ಮೋಸದಿಂದ ಕ್ಯಾಪ್ಟನ್ ಆಗಿದ್ದ ವರ್ತೂರ್ ಸಂತೋಷ್‌ಗೆ ಕಿಚ್ಚ ಸುದೀಪ್ ಶಾಕ್ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಬಿಗ್ ಬಾಸ್ ಮನೆಯ ನಾಯಕನ ರೂಮ್‌ಗೆ ಬೀಗ ಬಿದ್ದಿದ್ದು, ಈ ಔಅರ ಇಮ್ಯುನಿಟಿ ಕೂಡ ಇರೋದಿಲ್ಲ.
ಬೆಂಗಳೂರು (ಡಿ.9): ಬಿಗ್ ಬಾಸ್ ಸೀಸನ್ 10ನ ಎಲ್ಲಾ ವಾರದ ಪಂಚಾಯ್ತಿಗಿಂತ ಈ ವಾರದ ಕಿಚ್ಚನ ಪಂಚಾಯ್ತಿಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ನಡುವೆ ನಾಯಕತ್ವದ ಟಾಸ್ಕ್‌ಗಾಗಿ ವಿನಯ್ ಹಾಗೂ ವರ್ತೂರ್ ಸಂತೋಷ್ ಮಾಡಿರುವ ಮೋಸ ಎಲ್ಲರ ಗಮನಕ್ಕೆ ಬಂದಿದೆ. ಇದನ್ನು ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಸ್ವತಃ ಸುದೀಪ್ ಅವರೇ ವರ್ತೂರ್ ಅವರಿಗೆ ಈ ಪ್ರಶ್ನೆ ಎತ್ತಿದ್ದಾರೆ. ಇದರ ಬೆನ್ನಲ್ಲಿಯೇ ಈ ವಾರ ಅವರಿಗೆ ಇಮ್ಯುನಿಟಿ ಇರೋದಿಲ್ಲ ಎಂದಿರುವ ಸುದೀಪ್, ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮ್‌ಗೆ ಬೀಗ ಹಾಕಿಸಿದ್ದಾರೆ.ಅದರೊಂದಿಗೆ ಮನೆ ಮಂದಿಯೆಲ್ಲಾ ಸೇರಿ ಈ ವಾರದ ಕಳಪೆಯನ್ನು ಕಾರ್ತಿಕ್ ಮಹೇಶ್‌ಗೆ ನೀಡಿದ್ದರು. ಉತ್ತಮ ನಿರ್ವಹಣೆ ತೋರಿದ್ದರೂ, ಕಾರ್ತಿಕ್‌ಗೆ ಕಳಪೆ ನೀಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆಯನ್ನು ಕಾರ್ತಿಕ್ ಮಹೇಶ್‌ಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ವಾರ ಮೊದಲಿಗರಾಗಿ ಡ್ರೋನ್ ಪ್ರತಾಪ್ ಸೇವ್ ಆಗಿದ್ದರೆ, ಸಂಗೀತಾ ಶೃಂಗೇರಿ ನಂತರ ಸೇವ್ ಆಗಿದ್ದಾರೆ ಎಂದು ವರದಿಯಾಗಿದೆ.
ವರ್ತೂರ್ ಸರ್ ಹೊಸ ಕ್ಯಾಪ್ಟನ್... ಸಂಪೂರ್ಣವಾಗಿ ನ್ಯಾಯವಾಗಿ ಕ್ಯಾಪ್ಟನ್ ಆದ್ರಾ ತಾವು ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ನಮ್ರತಾ, 'ವಿನಯ್ ಕೌಂಟ್ ಮಾಡಿ ಸಿಗ್ನಲ್ ಕೊಟ್ಟಿದ್ದಾರೆ. ಆವಾಗ ವರ್ತೂರ್ ಗಂಟೆ ಹೊಡೆದರು' ಎಂದು ಹೇಳಿದ್ದಾರೆ. ಇದಕ್ಕೆ ಮಾತನಾಡುವ ಸುದೀಪ್, ಇಲ್ಲಿಂದ ನಾನು ನಿಮ್ಮನ್ನ ಇಮ್ಯುನಿಟಿಯಿಂದ ಡಿಸ್ಮಿಸ್ ಮಾಡುತ್ತಿದ್ದೇನೆ. ಎಲ್ಲಿಯವರೆಗೂ ತಾವು ಕ್ಯಾಪ್ಟನ್‌ಶಿಪ್ ಎನ್ನುವ ಸ್ಥಾನಕ್ಕೆ, ಮರ್ಯಾದೆ ಕೊಡೋದಕ್ಕೆ ಬರೋದಿಲ್ವೋ ಅಲ್ಲಿಯವರೆಗೆ ಈ ಮನೆಗೆ ಕ್ಯಾಪ್ಟನ್ ಅನ್ನೋರು ಯಾರೂ ಇರಕೂಡದು. ಆ ರೂಮ್‌ಗೆ ನಿಮ್ಮ ಕೈಯಾರೆ ಬೀಗ ಹಾಕಿ ಎಂದು ಹೇಳಿರುವುದು ಪ್ರೋಮೋದಲ್ಲಿ ತೋರಿಸಲಾಗಿದೆ.
