Niveditha Gowda Prank: ಕ್ಯಾಮೆರಾ ಮುಂದೆ ಬಾತ್ ಟವಲ್ ಬಿಚ್ಚಿದ ನಿವೇದಿತಾ, ಚಂದನ್ ಶೆಟ್ಟಿ ಶಾಕ್

Published : Jan 13, 2022, 12:57 PM ISTUpdated : Jan 13, 2022, 04:23 PM IST
Niveditha Gowda Prank: ಕ್ಯಾಮೆರಾ ಮುಂದೆ ಬಾತ್ ಟವಲ್ ಬಿಚ್ಚಿದ ನಿವೇದಿತಾ, ಚಂದನ್ ಶೆಟ್ಟಿ ಶಾಕ್

ಸಾರಾಂಶ

ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟಿವ್ ಆಗಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಹಳಷ್ಟು ಫನ್ ವಿಡಿಯೋಗಳು, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಪತ್ನಿಯ ವಿಡಿಯೋ ನೋಡಿ ಚಂದನ್ ಶಾಕ್ ಆಗಿದ್ದಾರೆ.

ಬಿಗ್‌ಬಾಸ್ ಖ್ಯಾತಿಯ ಜೋಡಿ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ(Niveditha Gowda) ರಾಜಾ ರಾಣಿಯಲ್ಲಿ ಮಿಂಚಿದ್ದಾಯ್ತು. ಆದರೆ ನಿವೇದಿತಾ ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಮೊದಲೇ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿದ್ದ ನಿವೇದಿತಾ ಗೌಡ ಈಗಲೂ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ , ಫೊಟೋ ಶೇರ್ ಮಾಡುತ್ತಲೇ ಇರುತ್ತಾರೆ. ಬಹಳಷ್ಟು ವಿಡಿಯೋ, ರೀಲ್ಸ್‌ಗಳನ್ನು ಮಾಡಿ ಶೇರ್ ಮಾಡುವ ನಿವೇದಿತಾ ಅಭಿಮಾನಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಿರುತೆರೆ ಜೋಡಿಯ ವಿಡಿಯೋಗಳನ್ನು ಅವರ ಅಭಿಮಾನಿಗಳು ನೋಡಿ ಖುಷಿ ಪಡುತ್ತಾರೆ.

ಇದೀಗ ನಿವೇದಿತಾ ಗೌಡ ಪ್ರಾಂಕ್ ಮಾಡೋಕೆ ಹೋಗಿ ಗಂಡನಿಗೆ ಶಾಕ್ ಕೊಟ್ಟಿದ್ದಾರೆ. ಹೌದು. ನಿವೇದಿತಾ ಅವತಾರ ನೋಡಿ ಚಂದನ್ ಶೆಟ್ಟಿ ಹೌಹಾರಿಬಿದ್ದಿದ್ದಾರೆ. ಪತ್ನಿ ಇದೇನು ಮಾಡ್ತಿದ್ದಾಳೆ ಅಂತ ಶಾಕ್ ಆಗಿ ಚಂದನ್ ಕೊಟ್ಟ ರಿಯಾಕ್ಷನ್ ಹಾಗೂ ಇದಕ್ಕೆ ನಿವೇದಿತಾ ರಿಯಾಕ್ಷನ್ ಸಖತ್ ಫನ್ನಿಯಾಗಿದೆ. ಈ ರೀತಿಯ ವಿಡಿಯೋಗಳು ಇದೇ ಮೊದಲೇನಲ್ಲ, ಇಂಥವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಬಿಗ್ ಬಾಸ್ ಜೋಡಿಯ ವರ್ಷನ್ ಇದು.

ಬ್ಯಾಗಲ್ಲಿಟ್ಟುಕೊಂಡ ರಹಸ್ಯ ಬಿಚ್ಟಿಟ್ಟ ನಿವೇದಿತಾ ಗೌಡ!

ಕ್ಯಾಮೆರಾವನ್ನಿಟ್ಟು ನಿವೇದಿತಾ ಗೌಡ ಬಾತ್ ಟವಲ್ ಸುತ್ತಿಕೊಳ್ಳುತ್ತಾರೆ. ಪಕ್ಕದಲ್ಲೇ ಇದ್ದ ಸೋಫಾದಲ್ಲಿ ಚಂದನ್ ಶೆಟ್ಟಿ ಲ್ಯಾಪ್‌ಟಾಪ್‌ನಲ್ಲಿ ಬ್ಯುಸಿಯಾಗಿರುತ್ತಾರೆ. ಇದೇ ವೇಳೆ ನಿವೇದಿತಾ ವಿಡಿಯೋ ಆರಂಭಿಸಿ ಚಕ್ಕಂತ ಟವಲ್ ದೇಹದಿಂದ ತೆಗೆಯುತ್ತಾರೆ.

