ಒಂದು ಕಾಲಕ್ಕೆ ಕನ್ನಡ ಧಾರಾವಾಹಿಗಳಲ್ಲಿ ಸೀರೆಯುಟ್ಟು ಗೃಹಿಣಿ, ತಾಯಿ ಪಾತ್ರ ಮಾಡ್ತಿದ್ದ ನಟಿ ಇವರೇನಾ?

Published : Mar 09, 2025, 04:00 PM ISTUpdated : Mar 09, 2025, 04:13 PM IST
ಒಂದು ಕಾಲಕ್ಕೆ ಕನ್ನಡ ಧಾರಾವಾಹಿಗಳಲ್ಲಿ ಸೀರೆಯುಟ್ಟು ಗೃಹಿಣಿ, ತಾಯಿ ಪಾತ್ರ ಮಾಡ್ತಿದ್ದ ನಟಿ ಇವರೇನಾ?

ಸಾರಾಂಶ

Kannada Actress Jyothi Rai: ಕನ್ನಡ ನಟಿ ಜ್ಯೋತಿ ರೈ ಅವರು ಈಗ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಒಂದು ಕಾಲಕ್ಕೆ ತಾಯಿ ಪಾತ್ರ ಮಾಡುತ್ತಿದ್ದ ಜ್ಯೋತಿ ರೈ ಈಗ ಮಾದಕ ಫೋಟೋಗಳ ಮೂಲಕ ಪಡ್ಡೆ ಹುಡುಗರ ಎದೆಗೆ ಬೆಂಕಿ ಹಚ್ಚುತ್ತಿದ್ದಾರೆ. 

ಕೆಲ ವರ್ಷಗಳಿಂದ ಕನ್ನಡ ಧಾರಾವಾಹಿಗಳಲ್ಲಿ ಹೀರೋ-ಹೀರೋಯಿನ್ ಪಾತ್ರಧಾರಿಗಳ ತಾಯಿಯಾಗಿ ಕಾಣಿಸಿಕೊಳ್ತಿದ್ದ ಜ್ಯೋತಿ ರೈ ಈಗ ನಾಯಕಿಯರಿಗಿಂತ ಜಾಸ್ತಿ ಮಾದಕತೆ ಪ್ರದರ್ಶಿಸುತ್ತಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇವರ ಫೋಟೋಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಸಿಗುವ ಕಾಮೆಂಟ್‌ಗಳ ಬಗ್ಗೆ ಹೇಳಬೇಕೆ? ಅಬ್ಬಬ್ಬಾ…! ತೆಲುಗು ಭಾಷೆಯಲ್ಲಿ ಸಿನಿಮಾ ಮಾಡ್ತಿರುವ ಈ ನಟಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್.‌ 

ಪಡ್ಡೆ ಹುಡುಗರ ನಿದ್ದೆ ಕದ್ದ ಜ್ಯೋತಿ ರೈ!
ಜಿಮ್‌ಗೆ ಹೋಗಿ ಸಣ್ಣ ಆಗಿರುವ ಜ್ಯೋತಿ ರೈ ಅವರು ಫಿಟ್‌ನೆಸ್‌ ವಿಚಾರದಲ್ಲಿ ಎಲ್ಲರಿಗೂ ಮಾದರಿ. ಜ್ಯೋತಿ ರೈ ಅವರಿಗೆ 13 ವರ್ಷ ವಯಸ್ಸಿನ ಮಗ ಇದ್ದಾನೆ ಅಂದರೆ ಅನೇಕರು ನಂಬೋದಿಲ್ಲ. ಇನ್ನೊಂದು ಕಡೆ ಸಣ್ಣ ಆದ್ಮೇಲೆ ಜ್ಯೋತಿ ರೈ ಅವರು ವೆಸ್ಟರ್ನ್‌, ಟ್ರೆಡಿಷನಲ್‌ ಎಂದು ಅವರ ಕಾಸ್ಟ್ಯೂಮ್‌ ಡ್ರೆಸ್ಸಿಂಗ್‌ ಸೆನ್ಸ್‌ ಬದಲಾಯಿಸಿಕೊಂಡಿದ್ದಾರೆ. ಬೋಲ್ಡ್‌ ಫೋಟೋಶೂಟ್‌ಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಅವರು ಯಾವಾಗ ತೆರೆ ಮೇಲೆ ನಟಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಗರ್ಭಿಣಿ ಮಾಡಿ ದೂರಾದ ಅಮ್ಝಾದ್‌ ಖಾನ್;‌ ತಮಿಳು ವೇದಿಕೆಯಲ್ಲಿ ಕಣ್ಣೀರು ಹಾಕಿದ ʼಆಕಾಶದೀಪʼ ನಟಿ ದಿವ್ಯಾ ಶ್ರೀಧರ್

