ಮಕ್ಕಳನ್ನು ಬಿಟ್ಟು ಹೋಗುವಾಗೋ ಆಗೋ ನೋವು ಅಷ್ಟಿಷ್ಟಲ್ಲ: ನಟಿ Roopali Ganguly

Published : Jun 12, 2023, 03:50 PM IST
ಮಕ್ಕಳನ್ನು ಬಿಟ್ಟು ಹೋಗುವಾಗೋ ಆಗೋ ನೋವು ಅಷ್ಟಿಷ್ಟಲ್ಲ: ನಟಿ Roopali Ganguly

ಸಾರಾಂಶ

ನಟ-ನಟಿಯರು ಬದುಕು  ಸುಲಭವಲ್ಲ.  ಸಂಸಾರ, ಮಕ್ಕಳು, ಹಿರಿಯರನ್ನು ಬಿಟ್ಟು ನಟಿಯರು ಕೆಲಸಕ್ಕೆ ಹೋಗುವಾಗ ಆಗುವ ಮಾನಸಿಕ ಒತ್ತಡದ ಕುರಿತು ನಟಿ ರೂಪಾಯಿ ಗಂಗೂಲಿ ಏನು ಹೇಳಿದ್ದಾರೆ?   

ಸಿನಿಮಾ ಸೆಲೆಬ್ರಿಟಿಗಳ ಬದುಕು ಅಷ್ಟು ಸುಲಭವಲ್ಲ. ಬಣ್ಣದ ಲೋಕದಲ್ಲಿ ಫ್ಯಾನ್ಸ್ ಸಂಖ್ಯೆ ಏರಿದಂತೆ ಅವರು ತಮ್ಮ ವೈಯಕ್ತಿಕ ಜೀವನದಿಂದ ದೂರ ಸರಿಯಬೇಕಾದ ಅನಿವಾರ್ಯತೆ ಎಷ್ಟೋ ಸಲ ಉಂಟಾಗುತ್ತದೆ. ತೆರೆ ಮೇಲೆ ಮಿಂಚುವ ತಾರೆಯರನ್ನು ಜನರು ಆರಾಧಿಸುತ್ತಾರೆ.  ತಮ್ಮ ನೆಚ್ಚಿನ ತಾರೆಯರು ಹೀಗೆಯೇ ಇರಬೇಕು ಎನ್ನುವ ಕಲ್ಪನಾ ಲೋಕದಲ್ಲಿ ಹೆಚ್ಚಿನ ಅಭಿಮಾನಿಗಳು ಇರುತ್ತಾರೆ. ಅವರ ಇಚ್ಛೆಯನ್ನು ಈಡೇರಿಸುವ ಜವಾಬ್ದಾರಿ ನಟ-ನಟಿಯರ ಮೇಲೆ ಇರುತ್ತದೆ. ಹೆಚ್ಚೆಚ್ಚು ಫ್ಯಾನ್ಸ್ (Fans)​ ಗಳಿಸಲು ಇದು ಅವರ ವೃತ್ತಿ ಜೀವನದಲ್ಲಿ ಅನಿವಾರ್ಯವೂ ಆಗಿರುತ್ತದೆ. ಇಲ್ಲದಿದ್ದರೆ ಇಂಡಸ್ಟ್ರಿಯಲ್ಲಿ ಒಮ್ಮೆ ಬೆಲೆ ಕುಸಿಯಿತು ಎಂದರೆ ಅವರ ಜೀವನವೇ ಮುಗಿದು ಹೋದಂತೆ. ಇಂಥ ಪರಿಸ್ಥಿತಿಯಲ್ಲಿ ಹೆಚ್ಚು ಇಕ್ಕಟ್ಟಿಗೆ ಸಿಲುಕುವವರು ನಟಿಯರು. ವೃತ್ತಿ ಮತ್ತು ಸಾಂಸಾರಿಕ ಜೀವನವನ್ನು ಸರಿದೂಗಿಸಿಕೊಂಡು ಹೋಗುವುದು ಎಲ್ಲಾ ಕ್ಷೇತ್ರದ ಮಹಿಳೆಯರಿಗೆ ಸವಾಲಿನ ಕೆಲಸವಾದರೂ ಚಿತ್ರ ನಟಿಯರಿಗೆ ಇದರ ಜವಾಬ್ದಾರಿ ತುಸು ಹೆಚ್ಚು ಎಂದೇ ಹೇಳಬಹುದು. ಸಾಮಾನ್ಯರಂತೆ ಇವರಿಗೂ ಸಂಸಾರ ಇರುತ್ತೆ. ಮಕ್ಕಳು, ಹಿರಿಯರನ್ನು ಮನೆಯಲ್ಲಿ ಬಿಟ್ಟು ಹೋಗುವ ಅನಿವಾರ್ಯತೆ ಬಂದಾಗ ಮಾನಸಿಕ ಒತ್ತಡಕ್ಕೆ ಒಳಗಾಗೋದು ಕಾಮನ್. ಇಂಥ ಸಂದರ್ಭದಲ್ಲಿ ನಟಿಯರು ಅನುಭವಿಸುವ ನೋವನ್ನು ತೆರೆದಿಟ್ಟಿದ್ದಾರೆ ಅನುಪಮಾ ಖ್ಯಾತಿಯ ನಟಿ ರೂಪಾಲಿ ಗಂಗೂಲಿ.

