ಹೆಂಡತಿ 5 ತಿಂಗಳ ಗರ್ಭಿಣಿ, ಸಾಯ್ತೀನಿ ಅಂತ ಹೆದರಿಸಲು ಹೋಗಿ ಕುತ್ತಿಗೆ ಲಾಕ್ ಆಗಿದೆ; ಸಂಪತ್ ಜಯರಾಮ್‌ ಸಾವಿನ ರಹಸ್ಯ ಬಯಲು

Published : Apr 24, 2023, 10:32 AM ISTUpdated : Apr 24, 2023, 10:35 AM IST
 ಹೆಂಡತಿ 5 ತಿಂಗಳ ಗರ್ಭಿಣಿ, ಸಾಯ್ತೀನಿ ಅಂತ ಹೆದರಿಸಲು ಹೋಗಿ ಕುತ್ತಿಗೆ ಲಾಕ್ ಆಗಿದೆ; ಸಂಪತ್ ಜಯರಾಮ್‌ ಸಾವಿನ ರಹಸ್ಯ ಬಯಲು

ಸಾರಾಂಶ

ಸಂಪತ್ ಜಯರಾಮ್ ಸಾವಿಗೆ ಕಾರಣ ತಿಳಿಸಿದ ನಟ ರಾಜೇಶ್ ಧ್ರುವ. ದಯವಿಟ್ಟು ಆಪ್ತ ಸ್ನೇಹಿತರನ ಬಗ್ಗೆ ಕೆಟ್ಟ ಗಾಸಿಪ್ ಮಾಡಬೇಡಿ ಎಂದು ಮನವಿ ಮಾಡಿದ ನಟ...

ಕನ್ನಡ ಕಿರುತೆರೆ ಜನಪ್ರಿಯ ನಟ ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಕಾಶಗಳು ಕಡಿಮೆ, ಖಿನ್ನತೆ, ಕುಟುಂಬ ಕಲಹ..ಹಾಗೆ ಹೀಗೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿದೆ. ದಯವಿಟ್ಟು ಆಪ್ತ ಸ್ನೇಹಿತನ ಬಗ್ಗೆ ನೆಗೆಟಿವ್ ಮಾತನಾಡಬೇಡಿ ಎಂದು ನಟ ರಾಜೇಶ್ ಧ್ರುವ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಅಗುತ್ತಿದೆ.

'ನನ್ನ ಪ್ರಾಣ ಸ್ನೇಹಿತ, ನೆಚ್ಚಿನ ನಟ ಸಂಪತ್‌ ಜಯರಾಮ್ ಇವತ್ತು ನಮ್ಮನ್ನು ಬಿಟ್ಟು ಅಗಲಿದ್ದಾರೆ. ತುಂಬಾ ಬೇಜಾರ್ ಆಗ್ತಿದೆ ಏಕೆಂದ್ರೆ ಬಾಲಾಜಿ ಫೋಟೋ ಸ್ಟುಡಿಯೋ ಅನ್ನೋ ಸಿನಿಮಾ ಅವರ ಆಕ್ಟಿಂಗ್‌ಗೆ ತುಂಬಾ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಸಿನಿಮಾ ನೋಡಿರುವ ಪ್ರತಿಯೊಬ್ಬರೂ ಒಂದೊಳ್ಳೆ ನಟ ಸಿಕ್ಕಿದ್ದಾನೆ ನಮ್ಮ ಇಂಡಸ್ಟ್ರಿಗೆ ಎಂದು ತುಂಬಾ ಖುಷಿ ಪಟ್ಟಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಿಂದ ತುಂಬಾ ಒಳ್ಳೆ ಹೆಸರು ಪಡೆದುಕೊಂಡಿದ್ದರು. ಚಿಕ್ಕಮಗಳೂರು ಮತ್ತು ಕೊಪ್ಪ ಅವರ ಊರು, ಅವರಿಂದ ನನಗೆ ಆ ಊರು ತಂಬಾ ಹತ್ತಿರವಾಗಿದೆ. ಸಂಪತ್ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು..2013ರಿಂದ ಜೊತೆ ಜೊತೆಗೆ ಅಗ್ನಿಸಾಕ್ಷಿ ಸೀರಿಯಲ್ ಮಾಡಿದ್ದೀವಿ. ಪ್ರತಿಭೆನೇ ಸಂಪತ್‌ಗೆ ತುಂಬಾ ದೊಡ್ಡ ಆಸ್ತಿ. ಎಂಥಾ ಸಂದರ್ಭ ಕೊಟ್ಟರೂ ನಟಿಸುವ ಸಾಮರ್ಥ್ಯ ಇರುವಂತ ನಟ ಅದನ್ನು ತುಂಬಾ ಜನರು ಗುರುತು ಹಿಡಿದಿಲ್ಲ ಅನ್ನೋದು ಬೇಸರ ವಿಚಾರ' ಎಂದು ರಾಜೇಶ್ ಮಾತನಾಡಿದ್ದಾರೆ.

