
ಸೆಲೆಬ್ರಿಟಿಗಳು ಇತ್ತೀಚೆಗೆ ಡಿವೋರ್ಸ್ ಮೂಲಕವೇ ಸದ್ದು ಸುದ್ದಿ ಮಾಡುತ್ತಿರುತ್ತಿದ್ದಾರೆ. ಬಾಲಿವುಡ್ ನಟಿ ಅದಿತಿ ಶರ್ಮಾ ಮದುವೆಯಾಗಿ ಆರು ತಿಂಗಳಿಗೆ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಬಹುಕಾಲದ ಗೆಳೆಯ ಅಭಿನೀತ್ ಕೌಶಿಕ್ ಜೊತೆಗೆ ಅದಿತಿ ಶರ್ಮಾ ಗುಟ್ಟಾಗಿ ಮದುವೆಯಾಗಿದ್ದರು. ಈಗ ಡಿವೋರ್ಸ್ ಮೂಲಕ ಇವರ ಮದುವೆ ವಿಚಾರ ರಟ್ಟಾಗಿದೆ.
ಮದುವೆ ವಿಷಯ ಮುಚ್ಚಿಟ್ಟರು!
ಗುರ್‌ಗಾಂವ್‌ನಲ್ಲಿ 2024 ನವೆಂಬರ್ 12 ರಂದು ಅದಿತಿ ಶರ್ಮಾ, ಅಭಿನೀತ್ ಅವರು ಮದುವೆಯಾಗಿದ್ದರು. ಮದುವೆ ವಿಚಾರ ಕರಿಯರ್‌ಗೆ ಸಮಸ್ಯೆ ಉಂಟುಮಾಡಬಾರದು ಎಂದು ಅವರು ಬಹಳ ಗುಟ್ಟಾಗಿ ಹಸೆಮಣೆ ಏರಿದ್ದರು. ಅದಿತಿ ಅವರೇ ಈ ವಿಷಯವನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ.
'ಹೆಣ್ಣನ್ನು ದೂಷಿಸೋದೇ ಫ್ಯಾಶನ್ ಆಗಿದೆ..' ಧನಶ್ರೀ ವರ್ಮಾ ಪೋಸ್ಟ್ ಬೆನ್ನಲ್ಲೇ ಚಾಹಲ್ ಮೇಲೆ ಶುರುವಾದ ಅನುಮಾನ!
ಅಭಿನೀತ್ ಏನಂದ್ರು?
ಅಭಿನೀತ್ ಅವರು ಮಾತನಾಡಿ, "ಒಂದುವರೆ ವರ್ಷಗಳ ಹಿಂದೆ ಅದಿತಿ ಮದುವೆಯಾಗೋಣ ಎಂದಾಗ ನಾನು ರೆಡಿ ಇರಲಿಲ್ಲ. ಅದಿತಿ ತುಂಬ ಹೇಳಿದ್ಮೇಲೆ ನಾನು ಒಪ್ಪಿಕೊಂಡೆ. ಚಿತ್ರರಂಗದಲ್ಲಿ ಅವಕಾಶ ಸಿಗೋದಿಲ್ಲ ಎಂದು ಅವಳು ಮದುವೆಯಾಗಿರುವ ವಿಚಾರವನ್ನು ರಿವೀಲ್ ಮಾಡೋದು ಬೇಡ ಎಂದು ಹೇಳಿದ್ದಳು" ಎಂದಿದ್ದಾರೆ.
ರಾಕೇಶ್ ಶೆಟ್ಟಿ ಏನಂದ್ರು?
