ಚೈತ್ರಾ ಕುಂದಾಪುರ ಮದುವೆ ಫಿಕ್ಸ್‌ ಆಯ್ತಾ? ಹುಡುಗ ಯಾರು? ಮದುವೆ ಪತ್ರಿಕೆ ವಿಡಿಯೋ ವೈರಲ್?

Published : May 02, 2025, 10:42 PM ISTUpdated : May 03, 2025, 08:02 AM IST
ಚೈತ್ರಾ ಕುಂದಾಪುರ ಮದುವೆ ಫಿಕ್ಸ್‌ ಆಯ್ತಾ? ಹುಡುಗ ಯಾರು? ಮದುವೆ ಪತ್ರಿಕೆ ವಿಡಿಯೋ ವೈರಲ್?

ಸಾರಾಂಶ

ಚೈತ್ರಾ ಕುಂದಾಪುರ ಅವರ ಮದುವೆ ಸುದ್ದಿ ಜೋರಾಗಿದೆ. 'ಬಾಯ್ಸ್‌ v/s ಗರ್ಲ್ಸ್’ ಶೋನಲ್ಲಿ ಬ್ಯಾಗ್ ಹಿಡಿದಿದ್ದನ್ನು ಮದುವೆ ಆಮಂತ್ರಣ ಎಂದು ಊಹಿಸಲಾಗಿದೆ. 'ಮಜಾ ಟಾಕೀಸ್'‌ನಲ್ಲೂ ಮದುವೆ ಬಗ್ಗೆ ಸುಳಿವು ನೀಡಲಾಗಿದೆ. ಬಿಗ್‌ಬಾಸ್‌ನಲ್ಲೂ ಮದುವೆ ಬಗ್ಗೆ ಚೈತ್ರಾ ಸುಳಿವು ನೀಡಿದ್ದರು. ಈ ಸುದ್ದಿ ನಿಜವೇ ಎಂಬುದು ತಿಳಿದುಬರಬೇಕಿದೆ.

ಇತ್ತೀಚೆಗೆ ‘ಬಾಯ್ಸ್‌ v/s ಗರ್ಲ್ಸ್’‌ ಶೋನಲ್ಲಿ ಚೈತ್ರಾ ಕುಂದಾಪುರ ಅವರು ಒಂದು ಬ್ಯಾಗ್‌ ಹಿಡಿದುಕೊಂಡಿದ್ದರು. ಆ ಬ್ಯಾಗ್‌ ನೋಡಿದವರಿಗೆ ಮದುವೆ ಆಮಂತ್ರಣ ಎನಿಸಿದೆ. ಇನ್ನು ಸೃಜನ್‌ ಲೋಕೇಶ್‌ ಸಾರಥ್ಯದ ‘ಮಜಾ ಟಾಕೀಸ್’‌ ಶೋನಲ್ಲಿ ಕೂಡ ಚೈತ್ರಾ ಕುಂದಾಪುರ ಮದುವೆ ವಿಷಯದ ಬಗ್ಗೆ ಪ್ರಸ್ತಾಪ ಆಗಿದೆ.

ಮಜಾ ಟಾಕೀಸ್‌ನಲ್ಲೂ ಚೈತ್ರಾ ಮದುವೆ ವಿಷಯ! 
ಮಜಾ ಟಾಕೀಸ್‌ ಶೋನಲ್ಲಿ ಈ ವಾರ ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್‌ ಅವರು ಅತಿಥಿಗಳಾಗಿ ಆಗಮಿಸಿದ್ದರು. ಆ ವೇಳೆ ಸೃಜನ್‌ ಲೋಕೇಶ್‌ ಅವರು, “ಚೈತ್ರಾ ಮದುವೆ ಆಗುತ್ತಿದ್ದಾರೆ. ನಾಲ್ಕು ಟಿಪ್ಸ್‌ ಕೊಡಿ” ಎಂದು ಹೇಳಿದ್ದಾರೆ. ಇದು ತಮಾಷೆಗೆ ಹೇಳಿದ್ದಾ? ಅಥವಾ ಸೀರಿಯಸ್‌ ಎನ್ನೋದು ರಿವೀಲ್‌ ಆಗಬೇಕಿದೆ. ಚೈತ್ರಾಗೆ ಗಂಗಮ್ಮಜ್ಜಿ ಹೇಗಿರಬೇಕು? ಗಂಡನನ್ನು ಹೇಗೆ ಒಲಿಸಿಕೊಳ್ಳಬೇಕು? ಏನೆಲ್ಲ ಮಾಡಬೇಕು ಎಂದು ಟಿಪ್ಸ್‌ ಕೊಟ್ಟಿದ್ದಾರೆ. ಈ ಮಾತು ಕೇಳಿ ಚೈತ್ರಾ ನಾಚಿಕೊಂಡರೆ, ಧರ್ಮ ಕೀರ್ತಿರಾಜ್‌ ಅವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಒಟ್ಟಿನಲ್ಲಿ ಚೈತ್ರಾ ಮದುವೆ ವಿಷಯ ಸೌಂಡ್‌ ಮಾಡ್ತಿದೆ. ನಿಜಕ್ಕೂ ಚೈತ್ರಾ ಮದುವೆ ಫಿಕ್ಸ್‌ ಆಗಿದ್ಯಾ? ಇಲ್ಲವಾ ಎಂಬ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಫಿಕ್ಸ್‌ ಆಗಿದ್ರೆ ಹುಡುಗ ಯಾರು? 

