'ನನ್ನಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು, ಪ್ರೀತಿಸೋರಿಗೋಸ್ಕರ ಈ ರೀಲ್ಸ್‌ ಮಾಡಿದೆʼ-ತನಿಷಾ ಕುಪ್ಪಂಡ

Published : Mar 09, 2025, 01:38 PM ISTUpdated : Mar 09, 2025, 01:54 PM IST
'ನನ್ನಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು, ಪ್ರೀತಿಸೋರಿಗೋಸ್ಕರ ಈ ರೀಲ್ಸ್‌ ಮಾಡಿದೆʼ-ತನಿಷಾ ಕುಪ್ಪಂಡ

ಸಾರಾಂಶ

Bigg Boss Tanisha Kuppanda Love: ʼಬಿಗ್‌ ಬಾಸ್‌ ಕನ್ನಡ ಸೀಸನ್‌ 10ʼ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ ಅವರು ಪ್ರೀತಿಸುವವರಿಗೋಸ್ಕರ ರೀಲ್ಸ್‌ ಮಾಡಿದ್ದಾರಂತೆ. ಆ ರೀಲ್ಸ್‌ನಲ್ಲಿ ʼನಿಂಗೆ ನನ್ನಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು” ಎಂದು ಹೇಳಿದ್ದಾರೆ. ಹಾಗಾದರೆ ಅಸಲಿ ವಿಷಯ ಏನು? 

“ನಿನಗೆ ನನ್ನಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು” ಎಂದು ತನಿಷಾ ಕುಪ್ಪಂಡ ಅವರೇ ಹೇಳಿದ್ದಾರೆ. ʼಮಹಿಳಾ ದಿನʼದ ಪ್ರಯುಕ್ತ ಅವರು ವಿಶೇಷ ರೀಲ್ಸ್‌ ಮಾಡಿದ್ದು, ಅದರಲ್ಲಿ ಈ ಮಾತು ಹೇಳಿದ್ದಾರೆ. ಇದಷ್ಟೇ ಅಲ್ಲ, ಅನುಮಾನ ಬರುವಂತೆ ಕ್ಯಾಪ್ಶನ್‌ ಕೂಡ ನೀಡಿದ್ದಾರೆ.

ಬ್ರೇಕಪ್‌ ಆಯ್ತು! 
ಈ ಹಿಂದೆ ತನಿಷಾ ಕುಪ್ಪಂಡ ಅವರು ಪ್ರೀತಿ ಮಾಡಿ, ಬ್ರೇಕಪ್‌ ಆಗಿರೋ ಕಥೆ ಹೇಳಿದ್ದರು. ಓರ್ವ ವ್ಯಕ್ತಿಯನ್ನು ತುಂಬ ಪ್ರೀತಿಸಿ, ಮದುವೆಯಾಗಬೇಕು, ಮಕ್ಕಳು ಮಾಡಿಕೊಳ್ಳಬೇಕು ಎಂದು ತನಿಷಾ ಕುಪ್ಪಂಡ ಕನಸು ಕಂಡಿದ್ದರು. ಆದರೆ ಅದು ನಿಜ ಆಗಲಿಲ್ಲ. ಪ್ರೀತಿಸಿದ್ದ ವ್ಯಕ್ತಿ ತುಂಬ ಪೊಸೆಸ್ಸಿವ್‌ ಆಗಿದ್ದಕ್ಕೆ, ನಟಿಸಲು ಅವಕಾಶ ಕೊಡದಿದ್ದಕ್ಕೆ ಅವರು ಬ್ರೇಕಪ್‌ ಮಾಡಿಕೊಂಡರು.

ತನಿಷಾಗೆ ಫ್ಯಾನ್ಸ್ ಏನೆಲ್ಲಾ ಗಿಫ್ಟ್ ಕೊಡ್ತಾರೆ..? ಗೊತ್ತಾದ್ರೆ ನೀವೂ ನಟಿ ಆಗ್ಬಿಡ್ತಿರಾ.. Yes or No..?!

ವರ್ತೂರು ಸಂತೋಷ್‌ ಜೊತೆ ಲವ್‌ ಇಲ್ಲ! 
ಇನ್ನು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 10ʼ ಶೋನಲ್ಲಿ ತನಿಷಾ ಕುಪ್ಪಂಡ ಅವರು ಭಾಗವಹಿಸಿದ್ದರು. ಆ ವೇಳೆ ವರ್ತೂರು ಸಂತೋಷ್‌ ಜೊತೆ ಸ್ನೇಹ ಹುಟ್ಟಿತು. ಅನೇಕರು ಈ ಜೋಡಿ ಪ್ರೀತಿ ಮಾಡ್ತಿದೆ ಎಂದು ಭಾವಿಸಿದರು. ಆಗ ವರ್ತೂರು, ತನಿಷಾ ಇಬ್ಬರೂ ಕೂಡ “ನಾವು ಸ್ನೇಹಿತರು, ಇದನ್ನು ಬಿಟ್ಟರೆ ಬೇರೆ ಏನೂ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. 

