ನಿವೇದಿತಾ ಬಾಳಲ್ಲಿ ಹೊಸ ಉತ್ಸಾಹ! ಜೀವಕ್ಕೆ ಹೊಸ ದಿಕ್ಕು ತೋರಿದ ಯುವಕನ ಪರಿಚಯಿಸಿದ ನಟಿ..

Published : May 03, 2025, 03:42 PM ISTUpdated : May 05, 2025, 12:15 PM IST
ನಿವೇದಿತಾ ಬಾಳಲ್ಲಿ ಹೊಸ ಉತ್ಸಾಹ! ಜೀವಕ್ಕೆ ಹೊಸ ದಿಕ್ಕು ತೋರಿದ ಯುವಕನ ಪರಿಚಯಿಸಿದ ನಟಿ..

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ, ಸಾಮಾಜಿಕ ಜಾಲತಾಣಗಳಲ್ಲಿ ತುಂಡುಡುಗೆಯ ರಿಲ್ಸ್‌ಗಳಿಂದಾಗಿ ಟ್ರೋಲ್‌ ಆಗುತ್ತಿದ್ದಾರೆ. ಆದರೆ ಇತ್ತೀಚೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದಾರೆ. ಈ ಹೊಸ ರೂಪ ನೀಡಿದ ಕಲಾವಿದ ಶಶಾಂಕ್ ಸಾಲಿಯಾನ್ ಎಂದು ನಟಿ ಬಹಿರಂಗಪಡಿಸಿದ್ದಾರೆ. ಶಶಾಂಕ್, ಮೊಳೆಗಳಿಂದ ಆನೆ ಬಿಡಿಸಿ ದಾಖಲೆ ನಿರ್ಮಿಸಿದ್ದಾರೆ.

ಬಿಗ್​ಬಾಸ್​ನ ಕ್ಯೂಟ್​ ಜೋಡಿ ಎಂದೇ ಫೇಮಸ್​ ಆಗಿದ್ದ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದು ಮದ್ವೆಯಾಗಿ, ಈಗ ಮಾಜಿಗಳಾಗಿರುವುದು ಗೊತ್ತಿರುವ ವಿಷಯವೇ. ಅತ್ತ ಚಂದನ್​ ಶೆಟ್ಟಿ ತಮ್ಮ ಆಲ್ಬಂ, ಸಿನಿಮಾ ಅಂತೆಲ್ಲಾ ಬಿಜಿಯಾಗಿದ್ದರೆ, ಇತ್ತ ನಿವೇದಿತಾ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ದಿನನಿತ್ಯವೂ ರೀಲ್ಸ್​ ಮಾಡುವಲ್ಲಿ ಬಿಜಿಯಾಗಿದ್ದಾರೆ. ಒಮ್ಮೆ ಮಂಚದ ಮೇಲೆ, ಮತ್ತೊಮ್ಮೆ ಬಾತ್​ರೂಮ್​ನಲ್ಲಿ... ಹೀಗೆ ರೀಲ್ಸ್​ ಮಾಡುತ್ತಾ ತುಂಡುಡುಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ನಟಿಯ ಹಾಟ್‌ ಅವತಾರ ಹೆಚ್ಚಿರುವ ಕಾರಣ ಇನ್ನಿಲ್ಲದಂತೆ ಟ್ರೋಲ್‌ ಆಗುತ್ತಲೇ ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿಕೊಳ್ತಿದ್ದಾರೆ ನಟಿ. 

ಆದರೆ, ಅಚ್ಚರಿ ಎನ್ನುವಂತೆ ಕೆಲವು ದಿನಗಳ ಹಿಂದೆ ನಿವೇದಿತಾ ಡಾನ್ಸರ್‌ ಕಿಶನ್‌ ಬಿಳಗಲಿ ಜೊತೆ ರೀಲ್ಸ್‌ ಮಾಡಿದ್ದರು. ಕಿಶನ್‌ ಅವರ ನೃತ್ಯ ಎಂದರೆ ಅದು ಒಂದು ಲೆವೆಲ್‌ ಮೇಲೆಯೇ ಇರುತ್ತದೆ. ಹೆಚ್ಚಾಗಿ ಇರುವ ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ ಅವರ ಜೊತೆ ಹಾಟ್‌ ಡಾನ್ಸ್‌ಗೆ ಸ್ಟೆಪ್‌ ಹಾಕುವುದು ಇದೆ. ಆದರೆ ಅವರು ಮೊದಲ ಬಾರಿಗೆ ಶಿಲಾಬಾಲಿಕೆಯಾಗಿ ಕಾಣಿಸಿಕೊಂಡಿದ್ದರು. ಅವರ ಜೊತೆ ನಿವೇದಿತಾ ನೃತ್ಯಮಾಡಿದ್ದರು. ಮೈತುಂಬಾ ಬಟ್ಟೆಯುಟ್ಟ ನಿವೇದಿತಾ ಅವರಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು. ಸದಾ ಎಲ್ಲಾ ಅಂಗಾಂಗಗಳನ್ನು ಉದ್ದೇಶಪೂರ್ವಕವಾಗಿ ತೋರಿಸುವ ನಟಿಯ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.