ಏಕಾಏಕಿ ಮಾಡರ್ನ್‌ ಡ್ರೆಸ್‌ ಹಾಕೋದು ಯಾಕೆ?
ಇಷ್ಟು ವರ್ಷಗಳ ಸೀರೆ, ಚೂಡಿದಾರ ಹಾಕಿ ತಾಯಿ ಪಾತ್ರ ಮಾಡುತ್ತಿದ್ದ ಜ್ಯೋತಿ ರೈ ಏಕಾಏಕಿ ಗ್ಲಾಮರ್‌ ಅವತಾರ ತಾಳಿದ್ದು ಅನೇಕರಿಗೆ ಅಚ್ಚರಿ ಉಂಟುಮಾಡಿತ್ತು. ಈ ಬಗ್ಗೆ ಅವರಿಗೆ ಪ್ರಶ್ನೆ ಎದುರಾಗಿತ್ತು. ಸುದ್ದಿಗೋಷ್ಠಿಯೊಂದರಲ್ಲಿ ಮಾಡರ್ನ್‌ ಡ್ರೆಸ್‌ಗಳ ಬಗ್ಗೆ ಮಾತನಾಡಿದ್ದ ಜ್ಯೋತಿ ರೈ ಅವರು “ನನಗೆ ಚಾಲೆಂಜ್‌ ಅಂದರೆ ತುಂಬ ಇಷ್ಟ. ಕಲಾವಿದೆಯಾಗಿ ನಾನು ಈ ರೀತಿ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಆ ಪ್ರಯೋಗ ಮಾಡುತ್ತಿದ್ದೇನೆ. ಇದು ನನ್ನ ಬದುಕಿನ ಹೊಸ ಅಧ್ಯಾಯ. ಈ ಚಾಲೆಂಜ್‌ ಎದುರಿಸಲು ಉತ್ಸುಕಳಾಗಿದ್ದೇನೆ” ಎಂದು ಹೇಳಿದ್ದರು. 

ಸಿನಿಮಾಗಳಲ್ಲಿ ಜ್ಯೋತಿ ರೈ ಬ್ಯುಸಿ
ಸೀರಿಯಲ್‌ಗಳಿಂದ ದೂರ ಇರುವ ಜ್ಯೋತಿ ರೈ ವೆಬ್‌ಸಿರೀಸ್‌ಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇನ್ನುಮುಂದಿನ ದಿನಗಳಲ್ಲಿ ಸೀರಿಯಲ್‌ ಬಿಟ್ಟು, ಸಿನಿಮಾ ಕಡೆಗೆ ಗಮನ ಕೊಡೋದಾಗಿ ಅವರು ಹೇಳಿದ್ದಾರೆ. ‘Kill R’ ಹಾಗೂ ʼಮಾಸ್ಟರ್‌ ಪೀಸ್ʼ‌ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ ಎಂದು ಕಾದು ನೋಡಬೇಕಿದೆ. 

ಜ್ಯೋತಿ ರೈ, ಛಾಯಾ ಸಿಂಗ್....ಪರಭಾಷಾ ನಟರ ವರಿಸಿದ ಕನ್ನಡ ಕಿರುತೆರೆ ನಟಿಯರಿವರು!

ಎರಡನೇ ಮದುವೆ
ಜ್ಯೋತಿ ರೈ ಅವರು ನಿರ್ದೇಶಕ ಸುಕುಮಾರ್‌ ಪೂರ್ವಜ ಅವರನ್ನು ಮದುವೆಯಾಗಿದ್ದಾರೆ. ಈ ಹಿಂದೆ ಮದುವೆ ಆಗಿದ್ದ ಜ್ಯೋತಿ ಅವರಿಗೆ ಮಗ ಕೂಡ ಇದ್ದಾನೆ. ಮನಸ್ತಾಪಗಳಿಂದ ಇವರು ಮೊದಲ ಮದುವೆಯಿಂದ ಹೊರಗಡೆ ಬಂದಿದ್ದರು. ಸುಕುಮಾರ್‌ ಅವರೇ ಸಿನಿಮಾ ನಿರ್ದೇಶನ ಮಾಡಿ, ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಈ ಚಿತ್ರಗಳಲ್ಲಿ ಜ್ಯೋತಿ ನಟಿಸುತ್ತಿದ್ದಾರೆ.

ಖಾಸಗಿ ವಿಡಿಯೋ ಲೀಕ್‌
ಜ್ಯೋತಿ ರೈ ಅವರ ಖಾಸಗಿ ವಿಡಿಯೋ ಎಂದು ಹೇಳಲಾದ ವಿಡಿಯೋವೊಂದು ಭಾರೀ ವೈರಲ್‌ ಆಗಿತ್ತು. ಆಗ ಜ್ಯೋತಿ ರೈ ಅವರು “ಇದು ನನ್ನ ಖಾಸಗಿ ವಿಡಿಯೋ ಅಲ್ಲ, ಫೇಕ್‌” ಎಂದು ಹೇಳಿಕೆ ನೀಡಿ ಸೈಬರ್‌ ಕ್ರೈಂ ಮೆಟ್ಟಿಲೇರಿದ್ದರು.

'ನಮ್ಮೂರ ಜಾತ್ರೆಗೆ ಬರೋ ಬೆಂಕಿ ಲತಾ..' ನಿವೇದಿತಾ ಗೌಡ ಬಾಡಿ ಶೋಗೆ ಬ್ಯಾಂಡ್‌ ಬಜಾಯಿಸಿದ ನೆಟ್ಟಿಗರು!

ಹೈದರಾಬಾದ್‌ನಲ್ಲಿ ಸೆಟಲ್‌ ಆಗಿರುವ ಜ್ಯೋತಿ! 

ಸದ್ಯ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿರುವ ಜ್ಯೋತಿ ರೈ ಅವರು ಮತ್ತೆ ಕನ್ನಡದತ್ತ ಯಾವಾಗ ಮುಖ ಮಾಡ್ತಾರೆ? ಯಾವಾಗ ನಟಿಸ್ತಾರೆ ಎಂದು ಕಾದು ನೋಡಬೇಕಿದೆ. ಜ್ಯೋತಿ ರೈ ಅವರ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್