
ಜೀ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಬರಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದೆ. ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಮತ್ತೊಮ್ಮೆ ಮೆಗಾ ಸೀರಿಯಲ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ಕರ್ಣ ಧಾರಾವಾಹಿ ತನ್ನ ಅದ್ಭುತ ಪ್ರೋಮೋ ಮೂಲಕ ಕನ್ನಡಿಗರನ್ನು ಸೆಳೆದಿದೆ. ಇಂದು ಕರ್ಣನ ಜೀವನದ ಮತ್ತೊಂದು ಭಾಗದ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಮೊದಲು ಬಿಡುಗಡೆಯಾದ ಪ್ರೋಮೋದಲ್ಲಿ ಕರ್ಣನ ಕುಟುಂಬವನ್ನು ಪರಿಚಯ ಮಾಡಿಸಲಾಗಿತ್ತು. ಅಜ್ಜಿಯನ್ನು ಹೊರತುಪಡಿಸಿ ಎಲ್ಲರಿಗೂ ಬೇಡವಾದ ಸದಸ್ಯನಾಗಿ ಕರ್ಣನನ್ನು ಪರಿಚಯಿಸಲಾಗಿತ್ತು. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕರ್ಣ ಮತ್ತು ನಿಧಿಯ ನವಿರಾದ ಪ್ರೇಮಕಥೆಯನ್ನು ಇಂಪಾದ ಹಾಡಿನ ಮೂಲಕ ಪರಿಚಯಿಸಲಾಗಿದೆ.
ಬಿಗ್‌ಬಾಸ್ ಶೋನಿಂದ ಬಂದ ಬಳಿಕ ಭವ್ಯಾಗೌಡ ನಿಧಿಯಾಗಿ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಮೊದಲ ಝಲಕ್‌ನಲ್ಲಿಯೇ ನಿಧಿ-ಕರ್ಣನ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಪ್ರೋಮೋದಲ್ಲಿ ಇದು ಒನ್ ಸೈಡ್ ಲವ್ ಎಂಬಂತೆ ತೋರಿಸಲಾಗಿದೆ. ನಿಧಿಯೇ ಕರ್ಣನನ್ನು ಪ್ರೀತಿಸುವಂತೆ ಕಾಣಿಸುತ್ತಿದೆ. ಕೆಲ ದಿನಗಳ ಹಿಂದೆ ಪ್ರೋಮೋ ಮೇಕಿಂಗ್ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕರ್ಣನಿಗೆ ಇಬ್ಬರು ಪ್ರೇಯಸಿಯರು ಎಂದು ಹೇಳಲಾಗುತ್ತಿದ್ದು, ಮತ್ತೊಬ್ಬ ಪ್ರಿಯತಮೆಯಾಗಿ ನಮ್ರತಾ ಗೌಡ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಸದ್ಯ ಜೀ ಕನ್ನಡ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಅವನು ತ್ಯಾಗಕ್ಕೆ ಇನ್ನೊಂದು ಹೆಸರು.. ಕರ್ಣನ ಹೆಸರೇ ನಿಧಿಯ ಉಸಿರು.. ಶುರುವಾಗ್ತಿದೆ ಒಂದು ಅಪರೂಪದ ಪ್ರೇಮಕತೆ ಎಂಬ ಶೀರ್ಷಿಕೆಯೊಂದಿಗೆ ಹೊಸ ಪ್ರೋಮೋ ಪೋಸ್ಟ್ ಮಾಡಲಾಗಿದೆ.
