ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಪತ್ನಿಯಾಗಿ ರೆಸ್ಲರ್ ಮಕ್ಕಳ ತಾಯಿಯಾಗಿ ಪಾತ್ರ ಮಾಡಿದ ನಟಿ ಬಗ್ಗೆ ಯಾರಿಗೆ ಗೊತ್ತಿಲ್ಲ. 45 ಹರೆಯದಲ್ಲಿ ಅವಿವಾಹಿತರಾಗಿಯೇ ತಾಯಿಯಾದ ಇವರ ಜೀವನದ ಬಗ್ಗೆ ಇಲ್ಲಿದೆ ಡಿಟೇಲ್ಸ್
ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಪತ್ನಿಯಾಗಿ ರೆಸ್ಲರ್ ಮಕ್ಕಳ ತಾಯಿಯಾಗಿ ಪಾತ್ರ ಮಾಡಿದ ನಟಿ ಬಗ್ಗೆ ಯಾರಿಗೆ ಗೊತ್ತಿಲ್ಲ. ಹೇಳಿ ಅವಿವಾಹಿತರಾಗಿಯೇ ಉಳಿದ ಇವರು ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಅಚ್ಚಳಿಯದ ಹೆಸರು. ಬಹುತೇಕ ತಾಯಿಯ ಪಾತ್ರಗಳನ್ನೇ ನಿರ್ವಹಿಸಿಕೊಂಡಿರುವ ಹಿಂದಿ ಕಿರುತೆರೆಯ ರಾಕ್‌ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಸಾಕ್ಷಿ ತನ್ವರ್ ಅವರ ನಿಜ ಜೀವನವೂ ಅನೇಕರಿಗೆ ಮಾದರಿ. ಹಿಂದಿಯ ಹಲವು ಖ್ಯಾತ ಸೀರಿಯಲ್‌ಗಳ ಜೊತೆ 36ಕ್ಕೂ ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಸಾಕ್ಷಿ ತನ್ವರ್ ಈ ಟಿವಿ ಲೋಕಕ್ಕೆ ಬಂದಿದ್ದೆ ಅಚಾನಕ್ ಆಗಿ, ಸಿಬಿಐ ಅಧಿಕಾರಿಯೊಬ್ಬರ ಮಗಳಾದ ಸಾಕ್ಷಿ ತನ್ವರ್ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದು, ಅದಕ್ಕಾಗಿ ಅಧ್ಯಯನ ಮಾಡುತ್ತಿದ್ದರು.
ಪಠ್ಯಗಳಲ್ಲಿ ಸದಾ ಮುಂದಿದ್ದ ಸಾಕ್ಷಿ ತನ್ವರ್ (Sakshi Tanwar) ದೆಹಲಿ ಯುನಿವರ್ಸಿಟಿಯಿಂದ (Delhi Univercity) ಪದವಿ ಪಡೆದಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದರು. ಆದರೆ ಓದಿನ ಜೊತೆ ಜೊತೆಗೆ ಪಾಕೆಟ್ ಮನಿಗಾಗಿ ಅವರು ಲಕ್ಸುರಿ ಹೊಟೇಲೊಂದರಲ್ಲಿ ಸೇಲ್ಸ್ ಟ್ರೈನಿ ಆಗಿ ಕೆಲಸಕ್ಕೂ ಸೇರಿದ್ದರು. ಆದರೆ ಡೆಸ್ಟಿನಿ ಅವರನ್ನು ಬೇರೆಲ್ಲೋ ತಂದು ಮುಟ್ಟಿಸಿತ್ತು. ಆಗ 1998ರಲ್ಲಿ ಹಿಂದಿ ದೂರದರ್ಶನವೊಂದರ ಸಿನಿಮಾ ಹಾಡಿನ ಹಿನ್ನೆಲೆಯ ಕಾರ್ಯಕ್ರಮವಾದ 'ಅಲ್ಬೆಲಾ ಸುರ್ ಮೆಲಾ'ದಲ್ಲಿ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಸೇರಿದ ಸಾಕ್ಷಿ ನಂತರ ಈ ಈ ತಳುಕು ಬಳುಕಿನ ಮನೋರಂಜನಾ ಜಗತ್ತಿಗೆ ಕಾಲಿರಿಸಿದರು.
ರಾಮ್ ಕಪೂರ್ ಜೊತೆಗಿನ ರೋಮ್ಯಾನ್ಸ್‌ನಲ್ಲಿ ಎಲ್ಲಾ ಮಿತಿ ದಾಟಿದ ನಟಿ ಸಾಕ್ಷಿ ತನ್ವರ್!