ಅರೇ.. 'ಕೋಣ'ಕ್ಕೆ ಕೈ ಹಾಕಿದ್ದೇಕೆ ನಟಿ ತನಿಷಾ..? ಬೆಂಕಿ ಅಂದ್ರೆ ಸುಮ್ನೆ ಅಲ್ಲಾರೀ ಅಂದ್ರೂ ಇದು...

ಈಗ ಮತ್ತೆ ಪ್ರೀತಿಯಲ್ಲಿ ಬಿದ್ರಾ? 
ತನಿಷಾ ಕುಪ್ಪಂಡ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ? ಇಲ್ಲವಾ ಗೊತ್ತಿಲ್ಲ. ಆದರೆ ʼನನ್ನಂತ ಹುಡುಗಿ ಸಿಗೋಕೆ ನೀನು ಪುಣ್ಯ ಮಾಡಿರಬೇಕು. ಕೋಪಿಸಿದರೂ ನಿಂದಿಸಿದರೂ ನಾನು ನಿನ್ನ ಪ್ರೀತಿಸುವೆʼ ಎಂಬ ಹಾಡುಗಳ ಸಾಲಿನ ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ “ಹೀಗೆ, ನನ್ನನ್ನ ಪ್ರೀತಿ ಮಾಡೋರು ಕೇಳಿದ್ರು ಅಂತ ನಾನು ತುಂಬಾ ಪ್ರೀತಿಯಿಂದ ಈ ರೀಲ್ ಮಾಡಿದೀನಿ, ಏನಂತೀರಾ? ಮಹಿಳಾ ದಿನದ ಶುಭಾಶಯಗಳು” ಎಂದು ತನಿಷಾ ಕುಪ್ಪಂಡ ಅವರು ಬರಹ ಕೂಡ ಬರೆದುಕೊಂಡಿದ್ದಾರೆ. ತನಿಷಾ ಕುಪ್ಪಂಡ ಯಾರಿಗೆ ಈ ಮಾತು ಹೇಳಿದ್ರು? ಯಾರು ಅವರು? ಹುಡುಗಿಯೋ? ಹುಡುಗನೋ? ಅಥವಾ ಮತ್ತೆ ಪ್ರೀತಿಯಲ್ಲಿ ಬಿದ್ದಿರುವ ಮುನ್ಸೂಚನೆ ಕೊಡ್ತಿದ್ದಾರಾ? ಎಂಬ ಅನುಮಾನ ಶುರುವಾಗಿದೆ.

ಮೇಕಪ್​ ಇಲ್ಲದ ಮುಖ ತೋರಿಸಲು ನಾಚಿಗೊಂಡ ಬಿಗ್​ಬಾಸ್​ ನಮ್ರತಾ! ಬಣ್ಣ ರಹಿತ ತನಿಷಾರನ್ನೂ ನೋಡಿಬಿಡಿ

ಸಿಕ್ಕಾಪಟ್ಟೆ ಬ್ಯುಸಿ ಇರುವ ತನಿಷಾ! 
ʼಬಿಗ್‌ ಬಾಸ್ʼ‌ ಮನೆಯಿಂದ ಹೊರಗಡೆ ಬಂದ್ಮೇಲೆ ಚಿತ್ರರಂಗದಲ್ಲಿ ಫುಲ್‌ ಆಕ್ಟಿವ್‌ ಆಗಿರುವ ತನಿಷಾ ಕುಪ್ಪಂಡ ಅವರು ಜ್ಯುವೆಲರಿ ಶಾಪ್‌ ಆರಂಭಿಸಿದ್ದಾರೆ. ಇನ್ನು ʼಕೋಣʼ ಎನ್ನುವ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಈ ಚಿತ್ರದಲ್ಲಿ ಕೋಮಲ್‌ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ತನಿಷಾ ಪಾತ್ರ ತುಂಬ ಡಿಫರೆಂಟ್‌ ಆಗಿದೆಯಂತೆ. ಸ್ಟಾರ್‌ ಸುವರ್ಣ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಕೂಡ ತನಿಷಾ ಭಾಗವಹಿಸಿದ್ದರು. ಸಭೆ-ಸಮಾರಂಭಗಳು, ಚಿತ್ರರಂಗದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು, ಆಪ್ತರ ಮನೆಯ ಕಾರ್ಯಕ್ರಮಗಳಲ್ಲಿ ಕೂಡ ಅವರು ಭಾಗವಹಿಸಿದ್ದರು. ಒಟ್ಟಿನಲ್ಲಿ ತನಿಷಾ ಕುಪ್ಪಂಡ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!