
ಈಗಾಗಲೇ ʼಕನ್ನಡತಿʼ ಧಾರಾವಾಹಿ ಮೂಲಕ ಸಂಚಲನ ಮೂಡಿಸಿರುವ ನಟ ಕಿರಣ್ ರಾಜ್ ಈಗ ʼಕರ್ಣʼ ಧಾರಾವಾಹಿಯ ಹೀರೋ. ಹೀರೋ ಸೆಂಟ್ರಿಕ್ ಕಥೆ ಇದ್ದರೆ ಕಿರುತೆರೆಗೆ ಕಂಬ್ಯಾಕ್ ಮಾಡ್ತೀನಿ ಎಂದಿದ್ದ ಕಿರಣ್ ರಾಜ್ ಮಾತು ಉಳಿಸಿಕೊಂಡಿದ್ದಾರೆ.
ಮಾತು ಉಳಿಸಿಕೊಂಡ ನಟ!
ಹೌದು, 2023ರ ಆರಂಭದಲ್ಲೇ ʼಕನ್ನಡತಿʼ ಧಾರಾವಾಹಿ ಮುಕ್ತಾಯವಾಗಿತ್ತು. ಆ ನಂತರ ಅವರು ಸಿನಿಮಾಗಳತ್ತ ಹೆಚ್ಚು ಗಮನ ಕೊಟ್ಟರು. ಕಿರಣ್ ರಾಜ್ ನಟನೆಯ ʼಮೇಘʼ, ʼರಾನಿʼ ಸಿನಿಮಾ ರಿಲೀಸ್ ಆಯ್ತು. ಈ ಮಧ್ಯೆ ಕಿರುತೆರೆ ಪ್ರಿಯರು ಕಿರಣ್ ರಾಜ್‌ಗೆ ಯಾವಾಗ ಸೀರಿಯಲ್ ಮಾಡ್ತೀರಾ ಎಂದು ಪ್ರಶ್ನೆ ಕೇಳುತ್ತಲೇ ಇದ್ದರು. ಆಗ ಕಿರಣ್ ರಾಜ್ ಅವರು ʼಹೀರೋ ಸೆಂಟ್ರಿಕ್ ( ಟೈಟಲ್ ಸೆಂಟ್ರಿಕ್ ) ಕಥೆ ಇದ್ದರೆ ಧಾರಾವಾಹಿ ಮಾಡ್ತೀನಿʼ ಎಂದು ಹೇಳಿದ್ದರು. ಈಗ ಅವರು ಆ ಮಾತನ್ನು ಉಳಿಸಿಕೊಂಡಿದ್ದಾರೆ. ಇದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಂಡಿದ್ದಾರೆ.
ಬೆಳ್ಳಂಬೆಳಗ್ಗೆ ವೀಕ್ಷಕರಿಗೆ ಗುಡ್‌ನ್ಯೂಸ್ ಕೊಟ್ಟ ನಟ ಕಿರಣ್ ರಾಜ್! ಎಂಥ ʼಕರ್ಣʼನಪ್ಪಾ...!
ʼಕರ್ಣʼ ಕಥೆ ಏನು?
ಕಿರಣ್ ರಾಜ್ ಅವರ ʼಕರ್ಣʼ ಧಾರಾವಾಹಿ ಪ್ರೋಮೋ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿದೆ. ಇನ್ನು ಈ ಸೀರಿಯಲ್‌ನಲ್ಲಿ ಆಶಾರಾಣಿ, ಸಿಮ್ರನ್, ನಾಗಾಭರಣ, ವೀಣಾ ರಾವ್ ಅವರು ನಟಿಸುತ್ತಿದ್ದಾರೆ. ತನ್ನದೇ ಮನೆಯಲ್ಲಿ ಅನಾಥನಾಗುವ ಕರ್ಣ ಜನಪ್ರಿಯ, ಪ್ರಶಸ್ತಿ ಪುರಸ್ಕೃತ ಡಾಕ್ಟರ್. ತಿಪ್ಪೆಗುಂಡಿಯಲ್ಲಿ ಬಿದ್ದಿದ್ದ ಕರ್ಣನನ್ನು ಯಾರು ಎತ್ತಿಕೊಂಡು ಬಂದು ಸಾಕಿ ಸಲಹುತ್ತಾರೆ? ಯಾಕೆ ಮನೆಯಲ್ಲಿ ಕೆಟ್ಟದಾಗಿ ಟ್ರೀಟ್ ಮಾಡ್ತಾರೆ ಎನ್ನೋದು ಈ ಧಾರಾವಾಹಿಯ ಒನ್‌ಲೈನ್ ಸ್ಟೋರಿ ಎನ್ನಬಹುದು.