ಆ ರೂಮ್​ನಲ್ಲೇ ಇಬ್ರೂ ಮಾಡ್ತೀವಿ, ಏನಿವಾಗ? ನೋಡೋಕೆ ಆಗದಿದ್ರೆ ಕಣ್ಮುಚ್ಚಿ...

ಈ ಹೊಸ ರೂಪ ಕೊಟ್ಟವರು ಯಾರು ಎಂಬ ಬಗ್ಗೆ ಬಹಳ ದಿನಗಳಿಂದ ನಿವೇದಿತಾ ಅಭಿಮಾನಿಗಳನ್ನು ಕಾಡುತ್ತಿತ್ತು. ಆದರೆ ಅವರು ಯಾರು ಎನ್ನುವುದು ತಿಳಿದಿರಲಿಲ್ಲ. ಇದೀಗ ಅವರದ್ದೇ ಪರಿಚಯ ಮಾಡಿಸಿದ್ದಾರೆ ನಟಿ. ಅವರ ಹೆಸರು ಶಶಾಂಕ್‌ ಸಾಲಿಯಾನ. ಶಶಾಂಕ್‌ ಅವರನ್ನು ಪರಿಚಯ ಮಾಡಿದ ನಿವೇದಿತಾ, ಹೇಗೆ ಅವರು ತಮಗೆ ಹೊಸ ಲುಕ್‌ ಕೊಡುವ ಮೂಲಕ ಸುಂದರವಾಗಿಸಿದ್ದಾರೆ ಎಂದು ಹೇಳಿದ್ಧಾರೆ. ಆ ಹೊಸ ರೂಪದಲ್ಲಿ ತಾವು ಎಷ್ಟು ಪ್ರಶಂಸೆ ಪಡೆದಿರುವುದಾಗಿಯೂ ನಟಿ ತಿಳಿಸಿದ್ದಾರೆ. 

ಉಡುಪಿಯ ಕಾಪುವಿನ ಕಲಾವಿದ ಶಶಾಂಕ್‌. ಯಾವುದೇ ಬಣ್ಣ ಅಥವಾ ಬ್ರಷ್ ಅನ್ನು ಉಪಯೋಗಿಸದೆ ಬಿಡಿಸಿರುವ ಕಲಾಕೃತಿಯ ಚಿತ್ರೀಕರಣ ದಾಖಲೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸಲ್ಲಿಸಲಾಗಿತ್ತು. 2022ರಲ್ಲಿ ಇವರ ಅಪರೂಪದ ಸಾಧನೆಗಾಗೊ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಪ್ರಶಸ್ತಿ ಸಿಕ್ಕಿದೆ. ಶಶಾಂಕ್ ಸಾಲಿಯಾನ್ ಅವರು ಕೇವಲ ಮೊಳೆಗಳನ್ನು ಬಳಸಿಕೊಂಡು ಆನೆಯ ಚಿತ್ರ ಬಿಡಿದ್ದು ಇದಕ್ಕಾಗಿ 11940 ಮೊಳೆಗಳನ್ನು ಬಳಸಿದ್ದರು. ಇದು ಎಲ್ಲರ ಮೆಚ್ಚುಗೆ ಗಳಿಸಿ, ದಾಖಲೆ ಬರೆದಿತ್ತು. 

ಪಬ್​ಡಾನ್ಸ್​ ಇಷ್ಟ ಎನ್ನುತ್ತಲೇ ಹಾಟ್​ ಅವತಾರ ಬಿಚ್ಚಿಟ್ಟ ನಿವೇದಿತಾ ಗೌಡ: ಕಣ್ಣರಳಿಸಿ ನೋಡಿದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!
ಗಿಲ್ಲಿನಾ ಬಿಟ್​ಬಿಡ್ತಾರಾ, ಇಲ್ವಲ್ಲಾ? ವಾಹಿನಿ ವಿರುದ್ಧ ಮಾತನಾಡಿದ್ದರ ಬಗ್ಗೆ Bigg Boss ಜಾಹ್ನವಿ ಸ್ಪಷ್ಟನೆ ಏನು ಕೇಳಿ