
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಗೋಲ್ಡನ್ ಗ್ಯಾಂಗ್ (Golden Gang) ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಮುಂಗಾರು ಮಳೆ ತಂಡ ಆಗಮಿಸಿತ್ತು. ಯಾರಿಗೂ ತಿಳಿಯದ ಶಾಕಿಂಗ್ ಸುದ್ದಿಗಳನ್ನು ತಂಡ ಹಂಚಿಕೊಂಡಿದೆ. 15 ವರ್ಷಗಳ ನಂತರ ಸತ್ಯ ತಿಳಿದುಕೊಂಡ ಗಣೇಶ್ ಹೇಗೆ ರಿಯಾಕ್ಟ್ ಮಾಡಿದ್ದಾರೆ ಎಂದು ವಾಹಿನಿ ಸಣ್ಣ ವಿಡಿಯೋ ಹಂಚಿಕೊಂಡಿದೆ.
ಯೋಗರಾಜ್ ಭಟ್ (Yogaraj bhat) ಅವರಿಗೆ ವಿಕಟಕವಿ ಬಿರುದು ಸಿಕಿದ್ದು, ಗಣೇಶ್ ನಟನಾಗಿದ್ದು, ಕೃಷ್ಣ ಕ್ಯಾಮೆರಾ ಮ್ಯಾನ್ ಆಗಿದ್ದು ಮುಂಗಾರು ಮಳೆ (Mungaru Male) ಚಿತ್ರದಿಂದ. ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡು ಚಿತ್ರದಲ್ಲಿದ್ದವರ ಜೀವನವನ್ನೆ ಬದಲಾಯಿಸಿತ್ತು. ಅದರಲ್ಲೂ ಜಯಂತ್ ಕಾಯ್ಕಿಣಿ (Jayant Kaikini) ಸಾಹಿತ್ಯ ಮನೋಮೂರ್ತಿ (Manomurthy) ಸಂಗೀತ ನಿರ್ದೇಶನ ಯುವಕರ ನಿದ್ದೆಗೆಡಿಸಿತ್ತು. ಯಾರು ನೋಡಿದರೂ ಗಣೇಶ್ ದೇವದಾಸ್ ಮತ್ತು ಪೂಜಾ ಗಾಂಧಿ (Pooja Gandhi) ಬಗ್ಗೆಯೇ ಮಾತನಾಡುತ್ತಿದ್ದರು. ಯಾವ ಕಾಲೇಜ್ (College Function) ಕಾರ್ಯಕ್ರಮ, ಅಣ್ಣಮ್ಮ ಪೂಜೆ (Annamma) ಆರ್ಕೇಸ್ಟ್ರಾ ಕೇಳಿದರೂ ಮುಂಗಾರು ಮಳೆ ಹಾಡಿದ್ದ ಜಮಾನವದು. ಈ ಚಿತ್ರದ ಬಗ್ಗೆ ವೀಕ್ಷಕರಿಗೆ ಇನ್ನು ಹೆಚ್ಚು ತಿಳಿಸಿಕೊಡಬೇಕು ಎಂದು ಗೋಲ್ಡನ್ ಗ್ಯಾಂಗ್‌ಗೆ ಆಗಮಿಸಿದ್ದರು.
ತಂಡದ ಜೊತ ಮಾತನಾಡುತ್ತಿದ್ದ ಗಣೇಶ್ ಅನಿಸುತ್ತಿದೆ ಏಕೋ ಇಂದು.... ಹಾಡಿನ ಚಿತ್ರೀಕರಣ ಹೇಗೆ ನಡೆಯಿತು ಎಂದು ಹೇಳಿಕೊಂಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಹಾಡಾಗಿರುವ (Romantic Song) ಕಾರಣ ಮೂರ್ನಾಲ್ಕು ಕಡೆ ಚಿತ್ರೀಕರಣ ಮಾಡುವ ಪ್ಲ್ಯಾನ್ ಮಾಡಿದ್ದರಂತೆ. 'ಈ ಹಾಡಿನಲ್ಲಿ ನನಗೆ ಶವಾಸನದಲ್ಲಿ ಮಲಗುವುದಕ್ಕೆ ಹೇಳಿದ್ದರು. ಏನೋ ಐದು ಆರು ಅಡಿ ಇರಬೇಕು ಅಂದಿದ್ದರು. ನಾನು ಸರಿ ಅಂತ ಒಪ್ಪಿಕೊಂಡೆ. ಆಮೇಲೆ ಇಲ್ಲಿಗೆ ಹೋದ ಮೇಲೆ 10ರಿಂದ 11 ಅಡಿ ಇದೆ,' ಎಂದು ಗಣೇಶ್ ಹೇಳುತ್ತಾರೆ. ಎದುರು ಕುಳಿತಿದ್ದ ಕ್ಯಾಮೆರಾ ಮ್ಯಾನ್ ಕೃಷ್ಣ ಇಲ್ಲ ಅದು 300 ಅಡಿ ಇತ್ತು ಎಂದು ಹೇಳಿದ್ದಾರೆ. ಗಾಬರಿಗೊಂಡ ಗಣೇಶ್ ಶಾಕಿನಲ್ಲಿ ನಿಂತಿದ್ದಾರೆ.
