Kannada Serial News: ಕನ್ನಡತಿ ಸೀರಿಯಲ್‌ನಲ್ಲಿ ಹರ್ಷ ಭುವಿ ಮಧ್ಯೆ ಚಿಕ್ಕದೊಂದು ಡ್ರಾಮಾ. ಇದರಲ್ಲಿ ಹರ್ಷನ್ನ ಕಪಿ ಮುಷ್ಠಿಯಲ್ಲಿ ಅಲ್ಲಲ್ಲ ಬಿಗಿ ಮುಷ್ಠಿಯಲ್ಲಿ ಹಿಡ್ಕೊತೀನಿ ಅಂತಾಳೆ ಭುವಿ. ಆ ಕಡೆ ಇವರಿಬ್ಬರ ಸಾನಿಯಾ ಖಾರ ಹಚ್ಚಿದ್ರೆ ಭುವಿ ಅದನ್ನೂ ಎನ್‌ಜಾಯ್ ಮಾಡ್ತಿದ್ದಾಳೆ.
'ಕನ್ನಡತಿ' (Kannadathi)ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್. ಮಾಲಾ ಕೆಫೆಯ ಸಿಇಓ ಹರ್ಷ ಹಾಗೂ ಇವ್ರು ನಡೆಸೋ ಕಾಲೇಜ್‌ನ ಟೀಚರ್ ಭುವಿಯ (Bhuvi) ಮಧ್ಯೆ ಪರಿಚಯವಾಗಿದೆ. ಅದು ಸ್ನೇಹವಾಗಿ, ಹಲವಾರು ಅಡೆತಡೆಗಳ ನಡುವೆ ಪ್ರೇಮವೂ ಆಗಿದೆ. ಪ್ರೇಮಕ್ಕೆ ಹತ್ತಾರು ಅಡ್ಡಿಗಳಾದರೆ ಮದುವೆಗೆ ನೂರಾರು ಅಡ್ಡಿಗಳು. ಅಮ್ಮಮ್ಮ ಮಾಲಾ ಕೆಫೆಯ ಒಡತಿ ರತ್ನಮಾಲಾ ಮುಂದಾಳತ್ವದಲ್ಲಿ ಈ ಅಡ್ಡಿಗಳು ಹೇಗ್ಹೇಗೋ ನಿವಾರಣೆಯಾಗಿ ಭುವಿ-ಹರ್ಷನ ನಡುವೆ ಎಂಗೇಜ್‌ಮೆಂಟ್ ಆಗಿದೆ. ಅತ್ತೆ ರತ್ನಮಾಲಾ ಆಸ್ತಿಯ ಮೇಲೆ ರತ್ನಮಾಲಾ ಪತಿಯ ತಮ್ಮನ ಮಗನ ಹೆಂಡತಿ ಸಾನಿಯಾಗೆ ಆಸೆ. ಅತ್ತೆಯ ಸಮಸ್ತ ಆಸ್ತಿಯನ್ನೂ ತಾನು ಹೇಗಾದರೂ ಹೊಡೆದುಕೊಳ್ಳಬೇಕು ಅನ್ನುವ ದುರಾಸೆ. ಅವಳು ಹರ್ಷನ ಕಸಿನ್ ಆದರೆ ಸ್ವಂತ ತಮ್ಮನಿಗಿಂತ ಹೆಚ್ಚಾಗಿರುವ ಆದಿಯನ್ನು ಮದುವೆಯಾದದ್ದೂ ಇದೇ ಕಾರಣಕ್ಕೆ. ಪತ್ನಿ ಸಾನಿಯಾ ಹೀಗಿದ್ರೂ ಆದಿ ಅಣ್ಣನಿಗೆ ತಕ್ಕ ತಮ್ಮ. ಆದರೆ ಸಾನಿಯಾ ತನ್ನ ದುರಾಸೆಗಾಗಿ ಹರ್ಷ ಭುವಿ ಮಧ್ಯೆ ಏನೇನೋ ವಿಷ ತಂದಿಟ್ಟಿದ್ದಾಳೆ. ಕೊನೆಗೆ ಸುಪಾರಿ ಕಿಲ್ಲರ್‌ಅನ್ನೂ(Supari Killer) ಬಿಟ್ಟಿದ್ದಾಳೆ.
