Happy Birthday Rajani: ಹಿಟ್ಲರ್ ಕಲ್ಯಾಣದ ಅಂತರಾಗೆ ಜನ್ಮದಿನ ಶುಭಾಶಯ

Published : Apr 30, 2022, 05:31 PM IST
Happy Birthday Rajani: ಹಿಟ್ಲರ್ ಕಲ್ಯಾಣದ ಅಂತರಾಗೆ ಜನ್ಮದಿನ ಶುಭಾಶಯ

ಸಾರಾಂಶ

ಸೀರಿಯಲ್, ಬಿಗ್‌ ಬಾಸ್, ಸಿನಿಮಾ ಅಂತೆಲ್ಲ ಓಡಾಡ್ಕೊಂಡು ಪಕ್ಕದ್ಮನೆ ಹುಡುಗಿ ಥರ ಇರೋ ನಟಿ ರಜನಿ. ಸದ್ಯಕ್ಕೀಗ ಹಿಟ್ಲರ್ ಕಲ್ಯಾಣದ ಅಂತರಾ ಆಗಿ ಗಮನ ಸೆಳೀತಿರೋ ನಟಿಗೆ ಹ್ಯಾಪಿ ಬರ್ತ್ ಡೇ.  

ಬೆಂಗಳೂರು (ಏ.30): ಕೆಲವು ವರ್ಷಗಳ ಹಿಂದೆ ನಟಿ ರಜನಿ (Rajani)  ಅಂದರೆ ಹೆಚ್ಚಿನವರಿಗೆ ಗೊತ್ತಾಗ್ತಿರಲಿಲ್ಲ. ಅದೇ ಅಮೃತಾ ರೋಲ್ ಮಾಡಿರೋದು ಅಂದರೆ, 'ಅಯ್ಯೋ ಪಾಪ, ಆ ಹುಡುಗೀನಾ..' ಅಂತ ಸಿಂಪಥಿ ತೋರಿಸೋರು. ಸೀರಿಯಲ್ ನೋಡದೇ ಇರೋರು, ಅಯ್ಯಬ್ಬ ಈ ನಟಿಗೆ ಅಂಥದ್ದೇನಾಯ್ತು ಅಂತ ವಿಚಾರಿಸಿದಾಗ ತಿಳಿಯೋದು, ಈಕೆಗೆ ಸೀರಿಯಲ್‌ಅಲ್ಲಿ ಆಗಿರೋ ಕಷ್ಟವನ್ನೇ ಜನ ರಜನಿಗಾದ ಕಷ್ಟ ಅಂತ ತಿಳ್ಕೊಂಡು ಕಣ್ಣೀರು ಹಾಕ್ತಿದ್ದಾರೆ ಅಂತ.

'ಅಮೃತವರ್ಷಿಣಿ' ಸೀರಿಯಲ್‌ (Amruthavarshini Serial)  ಮಾಡಿರೋ ಮೋಡಿನೇ ಅಂಥಾದ್ದು. ಹೆಂಗಸರು ಸೆರಗಲ್ಲಿ ಕಣ್ಣೀರು ಒರೆಸಿಕೊಳ್ತಾನೇ ಈ ಸೀರಿಯಲ್‌ ನೋಡ್ತಿದ್ರು. ಸೀರಿಯಲ್ ಮುಗಿದ ಮೇಲೂ ಮುಸು ಮುಸು ಅತ್ತಿದ್ದುಂಟು. ಈ ಸೀರಿಯಲ್‌ನಲ್ಲಿ ಅಮೃತಾ ಪಾತ್ರ ಮಾಡಿರೋ ರಜನಿಯೂ ಈ ಪಾತ್ರದ ಮೂಲಕ ಸೀರಿಯಲ್‌ ಪ್ರಿಯರ ಮನೆಮಾತಾದರು. ಲುಕ್ಕಲ್ಲಿ, ಆಟಿಟ್ಯೂಡ್‌ನಲ್ಲಿ (Look, Aattitude) ಪಕ್ಕದ್ಮನೆ ಹುಡುಗಿ ಥರ ಇದ್ದ ಈಕೆ ಬಹಳ ಬೇಗ ಜನರಿಗೆ ಹತ್ತಿರ ಆದ್ರು.

