
ಹಿಂದಿ ಬಿಗ್ ಬಾಸ್ (Hindi Bigg boss) ಸೀಸನ್ 15ರಲ್ಲಿ ದೊಡ್ಡ ಜಗಳ, ಕಿತ್ತಾಟ ಮತ್ತು ಮನಸ್ತಾಪ ಆಗಾಗ ಆಗಲು ಕಾರಣವಾಗುತ್ತಿದ್ದವರಲ್ಲಿ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ (Afsana Khan) ಪ್ರಮುಖ ಕಾರಣ ಎನ್ನಬಹುದು. ಚಾಕುವಿನಿಂದ ಕೈ ಚುಚ್ಚಿಕೊಳ್ಳುವೆ.. ಹಾಗೆ, ಹೀಗೆ ಎಂದು ಮನೆಯಲ್ಲಿದ್ದವರಿಗೆ ಹೆದರಿಸಿ ಅಟ ಗೆಲ್ಲಬಹುದು, ಎಂದುಕೊಳ್ಳುತ್ತಿದ್ದ ಅಫ್ಸಾನಾ ವೀಕ್ಷಕರ ಮನಸ್ಸು ಮುರಿದಿದ್ದರು. ಆದರೆ ಬಿಗ್ ಬಾಸ್ ಮನೆ ಪ್ರವೇಶಿಸಿ, ಹೊರ ಬರುತ್ತಿದ್ದಂತೆ ಮದುವೆ (Marriage) ಆಗುವೆ ಎಂದು ಹೇಳಿದ್ದು ದೊಡ್ಡ ಸುದ್ದಿ ಆಗಿತ್ತು.
ಹೌದು! ಅಫ್ಸಾನಾ ಖಾನ್ ಮತ್ತು ಸಾಜ್ (Saajz) ಈ ಹಿಂದೆಯೇ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಮದುವೆ ಆಗುವ ಪ್ಲ್ಯಾನಿಂಗ್ ಮಾಡಿ, ಬಿಬಿ ಮನೆ ಪ್ರವೇಶಿಸಿದ್ದರು. ಹೊರ ಬರುತ್ತಿದ್ದಂತೆ, ಮದುವೆ ದಿನಾಂಕ ಹತ್ತಿರ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ (Social Media) ಅನೌನ್ಸ್ ಮಾಡಿದ್ದು. ವಿಚಾರ ವೈರಲ್ ಆಗುತ್ತಿದ್ದಂತೆ, ಅಫ್ಸಾನಾ ಖಾನ್ ಮತ್ತು ಸಾಜ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಛತ್ತೀಸ್‌ಗಢದ (Chhattisgarh) ಅನುರಾಗ್ ರಂಜನ್ (ಅನು ಶರ್ಮ) (Anu Sharma) ಎಂಬುವವರು ಸಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಮೋಸ ಮಾಡಿ ವಿಚ್ಛೇದನ ನೀಡಿದ್ದಾರೆ, ಎಂದು ಆರೋಪಿಸಿದ್ದರು. ಮೊಹಾಲಿ ಕೋರ್ಟ್‌ನಲ್ಲಿ (Mohali Court) ಈ ಬಗ್ಗೆ ದೂರು ದಾಖಲಾಗಿದೆ ಎನ್ನಲಾಗಿದೆ.