ನಿರ್ದೇಶನ : ಮನು G H
DOP : ಶ್ರೀಶ ಕುದುವಳ್ಳಿ
ಸಂಕಲನ : ಶರಣ್ ಕುಮಾರ್
DI : ಆಶಿಕ್ ಕುಸುಗೊಳ್ಳಿ
ಸಂಗೀತ : ಸುನಾದ್ ಗೌತಮ್
ಸಾಹಿತ್ಯ : ವಿಕಾಸ್ ನೇಗಿಲೋಣಿ
ಗಾಯಕರು : ನಿನಾದ ನಾಯಕ್
ಇದನ್ನೂ ಓದಿ: ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು, ಫ್ಯಾನ್ಸ್‌ಗೆ ಕೊಟ್ಟ ಮಾತು ಉಳಿಸ್ಕೊಂಡ ಕಿರಣ್ ರಾಜ್!
ಯಾವ ಸಮಯ ಬರ್ತಿದ್ದಾನೆ ಕರ್ಣ?
ಕರ್ಣ ಧಾರಾವಾಹಿ ಶೀಘ್ರದಲ್ಲಿಯೇ ಬರಲಿದೆ ಎಂದ ಖಾಸಗಿ ವಾಹಿನಿ ಹೇಳಿಕೊಂಡಿದೆ. ಆದ್ರೆ ಯಾವ ಸಮಯ ಎಂದು ಇದುವರೆಗೂ ಮಾಹಿತಿ ನೀಡಿಲ್ಲ. ಸಂಜೆ 7 ಗಂಟೆಗೆ ಅಮೃತಧಾರೆ ಸೀರಿಯಲ್ ಸಮಯಕ್ಕೆ ಕರ್ಣ ಬರಲಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಶ್ರೀರಸ್ತು ಶುಭಮಸ್ತು ಕಥೆ ಅಂತಿಮಘಟ್ಟಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿ ಅಂತ್ಯದ ಬಳಿಕ ಆ ಸ್ಥಾನಕ್ಕೆ ಅಮೃತಧಾರೆಯನ್ನು ಕೊಂಡ್ಯೊಯ್ದು ಸಂಜೆ 7 ಗಂಟೆಯ ಪ್ರೈಮ್ ಟೈಮ್‌ಗೆ ಕರ್ಣ ಧಾರಾವಾಹಿ ಪ್ರಸಾರ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಅಣ್ಣಯ್ಯ, ಲಕ್ಷ್ಮೀ ನಿವಾಸ ಮತ್ತು ಶ್ರಾವಣಿ ಸುಬ್ರಮಣ್ಯ ಈ ವಾಹಿನಿಯ ಟಾಪ್ ಧಾರಾವಾಹಿಗಳಾಗಿವೆ. ನಾ ನಿನ್ನ ಬಿಡಲಾರೆ ಸೀರಿಯಲ್ ಸಹ ಉತ್ತಮ ಟಿಆರ್‌ಪಿ ಪಡೆಯುತ್ತಿದೆ.
ಕರ್ಣ ಧಾರಾವಾಹಿಯ ಮೊದಲ ಪ್ರೋಮೋ ಬಿಡುಗಡೆಯಾದ ಒಂದೇ ದಿನಕ್ಕೆ 60 ಲಕ್ಷಕ್ಕೂ ಅಧಿಕ ವ್ಯೂವ್ ಪಡೆಯುವ ದಾಖಲೆಯನ್ನು ಬರೆದಿತ್ತು. ಈ ಹಿಂದೆ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಜೋಡಿಯನ್ನು ಕನ್ನಡಿಗರು ಮೆಚ್ಚುಕೊಂಡಿದ್ದರು. ಈ ಧಾರಾವಾಹಿಯಲ್ಲಿಯೂ ರಂಜನಿಯವರೇ ನಾಯಕಿಯಾಗಲಿ ಎಂದು ಅಭಿಮಾನಿಗಳು ಬಯಸಿದ್ದರು. ಆದ್ರೆ ಸದ್ಯ ರಂಜನಿ ಅವರು ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ:ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟ ಕಿರಣ್ ರಾಜ್… ಸೀರಿಯಲ್ ಬೆನ್ನಲ್ಲೆ ಹೊಸ ಚಿತ್ರಕ್ಕೂ ಆದ್ರು ನಾಯಕ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.