Dr Broಗೆ ಗೋಲ್ಡನ್‌ ಪ್ಲೇ ಬಟನ್; ಚಿನ್ನನೇ ಅಲ್ಲ ಗುರು ಎಂದು ಅಸಲಿ ಸತ್ಯ ಬಿಚ್ಚಿಟ್ಟ ಗಗನ್

By Vaishnavi ChandrashekarFirst Published Mar 22, 2023, 1:01 PM IST
Highlights

ಕೊನೆಗೂ ಸಿಗ್ತು ಗೋಲ್ಡನ್‌ ಪ್ಲೇ ಬಟನ್. ವೀಕ್ಷಕರಿಗೆ ಮೊದಲು ಓಪನ್ ಮಾಡಿ ತೋರಿಸಿ ಅಸಲಿ ಸತ್ಯ ತಿಳಿಸಿಕೊಟ್ಟ ಡಾ. ಬ್ರೋ..... 

'ನಮಸ್ಕಾರ ದೇವ್ರು,' ಎಂದು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ದೇಶ, ವಿದೇಶ ಪರಿಚಯ ಮಾಡಿಸುವ ಗಗನ್ ಶ್ರೀನಿವಾಸ್ ಉರ್ಫ್‌ ಡಾಕ್ಟರ್‌ ಬ್ರೋಗೆ ಯುಟ್ಯೂಬ್ ಸಂಸ್ಥೆ ಗೋಲ್ಡನ್ ಪ್ಲೇ ಬಟನ್ ಕೊಟ್ಟಿದೆ. ಒಂದು ಲಕ್ಷ ಫಾಲೋವರ್ಸ್‌ ಆಗಿದ್ದಕ್ಕೆ ಸಿಲ್ವರ್ ಬಟನ್ ಕೊಟ್ಟರು ಈಗ 10 ಲಕ್ಷ ಫಾಲೋವರ್ಸ್‌ ಆಗಿರುವುದಕ್ಕೆ ಗೋಲ್ಡನ್ ಬಟನ್ ಕೊಟ್ಟಿದ್ದಾರೆ. ಗೋಲ್ಡನ್ ಬಟನ್ ಅಂದ್ರೆ 22 ಅಥವಾ 24 ಕ್ಯಾರೆಟ್‌ ಗೋಲ್ಡ್‌ ಇರಬೇಕು ಎಂದು ಜನರು ಕಲ್ಪನೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದು ನಿಜಕ್ಕೂ ಗೋಲ್ಡಾ ಅಥವಾ ಬೇರೆ ಲೋಹದ ಮೇಲೆ ಚಿನ್ನದ ನೀರು ಬಿಟ್ಟಿರುವುದಾ? ಎಂದು ವಿಡಿಯೋ ಮಾಡಿದ್ದಾರೆ. 

'ಯುಟ್ಯೂಬ್‌ನವರು ಅಮೆರಿಕದಿಂದ ಬಂಗಾರದ ಪ್ಲೇ ಬಟನ್ ಕಳುಹಿಸಿದ್ದಾರೆ. ಕನ್ನಡ 6-7 ವೈಯಕ್ತಿಕ ಚಾನೆಲ್‌ ಹೊಂದಿರುವವರು ಮಾತ್ರ ಈ ಗೋಲ್ಡನ್‌ ಬಟನ್ ಪಡೆದು ಕೊಂಡಿದ್ದಾರೆ. ಒಂದು ಮಿಲಿಯನ್‌ ಫಾಲೋವರ್ಸ್‌ ಅಥವಾ ಸಬ್‌ಸ್ಕ್ರೈಬರ್ಸ್‌ ಮಾಡಿದವರಿಗೆ ಮಾತ್ರ ಈ ಗೋಲ್ಡನ್ ಬಟನ್ ಸಿಗುತ್ತದೆ. ಯಾಕೆ ಅಮೆರಿಕದಿಂದ ಬರುವುದು ಅಂದ್ರೆ ಯುಟ್ಯೂಬ್, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಎಲ್ಲಾ ಅಮೆರಿಕದ ಕಂಪನಿಗಳು. ಸಪ್ತಸಾಗರದ ಆಚೆಯಿಂದ ಬಂದಿರುವ ಬಂಗಾರದ ಬಟನ್‌ನ ನಿಮ್ಮ ಮುಂದೆ ಓಪನ್ ಮಾಡುತ್ತೀನಿ. ನಾಮಾಕಾವಸ್ತೆಗೆ ಯುಟ್ಯೂಬ್‌ ಅವರು ಗೋಲ್ಡನ್‌ ಬಟನ್‌ ಕೊಟ್ಟಿದ್ದಾರಾ ಅಥವಾ ನಿಜವಾದ ಬಂಗಾರವೇ ನೋಡೋಣ,' ಎಂದು ಹೇಳುವ ಮೂಲಕ ಡಾಕ್ಟರ್ ಬ್ರೋ ವಿಡಿಯೋ ಆರಂಭಿಸಿದ್ದಾರೆ. 

Dr Bro ಕನ್ನಡ: ನಮಸ್ಕಾರ ದೇವ್ರು... ಡಾ ಬ್ರೋ ಮಾತಾಡ್ತವ್ರೆ!