ರೂಪಾಲಿ ಗಂಗೂಲಿ (Roopali Ganguly) ಕೇವಲ ಪರದೆಯ ಮೇಲೆ ಜನಪ್ರಿಯ ಮುಖವಲ್ಲ ಆದರೆ ಎಲ್ಲಾ ಹಂತದ ಜನರಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಿರುತೆರೆ ಹಾಗೂ ರಿಯಾಲಿಟಿ ಷೋಗಳಲ್ಲಿ  ಮಿಂಚುತ್ತಿರುವ  ನಟಿ ರೂಪಾಲಿ ಅವರಿಗೆ  ಮಗ ಕೂಡ ಇದ್ದು, ಶೂಟಿಂಗ್​ಗೆ ಹೋಗುವಾಗ ಹೇಗೆ ಜೀವನವನ್ನು ನಿಭಾಯಿಸಬೇಕಾಗಿತ್ತು ಎಂಬ ಬಗ್ಗೆ ಹೇಳಿದ್ದಾರೆ. ತಮ್ಮ  ಮಗನಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗಲಿಲ್ಲ ಎಂಬ ವಿಷಾದವಿದೆ ಎಂದು ರೂಪಾಯಿ ನೋವು ತೋಡಿಕೊಂಡಿದ್ದಾರೆ. ಇದೇ ವೇಳೆ ಮಕ್ಕಳನ್ನು ನೋಡಿಕೊಳ್ಳಲು ಪಾಲಕರಲ್ಲಿ ಒಬ್ಬರು ತ್ಯಾಗ ಮಾಡುವ ಅನಿವಾರ್ಯತೆ ಇದೆ, ಮಕ್ಕಳನ್ನು ನೋಡಿಕೊಳ್ಳಲು ಕೇರ್​ ಟೇಕರ್​ ಇರಬಹುದು. ಆದರೆ ಅವರಿಗೆ ಅಪ್ಪ-ಅಮ್ಮನ ಪ್ರೀತಿ ಅದರಿಂದ ಸಿಗುವುದು ಸುಲಭವಲ್ಲ. ಆದ್ದರಿಂದ ಒಬ್ಬರು ತಮ್ಮ ವೃತ್ತಿಯನ್ನು ತ್ಯಜಿಸಲೇಬೇಕಾದ ಅನಿವಾರ್ಯತೆ ಇದೆ ಎನ್ನುವುದು ರೂಪಾಯಿ ಮಾತು. 

ಪ್ರಸವದ ನಂತರವೂ ಫಿಟ್ ಆಗಿರೋದು ಹೇಗೆ? ವಿಡಿಯೋ ಮೂಲಕ ನಟಿ ಬಿಪಾಶಾ ಬಸು ಸೀಕ್ರೆಟ್​ ರಿವೀಲ್​

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ತ್ಯಾಗ ಮಾಡುವವಳು  ಮಹಿಳೆಯೇ ಆಗಿರುತ್ತಾಳೆ ಎಂದಿರುವ ರೂಪಾಯಿ ತಮ್ಮ ವಿಷಯದಲ್ಲಿ ಮಾತ್ರ ಚಿತ್ರಣ ಬದಲಾಗಿರುವುದಾಗಿ ತಿಳಿಸಿದ್ದಾರೆ. ರೂಪಾಲಿ ಗಂಗೂಲಿ ಅವರು ತಮ್ಮ ಟಿವಿ ಶೋ ಅನುಪಮಾಗಾಗಿ ಚಿತ್ರೀಕರಣ ಮಾಡುವಾಗ ತಮ್ಮ ಪತಿ ಅಶ್ವಿನ ಕೆ. ವರ್ಮಾ (Ashwin K Verma) ಬೇಗನೆ ನಿವೃತ್ತಿ ಪಡೆದು ಮಗುವನ್ನು ನೋಡಿಕೊಳ್ಳಲು ಅಮೆರಿಕದಿಂದ  ಭಾರತಕ್ಕೆ ಬಂದಿರುವ ಬಗ್ಗೆ ತಿಳಿಸಿದರು.  'ನಾನು ಅದ್ಭುತ ಜೀವನ ಸಂಗಾತಿಯನ್ನು ಹೊಂದಿದ್ದೇನೆ. ಅದು ದೇವರು ನನಗೆ ಕೊಟ್ಟಿರುವ ಉಡುಗೊರೆ' ಎಂದು ಸಂದರ್ಶನವೊಂದರಲ್ಲಿ ತಿಳಿಸಿರುವ ರೂಪಾಯಿ, ಇಷ್ಟಿದ್ದರೂ ನನ್ನಲ್ಲಿ ಇದುವರೆಗೂ ಒಂದು ಕೊರಗು ಇದೆ, ಅದೇನೆಂದರೆ,  ನನ್ನ ಮಗುವಿನೊಂದಿಗೆ ಕಡಿಮೆ ಸಮಯವನ್ನು ಕಳೆಯುತ್ತೇನೆ ಎಂಬುದು ಎಂದಿದ್ದಾರೆ.  ನನಗೆ ಇದುವರೆಗೂ  ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಆ ಭಾವನೆಯಿಂದಲೇ  ಪ್ರತಿದಿನ ಕೆಲಸಕ್ಕೆ ಹೋಗುತ್ತೇನೆ. ಅಮ್ಮನ ಪ್ರೀತಿಯನ್ನು ಮಗುವಿಗೆ ನೀಡಲು ಆಗುತ್ತಿಲ್ಲ ಎನ್ನುವ ಕೊರಗು ಇದೆ. ಆದರೆ ಅದೇ ವೇಳೆ ವೃತ್ತಿಯೂ ಅನಿವಾರ್ಯವಾಗಿದೆ ಎನ್ನುತ್ತಾರೆ.