ರಜನಿ ಅನ್ನುವ ಮಧ್ಯಮ ವರ್ಗದ ಹುಡುಗಿ ಈ ಸೀರಿಯಲ್ ನಟನೆ ಬಳಿಕ ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಬಿಗ್‌ಬಾಸ್‌ಗೂ (Big boss) ಎಂಟ್ರಿ ಕೊಟ್ಟರು. ಆದರೆ ಆಮೇಲೆ ಇವ್ರಿಗೆ ಮೂಗಿನ ಮೇಲೆ ಸಿಟ್ಟು ಬರೋದಕ್ಕೆ ಶುರುವಾಯ್ತು. ಅದಕ್ಕೆ ಮೂಗನ್ನೇ ಕತ್ತರಿಸ್ತೀನಿ ಅಂತ ಹೊರಟರು, ಐ ಮೀನ್, ಮೂಗಿನ ಶೇಪ್ ಯಾಕೋ ಸರಿಯಾಗಿಲ್ಲ ಅಂತನಿಸೋಕೆ ಶುರುವಾಗಿ, ಮೂಗು ಸರ್ಜರಿ (Nose Surgery)  ಮಾಡಿಸ್ಕೊಳ್ಳೋದಕ್ಕೆ ಹೋದರು. ಮೊದಲು ಸಹಜವಾಗಿದ್ದ ಮೊಂಡು ಮೂಗು ಹೋಗಿ ಸಂಪಿಗೆ ಮೂಗು ಬಂತು. ಆದರೆ ಜನರಿಗೆ ಮೊಂಡ ಮೂಗಿನ ಸುಂದರಿಯೇ ಹೆಚ್ಚು ಹತ್ತಿರವಾಗಿದ್ಲು. ಅವರಿಗೆ ಸಂಪಿಗೆ ಮೂಗಿನ ಚೆಲುವೆ ಯಾಕೋ ಅಷ್ಟಾಗಿ ಇಷ್ಟ ಆಗಲಿಲ್ಲ. ಮೂಗು ಕುಯಿಸಿಕೊಂಡ ತಪ್ಪಿಗೆ ರಜನಿ ಒಂದಿಷ್ಟು ಕಾಲ ನಟನೆಯಿಂದ ಆಚೆ ಉಳಿಯೋ ಹಾಗಾಯ್ತು. ಅದಾಗಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಇದೀಗ ದಿಲೀಪ್‌ ರಾಜ್ (Dileep Raj) ಹಾಗೂ ಮಲೈಕಾ ವಸುಪಾಲ್ (Malaika Vasupal) ನಟನೆಯ 'ಹಿಟ್ಲರ್ ಕಲ್ಯಾಣ' (Hitler Kalyana) ಸೀರಿಯಲ್‌ನಲ್ಲಿ ಸರ್ಪೈಸ್ ಎಂಟ್ರಿ ಕೊಟ್ಟಿದ್ದಾರೆ. ಈ ಸೀರಿಯಲ್‌ನ ಹೀರೋ ಮಧ್ಯ ವಯಸ್ಕ ಎ ಜೆ. ಆತನ ಎರಡನೇ ಹೆಂಡತಿ ಲೀಲಾ. ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿರುವ, ಮಿ. ಪೆಫೆಕ್ಟ್ ಅಂತಲೇ ಎಲ್ಲರಿಂದಲೂ ಹೇಳಿಸಿಕೊಳ್ಳೋ ಎ ಜೆ ಮತ್ತು ಮಹಾನ್ ಎಡವಟ್ಟು ಹುಡುಗಿ ಲೀಲಾ ನಡುವಿನ ಜಗಳ, ಸಮಸ್ಯೆ, ಎಡವಟ್ಟುಗಳೇ ಸಾಕಷ್ಟು ಕಾಲ ಈ ಸೀರಿಯಲ್‌ನ ಮುಖ್ಯಭಾಗವಾಗಿತ್ತು. ಆದರೆ ಕಳೆದ ಡಿಸೆಂಬರ್ ಹೊತ್ತಿಗೆ ಮತ್ತೊಂದು ಹೊಸ ಪಾತ್ರ ಎಂಟ್ರಿ ಕೊಟ್ಟಿತು. ಅದೇ ಅಂತರಾ.

ನಟ ವಿಶಾಲ್ ಹೆಗ್ಡೆ, ಪ್ರಿಯಾ ದಂಪತಿಗೆ ಗಂಡು ಮಗು!

