
ಬಿಗ್ ಬಾಸ್ ರಿಯಾಲಿಟಿ ಶೋ (Bigg boss) ಮೂಲಕ ಮನೆ ಮಾತಾದ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಇದೀಗ ಪೋಷಕರಿಗಾಗಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಬಾಲ್ಯದಿಂದಲೂ ಭರತನಾಟ್ಯ ನೃತಗಾರ್ತಿ ಆಗಿರುವ ಚಂದನಾ ಈಗ ಮಾಸ್ಟರ್ಸ್ ಇನ್ ಪರ್ಫಾರ್ಮಿಂಗ್ ಆರ್ಟ್ಸ್ (ಪ್ರದರ್ಶನ ಕಲೆಯಲ್ಲಿ ಪದವಿ) ಮಾಡಲು ಮುಂದಾಗಿದ್ದಾರೆ. ಮೊದಲ ದಿನ ಪ್ರಾಕ್ಟಿಕಲ್ ಕ್ಲಾಸ್ ಹೇಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವಾಗ ಚಂದನಾ ಒಳ್ಳೆ ಗಾಯಕಿ (Singer) ಹಾಗೂ ನೃತ್ಯ ಕಲಾವಿದೆ ಎಂದು ಸಾಬೀತು ಮಾಡಿದ್ದರು. ವಾಹಿನಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಹಾಗೂ ಅವಾರ್ಡ್ ಶೋಗಳಲ್ಲಿ ಹಾಡುವವರು ಹಾಗೂ ನೃತ್ಯ ಮಾಡುವವರು ಇಲ್ಲದಿದ್ದರೇ, ತಾವೇ ಪ್ರದರ್ಶನ ನೀಡಿದ್ದೂ ಇದೆ. ಹೀಗಾಗಿ ಚಂದನಾ ಅದ್ಭುತ ನೃತ್ಯಗಾರ್ತಿ .ಇದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರೆ ಜೀವನ ಸೂಪರ್ ಎಂದು ಅನೇಕರು ಸಲಹೆ ಕೂಡ ನೀಡಿದ್ದಾರೆ.
'ಎಲ್ಲರಿಗೂ ನಮಸ್ಕಾರ, ಇಂದು ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ. ಭರತನಾಟ್ಯದಲ್ಲಿ ಮುಂದುವರೆಯಬೇಕು ಎಂದು ಅಪ್ಪ ಅಮ್ಮನ ಕನಸು, ನನ್ನ ಕನಸು ಕೂಡ. ಅದರಂತೆಯೇ ಇವತ್ತು MPA (Masters in Performing Arts) ಮೊದಲನೇ practical ಕ್ಲಾಸ್ ಅಟೆಂಡ್ ಮಾಡಿದ ಖುಷಿ ನನ್ನದು. ಎಂದಿನಂತೆಯೇ, ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ,' ಎಂದು ಬರೆದುಕೊಂಡಿದ್ದಾರೆ. ಚಂದನಾ ಅವರ ಕಿರುತೆರೆ ಸ್ನೇಹಿತರು ಕಾಮೆಂಟ್ಸ್ ಮಾಡುವ ಮೂಲಕ ನಟಿಗೆ ಶುಭ ಹಾರೈಸಿದ್ದಾರೆ.
ಹೂ ಮಳೆ (Hoo male) ಧಾರಾವಾಹಿಯಲ್ಲಿ ಲಹರಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಚಂದನಾ ಯಾವ ಪ್ರಾಜೆಕ್ಟ್‌ಗೂ ಸಹಿ ಮಾಡಿಲ್ಲ. ಸದ್ಯ ಡ್ಯಾನ್ಸ್ ಅಭ್ಯಾಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅನುಬಂಧ ಅವಾರ್ಡ್ (Anubhanda awards) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು, ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಜೊತೆ ಹೆಜ್ಜೆ ಹಾಕಿದ್ದರು. ನೀಲಿ ಬಣ್ಣದ ಡಿಸೈನರ್ ಉಡುಪು ಧರಿಸಿ ಕಂಗೊಳ್ಳಿಸಿದ್ದರು.
ಬಿಗ್ ಬಾಸ್ ರಿಯಾಲಿಟಿ ಶೋಯಿಂದ ಹೊರ ಬರುತ್ತಿದ್ದಂತೆ, ಹಾಡು ಕರ್ನಾಟಕ (Haadu Karnataka) ಸಂಗೀತ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ತಮ್ಮ ಕ್ಯಾಲಿಬರ್‌ನ ವೀಕ್ಷಕರ ಎದುರು ಪ್ರದರ್ಶಿಸಿದ್ದಾರೆ. ಇದೇ ವರ್ಷ ನಡೆದ ಬಿಗ್ ಬಾಸ್ ಮಿನಿ ಸೀಸನ್ ಮೂಲಕ ಒಂದು ವಾರ ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ಪ್ರವೇಶಿಸಿದ್ದರು. ಚಂದನಾ ಆಪ್ತ ಸ್ನೇಹಿತೆ ಗಿಣಿ ರಾಮ (Ginirama) ಖ್ಯಾತಿಯ ನಯನಾ ಜೊತೆ ಸೇರಿಕೊಂಡು, ಇಡೀ ಬಿಗ್ ಬಾಸ್ ಮನೆಯನ್ನು ರೂಲ್ ಮಾಡಿದ್ದಾರೆ. ಅಲ್ಲದೇ ಅಲ್ಲಿನ ಇನ್ನಿತರೆ ಕಲಾವಿದರಿಗೂ ಹಾಡಿ ಕುಣಿದು ಮನೋರಂಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.