ದೂರದರ್ಶನದಲ್ಲಿ ಸ್ವಲ್ಪ ವರ್ಷ ಕೆಲಸ ಮಾಡಿದ ಸಾಕ್ಷಿಗೆ ದೊಡ್ಡ ಬ್ರೇಕ್ ನೀಡಿದ್ದು, 'ಕಹಾನಿ ಘರ್ ಘರ್ ಕಿ' (Kahani Ghar Ghar Ki) ಎಂಬ ಸೀರಿಯಲ್, ಇದಾದ ನಂತರ ಅವರು ದೇವಿ, ಜಾಸ್ಸಿ ಜೈಸಿ ಕೋಯಿ ನಹಿ, ಬಾಲಿಕಾ ವಧು(Balika Vadhu), ಬಡೇ ಅಚ್ಚೆ ಲಗ್ತಾ ಹೈ, ಮುಂತಾದ ಖ್ಯಾತ ಸೀರಿಯಲ್‌ಗಳಲ್ಲಿ ನಟಿಸಿ ಹಿಂದಿ ಸೀರಿಯಲ್ ಲೋಕದ ಬಹುಬೇಡಿಕೆಯ ನಟಿ ಎನಿಸಿದರು. ಸಾಕ್ಷಿಯವರು ನಟಿಸಿದ ಬಹುತೇಕ ಸೀರಿಯಲ್‌ಗಳು ಒಳ್ಳೆಯ ಟಿಆರ್‌ಪಿ ಜೊತೆ ಮಹಿಳಾ ಪ್ರಧಾನ (Women Oriented Serials) ಸೀರಿಯಲ್‌ಗಳೇ ಆಗಿವೆ. 2001ರಲ್ಲಿ ಪ್ರಸಾರವಾಗುತ್ತಿದ್ದ ಕರಮ್, ಅದಾದ ನಂತರ ಸಂಸಾರ್ ದೇವಿ, ವಿರಾಸತ್, ಕಾವ್ಯಾಂಜಲಿಯಲ್ಲಿಯೂ ನಟಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಇವರು ಎಪಿಸೋಡ್ ಒಂದಕ್ಕೆ ಒಂದೂವರೆ ಲಕ್ಷ ಹಣ ಪಡೆಯುತ್ತಿದ್ದರು ಎಂದು ಸುದ್ದಿ ಇದೆ.
ವಿದೇಶದಲ್ಲಿ 100 ಕೋಟಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಇದು; ಬಾಹುಬಲಿ, ಕೆಜಿಎಫ್ 2, ಪಠಾಣ್, ಜವಾನ್ ಅಲ್ಲ!
ಇದರ ಜೊತೆಗೆ ಸಿನಿಮಾಗಳಲ್ಲೂ ಅವರು ನಟಿಸಿದ್ದು ಅಮೀರ್ ಖಾನ್ (Aamir Khan) ನಟನೆಯ ದಂಗಲ್ ಸಿನಿಮಾದಲ್ಲಿ (Dangal Movie) ಖಾನ್ ಪತ್ನಿ ಪಾತ್ರ ಇವರಿಗೆ ದೇಶಾದ್ಯಂತ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಬಾಚಿದ್ದು ಗೊತ್ತೆ ಇದೆ. ದಂಗಲ್ ಸಿನಿಮಾದ ನಟನೆಯ ನಂತರ ಸಾಕ್ಷಿಗೆ ಹಲವು ಸಿನಿಮಾಗಳಲ್ಲೂ ಅವಕಾಶ ಸಿಕ್ಕಿದ್ದು, ಮೊಹಲ್ಲಾ ಅಸ್ಸಿ, ಡಯಲ್ 100, ಸಮ್ರಾಟ್ ಪೃಥ್ವಿರಾಜ್‌ನಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಮಾಯಿ ಎ ಮದರ್ಸ್ ರೇಜ್ ಎಂಬ ನೆಟ್‌ಫ್ಲಿಕ್ಸ್ (Netflix) ಸಿರೀಸ್‌ನಲ್ಲೂ ನಟಿಸಿದ್ದಾರೆ. ಈ ಸಿರೀಸ್‌ಗೂ ಒಳ್ಳೆ ಸ್ಪಂದನೆ ವ್ಯಕ್ತವಾಗಿದೆ.
ಆದರೆ ವೈಯಕ್ತಿಕ ಬದುಕಿನಲ್ಲಿ ಸಾಕ್ಷಿ ತನ್ವರ್ ಅವರು ಯಾರನ್ನೂ ಮದುವೆಯೇ ಆಗಿಲ್ಲ, ಪ್ರಸ್ತುತ 50 ವರ್ಷದ ಈ ನಟಿ ತಮ್ಮ 45ರ ಹರೆಯದಲ್ಲಿ ಅಂದರೆ ಐದು ವರ್ಷಗಳ ಹಿಂದೆ ಒಂದು ಹೆಣ್ಣು ಮಗುವೊಂದನ್ನು ದತ್ತು ಪಡೆದು ತಾಯ್ತನವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಏಕಾಂಗಿ ಜೀವನವನ್ನು ತಾಯ್ತನದ ಖುಷಿಯನ್ನು ವಿವಾಹವಿಲ್ಲದೆಯೇ ಎಂಜಾಯ್ ಮಾಡ್ತಿದ್ದಾರೆ ಈ ನಟಿ. ಮಗುವಿನ ಆರೈಕೆ ಮಾಡುತ್ತಾ ಪುಟ್ಟ ಮಗುವಿನ ಜವಾಬ್ದಾರಿ ವಹಿಸಿಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಅನೇಕ ತಾಯಿಯಂದಿರಿಗೆ ಮಹಿಳೆಯರಿಗೆ ಸ್ಪೂರ್ತಿ.