ಲೀಗಲ್ ಕನ್ಸಲ್ಟಂಟ್ ರಾಕೇಶ್ ಶೆಟ್ಟಿ ಅವರು ಈ ಮದುವೆಯ ಫೋಟೋಗಳನ್ನು ಸೋಶಿಯಲ್‌ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವರ್ಷಗಳ ಕಾಲ ಈ ಜೋಡಿ ಲಿವ್ ಇನ್‌ರಿಲೇಶನ್‌ಶಿಪ್‌ನಲ್ಲಿತ್ತು. ಆಮೇಲೆ ಮದುವೆಯಾಗಿದ್ದು, 5BHK ಬಾಡಿಗೆ ಮನೆಯಲ್ಲಿ ಈ ಜೋಡಿ ಆರು ತಿಂಗಳುಗಳ ಕಾಲ ಸಂಸಾರ ಮಾಡಿದೆ.
" ʼApollenaʼ ಧಾರಾವಾಹಿ ಸಹನಟ ಸಮರ್ಥ್ಯ ಜೊತೆ ಅದಿತಿ ಶರ್ಮಾ ಆತ್ಮೀಯತೆ ಜಾಸ್ತಿ ಆಗಿತ್ತು. ಇದು ಈ ಧಾರಾವಾಹಿ ನಿರ್ಮಾಪಕಿ ಕರೀಷ್ಮಾ ಅರಿವಿಗೂ ಬಂದಿತ್ತು. ಸಮರ್ಥ್ಯ ಹಾಗೂ ಅದಿತಿ ಒಟ್ಟಿಗೆ ಇರೋದನ್ನು ಅಭಿನೀತ್‌ಅವರು ನೋಡಿದ್ದಾರೆ. ಆಮೇಲೆ ಗಂಡ-ಹೆಂಡತಿ ಮಧ್ಯೆ ಜಗಳ ಶುರು ಆಗಿದೆ" ಎಂದು ರಾಕೇಶ್ ಶೆಟ್ಟಿ ಹೇಳಿದ್ದಾರೆ.
70ನೇ ವಯಸ್ಸಿಗೆ ತನಗಿಂತ 29 ವರ್ಷದ ಚಿಕ್ಕ ಹುಡುಗಿಯನ್ನು ಮದುವೆಯಾಗಿರೋ ಈ ನಟ! ಎಂಥ ಲೈಫು ಗುರು!
ಮದುವೆ ಟ್ರಯಲ್ ಎಂದ ನಟಿ
ಅಭಿನೀತ್‌ಅವರು ಈ ಬಗ್ಗೆ ಮತ್ತೆ ಮಾತನಾಡಿದ್ದು, "ಈ ಮದುವೆಯನ್ನು ಅದಿತಿ ತಿರಸ್ಕರಿಸಿದ್ದಾಳೆ, ಒಂದು ಟ್ರಯಲ್‌ಆಗಿತ್ತು ಅಷ್ಟೇ, ಕಾನೂನಾತ್ಮಕವಲ್ಲ ಎಂದು ಹೇಳಿದ್ದಾರೆʼ ಎಂದು ಆರೋಪಿಸಿದ್ದಾರೆ.
25 ಲಕ್ಷ ರೂ ಪರಿಹಾರ!
ಅದಿತಿ ಶರ್ಮಾ ಅವರ ಕುಟುಂಬವು 25 ಲಕ್ಷ ರೂಪಾಯಿ ಕೊಟ್ಟು ಸೆಟಲ್‌ಮೆಂಟ್‌ಮಾಡಿಕೊಳ್ಳೋಣ ಎಂದು ಮನವಿ ಮಾಡಿದ್ದಾರೆ. ಡಿವೋರ್ಸ್ ಬಗ್ಗೆ ವಿಚಾರ ಬಂದಾಗ ಅದಿತಿ ವಕೀಲರು 25 ಲಕ್ಷ ರೂಪಾಯಿ ಕೊಟ್ಟುಸೆಟಲ್‌ಮೆಂಟ್ ಮಾಡೋಣ ಎಂದು ಹೇಳಿದ್ದಾರಂತೆ. ಇನ್ನು ಅದಿತಿ ತಂದೆ ಅಭಿನೀತ್‌ರಿಗೆ ಹೊಡೆದಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.