ಕೃಷ್ಣ ಅವರ ಪಕ್ಕದಲ್ಲಿ ಕುಳಿತಿದ್ದ ಕಥೆಗಾರ ಪ್ರೀತಂ ಗುಬ್ಬಿ (Preetham Gubbi) ಅಲ್ಲಿದ್ದ ಮೊಸಳೆ (Crocodile) ಕಥೆ ಹೇಳುತ್ತಾರೆ. ಟಾಪ್ ಆ್ಯಂಗಲ್‌ನಿಂದ ಗಣೇಶ್ ಅವರ ಪಕ್ಕದಲ್ಲಿ ಮೊಸಳೆ ಕಾಣಿಸುತ್ತದೆ. ಅಲ್ಲಿಯೇ ಸುಮಾರು ಹೊತ್ತು ಓಡಾಡುತ್ತಿತ್ತು. ಅದನ್ನು ಕ್ಯಾಮೆರಾ ಮ್ಯಾನ್‌ಗೆ ಹೇಳಿದ್ದಾರೆ. ಆಗ ಕೃಷ್ಣ ಅವರು ಹೇ ಹೇಳಬೇಡ ಕಣೋ ಶಾಟ್ ಆಗಲ್ಲ, ಸುಮ್ಮನೆ ಇರೋ ಎಂದರಂತೆ. ಈ ಕಥೆ ಕೇಳಿ ಗಣೇಶ್ ನನ್ನ ತಾಯಿ ಆಣೆ ನನಗೆ ಗೊತ್ತಿಲ್ಲ ಸರ್, ಎಲ್ಲಾ ಈಗ ಹೇಳ್ತಿದ್ದಾರೆ ನೋಡ್ರೋ ಎಂದು ಕೂಗಾಡಿದ್ದಾರೆ.
ಸಂಕ್ರಾಂತಿ ಹಬ್ಬದ (Sankranthi Festival) ಪ್ರಯುಕ್ತ ಮುಂಗಾರು ಮಳೆ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ವೇದಿಕೆಗೆ ಆಗಮಿಸಿ, ಚಿತ್ರ ಬಿಡುಗಡೆಯಾದ 15 ವರ್ಷಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಯೋಗರಾಜ್ ಭಟ್ ಅವರ ಪತ್ನಿ ಮುಂಗಾರು ಮಳೆ ಸ್ಕ್ರಿಪ್ಟ್ ಹಿಡಿದುಕೊಂಡು ಆಗಮಿಸಿದ್ದರು. ಈ ಚಿತ್ರಕ್ಕೆ ಚುಮ್ಮಾ (Chumma) ಎಂದು ಮೊದಲು ಹೆಸರಿಟ್ಟಿದ್ದರು ಎಂದು ಗಣೇಶ್ ಹೇಳಿದ್ದಾರೆ. ಗಣೇಶ್ (Sudha Belavadi) ಕಪಾಳಕ್ಕೆ ತಾಯಿ ಸುಧಾ ಬೆಳವಾಡಿ ಹೊಡೆಯುವ ಸೀನ್ ಅನ್ನು ಗೋಲ್ಡನ್ ಗ್ಯಾಂಗ್ ವೇದಿಕೆ ಮೇಲೆ ಯೋಗರಾಜ್ ಭಟ್ ಮತ್ತೆ ಮರು ಚಿತ್ರೀಕರಣ ಮಾಡಿಸುತ್ತಾರೆ.
ಸಂಕ್ರಾಂತಿ ಎಪಿಸೋಡ್ ಅದ್ಧೂರಿಯಾಗಿ ಮೂಡಿ ಬಂದಿದ್ದು, ವೀಕ್ಷಿಸಲು ಕಾಯುತ್ತಿರುವೆವು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.