ಪುನೀತ್ ಸರ್ ಅಲ್ಲ, ದಯವಿಟ್ಟು ಈ ವಿಡಿಯೋ ಹಂಚಿಕೊಳ್ಳಬೇಡಿ: ಸುಪ್ರೀತಾ ಸತ್ಯನಾರಾಯಣ್

By Suvarna News  |  First Published Nov 1, 2021, 12:41 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿರುವ ವೀಡಿಯೋದಲ್ಲಿರುವುದು ಪುನೀತ್ ಸರ್ ವಿಡಿಯೋ ಅಲ್ಲ, ದಯವಿಟ್ಟು ಅದನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿರುವ ಸೆಲೆಬ್ರಿಟಿಗಳು... 
 


ಸ್ಯಾಂಡಲ್‌ವುಡ್‌ (Sandalwood) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದ ಸುದ್ದಿ ಇಡೀ ಕರ್ನಾಟಕದ (Karnataka) ಜನತೆಗೆ ಶಾಕ್ ತಂದಿದೆ. ರಾಜನಿಲ್ಲದ ಅರಮನೆಯಂತಾಗಿದೆ ಕರುನಾಡು. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ (Social Media) ಪುನೀತ್ ರಾಜ್‌ಕುಮಾರ್ ಅವರ ಕೊನೇ ಕ್ಷಣದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಇದರಿಂದ ಅಭಿಮಾನಿಗಳಿಗೆ ಮತ್ತು ಸಿನಿ ಆಪ್ತರಿಗೆ ಬೇಸರವಾಗುತ್ತಿದೆ. 

ಹೌದು! ಮೇ (May) ತಿಂಗಳಲ್ಲಿ ಉತ್ತರ ಭಾರತದಲ್ಲಿ (North India) ಯುವಕನೊಬ್ಬ ಜಿಮ್ ಮಾಡುವಾಗ ಎದೆ ಹಿಡಿದುಕೊಂಡು ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿರುವುದು ಕರುನಾಡ ರಾಜಕುಮಾರ ಅಪ್ಪು ಎಂದು ಕೆಲವು ಟ್ರೋಲ್ ಪೇಜ್‌ಗಳು (Troll Page) ಹಂಚಿಕೊಳ್ಳುತ್ತಿವೆ. ಆದರೆ ಇದು ಅಪ್ಪು ಅಲ್ಲ. ದಯವಿಟ್ಟು ಶೇರ್ ಮಾಡಿಕೊಳ್ಳಬೇಡಿ ಎಂದು ಅನೇಕ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕವೇ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಪುನೀತ್‌ ರಾಜ್‌ಕುಮಾರ್ ದೃಷ್ಟಿಯಲ್ಲಿ ಸೌತ್ ಅಮೆರಿಕಾ; ಕೊನೆ Vlog ನೋಡಿ

Latest Videos

'ನಮ್ಮ ನಿಮ್ಮ ಪ್ರೀತಿಯ ಅಪ್ಪು ಸರ್ ಇಲ್ಲ ಈ ಕರ್ನಾಟಕಕ್ಕೆ. ಇಡೀ ಕನ್ನಡ ಚಿತ್ರರಂಗಕ್ಕೆ ಸೂತಕ ಅಂಟಿದೆ. ಅವರು ಇಲ್ಲ ಅನ್ನುವ ನೋವು ಒಂದಾದರೆ, ಅವರ ಕೊನೆಯ ಫೋಟೋ (Photo) ಅಂದ್ರೆ ಅವರು ಆಸ್ಪತ್ರೆಯಲ್ಲಿ ಮಲಗಿರುವುದು, ಓಡಾಡುತ್ತಿರುವುದು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿವೆ. ದಯವಿಟ್ಟು ಯಾರೂ ಇದನ್ನು ಶೇರ್ ಮಾಡಬೇಡಿ, ಯಾರಿಗೂ ಅಪ್ಪು ಸರ್‌ ಅವರನ್ನು ಈ ರೀತಿ ನೋಡುವುದಕ್ಕೆ ಇಷ್ಟ ಇಲ್ಲ. ಅದನ್ನು ತಡೆದುಕೊಳ್ಳುವುದಕ್ಕೆ ನಮಗೂ ಆಗುವುದಿಲ್ಲ. ಅಪ್ಪು ಸರ್ ಸ್ಮೈಲ್ (Smile) ಹೇಗಿತ್ತು? ಆದರೆ ಅವರ ಎದುರಿಗೆ ಇರುವ 10 ಜನರಿಗೂ ಅವರನ್ನು ನೋಡಿ ನಗಬೇಕು ಅನಿಸುತ್ತಿತ್ತು. ಮಗು ಅಂತ ಮನಸ್ಸು ಅವರದ್ದು. ಅವರ ಮುಗ್ಧತೆ (Innocent) ಸ್ಮೈಲ್ ಎಲ್ಲರ ಮನಸ್ಸಿನಲ್ಲೂ ಉಳಿದುಕೊಂಡಿದೆ,' ಎಂದು ಸುಪ್ರೀತಾ ಮಾತನಾಡಿದ್ದಾರೆ. 