Sampath Jayaram: ಕನ್ನಡ ಕಿರುತೆರೆ ನಟ ಸಂಪತ್ ಜಯರಾಮ್ ಆತ್ಮಹತ್ಯೆ!

'ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಟ್ಯಾಲೆಂಟ್ ಇದ್ರೂ ಕಷ್ಟನೇ ಕಡಿಮೆ ಟ್ಯಾಲೆಂಟ್‌ ಇದ್ರೂ ಕಷ್ಟನೇ. ಸಂಪತ್ ಅಗಲಿದೆ ಮೇಲೆ ನಾನು ವಿಡಿಯೋ ಮಾಡುತ್ತಿರುವುದು ಈ ವಿಚಾರಕ್ಕೆ..ಸಂಪತ್ ಸಾವಿನ ಬಗ್ಗೆ ಸಾಕಷ್ಟು ಊಹಾ ಪೂಹಾಗಳು ಹರಿದಾಡುತ್ತಿದೆ ನನ್ನ ಕಣ್ಣಿಗೂ ಒಂದೆರಡು ವಿಡಿಯೋಗಳು ಬಿತ್ತು. ನಿಮ್ಮ ನಿಮ್ಮ ದೃಷ್ಟಿಯಿಂದ ಹೇಳಿಕೆ ಕೊಟ್ಟರೆ ಅದು ಸತ್ಯ ಆಗಲ್ಲ. ಈಗ ಸಂಪತ್ ಇಲ್ಲ ಅನ್ನೋ ವಿಚಾರ ಹಿಡಿದುಕೊಂಡು ನಟ ಅನ್ನೋ ವಿಚಾರ ಹಿಡಿದುಕೊಂಡು ಹೇಗಂದ್ರೆ ಹಾಗೆ ಕಾಮೆಂಟ್ ಮಾಡುವ ಲಿಬರ್ಟಿ ತೆಗೆದುಕೊಳ್ಳಬೇಡಿ ಅನ್ನೋದು ನನ್ನ ಪುಟ್ಟ ಮನವಿ. ಯಾಕೆ ಈ ರೀತಿ ಮನವಿ ಮಾಡುತ್ತಿರುವ ಅಂದ್ರೆ ಸಂಪತ್‌ ಅವರಿಗೆ ಅವರದ್ದೇ ಆದ ಕುಟುಂಬ ಇದೆ ನಮ್ಮಂತೆ ತುಂಬಾ ಜನ ಸ್ನೇಹಿತರಿದ್ದಾರೆ..ನೆಗೆಟಿವ್ ಕಾಮೆಂಟ್ ಮಾಡಿ ನಮ್ಮ ಎಮೋಷನ್‌ನ  ತುಂಬಾ ಹರ್ಟ್‌ ಮಾಡುತ್ತಿದ್ದೀರಿ. ಸುಳ್ಳು ಸುದ್ದಿ ಬೇಡ ನಿಜಾಂಶ ಏನಿದೆ ಅದನ್ನು ಜನರಿಗೆ ತಿಳಿಸುವ ಕೆಲಸ ನಿಮ್ಮಂದ ಆಗಲಿ ಅಷ್ಟೆ. ತುಂಬಾ ಭಾರವಾದ ಮನಸ್ಸಿನಿಂದ ಈ ವಿಡಿಯೋ ಮಾಡುತ್ತಿರುವೆ' ಎಂದು ರಾಜೇಶ್‌ ಹೇಳಿದ್ದಾರೆ.

'ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ಕರೆ ಬರುತ್ತೆ ನಾನು ಕೂಡ ನಿದ್ರೆಯಲ್ಲಿದ್ದೆ...ಫೋನ್‌ ಸೈಲೆಂಟ್‌ನಲ್ಲಿ ಇರಲಿಲ್ಲ ರಿಂಗ್ ಆಗಿದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್‌ ಅಂತ ಹೇಳಿದರು ಎದ್ದೋ ಬಿದ್ನೋ ಅಂತ ಓಡಿ ಹೋದೆ ಅಷ್ಟರಲ್ಲಿ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದಾಗ ಅಲ್ಲಿ ಬಂದಂತ ಕಾಮನ್ ಉತ್ತರ ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದ ಒಂದು ವರ್ಷ ಕೂಡ ಆಗಿರಲಿಲ್ಲ ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ ಇಂಟರ್‌ ಕಾಸ್ಟ್‌ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಮದುವೆಯಲ್ಲಿ ಭಾಗಿಯಾಗಿರುವೆ...ಅವರ ಲವ್‌ ಸ್ಟೋರಿ ಪ್ರತಿಯೊಂದು ನಮಗೆ ಗೊತ್ತು' ಎಂದಿದ್ದಾರೆ ರಾಜೇಶ್.

'ಸಂಪತ್ ಹೇಗೆ ಅನ್ನೋ ಪ್ರತಿಯೊಬ್ಬರಿಗೂ ಗೊತ್ತು ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ ಏಕೆಂದರೆ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಏನೋ ಮಾನಸಿಕ ನೆಮ್ಮದಿ ಇರಲಿಲ್ಲ ಆರ್ಥಿಕ ಸಮಸ್ಯೆ ಇತ್ತು ಗಂಡ-ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ ಎಂದು ಡಿಪ್ರೆಶನ್‌ನಲ್ಲಿದ್ದ  ಹಾಗೆ ಹೀಗೆ ಅಂತ ವಿಡಿಯೋ ಹರಿದಾಡುತ್ತಿದೆ. ನೀವು ತಪ್ಪಾಗಿ ಮಾತನಾಡುತ್ತಿದ್ದೀರಾ...ಹೌದು ಚಾನ್ಸ್‌ ಇರಲಿಲ್ಲ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್‌ ಸೃಷ್ಠಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಇತ್ತು. ಅಗ್ನಿಸಾಕ್ಷಿ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಅದಿಲ್ಲ ಅಂದ್ರೆ ಇದು ಮಾಡ್ತೀನಿ ಹೀಗೆ ಮಾಡ್ತೀನಿ ಹಾಗೆ ಮಾಡ್ತೀನಿ ಅಂತ ಯೋಚನೆ ಮಾಡುವ ಬ್ರಾಡ್‌ ಮೈಂಡ್ ಇರುವ ಹುಡುಗ..ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ ತುಂಬಾ ಪ್ರಯತ್ನ ಮಾಡುತ್ತಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗೆ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್‌ ಮಾಡಬೇಡಿ. ಗಂಡ ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ ಆಗ ಕುತ್ತಿಗೆ ಲಾಕ್ ಅಗಿದೆ. ಬೇಜಾರಿ ವಿಚಾರ ಏನೆಂದರೆ ತುಂಬಾ ಒಳ್ಳೆ ನಟರಿಗೆ ಬೇಗ ಅವಕಾಶ ಸಿಗುವುದಿಲ್ಲ ಅದೆಷ್ಟೋ ಕಲಾವಿದರು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾರೆ' ಎಂದು ರಾಜೇಶ್ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?