಾನ ಇರಬೇಕು ಹಾಗಂತ ಅವನ ಮಾತು ಕೇಳುವುದಿಲ್ಲ ನನ್ನಂತೆ ಆಗಬೇಕು ಅಂದ್ರೆ ಬ್ರೇಕಪ್‌ ಬಿಟ್ಟರೆ ದಾರಿ ಇಲ್ಲ. ನಾನು ಸರಿ ನನ್ನದೇ ಸರಿ ಎಂದು ಪ್ರೂವ್ ಮಾಡಲು ಹೋದಾಗ ಬ್ರೇಕಪ್ ಮಾಡಿಕೊಳ್ಳುವುದು' ಎಂದು ಶಾಲಿನಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್