 

'ಒಂದು ಫೇಕ್ ವಿಡಿಯೋ (Fake Video) ಶೇರ್ ಆಗುತ್ತಿದೆ ಅದರಲ್ಲಿ ಒಬ್ಬ ವ್ಯಕ್ತಿ ಮೆಟ್ಳು ಮೇಲಿನಿಂದ ಕೆಳಗಿಳಿಯುವಾಗ ಎದೆ ಹಿಡಿದುಕೊಂಡು, ಕುಸಿದು ಬೀಳುತ್ತಾರೆ. ಆ ವಿಡಿಯೋದಲ್ಲಿರುವುದು ಅಪ್ಪು ಸರ್ ಅನ್ನೋ ವದಂತಿ ಹಬ್ಬಿದೆ. ಅದನ್ನ ಇಲ್ಲಿಗೆ ನಿಲ್ಲಿಸಿ. ನೀವು ಈ ರೀತಿ ಮಾಡುವುದರಿಂದ ಅಪ್ಪು ಸರ್ ಫ್ಯಾಮಿಲಿ (Family) ಮತ್ತ ಅವರ ಅಭಿಮಾನಿಗಳಿಗೆ (Fans) ಬೇಸರ ಆಗುತ್ತೆ. ವಿಡಿಯೋದಲ್ಲಿರುವ ವ್ಯಕ್ತಿ ಅವರ ಕುಟುಂಬಕ್ಕೆ ಬೇಸರ ಆಗುತ್ತೆ. ದಯವಿಟ್ಟು ಇದೆಲ್ಲಾ ಇಲ್ಲಿಗೆ ನಿಲ್ಲಿಸಿ' ಎಂದು ಸುಪ್ರೀತಾ ಮನವಿ ಮಾಡಿಕೊಂಡಿದ್ದಾರೆ. 

ಮುಂದಿನ ರಾಯರ ಆರಾಧನೆಗೆ ಬಂದು ಭಕ್ತಿ ಗೀತೆ ಹಾಡುತ್ತೇನೆ ಎಂದಿದ್ದರು ಪುನೀತ್!

'ನನ್ನ ಹಾಗೂ ನನ್ನಂತ ಕೋಟ್ಯಾಂತರ ಅಪ್ಪು ಸರ್ ಅವರ ಅಭಿಮಾನಿಗಳ ರಿಕ್ಷೆಸ್ಟ್‌. ವಿ ಮಿಸ್‌ ಯು ಅಪ್ಪು ಸರ್. ಮತ್ತೆ ಹುಟ್ಟಿ ಬನ್ನಿ,' ಎಂದು ಮಾತು ಮುಗಿಸಿದ್ದಾರೆ.

ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ವಲ್ಪ ಬಳಲಿಕೆಗೆ ಎಂದು ಅಕ್ಟೋಬರ್ 29ರಂದು ಆಸ್ಪತ್ರೆಗೆ ತೆರಳಿದ್ದರು. ಇಸಿಜಿ ಮಾಡಿದ ವೈದ್ಯರು, ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು. ಅವರು ವಿಕ್ರಮ್ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕಾರ್ಡಿಯಾಕ್ ಅರೆಸ್ಟ್‌ನಿಂದ ಕೊನೆಯುಸಿರೆಳೆದಿದ್ದರು. ಅದ್ಭುತ ನಟ, ಗಾಯಕ ಹೆಚ್ಚಾಗಿ ಹೃದಯವಂತನೊಬ್ಬನನ್ನು ಈ ರೀತಿ ಕಳೆದುಕೊಂಡಿದ್ದರಿಂದ ಕರುನಾಡಿನ್ನೂ ಶಾಕ್‌ನಲ್ಲಿಯೇ ಇದೆ. ಎಲ್ಲರ ಹಾರೈಕೆ, ಪ್ರಾರ್ಥನೆಯೂ ಅಪ್ಪ ಮತ್ತೆ ಹುಟ್ಟಿ ಬನ್ನಿ ಎಂಬುದಾಗಿದೆ. 

ನೇತ್ರದಾನದ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಜಯಪುರ ಅಭಿಮಾನಿಗಳು

ಸರಕಾರದ ಮುನ್ನೆಚ್ಚರಿಕೆ ಕ್ರಮದಿಂದ ಪುನೀತ್ ರಾಜ್‌ಕುಮಾರ್ ಅಂತ್ಯ ಸಂಸ್ಕಾರ ಶಾಂತಿಯುತವಾಗಿ ನೆರವೇರಿಸಿದೆ. ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿಯ ಪಕ್ಕದಲ್ಲಿಯೇ ಈ ಪ್ರತಿಭಾನ್ವಿತ ಕಲಾವಿದನಿಗೂ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

 

click me!