ಎಜೆ ಮೊದಲ ಪತ್ನಿ ತೀರಿಹೋಗಿದ್ದಾಳೆ ಅಂತಾನೇ ಎಲ್ಲರೂ ಅಂದ್ಕೊಂಡಿರುವಾಗ ಈ ಅಂತರಾ ಎಲ್ಲಿಂದ ಬಂದಳು ಅಂತ ಜನ ಕನ್‌ಫ್ಯೂಶನ್‌ನಲ್ಲಿ ಬಿದ್ದರು. ಆದರೆ ಆಮೇಲೆ ಗೊತ್ತಾಯ್ತು, ಈ ಅಂತರಾ ಲೋಕ ಕಣ್ಣಲ್ಲಿ ಮಣ್ಣಾಗಿದ್ರೂ ಎ ಜೆ ಕಣ್ಣಲ್ಲಿ ಮಾತ್ರ ಸತ್ತಿಲ್ಲ ಅಂತ. ಅವಳನ್ನು ಇನ್ನಿಲ್ಲದ ಹಾಗೆ ಪ್ರೀತಿಸುತ್ತಿದ್ದ ಎಜೆಗೆ ಆಕೆ ತೀರಿಕೊಂಡು ಇಷ್ಟು ಕಾಲವಾಗಿದ್ದರೂ ಅವಳನ್ನು ಮರೆಯೋದಕ್ಕೆ ಆಗಿಲ್ಲ ಅಂತ. ಅಂತರಾ ಬಳಸುತ್ತಿದ್ದ ಪ್ರತೀ ವಸ್ತುವಿನ ಮೇಲೂ ಅವಳನ್ನೇ ಕಾಣುತ್ತಿದ್ದ ಎ ಜೆ. ಆತನ ಎರಡನೇ ಹೆಂಡತಿ ಎಡವಟ್ಟು ಲೀಲಾಗೆ ಇದು ಗೊತ್ತಾಗಿದೆ. ಆಕೆ ಪೇಂಟಿಂಗ್ ಅಂಗಡಿ ಸೇರ್ಕೊಂಡಿದ್ದ ಎ ಜೆ ಮೊದಲನೇ ಹೆಂಡತಿ ಅಂತರಾ ಭಾವಚಿತ್ರ ತರಿಸೋದಕ್ಕೆ ತನ್ನ ತಾಳಿಯನ್ನೇ ಕೊಟ್ಟಿದ್ದಾಳೆ. ಇದನ್ನು ಸರಿಯಾಗಿ ಗ್ರಹಿಸದೇ ಮನೆಯಲ್ಲಿ ದೊಡ್ಡ ಡ್ರಾಮಾ ನಡೆದಿದೆ.

ನಾನು ಪ್ರೀತಿಯಲ್ಲಿ ಬಿದ್ದಿದ್ದೀನಿ; ಮದುವೆ ಪ್ಲ್ಯಾನ್‌ ಹಂಚಿಕೊಂಡ ಕಿರುತೆರೆ ನಟಿ ನಮ್ರತಾ ಗೌಡ!

ಸೀರಿಯಲ್ ಕತೆ ಹೀಗೆಲ್ಲ ಸಾಗುತ್ತೆ. ಆದರೆ ಈ ಸೀರಿಯಲ್‌ನಲ್ಲೊಂದು ಹೊಸ ಬದಲಾವಣೆ ಬಂದದ್ದು ಅಂತರಾ ಎಂಟ್ರಿಯಿಂದ. ಒಂಥರಾ 'ಲವ್‌ ಮಾಕ್‌ಟೇಲ್‌ 2' (Love mocktail 2) ಸಿನಿಮಾದಲ್ಲಿ ಮತ್ತೆ ಮಿಲನಾ ಕಾಣಿಸಿಕೊಂಡ ಹಾಗೆ ಈ ಸೀರಿಯಲ್‌ನಲ್ಲಿ ಎಜೆ ಮೊದಲ ಹೆಂಡತಿಯಾಗಿ ಅಂತರಾ ಎಂಟ್ರಿ ಕೊಟ್ಟಿದ್ದಾಳೆ. ತುಂಬಾ ಒಳ್ಳೆಯ ಗುಣದ ಈ ಅಂತರಾ ಪಾತ್ರವನ್ನು ರಜನಿ ಲೀಲಾಜಾಲವಾಗಿ ನಟಿಸಿದ್ದಾರೆ. ಆಕೆಯ ಈ ಕಮ್‌ಬ್ಯಾಕ್‌ಅನ್ನು ವೀಕ್ಷಕರೂ ಮುಕ್ತ ಮನಸ್ಸಿಂದ ಸ್ವೀಕರಿಸಿದ್ದಾರೆ. ಸದ್ಯದ ಬರ್ತ್ ಡೇ ಮೂಡ್‌ನಲ್ಲಿರೋ ರಜನಿ ನಟನೆಯ ಭವಿಷ್ಯ ಚೆನ್ನಾಗಿರಲಿ ಅಂತ ಆಕೆಯ ಫ್ಯಾನ್ಸ್ ಈ ದಿನ ಹಾರೈಸುತ್ತಿದ್ದಾರೆ. ಪ್ರತಿಭಾವಂತ ನಟಿ ರಜನಿಗೆ Happy Birthday.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ
BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