ಯಾವಾಗಲೂ  ಗಂಡನೇ ಹೊರಗೆ ಹೋಗಿ ದುಡಿದು ತನ್ನ ಕನಸಿನ ಹಿಂದೆ ಓಡಬೇಕು ಎಂಬ ಮಾತು ಸರಿಯಲ್ಲ.  ನಮ್ಮಲ್ಲಿರುವ ಸಾಮಾನ್ಯ ಪಿತೃಪ್ರಭುತ್ವವೆಂದರೆ ಪುರುಷನು ತನ್ನ ಗುರಿಗಳನ್ನು ಸಾಧಿಸಲು ಹೊರಗೆ ಹೋಗಬೇಕು ಹಾಗೂ  ಮಹಿಳೆ ಮನೆಯಲ್ಲಿ ಕುಳಿತು ಮನೆಯ ಆರೈಕೆ ಮಾಡಬೇಕು ಎನ್ನುತ್ತಾರೆ. ಈ ಸಮಯದಲ್ಲಿ ಎಷ್ಟೋ ಹೆಣ್ಣುಮಕ್ಕಳು  ತಮ್ಮ ಕನಸುಗಳನ್ನು ಕನಸಾಗಿಯೇ ಉಳಿಸಿಕೊಳ್ಳುತ್ತಾರೆ.  ಮದುವೆಗೆ ಮುನ್ನಾ ಎಷ್ಟೇ ಯಶಸ್ಸು ಗಳಿಸಿದ್ದರೂ ಕೊನೆಗೆ  ಮಗುವಿನ, ಹಿರಿಯರ ಆರೈಕೆ ಪ್ರಶ್ನೆ ಬಂದಾಗ ಮಹಿಳೆಯೇ ತ್ಯಾಗ ಮಾಡಬೇಕು ಎನ್ನುವ ಮನೋಭಾವ ಇರುತ್ತದೆ. ಆದರೆ ನನ್ನ ಗಂಡ ಹಾಗಲ್ಲ.  ದೇವರು ತುಂಬಾ ಕರುಣಾಮಯಿಯಾಗಿದ್ದು, ನನ್ನ ಜೀವನದಲ್ಲಿ ಉತ್ತಮ ಗಂಡನನ್ನು ನೀಡಿದ್ದಾನೆ ಎಂದಿದ್ದಾರೆ ರೂಪಾಲಿ.

Dimple Kapadia Birthday: 16ಕ್ಕೆ ಮದ್ವೆ, 17ಕ್ಕೆ ಮಗು: ಡಿಂಪಲ್​, ರಾಜೇಶ್​ ಖನ್ನಾ ದಾಂಪತ್ಯದ ಕಥೆ-ವ್ಯಥೆ!

ನನ್ನ ಪತಿ ರಾಕ್ ಸ್ಟಾರ್. ನನ್ನ ಮಗುವಿಗೆ ಕೇವಲ 6.5 ವರ್ಷವಾದಾಗ ನನ್ನ ವೃತ್ತಿಯನ್ನು ಮುಂದುವರಿಸಲು ಗಂಡ ಪ್ರೋತ್ಸಾಹ ನೀಡಿದರು. ತಮ್ಮ ಕೆಲಸವನ್ನು ಬಿಟ್ಟು ಮಗುವನ್ನು ನೋಡಿಕೊಳ್ಳಲು ಭಾರತಕ್ಕೆ ಹಿಂದಿರುಗಿದರು ಎಂದಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!