ಮುಕ್ತಾಯವಾಗ್ತಿದೆ 'ಗಿಣಿರಾಮ': ಕೊನೆಯಲ್ಲಿ ಆಯಿ ಸಾಹೇಬಳನ್ನು ಗುಂಡಿಟ್ಟು ಸಾಯಿಸ್ತಾರಾ?

By Shruthi Krishna  |  First Published Jun 13, 2023, 11:58 AM IST

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಗಿಣಿರಾಮ ಧಾರಾವಾಹಿ ಮುಕ್ತಾಯವಾಗುತ್ತಿದೆ. ಕೊನೆಯಲ್ಲಿ ಆಯಿ ಸಾಹೇಬಳನ್ನು ಗುಂಡಿಟ್ಟು ಸಾಯಿಸ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.


ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಒಂದಕ್ಕಿಂತ ಒಂದು ಧಾರಾವಾಹಿಗಳು ಸೂಪರ್ ಎನ್ನುವ ಹಾಗೆ ಪೈಪೋಟಿಗೆ ಬಿದ್ದು ಬಿತ್ತರವಾಗುತ್ತಿವೆ. ಅನೇಕ ಧಾರಾವಾಹಿಗಳು ಕುತೂಹಲ ಹೆಚ್ಚಿಸುತ್ತಾ, ಪ್ರೇಕ್ಷಕರ ಹೃದಯ ಗೆದ್ದಿವೆ. ಈ ನಡುವೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ ಜೊತೆಗೆ ಅಷ್ಟೇ ಹೊಸ ಧಾರಾವಾಹಿಗಳು ಎಂಟ್ರಿ ಕೊಡುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರ ಹೃದಯ ಗೆದ್ದಿವೆ. ಇದೀಗ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರಾವಾಹಿ ಮುಕ್ತಾಯ ಹಂತ ತಲುಪಿದೆ. ಅಭಿಮಾನಿಗಳ ಹೃದಯ ಗೆದ್ದಿರುವ ಗಿಣಿರಾಮ ಧಾರಾವಾಹಿ ಈ ವಾರ ಕೊನೆಯಾಗುತ್ತಿದೆ. 

ಅಂದಹಾಗೆ ಗಿಣಿರಾಮ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಅನೇಕ ಸಮಯದಿಂದ ಕೇಳಿಬಂದಿತ್ತು. ಆದರೀಗ ಇದು ನಿಜವಾಗಿದ್ದು ವಾಹಿನಿ ಅವರೇ ಮಹಾ ಮುಕ್ತಾಯ ಎಂದು ಪ್ರೋಮೋ ಬಿಡುಗಡೆ ಮಾಡುವ ಮೂಲಕ ಅಧಿಕೃತಗೊಳಿಸಿದೆ. ಧಾರಾವಾಹಿಯ ಕೊನೆಯಲ್ಲಿ ಆಯಿ ಸಾಹೇಬರ ಮಗಳು ಎನ್ನುವ ವಿಚಾರ ಮಹಿತಿಗೆ ಗೊತ್ತಾಗಿದೆ. ಆದರೆ ಮಹತಿಯನ್ನು ರೌಡಿಗಳು ಎತ್ತಾಕಿಕೊಂಡು ಹೋಗಿದ್ದಾರೆ. ಪತ್ನಿಯನ್ನು ಕಾಪಾಡಲು ಬಂದ  ಶಿವರಾಮ್ ಕೂಡ ರೌಡಿಗಳಿಂದ ತೊಂದರೆಗೆ ಸಿಲುಕಿದ್ದಾನೆ. ಕೊನೆಯಲ್ಲಿ ಮಹತಿ ಸಾಯುತ್ತಾಳಾ ಅಥವಾ ಆಯಿ ಸಾಹೇಬರ ಅಂತ್ಯ ವಾಗುತ್ತಾ ಎನ್ನುವ ಕುತೂಹಲ ವಿದೆ. ಈ ವಾರದ ಕೊನೆಯಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ.

Tap to resize

Latest Videos

 8 ವರ್ಷ ಪ್ರೀತಿಸಿದ ಸೈನಿಕನ ಜೊತೆ ಗಿಣಿರಾಮ ನಟಿ ಕಾವೇರಿ ಮದುವೆ!

ಈ ಧಾರಾವಾಹಿ ಸದ್ಯ ಸಂಜೆ 5.30ಕ್ಕೆ ಪ್ರಸಾರವಾಗುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಎಂಟ್ರಿ ಕೊಡುತ್ತಿವೆ. ಈಗಾಗಲೇ ಅಂತರಪಟ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ.

ಧಾರಾವಾಹಿ ಪ್ರೇಮಿಗಳಿಗೆ ಶಾಕಿಂಗ್; ಮುಕ್ತಾಯವಾಗ್ತಿದೆ ಕಲರ್ಸ್ ಕನ್ನಡದ ಮತ್ತೊಂದು ಸೀರಿಯಲ್ 

ಗಿಣಿರಾಮ ಧಾರಾವಾಹಿ ಶಿವರಾಮ ಹಾಗೂ ಮಹತಿ ಮತ್ತು ಆಯಿ ಸಾಹೇಬಳ ಬದುಕಿನ ಸುತ್ತ ಸುತ್ತುತ್ತಿರುವ ಕಥೆಯಾಗಿತ್ತು. ಧಾರಾವಾಹಿಯ ನಾಯಕ ಶಿವರಾಮ ಪಾತ್ರದಲ್ಲಿ ರಿತ್ವಿಕ್ ಮಾತಾಡ್ ಕಾಣಿಸಿಕೊಂಡಿದ್ದಾರೆ. ಮಹತಿಯಾಗಿ ನಯನಾ ಮಿಂಚಿದ್ದಾರೆ. ಈ ಹಿಂದೆ ಕೂಡ ಗಿಣಿರಾಮ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಹಬ್ಬಿತ್ತು ಆದರೆ ವದಂತಿಯನ್ನು ತಳ್ಳಿ ಹಾಕಿದ್ದರು ನಾಯಕ ರಿತ್ವಿಕ್. ಈ ಬಾರಿ ನಿಜಕ್ಕೂ ಮುಕ್ತಾಯವಾಗ್ತಿದೆ ಎಂದು ವಾಹಿನಿಯೇ ಬಹಿರಂಗ ಪಡಿಸಿದೆ. 

click me!