ಕರಿಮಣಿ ಧಾರಾವಾಹಿ; ಕರ್ಣನ ಗಾಳಕ್ಕೆ ಸಿಕ್ಕಿಬಿದ್ದ ಬ್ಲಾಕ್‌ರೋಸ್‌; ಮುಖ ರಿವೀಲ್‌ ಆಗೋದು ಬಾಕಿ; ಯಾರದು?

Published : Mar 11, 2025, 01:10 PM ISTUpdated : Mar 11, 2025, 02:03 PM IST
ಕರಿಮಣಿ ಧಾರಾವಾಹಿ; ಕರ್ಣನ ಗಾಳಕ್ಕೆ ಸಿಕ್ಕಿಬಿದ್ದ ಬ್ಲಾಕ್‌ರೋಸ್‌; ಮುಖ ರಿವೀಲ್‌ ಆಗೋದು ಬಾಕಿ; ಯಾರದು?

ಸಾರಾಂಶ

jkarimani Kannada Serial: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಕರಿಮಣಿʼ ಧಾರಾವಾಹಿಯಲ್ಲಿ ಬ್ಲ್ಯಾಕ್‌ರೋಸ್‌ ಯಾರು ಎಂದು ತಿಳಿದುಕೊಳ್ಳುವ ಸಮಯ ಬಂದಿದೆ. ಸಾಹಿತ್ಯಳನ್ನು ಮುಂದೆ ಇಟ್ಕೊಂಡು ಕರ್ಣ, ಬ್ಲ್ಯಾಕ್‌ರೋಸ್‌ ಕಂಡುಹಿಡಿಯಲು ಗಾಳ ಹಾಕಿದ್ದಾನೆ. 

ʼಕರಿಮಣಿʼ ಧಾರಾವಾಹಿಯಲ್ಲಿ ಕರ್ಣನಿಗೆ ತೊಂದರೆ ಕೊಡೋ ಬ್ಲ್ಯಾಕ್‌ರೋಸ್‌ ಯಾರು ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇನ್ನೂ ಸೀರಿಯಲ್‌ ತಂಡ ಬ್ಲ್ಯಾಕ್‌ರೋಸ್‌ ಮುಖವನ್ನು ರಿವೀಲ್‌ ಮಾಡಿಲ್ಲ. ಈಗಾಗಲೇ ಸಾಕಷ್ಟು ಬಾರಿ ಬ್ಲ್ಯಾಕ್‌ ರೋಸ್‌ ಕರ್ಣನಿಗೆ, ಸಾಹಿತ್ಯಗೆ ತೊಂದರೆ ಕೊಟ್ಟಿದ್ದಾನೆ, ಈಗ ಆ ದುಷ್ಟ ಯಾರು ಎಂದು ತಿಳಿದುಕೊಳ್ಳುವ ಸಮಯ ಬಂತಾ? 

ಸಾಹಿತ್ಯ ಮೇಲೆ ಕರ್ಣನ ಲವ್!‌ 
ಸಾಹಿತ್ಯಳನ್ನು ಕರ್ಣ ಪ್ರೀತಿ ಮಾಡುತ್ತಿದ್ದನು. ಅವನ ಪ್ರೀತಿಯನ್ನು ಸಾಹಿತ್ಯ ಒಪ್ಪಿಕೊಳ್ಳಲಿಲ್ಲ. ಕರ್ಣನಿಂದ ಸಾಹಿತ್ಯ ಮದುವೆ ಎರಡು ಬಾರಿ ನಿಂತಿತು. ಕೊನೆಗೆ ಸಾಹಿತ್ಯಳ ಒಳ್ಳೆಯ ಗುಣ ನೋಡಿ ಕರ್ಣ ಅವಳ ಪ್ರೀತಿಯಲ್ಲಿ ಬಿದ್ದನು. ಆದರೆ ಸಿಂಚನಾ ಕುತಂತ್ರದಿಂದ ಸಾಹಿತ್ಯ ಅವನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. 

ದೊಡ್ಡ ಬಿಂದಿ, ಇಂಡೋ ವೆಸ್ಟರ್ನ್‌ ಡ್ರೆಸ್‌ನಲ್ಲೂ ʼಗ್ಲಾಮರ್‌ʼ ಶ್ರುತಿ ಹರಿಹರನ್;‌ ಇವ್ರಿಗೇನಾ 6 ವರ್ಷದ ಮಗಳಿರೋದು?

ಕರ್ಣ ನನ್ನ ಗಂಡ ಎಂದ ಸಾಹಿತ್ಯ! 
ಕರ್ಣ-ಸಿಂಚನಾ ಮದುವೆ ನಡೆಯುತ್ತಿತ್ತು. ಇನ್ನೊಂದು ಕಡೆ ಸಾಹಿತ್ಯ -ರಿಷಿ ಮದುವೆ ನಡೆಯುತ್ತಿತ್ತು. ರಿಷಿ ಒಳ್ಳೆಯವನಲ್ಲ ಅಂತ ಕರ್ಣನಿಗೆ ಗೊತ್ತಿತ್ತು. ಹೀಗಾಗಿ ಅವನು ಮೋಸದಿಂದ ಸಾಹಿತ್ಯ ಮದುವೆಯಾದನು. ಈ ಮೋಸದ ಮದುವೆಯನ್ನು ಸಾಹಿತ್ಯ ಒಪ್ಪುತ್ತಿಲ್ಲ. ಸಾಹಿತ್ಯ ಮಾತ್ರ ಕರ್ಣನನ್ನು ಕಂಡರೆ ಉರಿದುಬೀಳ್ತಾಳೆ. ನಾನು ಈ ಮದುವೆ ಒಪ್ಪಲ್ಲ, ಕರ್ಣ ನನ್ನ ಗಂಡ ಅಲ್ಲ ಅಂತ ಸಾಹಿತ್ಯ ಮೊದಲು ಹೇಳಿದ್ದಳು. ಆದರೆ ಇದೇ ದ್ವೇಷವನ್ನು ಇಟ್ಟುಕೊಂಡು ಕರ್ಣ ಅವಳ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾನೆ. ಇದರಿಂದಲೇ ಈಗ ಸಾಹಿತ್ಯ, ಕರ್ಣ ನನ್ನ ಗಂಡ, ಕರ್ಣನ ಮನೆಯಲ್ಲಿ ನನಗೂ ಹಕ್ಕಿದೆ ಎಂದು ಹೇಳಿದ್ದಾಳೆ. ಮುಂದೆ ಇದೇ ಪ್ರೀತಿಯಾಗಿ ತಿರುಗಬಹುದೋ ಏನೋ!

