ಬೆಲ್ದಚ್ಚಂಗೆ ಹಾಡಿಗೆ… ಪಾರು -ಶಿವು ಆಯ್ತು... ಈಗ ರೂಪಾ - ರಾಜು ರೋಮ್ಯಾನ್ಸ್... ಫ್ಯಾನ್ಸ್ ಫಿದಾ

Published : Mar 11, 2025, 03:20 PM ISTUpdated : Mar 11, 2025, 03:54 PM IST
ಬೆಲ್ದಚ್ಚಂಗೆ ಹಾಡಿಗೆ… ಪಾರು -ಶಿವು ಆಯ್ತು... ಈಗ ರೂಪಾ - ರಾಜು ರೋಮ್ಯಾನ್ಸ್... ಫ್ಯಾನ್ಸ್ ಫಿದಾ

ಸಾರಾಂಶ

ಝೀ ಕನ್ನಡದ ಅಣ್ಣಯ್ಯ ಧಾರಾವಾಹಿಯ ಶಿವು-ಪಾರು ಜೋಡಿ ಜನಪ್ರಿಯವಾಗಿದೆ. ಇವರ ಪ್ರೀತಿಯ ಹಾಡು ಟ್ರೆಂಡ್ ಸೃಷ್ಟಿಸಿತ್ತು. ಇತ್ತೀಚೆಗೆ, ನಿಶಾ ರವಿಕೃಷ್ಣನ್ ಮತ್ತು ಯಶವಂತ್ ಗೌಡ ಅದೇ ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಯಶವಂತ್, ನಿಶಾ ಜೊತೆ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಶಿವು-ಪಾರು ಮತ್ತು ರೂಪ-ರಾಜು ಜೋಡಿಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯ (Annayya Serial)  ಶಿವು ಮತ್ತು ಪಾರು ಜೋಡಿ ಸಖತ್ ಫೇಮಸ್. ಪಾರು ಮೇಲಿರುವ ಶಿವು ಸ್ವಾರ್ಥವಿಲ್ಲದ ಪ್ರೀತಿ, ಪಾರುಗಾಗಿ ಏನು ಬೇಕಾದರೂ ಮಾಡೊದಕ್ಕೆ ಸಿದ್ಧವಾಗಿರುವ ಶಿವು, ಆಕೆ ಪ್ರೀತಿಸಿದ ಹುಡುಗನ ಜೊತೆಗೂ ಮದುವೆ ಮಾಡಿಸೋದಕ್ಕೆ ಸಿದ್ಧವಾಗಿರುವ ಅಪ್ಪಟ ಪ್ರೇಮಿ ಶಿವು. ಸದ್ಯ ಪಾರುಗೂ ಶಿವು ಮೇಲೆ ಲವ್ ಆಗಿದೆ. ಅದನ್ನ ಹೇಗೆ ಹೇಳಬೇಕು, ಮಾವನಿಗೆ ಹೇಗೆ ತನ್ನ ಪ್ರೀತಿಯನ್ನು ಅರ್ಥ ಮಾಡಿಸಿಕೊಳ್ಳಬೇಕು ಎಂದು ತಿಳಿಯದೆ ಚಡಪಡಿಸುತ್ತಿದ್ದಾಳೆ ಪಾರು. ಶಿವು ಪಾರ್ವತಿ ಪ್ರೀತಿಯನ್ನು ಬಿಂಬಿಸುವ ಹಾಡೇ ಬೆಲ್ದಚ್ಚಂಗೆ ಪಾರು ನೀನು ನಂಗೆ ಹಾಡು ಈ ಹಾಡು ಸಖತ್ ಟ್ರೆಂಡ್ ಸೃಷ್ಟಿ ಮಾಡಿತ್ತು. 

ಅಣ್ಣಯ್ಯನ ಮೇಲೆ ಪಾರುಗೆ ಈಗಷ್ಟೇ ಶುರುವಾಗಿದೆ ಲವ್​: ಅಬ್ಬಬ್ಬಾ ಇಲ್ಲಿ ನೋಡಿ ಈ ಪರಿ ರೊಮಾನ್ಸ್...

