ಸ್ಮಾರ್ಟ್‌ ಸಿಟಿ ಮಾಡ್ತೀರಾ ಇದು ನಿಮ್ಮ ಸಿಟಿ ಪಡೆದ ಬಲಿ: Rishi Kumar Swamiji

By Suvarna NewsFirst Published Jan 15, 2022, 1:28 PM IST
Highlights

ಸಮನ್ವಿ ಕಳೆದುಕೊಂಡ ದುಃಖದಲ್ಲಿರುವ ಕುಟುಂಬಸ್ಥರಿಗೆ ಪರ ನಿಂತ ರಿಷಿ ಕುಮಾರ ಸ್ವಾಮೀಜಿ. ನಾರಾಯಣ ಬಲಿ ಮಾಡಲು ಸಿದ್ಧತೆ.... 

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನಮ್ಮ ಸೂಪರ್ ಸ್ಟಾರ್' (Nanamma Super Star) ಸ್ಪರ್ಧಿಗಳು ವೀಕ್ಷಕರ ಮನಸ್ಸಿಗೆ ತುಂಬಾನೇ ಹತ್ತಿರವಾಗಿದ್ದರು. ತಮ್ಮ ಮಕ್ಕಳು ವೇದಿಕೆ ಮೇಲಿದ್ದಾರೆ ಇಷ್ಟೊಂದು ಟ್ಯಾಲೆಂಟ್ (Talent) ಇದೆ ಹಾಗೆ ಹೀಗೆ ಎಂದು ಕೊಂಡಾಡುತ್ತಾರೆ. ಆ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಅಮೃತಾ ನಾಯ್ಡು (Amrutha Naidu) ಮತ್ತು ಪುತಿ ಸಮನ್ವಿ (Samanvi) ಎಲ್ಲರಿಗೂ ದೊಡ್ಡ ಶಾಕ್ ಕೊಟ್ಟಿದ್ದಾರೆ. ಎರಡು ಮೂರು ದಿನಗಳು ಕಳೆದರೂ ಸಮನ್ವಿ ನೆನಪಿನಿಂದ ಯಾರೂ ಹೊರ ಬರಲು ಆಗುತ್ತಿಲ್ಲ. 

ಅಮೃತಾ ಮತ್ತು ಸಮನ್ವಿ ಕನಕಪುರ ರಸ್ತೆ (Kanakapura Road) ಕೋಣನಕುಂಟೆ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವಾಗ  ಟಿಪ್ಪರ್ ಗಾಡಿ ಹಿಂದಿನಿಂದ ಹೊಡೆದು ಸ್ಥಳದಲ್ಲೇ ಸಮನ್ವಿ ಮೃತಪಟ್ಟರು. ಅಮೃತಾ ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅಮೃತಾ ಅವರ ಕುಟುಂಬದ ಜೊತೆ ರಿಷಿ ಕುಮಾರ ಸ್ವಾಮೀಜಿ (Rishi Kumar Swamiji) ನಿಂತ ಅಂತಿಮ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ. 

'ಅದಿನ್ನೂ ಎಳೆ ಮಗು. ಯಾವ ಸೂತಕಗಳನ್ನು ಕಂಡಿಲ್ಲ. ಆ ಕಾರಣವಾಗಿ ನಾರಾಯಣ ಬಲಿ (Narayana Bali) ಎಲ್ಲವನ್ನು ಮಾಡಬೇಕು. ಅದನ್ನು ಶ್ರೀರಂಪಟ್ಟಣದಲ್ಲಿ (Sri Rangapattana) ಮಾಡುತ್ತೇವೆ. ನಾನು ಶೋಭಾ ನಾಯ್ಡು (Shoba Naidu), ಶೀಲಾ ನಾಯ್ಡು(Sheela Naidu) ಅವರ ಸಾಕು ಮಗನಿದ್ದಂತೆ. ಕೊರೋನಾ (Covid19) ಸಂದರ್ಭದಲ್ಲಿ ನಾವು ಶೋಭಾ ನಾಯ್ಡು ಅವರನ್ನು ಕಳೆದುಕೊಂಡು ಬಿಟ್ಟೆವು. ಗುರುರಾಜ ನಾಯ್ಡು(Gururaj Naidu) ಮನೆತನವೇ ಕಲಾವಿದರ ಮನೆತನ ಅವರ ಕುಟುಂಬದಲ್ಲಿ ಈ ಪುಟ್ಟ ಮಗು ಈಗ ತಾನೇ ಅರಳುತ್ತಿತ್ತು. ಸಮನ್ವಿ ದೊಡ್ಡ ಕಲಾವಿದೆಯಾಗುತ್ತಿದ್ದವಳು. ಇಷ್ಟು ಬೇಗ ನಾವು ಕಳೆದುಕೊಂಡು ಬಿಟ್ಟೆವು. ಆರನೇ ವಯಸ್ಸಿಗೆ ತನ್ನತ್ತ ಎಲ್ಲರನ್ನೂ ಸೆಳೆದುಕೊಂಡಿದ್ದಳು' ಎಂದು ರಿಷಿ ಕುಮಾರ ಸ್ವಾಮೀಜಿ ಹೇಳಿದ್ದರು. 

