Nitish Bhardwaj: ಶ್ರೀಕೃಷ್ಣನ ಪಾತ್ರಕ್ಕೆ ಒಪ್ಪಿಸಿತ್ತು ಸಮೋಸಾ, ಒಂದು ಕಪ್​ ಟೀ!

Published : Apr 23, 2023, 05:39 PM IST
Nitish Bhardwaj: ಶ್ರೀಕೃಷ್ಣನ ಪಾತ್ರಕ್ಕೆ ಒಪ್ಪಿಸಿತ್ತು ಸಮೋಸಾ, ಒಂದು ಕಪ್​ ಟೀ!

ಸಾರಾಂಶ

ಮಹಾಭಾರತ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಪ್ರಸಿದ್ಧಿ ಪಡೆದಿರುವ ನಿತೀಶ್​ ಭಾರಧ್ವಾಜ್​ ಈ ಪಾತ್ರವನ್ನು ಕೊನೆಗೂ ಒಪ್ಪಿದ್ದು ಹೇಗೆ?   

ನಿರ್ದೇಶಕ ಬಿ.ಆರ್. ಚೋಪ್ರಾ (B.R.  Chopra) ಅವರು 'ವಕ್ತ್', 'ನಯಾ ದೌರ್', 'ಹುಮ್ರಾಜ್' ನಂತಹ ಸ್ಮರಣೀಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ, ಆದರೆ ಪ್ರೇಕ್ಷಕರು ಅವರನ್ನು ಹೆಚ್ಚು ನೆನಪಿಸಿಕೊಳ್ಳುವುದು 1988 ರಿಂದ 1990 ರವರೆಗೆ ಪ್ರಸಾರವಾದ 'ಮಹಾಭಾರತ' ಟಿವಿ ಧಾರಾವಾಹಿಗಾಗಿ. ಇದು ದೂರದರ್ಶನದಲ್ಲಿ ಪ್ರಸಾರವಾಯಿತು. ಟಿವಿ ಶೋಗೆ ಸಂಬಂಧಿಸಿದ ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬಿ.ಆರ್.ಚೋಪ್ರಾ ಕೂಡ ಕಲಾವಿದರಿಗೆ ಪತ್ರ ಬರೆದು ಹೊಗಳುತ್ತಿದ್ದರು. 'ಮಹಾಭಾರತ'ದಲ್ಲಿ (Mahabharath) ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದ ನಿತೀಶ್ ಭಾರದ್ವಾಜ್ ಅವರಿಗೆ ಅಂತಹ ಒಂದು ಪತ್ರ ಬಂದಿತ್ತು, ಆದರೆ ಆರಂಭದಲ್ಲಿ ಅವರು ಈ ಪಾತ್ರವನ್ನು ನಿರ್ವಹಿಸಲು ಸಿದ್ಧರಿರಲಿಲ್ಲ.

ಈಚೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಖುದ್ದು ನಿತೀಶ್ ಭಾರದ್ವಾಜ್ (Nitish Bharadhwaj) ಬಹಿರಂಗಪಡಿಸಿದ್ದಾರೆ. ತಮಗೆ  ಕೃಷ್ಣನ ಪಾತ್ರದಲ್ಲಿ ನಟಿಸಲು ಇಷ್ಟವಿರಲಿಲ್ಲ. ಇಷ್ಟು ದೊಡ್ಡ ಪಾತ್ರಕ್ಕೆ ತಾವು ಸರಿಹೊಂದುವುದಿಲ್ಲ ಎಂದು ಎನ್ನಿಸಿತ್ತು ಎಂದಿದ್ದಾರೆ. ಆದರೆ ಈ ಪಾತ್ರಕ್ಕೆ ಅವರೇ ಸೂಟ್​ ಆದ ವ್ಯಕ್ತಿ ಎಂದು ಬಿ.ಆರ್ ಚೋಪ್ರಾ ಅವರಿಗೆ ತಿಳಿದಿತ್ತು. ಆದರೆ ನಿತೀಶ್​ ಅವರ ಮನಸ್ಸನ್ನು ಒಲಿಸುವುದು ಹೇಗೆ ಎಂಬ ಚಿಂತೆಯಾಗಿತ್ತು. ಆದರೆ ಬಿ.ಆರ್​.ಚೋಪ್ರಾ ಅವರ ಪುತ್ರ ರವಿ ಚೋಪ್ರಾ ಅವರಿಗೆ ನಿತೀಶ್ ಅವರ ದೌರ್ಬಲ್ಯದ ಅರಿವಿತ್ತು. ಅದನ್ನೇ ಮುಂದೆ ಮಾಡಿಕೊಂಡು ಅಂತೂ ನಿತೀಶ್​ ಅವರನ್ನು ಒಪ್ಪಿಸಿದ್ದರು. 