ಹಸಿರು ಪೇಟೆಯಲ್ಲಿ ಹರ್ಷ ಭುವಿ ಎಂಗೇಜ್ ಮೆಂಟ್ ನಡೆದಿದೆ. ಅಲ್ಲಿ ಸುಪಾರಿ ಹಂತಕ ಅಮ್ಮಮ್ಮನ್ನ ಸಾಯಿಸೋದಕ್ಕೂ ಪ್ರಯತ್ನಿಸಿದ್ದಾನೆ. ಆಮೇಲೆ ಭುವಿಯನ್ನು ಬೆಟ್ಟದಿಂದ ತಳ್ಳಿ ಸಾಯಿಸಲು ಹೊರಟಿದ್ದಾನೆ. ವರೂಧಿನಿ ತಕ್ಷಣ ಮೇಲೆಳೆದುಕೊಂಡ ಕಾರಣ ಭುವಿ ಬದುಕಿದ್ದಾಳೆ. ಅವಳನ್ನು ಸಾಯಿಸದ ಕಾರಣಕ್ಕೆ ಸುಪಾರಿ ಕಿಲ್ಲರ್‌ಅನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆ ಸುಪಾರಿ ಕಿಲ್ಲರ್ ಆಸ್ಪತ್ರೆಯೊಳಗೆ ಬಂದು ಭುವಿಗೆ ಹಾಕಿದ ಆಕ್ಸಿಜನ್ ಮಾಸ್ಕ್ ತೆಗೆದು ಪಕ್ಕದಲ್ಲೇ ಹೂ ಬೊಕೆಯನ್ನೂ ಇಟ್ಟು ಆಕೆ ಸಾಯೋ ಹಾಗೆ ಮಾಡಿದ್ದಾನೆ. ಆದರೆ ಹರ್ಷನ ಸಮಯಪ್ರಜ್ಞೆಯಿಂದ ಅವಳು ಬದುಕಿದ್ದಾಳೆ.
'ಆಕಾಶ ದೀಪ' ಹೀರೋ ಜಯ್ ಡಿಸೋಜ ಎಲ್ಲೋದ್ರು; ಇಲ್ಲಿದೆ ಮಾಹಿತಿ
ಈ ಕಥೆ ಕೇಳ್ತಿದ್ರೆ ಹಳೇ ಕ್ರೈಮ್ ಥ್ರಿಲ್ಲರ್ ಸಿನಿಮಾ ನೋಡಿದ ಹಾಗನಿಸಬಹುದು. ಆದರೆ ಕತೆಯಲ್ಲೊಂದು ಟರ್ನ್ ತರಲಿಕ್ಕೋಸ್ಕರ ಕನ್ನಡತಿ ಟೀಮ್ ಮಾಡಿರೋ ಸರ್ಕಸ್ಸು ಅನ್ನೋದು ಸೀರಿಯಲ್ ಪ್ರಿಯರಿಗೆ ಅರ್ಥವಾಗುತ್ತೆ. ಸದ್ಯಕ್ಕೀಗ ತನ್ನ ಪ್ರೀತಿಯ ಗೆಳತಿ ಭುವಿಯನ್ನು ಸಾಯಿಸಲು ಹೊರಟ ಸುಪಾರಿ ಕಿಲ್ಲರ್‌ನ ಹಿಡಿದು ಆತನಿಂದ ಹೇಗಾದರೂ ಸತ್ಯ ಬಾಯಿ ಬಿಡಿಸ್ತೀನಿ ಅಂತ ವರೂ ಆತನ ಹಿಂದೆ ಬಿದ್ದಿದ್ದಾಳೆ. ಸದ್ಯಕ್ಕೀಗ ಆತ ತನ್ನ ಪ್ರಾಣ ರಕ್ಷಣೆಗೆ ವರೂಧಿನಿಯ ಪ್ರಾಣ ತೆಗೆಯಲು ಮುಂದಾಗಿದ್ದಾನೆ.
ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟ ಶಿವಣ್ಣನಿಗೆ ಮಗಳು ನಿವೇದಿತಾ ಸಾಥ್
ಆದರೆ ಈ ಮಧ್ಯ ಸಣ್ಣ ಡ್ರಾಮಾವೊಂದು ಇಂಟರೆಸ್ಟಿಂಗ್ ಆಗಿ ನಡೆದಿದೆ. ಸಾನಿಯಾಗೆ ದ್ವೇಷದ ದಾರಿಯಲ್ಲಿ ಹೋದರೆ ಹರ್ಷ-ಭುವಿಯನ್ನು ಬೇರೆ ಮಾಡೋದು ಕಷ್ಟ ಅಂತ ಗೊತ್ತಾದಂತಿದೆ. ಅದಕ್ಕೆ ವರಸೆ ಬದಲಿಸಿದ್ದಾಳೆ. ಹರ್ಷನ ಮನಸ್ಸಲ್ಲಿ ಭುವಿ ಬಗ್ಗೆ ವಿಷ ತುಂಬಿದ್ದಾಳೆ. ನಾಳೆ ಭುವಿ ಮನೆಗೆ ಬಂದ ಮೇಲೆ ಹರ್ಷನ ಸ್ಥಾನ ಬದಲಾಗುತ್ತೆ. ಆತ ಭುವಿ ಹೇಳಿದ ಹಾಗೆ ಕೇಳ್ಕೊಂಡು ಬಿದ್ದಿರಬೇಕಾಗುತ್ತೆ ಅನ್ನೋ ಕಿಡಿಯನ್ನು ಹರ್ಷನ ಮನಸ್ಸಲ್ಲಿ ಬಿತ್ತಿದ್ದಾಳೆ.