ಬ್ಲ್ಯಾಕ್‌ರೋಸ್‌ ಯಾರು? 
ಬ್ಲ್ಯಾಕ್‌ರೋಸ್‌ ಯಾರು ಎಂದು ಕರ್ಣ ತಿಳಿಯುವ ಪ್ರಯತ್ನದಲ್ಲಿದ್ದಾನೆ. ದಾರಿ ಮಧ್ಯೆ ತನ್ನ ಕಾರ್ ವೀಲ್‌ನಲ್ಲಿದ್ದ ಗಾಳಿಯನ್ನು ಅವನೇ ತೆಗೆದಿದ್ದಾನೆ. ಕರ್ಣ ಪಂಚರ್‌ ಅಂಗಡಿಗೆ ಹೋಗುವ ನಾಟಕ ಮಾಡಿದ್ದರು. ಆ ವೇಳೆ ಸಾಹಿತ್ಯಳನ್ನು ಬ್ಲ್ಯಾಕ್‌ರೋಸ್‌ ಕಿಡ್ನ್ಯಾಪ್‌ ಮಾಡಿದ್ದಾನೆ. ಇನ್ನೊಂದು ಕಡೆ ಸಾಹಿತ್ಯ ಕೊರಳಿಗೆ ಕರ್ಣ ಹಾಕಿರೋ ಸರದಲ್ಲಿ ಟ್ರ್ಯಾಕರ್‌ ಕೂಡ ಇದೆ. ಸಾಹಿತ್ಯ ಎಲ್ಲಿ ಹೋದಳು ಅಂತ ಕರ್ಣನಿಗೆ ಈ ಮೂಲಕ ಗೊತ್ತಾಗುವುದು. ಈ ಬಾರಿ ಬ್ಲ್ಯಾಕ್‌ರೋಸ್‌ಗೆ ಕರ್ಣ ಸರಿಯಾಗಿ ಗಾಳ ಹಾಕಿದ್ದಾನೆ. ಈ ಬಾರಿ ಬ್ಲ್ಯಾಕ್‌ರೋಸ್‌ ಯಾರು ಅಂತ ಗೊತ್ತಾಗಲಿದೆ.

‌ತ್ರಿವಿಕ್ರಮ್ 'ಮುದ್ದು ಸೊಸೆ' ಧಾರಾವಾಹಿಗೋಸ್ಕರ ಯಾವ ಸೀರಿಯಲ್ ಅಂತ್ಯ ಆಗತ್ತೆ?‌

ಸಾಹಿತ್ಯ ಮನೆಯಿಂದ ಹೊರಗಡೆ ಹೋಗ್ತಾಳಾ? 
ರಾಜೇಂದ್ರ ಪ್ರಸಾದ್‌ ಮೊದಲ ಪತ್ನಿ ಅನುರಾಧಾ ಮಗನೇ ಕರ್ಣ. ಅನುರಾಧಾ ಈಗ ರಾಜೇಂದ್ರ ಬದುಕಿನಲ್ಲಿ ಇಲ್ಲ. ಅನುರಾಧಾಳಿಂದಲೇ ಸಾಹಿತ್ಯ-ಕರ್ಣ ಮದುವೆ ಆಯ್ತು ಅಂತ ಮನೆಯವರು ಅಂದುಕೊಂಡ್ರೆ ಅಲ್ಲಿಗೆ ಸಾಹಿತ್ಯ ಆ ಮನೆಯಿಂದ ಔಟ್‌ ಆಗೋ ಸಾಧ್ಯತೆ ಇದೆ. 

ಈ ಧಾರಾವಾಹಿಯಲ್ಲಿ ಕರ್ಣ, ಸಾಹಿತ್ಯ ಯಾವಾಗ ಒಂದಾಗ್ತಾರೆ ಎಂದು ವೀಕ್ಷಕರು ಕಾಯುತ್ತಲಿದ್ದಾರೆ. ಮುಂದಿನ ದಿನಗಳಲ್ಲಿ ಹೇಗೆ ಕಥೆ ಸಾಗಲಿದೆಯೋ ಏನೋ!

ಪಾತ್ರಧಾರಿಗಳು
ಕರ್ಣ ಪಾತ್ರದಲ್ಲಿ ಅಶ್ವಿನ್‌ ಎಚ್‌, ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ, ಅನುರಾಧಾ ಪಾತ್ರದಲ್ಲಿ ಹೇಮಾ ಪ್ರಭಾತ್‌ ಅವರು ನಟಿಸುತ್ತಿದ್ದಾರೆ. 
 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!