'ಶ್ರೀರಾಮ'ನೇ ಸ್ಮೋಕ್​ ಮಾಡಿದಾಗ... ಕಹಿ ಘಟನೆ ನೆನಪಿಸಿಕೊಂಡ ನಟ Arun Govil

ಅಷ್ಟಕ್ಕೂ ಅದೆಂಥ ದೌರ್ಬಲ್ಯ ಎನ್ನುತ್ತೀರಾ?  ಸಮೋಸ ಮತ್ತು ಚಹ! (Samosa and Tea) ಹೌದು. ನಿತೀಶ್​ ಅವರಿಗೆ ಸಮೋಸ ಮತ್ತು ಚಹ ಎಂದರೆ ಬಲು ಅಚ್ಚುಮೆಚ್ಚು. ಜೊತೆಗೆ ಕಚೋರಿ ಕೂಡ. ಇವುಗಳನ್ನೇ ಆರ್ಡರ್​ ಮಾಡಿದರು. ನಂತರ ನಿತೀಶ್​ ಜೊತೆ ಮಾತನಾಡಿದರು.  ಸಮೋಸಾ ಮತ್ತು ಚಹಾದ ಗುಟುಕುಗಳ ರುಚಿಯ ನಡುವೆಯೇ ಆರಂಭದಲ್ಲಿ ನಿತೀಶ್​ ಪಾತ್ರಕ್ಕೆ ಹಿಂಜರಿದರು.  ನಂತರ ಡಾ.ರಾಹಿ ಮಾಸೂಮ್ ರಜಾ ಮತ್ತು ಪಂಡಿತ್ ನರೇಂದ್ರ ಶರ್ಮಾ ಅವರಿಗೆ ಶ್ರೀಕೃಷ್ಣನ (Shreekrishna) ಪಾತ್ರವನ್ನು ವಿವರಿಸಿದರು. ಸಮೋಸಾ ಮುಗಿಯುವುದರೊಳಗೆ ನಿತೀಶ್​ ಪಾತ್ರಕ್ಕೆ ಒಪ್ಪಿಕೊಂಡರು ಎಂದು ಹೇಳಿದ್ದಾರೆ. 

ನಿತೀಶ್ ಭಾರದ್ವಾಜ್ ಕಾರ್ಯಕ್ರಮದ ಸೆಟ್‌ನಲ್ಲಿ 14 16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. 'ಚೋಪ್ರಾ ಸಾಹೇಬ್ ನನಗೆ ಪಾತ್ರವನ್ನು ಬುದ್ಧಿವಂತಿಕೆಯಿಂದ ವಿವರಿಸಿದರು. ಅವರ ಪಾತ್ರದ ಬಗ್ಗೆ ಪೋಷಕರಿಗೆ ತಿಳಿಸಿದಾಗ, ಅವರು ಪಾತ್ರವನ್ನು ನಿರ್ವಹಿಸಲು ಸಾಕಷ್ಟು ಸ್ಫೂರ್ತಿ ನೀಡಿದರು ಮತ್ತು ಸಾಕಷ್ಟು ವಿವರಿಸಿದರು. ಅಷ್ಟಕ್ಕೂ ಅದ್ಭುತವಾದ ಪಾತ್ರ ಮಾಡಲು ಒಪ್ಪಿಕೊಂಡೆ.ಟಿವಿ ಧಾರಾವಾಹಿ ‘ಮಹಾಭಾರತ’ ಮಾಡಲು ಸಾಕಷ್ಟು ಶ್ರಮ ಪಡಬೇಕಾಯಿತು. ನಾನು 14-16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಎಲ್ಲ ಕಲಾವಿದರೂ ಹೀಗೆಯೇ ದುಡಿದಿದ್ದಾರೆ. ಆದರೆ ಎಲ್ಲರಿಗೂ ಭಾನುವಾರ ರಜೆ ಸಿಗುತ್ತದೆ ಎಂದು ಅಂದಿನ ದಿನಗಳನ್ನು ನೆನಪಿಸಿಕೊಮಡಿದ್ದಾರೆ. 

Mahabharat: ಫಿರೋಜ್​ ಖಾನ್​ ಅರ್ಜುನ್​ ಆಗಿ ಬದಲಾಗಿದ್ದೇ ರೋಚಕ...

ನಿತೀಶ್ ಭಾರದ್ವಾಜ್ ತೆರೆಯ ಮೇಲೆ ವಿಷ್ಣುವಿನ ಇತರ ಅವತಾರಗಳನ್ನು ಸಹ ನಿರ್ವಹಿಸಿದ್ದಾರೆ. ‘ಮಹಾಭಾರತ’ ಕಾರ್ಯಕ್ರಮ ಮಾಡಲು 9 ಕೋಟಿ (Nine crores)ರೂ. ಖರ್ಚು ಮಾಡಲಾಗಿದೆ. ಬಿ.ಆರ್ ಚೋಪ್ರಾ ಅವರು ಪತ್ರ ಬರೆಯುವ ಮೂಲಕ ಕಲಾವಿದರನ್ನು ಹೊಗಳುತ್ತಿದ್ದರು ಎಂದು ನಿತೀಶ್ ಭಾರದ್ವಾಜ್ ಹೇಳಿದ್ದಾರೆ. ಡಿಡಿ ಮೆಟ್ರೋದಲ್ಲಿ ಮಹಾಭಾರತದ ಪ್ರಸಾರ ಮತ್ತೆ ಪ್ರಾರಂಭವಾದಾಗ, ಬಿ.ಆರ್ ಚೋಪ್ರಾ ತಮ್ಮನ್ನು ಹೊಗಳಿ ಪುನಃ ಪತ್ರ ಬರೆದಿದುದಾಗಿ ನಿತೀಶ್​ ನೆನಪಿಸಿಕೊಳ್ಳುತ್ತಾರೆ.  ಅವರು ಚೋಪ್ರಾರ  ಎರಡನೇ ಟಿವಿ ಶೋ 'ವಿಷ್ಣು ಪುರಾಣ'ದಲ್ಲಿ (Vishnu Puran)ವಿಷ್ಣು ಮತ್ತು ಅವರ ಇತರ ಅವತಾರಗಳ ಪಾತ್ರವನ್ನು ನಿರ್ವಹಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?