ಹರ್ಷ ಯೋಚನೆಯಲ್ಲಿ ಬಿದ್ದಿದ್ದಾನೆ. ಭುವಿ ಎಷ್ಟು ಜಾಣೆ ಅಂದರೆ ಕಾಲೆಳೆಯುತ್ತಾ ಎಳೆಯುತ್ತಲೇ ಹರ್ಷನ ಮನಸ್ಸಲ್ಲೇನಿದೆ ಅನ್ನೋದನ್ನು ತಿಳಿಯೋ ಪ್ರಯತ್ನ ಮಾಡುತ್ತಾಳೆ. ಒಂದು ಹಂತದಲ್ಲಿ ಅವಳಿಗೆ ಸಾನಿಯಾ ಮಾಡಿರೋ ಕಿತಾಪತಿ ಅಂತ ಗೊತ್ತಾಗುತ್ತೆ. ಮುಳ್ಳನ್ನೂ ನೋವಾಗದ ಹಾಗೆ ತೆಗೆಯೋ ಭುವಿ ಸದ್ಯಕ್ಕೆ ಹರ್ಷನನ್ನು ಆಟ ಆಡಿಸುತ್ತಾ ಆಡಿಸುತ್ತಾ ಅವನ ನೋವನ್ನು ಮಾಯ ಮಾಡಲು ಹೊರಟಿದ್ದಾಳೆ. 'ಮದುವೆ ಆದ ಮೇಲೆ ನೀವು ನನ್ನ ಕಂಟ್ರೋಲಿಗೆ ತಗೊಳ್ತೀರಾ?' ಅಂತ ಹರ್ಷ ಕೇಳಿದ್ದಕ್ಕೆ, 'ಹೌದು, ಸಂಪೂರ್ಣ ಹದ್ದುಬಸ್ತಿನಲ್ಲಿಡ್ತೀನಿ. ಕಪಿಮುಷ್ಠಿ ಅಲ್ಲಲ್ಲ, ಬಿಗಿ ಮುಷ್ಠಿಲಿ ನಿಮ್ಮನ್ನು ಹಿಡ್ಕೊಂಡು ಕಂಟ್ರೋಲ್ ಮಾಡ್ತೀನಿ' ಅಂತಾಳೆ. ಅವಳ ಹೇಳ್ತಿರೋದು ತಮಾಷೆಯಾ, ನಿಜವಾ ಒಂದೂ ತಿಳಿಯದೇ ಹರ್ಷ ಕಂಗಾಲಾಗಿದ್ದಾನೆ.
ಲಕ್ಷಣ ಧಾರಾವಾಹಿ ಶೆರ್ಲಿ ರಿಯಲ್ ಲೈಫ್‌ನಲ್ಲಿ ದಂತ ವೈದ್ಯೆ ಮೋಲೂಡ್!
ಹಿಂದೊಮ್ಮೆ ಕತ್ತು ಉಳುಕಿದ್ದಾಗ ಹರ್ಷನ ಅರಿವಿಗೇ ಬರದ ಹಾಗೆ ಕತ್ತನ್ನು ಸರಿ ಮಾಡಿದ್ದಳು ಭುವಿ. ಇನ್ನೀಗ ಹರ್ಷನ ಮನಸ್ಸಿಗೆ ಚುಚ್ಚಿರುವ ಮುಳ್ಳನ್ನು ಅವನ ಕಾಲೆಳೆಯುತ್ತಲೇ ಹೇಗೆ ಸಣ್ಣ ಚೂರೂ ಉಳಿಯದಂತೆ ತೆಗೆದು ಹಾಕುತ್ತಾಳೆ ಅನ್ನೋದು ಕುತೂಹಲ ಮೂಡಿಸುತ್ತೆ.
ಕಿರಣ್ ರಾಜ್ (Kiran Raj) ಹರ್ಷನ ಪಾತ್ರದಲ್ಲಿ, ರಂಜನಿ ರಾಘವನ್ (Ranjini Raghavan) ಭುವಿ ಪಾತ್ರದಲ್ಲಿ, ಚೀತ್ಕಳಾ ಬಿರಾದಾರ್ (Chitkala Biradar) ಅಮ್ಮಮ್ಮನಾಗಿ, ಸಾರಾ ಅಣ್ಣಯ್ಯ(Sara annayya) ವರೂಧಿನಿ ಪಾತ್ರದಲ್ಲಿ, ಆರೋಹಿ ನೈನಾ (Arohi Naina) ವಿಲನ್ ಸಾನಿಯಾ ಆಗಿ ನಟಿಸುತ್ತಿದ್ದಾರೆ. ಯಶವಂತ್ (Yashvanth Pandu) ನಿರ್ದೇಶನ ಮಾಡಿದ್ದಾರೆ.