Watch: ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ ಕನ್ನಡದ ಸ್ಟಾರ್ ನಟಿ!
ಕಿರಣ್ ರಾಜ್ ಏನಂದ್ರು?
ಈ ಧಾರಾವಾಹಿ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ ಕಿರಣ್ ರಾಜ್, “ನನಗೆ ಒಂದೇ ರೀತಿಯ ಪಾತ್ರಗಳನ್ನು ಮಾಡಲು ಇಷ್ಟವಿರಲಿಲ್ಲ. ಹೀಗಾಗಿ ನಾನು ಇಷ್ಟುದಿನ ಪಾತ್ರದ ನಿರೀಕ್ಷೆಯಲ್ಲಿದ್ದೆ. ನನಗೆ ಮೂರು ವಾಹಿನಿಗಳಿಂದ ಸಾಕಷ್ಟು ಧಾರಾವಾಹಿಗಳ ಆಫರ್ ಇತ್ತು. ಆದರೆ ಒಳ್ಳೆಯ ಗಟ್ಟಿ ಪಾತ್ರಕ್ಕೋಸ್ಕರ ಎಲ್ಲವನ್ನು ರಿಜೆಕ್ಟ್ ಮಾಡಿದ್ದೆ. ಹೀರೋ ಸೆಂಟ್ರಿಕ್ ಕಥೆಗೋಸ್ಕರ ಕಾದಿದ್ದೆ. ಕರ್ಣ ಧಾರಾವಾಹಿ ಮೂಲಕ ನನಗೆ ಬೇಕಾದಂತಹ ಪಾತ್ರ ಸಿಕ್ಕಿದೆ. ಈ ವಿಷಯಕ್ಕೆ ತುಂಬ ಖುಷಿ ಇದೆ” ಎಂದು ಹೇಳಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ನಟ!
“ಕನ್ನಡ ಕಿರುತೆರೆಯಲ್ಲಿ ನೀವು ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಂತೆ ಹೌದಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಟ ಕಿರಣ್ ರಾಜ್ ಅವರು ನಗುತ್ತ, ʼಹೌದುʼ ಎಂದಿದ್ದಾರೆ.ʼಸೀತಾರಾಮʼ ಧಾರಾವಾಹಿಯಂತೆ ಈ ಸೀರಿಯಲ್‌ನ್ನು ಜೀ ಕನ್ನಡ ವಾಹಿನಿಯೇ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ.
ಕನ್ನಡತಿಯ ಹರ್ಷ ಇಲ್ಲಿ ರಾನಿ ಅವತಾರ ಎತ್ತಿದ್ದಾನೆ: ನಿರ್ದೇಶಕ ಗುರುತೇಜ್ ಶೆಟ್ಟಿ
ಅದ್ದೂರಿ ಸೆಟ್!
ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಶೂಟ್ ಮಾಡಲಾಗುವುದು. ಅಂದಹಾಗೆ ಈ ಧಾರಾವಾಹಿಗೆ ಬೃಹತ್ ಪ್ರಮಾಣದಲ್ಲಿ ಸೆಟ್ ಹಾಕಲಾಗಿದೆ. ದೊಡ್ಡ ತಾರಾಗಣ ಇರುವ ಈ ಸೀರಿಯಲ್ ಪ್ರೋಮೋ ರಿಲೀಸ್ ಆಗಿ ಒಂದು ದಿನದೊಳಗಡೆ ಮೂರು ಮಿನಿಯನ್ ವೀಕ್ಷಣೆ ಕಂಡಿದೆ. ಇದು ಕನ್ನಡ ಕಿರುತೆರೆಯಲ್ಲಿ ನಿಜಕ್ಕೂ ದೊಡ್ಡ ಚಮತ್ಕಾರ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.