'ಹಿಂದಿಯಲ್ಲಿ ಸಿಕ್ಕಾಪಟ್ಟೆ ಜನರು ಗೋಲ್ಡನ್ ಬಟನ್ ಹೊಂದಿದ್ದಾರೆ. ಕನ್ನಡವರು ಈ ಗೌರವ ಪಡೆದಿದ್ದು ಕಡಿಮೆ. ಫೇಸ್‌ಬುಕ್‌ನಲ್ಲಿ 1 ಮಿಲಿಯನ್ ಆಗಿದೆ. ಆದರೆ ಅವರು ಏನೂ ಕೊಟ್ಟಿಲ್ಲ. ಯುಟ್ಯೂಬ್‌ ಕೊಟ್ಟಿರುವುದಕ್ಕೆ ಓಪನ್ ಮಾಡುತ್ತಿರುವುದು. ನನಗೆ ಬಹುಮಾನ ಪ್ರಶಸ್ತಿಗಳ ಮೇಲೆ ಅಷ್ಟಾಗಿ ಆಸಕ್ತಿ ಇಲ್ಲ,' ಎಂದು ಗಗನ್ ಗೋಲ್ಡನ್ ಬಟನ್ ಓಪನ್ ಮಾಡಿದ್ದಾರೆ. ಯುಟ್ಯೂಬ್ ಸಿಇಓ ಸಹಿ ಮಾಡಿರುವ ರೆಟರ್ ಸಹ ಇದೆ. ನೀವೂ ಒಂದು ಗುರಿ ಇಟ್ಟುಕೊಂಡು ಒಂದು ಮಿಲಿಯನ್ ಫಾಲೋವರ್ಸ್‌ ಹೊಂದಿರುವುದಕ್ಕೆ ಈ ಪ್ರಶಸ್ತಿ ಎಂದು ಬರೆದಿದ್ದಾರೆ,' ಎಂದು ಮಾತನಾಡಿದ್ದಾರೆ. 

'ಇದು ನಿಜವಾದ ಚಿನ್ನವೋ ಅಥವಾ ನಕಲಿ ಚಿನ್ನ ಅನ್ನೋ  ಚೆಕ್ ಮಾಡಲು ಸ್ಯಾಂಡ್‌ ಪೇಪರ್ ಮತ್ತು ಆಸಿಡ್‌ ಬಳಸುತ್ತಿರುವೆ. ಸಾಮಾನ್ಯವಾಗಿ ಬಂಗಾರದ ಅಂಗಡಿ ಅವರು ಚಿನ್ನ ಚೆಕ್ ಮಾಡಲು ನೈಟ್ರಿಕ್ ಆಸಿಡ್ ಬಳಸುತ್ತಾರೆ. ನಮ್ಮೂರಿನಲ್ಲಿ ಅದೆಲ್ಲಾ ಸಿಗದ ಕಾರಣ ನಾನು ಬಾತ್‌ರೂಮ್‌ ಕ್ಲೀನರ್‌ ಬಳಸುತ್ತಿರುವೆ,' ಎಂದು ಬ್ರೋ ಚೆಕ್ ಮಾಡಲು ಶುರು ಮಾಡುತ್ತಾರೆ. ಉಜ್ಜಿ ಉಜ್ಜಿ ನೋಡಿದಾಗ ಚಿನ್ನದ ಬಣ್ಣ ಹೋಗಿದ್ದು, ಬಿಳಿ ಲೋಹ ಕಾಣಿಸಿಕೊಂಡಿದೆ. ಲೋಹದ ಮೇಲೆ ಚಿನ್ನದ ಪೇಂಟ್‌ ಮಾಡಿದ್ದಾರೆ. ಅಸಲಿ ಚಿನ್ನ ಅಲ್ಲ. ನಕಲಿಯೋ ಅಸಲಿಯೋ ಅನ್ನೋದಕ್ಕಿಂತ ಪ್ರಶಸ್ತಿ ಅಷ್ಟೇ. ಒಂದು ಲಕ್ಷ ಬಂದಾಗ ಕಳುಹಿಸಿದ ಪ್ರಶಸ್ತಿಯನ್ನು ಕೂಡ ಓಪನ್ ಮಾಡಿ ತೋರಿಸಿರುವೆ,' ಎಂದು ಹೇಳಿದ್ದಾರೆ. 

ಕರುನಾಡಿನ ವಿಶಿಷ್ಟ ಸಾಧಕರು: ಭಿನ್ನ-ವಿಭಿನ್ನ ಪ್ರತಿಭೆ ಪ್ರದರ್ಶಿಸಿ ಸಖತ್‌ ಪ್ರಸಿದ್ಧಿ ಪಡೆದವರು

ಯುಟ್ಯೂಬ್ ಕೊಟ್ಟಿರುವ ಪ್ರಶಸ್ತಿಗಿಂತ, ನೀವು ಕೊಟ್ಟಿರುವ ಪ್ರಶಸ್ತಿನೇ ನನಗೆ ದೊಡ್ಡದ್ದು. ಇವೆಲ್ಲಾ ವಸ್ತುಗಳು ಅಷ್ಟೇ ಇವತ್ತು ಬರುತ್ತೆ, ನಾಳೆ ಹೋಗುತ್ತೆ. ಆದರೆ ಸರ್ವ ಕಾಲಕ್ಕೂ ಶ್ರೀಷ್ಠವಾಗಿ ಉಳಿದುಕೊಳ್ಳುವುದು ನಿಮ್ಮ ಪ್ರೀತಿ ಮತ್ತು ಸಪೋರ್ಟ್‌. ದೇವ್ರು ಎಲ್ಲರಿಗೂ ಥ್ಯಾಂಕ್ಸ್‌ ಎಂದಿದ್ದಾರೆ ಗಗನ್.

click me!