'2014ರಲ್ಲಿ ನಾನು ಮತ್ತು ಸಾಜ್ ಪೋಷಕರ ಸಾಕ್ಷಿಯಲ್ಲಿಯೇ ಅದ್ಧೂರಿಯಾಗಿ ಮದುವೆಯಾದೆವು. ನಮಗೆ ಮಗಳಿದ್ದಾಳೆ. 2016ರ ಫೆಬ್ರವರಿಯಲ್ಲಿ ಮಗಳು (daughter) ಹುಟ್ಟಿದಳು. ಮದುವೆ ನಂತರ ನಾವು ಝಿರಕ್‌ಪುರದಲ್ಲಿ ವಾಸಿಸುತ್ತಿದ್ದೆವು. ವರದಕ್ಷಿಣೆ (Dowry) ಕೊಡು ಎಂದು ಒತ್ತಾಯ ಮಾಡಿದ್ದಕ್ಕೆ ತವರು ಮನೆ ರಾಯಪುರಕ್ಕೆ (Rayapura) ವಾಪಸ್ ಬರುವಂತಾಯ್ತು. ಕಳೆದ ವರ್ಷ ಸಾಜ್ ಮದುವೆ ವಿಚಾರ ತಿಳಿಯಿತ್ತು. ಎಷ್ಟೇ ಸಂಪರ್ಕಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. 2019ರಲ್ಲಿ ನನಗೆ ವಿಚ್ಛೇದನದ ನೋಟಿಸ್ (Divorce Notice) ತಲುಪಿಸಿದ್ದರು,' ಎಂದು ಅನು ಹೇಳಿಕೆ ನೀಡಿದ್ದಾರೆ.
ಅನು ನೀಡಿರುವ ಮತ್ತೊಂದು ಹೇಳಿಕೆಯಲ್ಲಿ ಬೇಕೆಂದು ದಾರಿ ತಪ್ಪಿಸಲು ಸಾಜ್ ತಾವಿರುವ ಮನೆಯ ತಪ್ಪು ವಿಳಾಸ ಬರೆದು ವಿಚ್ಛೇದನ ನೋಟಿಸ್ ನೀಡಿದ್ದಾರೆ. ಆಕಗೆ ನೋಟಿಸ್ ತಲುಪಿಲ್ಲ, ಎಂದು ಸುಳ್ಳು ಹೇಳಿ ಗೋಲ್‌ಮಾಲ್ ಮಾಡಿದ್ದಾರೆ ಎನ್ನಲಾಗಿದೆ. ಅನು ನೀಡಿರುವ ಮಾಹಿತಿ ಪ್ರಕಾರ ಓಡಿಶಾದ Bhushan Powe Plantನಲ್ಲಿ ಸಾಜ್ ಕೆಲಸ ಮಾಡುತ್ತಿದ್ದರು. ರಾಯಪುರದಲ್ಲಿ ಕೆಲಸಕ್ಕೆಂದು ಆಗಮಿಸಿ ಅನು ಮತ್ತು ಸಾಜ್ ಪರಿಚಯವಾಯ್ತು. ಆನಂತರ ಪೋಷಕರು ನಿರ್ಧರಿಸಿ ಮದುವೆ ಮಾಡಿದರಂತೆ.
ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿರುವ ಅಫ್ಸಾನಾ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡಿದ್ದರು. 'ಹಾಯ್ ಸ್ನೇಹಿತರೇ ನಾವಿಬ್ಬರೂ ಉಂಗುರ ಬದಲಾಯಿಸಿಕೊಂಡೆವು (Ring exchange). ನನ್ನ ಫೇವರೆಟ್ ಬೇಬಿ ಲೈಫ್‌ಲೈನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡೆ,' ಎಂದು ಬರೆದುಕೊಂಡಿದ್ದರು.
ಬಿಗ್ ಬಾಸ್ ಮನೆಯಲ್ಲಿದ್ದಾಗ ಅಫ್ಸಾನಾ ಮತ್ತು ವೈಲ್ಡ್ ಕಾರ್ಡ್ (Wildcard entry) ಸ್ಪರ್ಧಿ ರಾಜೀವ್ ನುಡುವೆ ದೊಡ್ಡ ದೊಡ್ಡ ಜಗಳ ಆಗುತ್ತಿತ್ತು. ರಾಜೀವ್ (Rajeev) ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ, ಎಂದು ಹೇಳಿಕೊಂಡು ಚಾಕುವಿನಿಂದ ಚುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದರು. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳೂ ಇದನ್ನು ತಪ್ಪಿಸಿ ಆಕೆಯನ್ನು ಸುಮ್ಮನಿರಿಸಿದ್ದರು. ಅಫ್ಸಾನಾ ಮಾನಸಿಕವಾಗಿ ಸರಿ ಇಲ್ಲ ಎಂದು ಹೇಳಿ ಅನೇಕರು ಆಕೆಯನ್ನು ದೂರು ಇಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.