ಇನ್ನು ಈ ಘಟನೆಯನ್ನು ನೋಡೋದಾದರೆ, ಶುಕ್ರವಾರದ ಕ್ಯಾಪ್ಟನ್‌ಶಿಪ್ ಟಾಸ್ಕ್‌ನ ಎಪಿಸೋಡ್‌ನಲ್ಲಿ ಇದು ದಾಖಲಾಗಿದೆ. ಈ ವಾರ ಕ್ಯಾಪ್ಟನ್‌ಶಿಪ್ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್, ಸಿರಿ, ಮೈಕೆಲ್ ಹಾಗೂ ಅವಿನಾಶ್ ಇದ್ದರು. ಈ ವೇಳೆ ವರ್ತೂರ್ ಸಂತೋಷ್ ಹಾಗೂ ಮೈಕೆಲ್‌ಗೆ ಸಹಾಯ ಮಾಡಿದ್ದ ವಿನಯ್, ನೀವೂ ಕೂಡ ಟೈಮ್‌ಅನ್ನು ಲೆಕ್ಕ ಹಾಕಿಕೊಳ್ಳಿ. ನಾನೂ ಕೂಡ ಲೆಕ್ಕಾ ಹಾಕಿಕೊಳ್ತೀನಿ. ನಾನು ಲೆಕ್ಕಾ ಹಾಕಿರೋ ಟೈಮ್ ಮುಗಿದ ನಂತರ ನಾನು ಒಂದು ಸಿಗ್ನಲ್ ಕೊಡ್ತೇನೆ. ನೀವೂ ಕೂಡ ಟೈಮ್ ಲೆಕ್ಕ ಹಾಕಿ ಇರ್ತೀರಿ. ಅವೆರಡೂ ಕೂಡ ಮ್ಯಾಚ್ ಆದ್ರೆ ಅಲ್ಲಿಗೆ ನಿಮ್ಮ ಆಟವನ್ನು ನಿಲ್ಲಿಸಿ ಬೆಲ್‌ಅನ್ನು ಹೊಡೆಯಬೇಕು ಎಂದು ಹೇಳಿದ್ದನ್ನು ಪ್ರಸಾರ ಮಾಡಲಾಗಿತ್ತು. ಇದೇ ರೀತಿ ಮೈಕೆಲ್‌ಗೂ ಕೂಡ ಸಹಾಯ ಮಾಡಿದ್ದರು. ತಮ್ಮ ಲೆಕ್ಕಾಚಾರ ಹಾಗೂ ವಿನಯ್ ಅವರ ಲೆಕ್ಕಾಚಾರ ಎರಡೂ ಸರಿಯಾಗಿ ಮ್ಯಾಚ್ ಆದಾಗ ಅವರು ಬೆಲ್ ಹೊಡೆದಿದ್ದರು. ಆದರೆ, ವಿನಯ್ ಸಿಗ್ನಲ್ ಕೊಟ್ಟಿದ್ದು ಮೈಕೆಲ್‌ಗೆ ಸರಿಯಾಗಿ ಗೊತ್ತಾಗದ ಕಾರಣ ಕೆಲ ಸೆಕೆಂಡ್ ಬಿಟ್ಟು ಬೆಲ್ ಹೊಡೆದಿದ್ದರು.
ಕಪ್ಪುಕನ್ನಡಕ ಧರಿಸಿ ಸಂಗೀತಾ, ಪ್ರತಾಪ್ ರೀ ಎಂಟ್ರಿ, 'ಇದೇ ನನ್ನ ಕೊನೇ ಬಿಗ್‌ಬಾಸ್' ಮುನ್ಸೂಚನೆ ಕೊಟ್ರಾ ಸುದೀಪ್?
ಆದರೆ, ವರ್ತೂರ್ ಸಂತೋಷ್‌ಗೆ ಹೀಗಾಗಿರಲಿಲ್ಲ. ಅವರು ಕ್ಯಾಪ್ಟನ್ಸಿ ಟಾಸ್ಕ್‌ನ ಚೇರ್‌ನಲ್ಲಿ ಬಹಳ ಆರಾಮವಾಗಿ ಕುಳಿತುಕೊಂಡಿದ್ದರು. ಇನ್ನೊಂದೆಡೆ ವಿನಯ್ ಕೂಡ ಬೆಂಚ್ ಮೇಲೆ ಕುಳಿತು ಟೈಮ್ ಲೆಕ್ಕಾಚಾರ ಹಾಕುತ್ತಿದ್ದರು. ಸಮಯ ಹತ್ತಿರ ಬರುತ್ತಿದ್ದ ಹಾಗೆ ಬೇಕಂತಲೇ ವರ್ತೂರ್ ಬಳಿ ಬಂದ ವಿನಯ್ ಎರಡು ಬಾರಿ ಟೇಬಲ್ ಅನ್ನು ತಿರುಗಿಸಿದ ರೀತಿ ಮಾಡಿ, ಸಮಯ ಮುಗಿದಾಗ ಟೇಬಲ್ ಮೇಲೆ ದೊಡ್ಡದಾಗಿ ಕೈಯಿಂದ ಬಾರಿಸಿ ಸಿಗ್ನಲ್ ಕೊಟ್ಟಿದ್ದರು. ಇದಾದ ಬಳಿಕ ವರ್ತೂರ್ ಸಂತೋಷ್ ಗಂಟೆ ಬಾರಿಸಿದ್ದರು. ಇದರಿಂದಾಗಿ ವರ್ತೂರ್ ಸಂತೋಷ್ ಅವರ ಟೈಮಿಂಗ್ ಬಹಳ ಸಮೀಪ ಬಂದಿತ್ತು. ಇದರಿಂದಾಗಿ ಅವರು ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಈ ಮೋಸದ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬರೆದುಕೊಂಡಿದ್ದರು.
ಆಸ್ಪತ್ರೆಯಿಂದ ವಾಪಸಾದ ಸಂಗೀತಾ, ಡ್ರೋನ್ ಪ್ರತಾಪ್ ಕಣ್ಣಿಗೆ ಡ್ಯಾಮೇಜ್? ವಿಡಿಯೋ ನೋಡಿ ಫ್ಯಾನ್ಸ್ ಕಣ್ಣೀರು