ಬೆಲ್ದಚ್ಚಂಗೆ ಪಾರು ನೀನು ನಂಗೆ ಹಾಡು ಹಾಡಿಗೆ ಶಿವು ಮತ್ತು ಪಾರು ಖ್ಯಾತಿಯ ವಿಕಾಶ್ ಉತ್ತಯ್ಯ ಹಾಗೂ ನಿಶಾ ರವಿಕೃಷ್ಣನ್ (Vikash Uttaiah and Nisha Ravikrishnan) ರೀಲ್ಸ್ ಮಾಡಿ, ಸಖತ್ ರೊಮ್ಯಾಂಟಿಕ್ ಆಗಿರುವ ವಿಡಿಯೋ ಪೋಸ್ಟ್ ಮಾಡಿದ್ದರು. ಸೀರಿಯಲ್ ನಲ್ಲೂ ಈ ಹಾಡು ಸೌಂಡ್ ಮಾಡಿತ್ತು. ಇವರಿಬ್ಬರ ಜೋಡಿ ನೋಡಿ, ಜನ ಮೆಚ್ಚಿಕೊಂಡಿದ್ದು, ಇದೇ, ಅದಷ್ಟು ಬೇಗನೇ ಈ ಜೋಡಿ ಒಂದಾಗಲಿ ಎಂದು ಜನ ಹಾರೈಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ನಟ ಯಶವಂತ್ ಗೌಡ ಮತ್ತು ನಿಶಾ ರವಿಕೃಷ್ಣನ್ ಅದೇ ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. 

ನಿಜವಾಗಿಯೂ ನಂಗೆ ಬ್ರೇಕಪ್ ಆಗಿದೆ ಎಂದ ವಿಕಾಶ್ ಉತ್ತಯ್ಯ

ಯಾರು ಈ ಯಶವಂತ್ (Yashwanth Gowda) ಅಂದ್ರೆ, ಕನ್ನಡದಲ್ಲಿ ಕನ್ಯಾಕುಮಾರಿ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಯಶವಂತ್, ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ  ನಾತಿಚರಾಮಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಇವರು ನಿಶಾ ರವಿಕೃಷ್ಣನ್ ಗೆ ನಾಯಕನಾಗಿ ತೆಲುಗಿನ ಅಮೈಗಾರು (Amayi Garu) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿಯ ರಿಮೇಕ್ ಝೀ ಕನ್ನಡದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಆಗಿ ಪ್ರಸಾರವಾಗುತ್ತಿದೆ. ಅಮೈಗಾರು ಧಾರಾವಾಹಿಯಲ್ಲಿ ನಿಶಾ ರೂಪ ಆಗಿ ಹಾಗೂ ಯಶವಂತ್ ರಾಜು ಆಗಿ ನಟಿಸುತ್ತಿದ್ದಾರೆ. ಯಶವಂತ್ ಗೌಡ ಶೇರ್ ಮಾಡಿರೋ ಈ ವಿಡಿಯೋದಲ್ಲಿ ಮೊದಲಿಗೆ ಯಶವಂತ್ ನಿಶಾ ಬಳಿ, ಬೆಲ್ದಚ್ಚಂಗೆ ಹಾಡನ್ನು ನಮ್ಮ ವರ್ಶನ್ ನಲ್ಲಿ ಮಾಡೋಣ ಅಂತ ಕೇಳ್ತಾರೆ. ಅದಕ್ಕೆ ನಿಶಾ ಏನು ಅಂತ ಕೇಳಿದಾಗ, ಯಶವಂತ್ ಹಾಡು ಹೇಳುತ್ತಾ ಬೆಲ್ದಚ್ಚಂಗೆ ರೂಪಾ ನೀನು ನಂಗೆ, ಶಾನೆ ಪ್ರೀತಿ ಐತೆ ರಾಜು ಎದೆಯ ಒಳಗೆ ಎಂದು ಹಾಡು ಹಾಡಿದ್ದಾರೆ. ಈ ಹಾಡನ್ನು ಕೇಳಿ ನಿಶಾ ರವಿಕೃಷ್ಣನ್ ಖುಷಿ ಹಾಗೂ ಆಶ್ಚರ್ಯದಿಂದ ನಕ್ಕಿದ್ದಾರೆ. ಬಳಿಕ ಇಬ್ಬರು ಜೊತೆಯಾಗಿ ಹಿಂದಿ ಹಾಡಿಗೆ ರೊಮ್ಯಾಂಟಿಕ್ (romantic dance) ಆಗಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡೀಯೋ ವೈರಲ್ ಆಗುತ್ತಿದೆ. ಕೆಲವರು ಶಿವು ಪಾರು ಜೋಡಿ ಸೂಪರ್ ಅಂದ್ರೆ, ಇನ್ನೂ ಕೆಲವರು ರೂಪ- ರಾಜು ಜೋಡಿ ಸಖತ್ ಆಗಿದೆ ಎಂದು ಹೇಳುತ್ತಿದ್ದಾರೆ. ಇವರಿಬ್ಬರಲ್ಲಿ ನಿಮಗ್ಯಾವ ಜೋಡಿ ಇಷ್ಟ ಹೇಳಿ. 
&nbs

p;

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?