ಕ್ಯಾಪ್ಟನ್ ಇಲ್ಲದ ಬಿಗ್ ಬಾಸ್ ಮನೆ; ಕಿಚ್ಚ ಸುದೀಪ್ ಮಾತು ಕೇಳಿ ಶಾಕ್ ಆಗ್ಬಿಟ್ರಾ ಸ್ಪರ್ಧಿಗಳು!

By Shriram Bhat  |  First Published Dec 9, 2023, 7:47 PM IST

ಕಿಚ್ಚ ಸುದೀಪ್ ಅವರು ವರ್ತೂರು ಸಂತೋಷ್ ಬಳಿ 'ವರ್ತೂರ್ ಸರ್, ನೀವು ಸಂಪೂರ್ಣ ನ್ಯಾಯಯುತವಾಗಿ ಕ್ಯಾಪ್ಟನ್ ಆದ್ರಾ? ' ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ವರ್ತೂರು ಸಂತೋಷ್ ಏನು ಉತ್ತರ ಕೊಟ್ಟರು ಎಂಬುದನ್ನು ಇಂದಿನ ಸಂಚಿಕೆ ನೋಡಿ ತಿಳಿಯಬೇಕು.


ಬಿಗ್ ಬಾಸ್ ಕನ್ನಡ ಸೀಸನ್ 10 ರ ಮನೆಯ ಕ್ಯಾಪ್ಟನ್ ಕೋಣೆಗೆ ಬೀಗ ಬಿದ್ದಿದೆ. ಬಿಡುಗಡೆಯಾಗಿರುವ ಪ್ರೊಮೋದಲ್ಲಿ ನಟ ಕಿಚ್ಚ ಸುದೀಪ್ ಸ್ವತಃ ಸ್ನೇಹಿತ್ ಅವರಿಗೆ ಕ್ಯಾಪ್ಟನ್ ಕೋಣೆಗೆ ಬೀಗ ಹಾಕಲು ಹೇಳುತ್ತಾರೆ. 'ಎಲ್ಲಿಯ ತನಕ ಕ್ಯಾಪ್ಟನ್ ರೂಲ್ಸ್‌ಗೆ, ಯೋಗ್ಯತೆಗೆ ಮರ್ಯಾದೆ ಕೊಡೋದಕ್ಕೆ ಬರೋದಿಲ್ವೋ, ಅಲ್ಲಯವರೆಗೆ ಈ ಕ್ಯಾಪ್ಟನ್ ಕೋಣೆಗೆ ಬೀಗ ಬಿದ್ದಿರ್ಲಿ' ಎಂದು ಹೇಳಲು ಕಿಚ್ಚಿ ಅಣತಿಯಂತೆ ಸ್ನೇಹಿತ್ ಕ್ಯಾಪ್ಟನ್ ಕೋಣೆಗೆ ಬೀಗ ಹಾಕುತ್ತಾರೆ. 

ಕಿಚ್ಚ ಸುದೀಪ್ ಅವರು ವರ್ತೂರು ಸಂತೋಷ್ ಬಳಿ 'ವರ್ತೂರ್ ಸರ್, ನೀವು ಸಂಪೂರ್ಣ ನ್ಯಾಯಯುತವಾಗಿ ಕ್ಯಾಪ್ಟನ್ ಆದ್ರಾ? ' ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ವರ್ತೂರು ಸಂತೋಷ್ ಏನು ಉತ್ತರ ಕೊಟ್ಟರು ಎಂಬುದನ್ನು ಇಂದಿನ ಸಂಚಿಕೆ ನೋಡಿ ತಿಳಿಯಬೇಕು. ಆದರೆ ಅದಕ್ಕೆ ಉತ್ತರ ಎಂಬಂತೆ ನಮ್ರತಾ ಗೌಡ ಅವರು ' ವಿನಯ್ ಕೌಂಟ್ ಮಾಡಿ ಸಿಗ್ನಲ್ ಕೊಟ್ಟರು, ಆವಾಗ ಘಂಟೆ ಹೊಡೆದ್ರು' ಎಂದಿದ್ದಾರೆ. ಅಂದರೆ, ವರ್ತೂರು ಸಂತೋಷ್ ಅನ್ಯಾಯದ ದಾರಿಯಲ್ಲಿ ಕ್ಯಾಪ್ಟನ್ಸಿ ಪಡೆದುಕೊಂಡಿದ್ದರು ಎಂದು ಅರ್ಥವೇ? 

Tap to resize

Latest Videos

ಒಂಬತ್ತನೇ ವಾರದಲ್ಲಿ 9 ನಾಮಿನೇಶನ್ಸ್‌; ಮನೆಯಿಂದ ಯಾರು ಹೊರಹೋಗ್ತಾರೆ ಎಂಬುದು ಸದ್ಯದ ಕುತೂಹಲ!

ಗೊತ್ತಿಲ್ಲ, ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಇಂದು 'ವಾರದ ಕತೆ ಕಿಚ್ಚನ ಜೊತೆ' ಸಂಚಿಕೆ ನೋಡಬೇಕು. ಇಂದಿನ ಸಂಚಿಕೆಯಲ್ಲಿ ವೀಕ್ಷಕರ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ಡ್ರೋನ್ ಪ್ರತಾಪ್ ಹಾಗು ಸಂಗೀತಾ ಶೃಂಗೇರಿ ಅವರ ಕಣ್ಣಿಗೆ ಏನೋ ಸಮಸ್ಯೆಯಾಗಿದೆ ಎನ್ನಲಾಗುತ್ತಿದೆ. ಕಳೆದ ವಾರ ಆಡಿದ ಟಾಸ್ಕ್‌ನಲ್ಲಿ ಸೋಪಿನ ನೀರು ಅವರಿಬ್ಬರ ಕಣ್ಣಿಗೆ ಬಿದ್ದು ಏನೋ ರಾದ್ದಾಂತ ಆಗಿದೆ ಎನ್ನಲಾಗುತ್ತಿದೆ. ಆ ಕಾರಣಕ್ಕೆ ಅವರಿಬ್ಬರೂ ಬಿಗ್ ಬಾಸ್ ಮನೆಯಿಂದ ಹೊರಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ. 

ಸ್ನಾನದ ಮನೆಯಲ್ಲಿ ಆಕಾಶ್ ಬೆನ್ನು ಉಜ್ಜಿದ ಪುಷ್ಪಾ; ಅಮ್ಮ ಎಂದೇ ನಂಬಿದ್ದ ಆಕಾಶ್ ಕಕ್ಕಾಬಿಕ್ಕಿ!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

click me!