ಅವತಾರ ನೋಡಿದ ಚಂದನ್ ಅಯ್ಯೋ ಹೆಂಡ್ತಿ ಇದೇನ್ ಮಾಡ್ತಿದ್ದಾಳೆ ಎಂದು ಶಾಕ್ ಆಗಿ ಹೆಂಡತಿಯನ್ನು ತಬ್ಬಿ ಕ್ಯಾಮೆರಾದಿಂದ ಸರಿಸಿದ್ದಾರೆ. ಆದರೆ ನಿವೇದಿತಾ ಬಾತ್ ಟವಲ್ ಒಳಗೆ ಡ್ರೆಸ್ ಧರಿಸಿದ್ದು ನೋಡಿ ನಿರಾಳರಾಗುತ್ತಾರೆ ಚಂದನ್ ಶೆಟ್ಟಿ.

ಈ ಹಿಂದೆ ರಾಜಾರಾಣಿ ಶೋನಲ್ಲಿಯೂ ಎಡವಟ್ಟಿನ ಫನ್

ನಿವೇದಿತಾ ಗೌಡರನ್ನು ಕೈಗೆ ಹಗ್ಗ ಕಟ್ಟಿ ಒಂದು ಕುರ್ಚಿ (Chair) ಮೇಲೆ ಕುಳಿಸಿರುತ್ತಾರೆ. ಚಂದನ್ ಶೆಟ್ಟಿ ಕಣ್ಣಿಗೆ ಬಟ್ಟೆ ಕಟ್ಟಿ ಒಂದು ಕಾರ್ನರ್‌ನಿಂದ ಮತ್ತೊಂದು ಕಾರ್ನರ್‌ಗೆ ನಡೆದುಕೊಂಡು ಹೋಗಿ ಟೇಬಲ್‌ ಮೇಲಿರುವ 5 ತಿನಿಸುಗಳನ್ನು ತಂದು ನಿವೇದಿತಾಗೆ ತಿನ್ನಿಸಬೇಕು. ಚಂದನ್ ನಡೆದುಕೊಂಡು ಬರುವ ಹಾದಿ ಸುಲಭವಾಗಿರುವುದಿಲ್ಲ ಕೋಲು ದಾಟಬೇಕು, ಮೆಟ್ಟಿಲು ಹತ್ತಬೇಕು ಆನಂತರ ನಿವಿಗೆ ತಿನ್ನಿಸಿ ಕೆನ್ನೆಗೆ ಒಂದು ಮುತ್ತು (Kiss)ಕೊಡಬೇಕು.

ಟೇಬಲ್ ಮೇಲಿದ್ದ ಸಮೋಸಾ (Samosa), ಡೋನಟ್ (Donut) ಮತ್ತು ಜಿಲೇಬಿಯನ್ನು (Jalebi) ಚಂದನ್ ತಿನ್ನಿಸುತ್ತಾರೆ. ಜಿಲೇಬಿ ತಿನ್ನುವ ಅವಸರದಲ್ಲಿ ನಿವೇದಿತಾ ಚಂದನ್ ಕೈ ಬೆರಳು ಕಚ್ಚಿಬಿಡುತ್ತಾರೆ. ನೋವಿನಿಂದ ಚಂದನ್ ವೇದಿಕೆ ಮೇಲೆ ಜೋರಾಗಿ ಕೂಗಾಡುತ್ತಾರೆ. ಟಾಸ್ಕ್‌ನ ಅರ್ಧಕ್ಕೆ ನಿಲ್ಲಿಸಬಾರದು ಎಂದು ಮುಂದುವರೆಸುತ್ತಾರೆ. ಚಂದನ್ ಪಟ್ಟ ಕಷ್ಟ ನೋಡಿ ನಟಿ ತಾರಾ ಅನುರಾಧ (Tara Anuradha) ಮತ್ತು ಸೃಜನ್ ಲೋಕೇಶ್ (Srujan Lokesh) ಅಯ್ಯೋ ಎನ್ನುತ್ತಾರೆ. ಟಾಸ್ಕ್ ಮುಗಿದ ನಂತರ ಚಂದನ್ ನೋವನ್ನು ಹೇಳಿಕೊಳ್ಳುತ್ತಾರೆ. 'ನಿವಿಗೆ ಜಿಲೇಬಿ ಅಂದ್ರೆ ತುಂಬಾನೇ ಇಷ್ಟ ಅದಿಕ್ಕೆ ಅದನ್ನೆ ಮೊದಲು ತರಲು ಹೇಳಿದ್ದಾಳೆ. ಬೇಗ ಬೇಗ ತಿನ್ನಲು ಹೋಗಿ ಎಷ್ಟು ಜೋರಾಗಿ ಬೆರಳು ಕಚ್ಚಿದ್ದಾಳೆ. ತುಂಬಾ ನೋವಾಗಿತಮ್ಮ' ಎಂದು ಚಂದನ್ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?