'ಸರ್ಕಾರಕ್ಕೆ (Karnataka Government) ನಿಯಮವಿಲ್ಲ ಯಾವಾಗ ಬೇಕೋ ಅವಾಗ ರಸ್ತೆ ಕಾಮಗಾರಿಕೆಗಳನ್ನು ಮಾಡುತ್ತಾರೆ. ಈ ವಾರ ಗುಂಡಿ (Man hole) ತೆಗೆದರೆ ಎರಡು ತಿಂಗಳು ಆ ಗುಂಡಿಯನ್ನು ಮುಚ್ಚಲ್ಲ ಹಾಗೇ ಬಿಡ್ತಾರೆ. ಸ್ಮಾರ್ಟ್‌ ಸಿಟಿ ಮಾಡ್ತೀರಾ? ನಿಮ್ಮ ಸ್ಮಾರ್ಟ್‌ ಸಿಟಿಗೆ (Smart City) ಬಲಿ ಇದು. ಹಿಂದೆ ಡ್ಯಾಮ್ (Dam) ಕಟ್ಟುವಾಗ ಮನುಷ್ಯರನ್ನು ಬಲಿ ಕೋಡೋರು ಅಂತ ಹೇಳ್ತಾ ಇದ್ರು. ನೀವು ರೋಡ್ ಮಾಡುವಾಗ ಎಲ್ಲ ಮನುಷ್ಯರನ್ನು ಬಲಿ ಕೊಟ್ಟುಬಿಡಿ. ನಾನು ಸರ್ಕಾರವನ್ನು ದೂಷಣೆ ಮಾಡುತ್ತಿಲ್ಲ. ಮಾಡೋ ಕೆಲಸವನ್ನು ನ್ಯಾಯವಾಗಿ ಮಾಡಿ. ಕಾಮಗಾರಿ ನಡೆಯುವ ಕಡೆ ಸೆಕ್ಯೂರಿಟಿ ಹಾಕಿ. ಇಂತ ಕಡೆ ಕೆಲಸ ನಡೆಯುತ್ತಿದೆ ಹೋಗಬೇಡಿ ಅಂತ ಜನರಿಗೆ ಸೂಚನೆ ಕೊಡಿ. ಎಲ್ಲಾದರೂ ಈ ಥರ ಮಾಡ್ತಾ ಇದ್ದೀರಾ' ಎಂದು ಸ್ವಾಮೀಜಿ ಅವರು ಪ್ರಶ್ನೆ ಮಾಡಿದ್ದಾರೆ. 

Road Accident: ನನ್ನಮ್ಮ ಸೂಪರ್‌ಸ್ಟಾರ್‌ ಬಾಲಕಿ ಸಮನ್ವಿ ದಾರುಣ ಸಾವು, ಅಮ್ಮನಿಗೂ ಪೆಟ್ಟು

'ನಮ್ಮವರು ಅರ್ಧಂಬರ್ಧ ಕೆಲಸಗಳನ್ನು ಮಾಡಿಬಿಡೋದು. ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗಳಿಂದ ಯಾರಿಗೆಲ್ಲ ತೊಂದರೆ ಆಗಿದೆಯೋ ಅದಕ್ಕೆ ಈ ರೀತಿ ಬೇಜವಾಬ್ದಾರಿಯಾಗಿ ಕಾಮಗಾರಿ ಮಾಡುವವರೆ ನೇರ ಕಾರಣ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರೇ ಈ ಕುರಿತು ಗಮನ ಹರಿಸಿ. ಇವತ್ತು ನಮ್ಮ ಮಗುವನ್ನು ಎತ್ತಿಕೊಂಡು ಬರುವಾಗ ನಮಗಾದ ನೋವಿದೆಯಲ್ಲ ಅದು ಇನ್ಯಾರಿಗೂ ಬರದೇ ಇರಲಿ' ಎಂದು ಮಾತನಾಡಿದ್ದಾರೆ. 

Road Accident: ಅಮೃತಾ ಕೈಯಿಂದ ಇಬ್ಬರು ಮಕ್ಕಳನ್ನು ಕಸಿದುಕೊಂಡ  ಕ್ರೂರ ವಿಧಿ

'ನಾನು ಒಂದು ರೀತಿ ಬ್ಲ್ಯಾಂಕ್ ಆಗಿದ್ದೀನಿ. ಎಂಥ ಮುದ್ದಾದ ಮಗು ಅದು. ಯಾಕೆ ಈ ರೀತಿ ಅಗುತ್ತೆ ಅಂತಾಲೇ ಗೊತ್ತಾಗುತ್ತಿಲ್ಲ. ಒಂದು ಅಪಘಾತದಲ್ಲಿ (Accident) ಮಗು ಸತ್ತೋಗುತ್ತೆ ಅಂದ್ರೆ ಎನು? ಇನ್ನೂ ಜಗತ್ತು ನೋಡಿಲ್ಲ, ಎಷ್ಟು ಚೆನ್ನಾಗಿ ಓದುತ್ತಿತ್ತು. ನನಗೆ ಹೆಣ್ಣು ಮಗುವಿಲ್ಲ ಅನ್ನೋ ಕೊರಗಿದೆ. ನಾನು ಯಾವಾಗಲೂ ಹೇಳುತ್ತಿದ್ದೆ ನನಗೆ ಈ ರೀತಿ ಹೆಣ್ಣು ಮಗು ಬೇಕಿತ್ತು ಅಂತ. ವೈಕುಂಠ ಏಕಾದಶಿ ಅಂತ ಹೇಳ್ತಾರೆ. ಆ ದೇವರು ಇದ್ದಾನಾ ಅಂತಾನೇ ಗೊತ್ತಿಲ್ಲ. ಅಪ್ಪು ಅವರು ಹೋದಾಗ ತುಂಬಾ ಅಪ್ಸೆಟ್ ಅಗಿದ್ದೆ. ಇದು ಆಗ ಇನ್ನೂ ನಂಬಿಕೆ ಹೋಯ್ತು,' ಎಂದು ಸೃಜನ್ (Srujan okesh) ಭಾವುಕರಾಗಿದ್ದಾರೆ.

click me!