ಫೋಟೋಶೂಟ್‌ ಹಿಂದಿನ ಕಥೆ ಏನು?
‘ಬಾಯ್ಸ್‌ v/s ಗರ್ಲ್ಸ್’‌ ಶೋ ಸೆಟ್‌ವೊಳಗಡೆ ಚೈತ್ರಾ ಅವರು ಏನು ಬ್ಯಾಗ್‌ ಹಿಡಿದುಕೊಂಡಿದ್ದರು? ಅದರಲ್ಲಿ ಇರೋದು ಏನು ಎನ್ನೋದು ಗೊತ್ತಾಗಬೇಕಿದೆ. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಮದುವೆ ಪತ್ರಿಕೆ ಎಂದೇ ಸೌಂಡ್‌ ಆಗ್ತಿದೆ. ಬಿಗ್‌ ಬಾಸ್‌ ಶೋ ನಂತರದಲ್ಲಿ ಚೈತ್ರಾ ಕುಂದಾಪುರ ಅವರು ಭಾಷಣಗಳನ್ನು ಕಡಿಮೆ ಮಾಡಿದಂತಿದೆ. ರಿಯಾಲಿಟಿ ಶೋ ಜೊತೆ ಜೊತೆಯಲ್ಲಿ ಸೀರೆಯ ರಾಯಭಾರಿ ಆದಂತಿದೆ. ದೊಡ್ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಫುಲ್‌ ಚೇಂಜ್‌ ಆಗಿರುವ ಚೈತ್ರಾ ಕುಂದಾಪುರ ಅವರು, ಒಂದಾದ ಮೇಲೆ ಒಂದರಂತೆ ಫೋಟೋಶೂಟ್‌ ಮಾಡಿಸುತ್ತಿದ್ದಾರೆ, ಸೀರೆಗಳ ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲ ಮದುವೆ ತಯಾರಿಯಾ ಎಂಬ ಡೌಟ್‌ ಶುರುವಾಗಿದೆ. 

ಅಂದೇ ಸುಳಿವು ಕೊಟ್ಟಿದ್ದರು! 
ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಉಂಗುರ ಕಳೆದುಕೊಂಡಿದ್ದರು. ಆ ಹುಡುಗನೇ ಆ ಉಂಗುರ ಕೊಟ್ಟಿರಬೇಕು ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ದೊಡ್ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಮದುವೆ ಬಗ್ಗೆ ಪ್ರಶ್ನೆ ಬಂದಿತ್ತು. ಆಗ ಚೈತ್ರಾ ಅವರು, “ ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕಿದೆ. ನನ್ನ ಮದುವೆ ಯಾವಾಗ ನಡೆಯಬೇಕು ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಮನೆಯವರು ಮಾತನಾಡಿಕೊಳ್ಳಬೇಕಿದೆ. ಕುಟುಂಬಗಳು ಮಾತಾಡಿ, ಜಾತಕ ಮ್ಯಾಚ್‌ ಆಗಬೇಕು. ನಾವೆಲ್ಲರೂ ಒಂದೊಳ್ಳೆಯ ಮುಹೂರ್ತಕ್ಕೆ ಕಾಯುತ್ತಿದ್ದೇವೆ. ನಮ್ಮ ಮನೆಯ ಸಂಪ್ರದಾಯಗಳಲ್ಲಿ ಏನೆಲ್ಲ ಆಗಬೇಕೋ ಅದೆಲ್ಲವೂ ಆಗಲಿ, ಆಮೇಲೆ ಮಾಹಿತಿ ಹಂಚಿಕೊಳ್ಳುವೆ” ಎಂದು ಹೇಳಿದ್ದರು.

ಬ್ಯುಸಿ ಇರುವ ಬಿಗ್‌ ಬಾಸ್‌ ಸ್ಪರ್ಧಿಗಳು! 
ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರುತ್ತಿದ್ದಂತೆ ರಂಜಿತ್‌ ಅವರು ಮಾನಸಾ ಅವರ ಜೊತೆ ಎಂಗೇಜ್‌ ಆಗಿದ್ದಾರೆ. ಈ ನಿಶ್ಚಿತಾರ್ಥಕ್ಕೆ ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಆಹ್ವಾನಿಸಿದ್ದರು. ಇನ್ನು ಅನುಷಾ ರೈ, ಧರ್ಮ ಕೀರ್ತಿರಾಜ್‌, ತ್ರಿವಿಕ್ರಮ್‌, ಹನುಮಂತ ಮದುವೆ ಯಾವಾಗ ಎಂಬ ಚರ್ಚೆಯೂ ನಡೆದಿತ್ತು. ಅವೆಲ್ಲ ಯಾವಾಗ ಎಂಬುದಕ್ಕೆ ಉತ್ತರ ಸಿಗಬೇಕಿದೆ. ಅಂದಹಾಗೆ ಬಿಗ್‌ ಬಾಸ್‌ ಸ್ಪರ್ಧಿಗಳು ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾ ಎಂದು ಬ್ಯುಸಿ ಆಗುತ್ತಿದ್ದಾರೆ. ಚೈತ್ರಾ ಕುಂದಾಪುರ ಅವರು ಒಂದು ರಿಯಾಲಿಟಿ ಶೋ ಬಳಿಕ ಮತ್ತೆ ಯಾವಾಗ ತೆರೆ ಮೇಲೆ ಕಾಣಿಸ್ತಾರೆ ಎಂದು ಕಾದು ನೋಡಬೇಕಿದೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!