8 ವರ್ಷದ ಬಳಿಕ ಮತ್ತೆ ಬರ್ತಿದೆ ಛೋಟಾ ಚಾಂಪಿಯನ್; ಈ ಬಾರಿ ನಿರೂಪಣೆ ಜವಾಬ್ದಾರಿ ಇವರಿಗೆ

Published : Apr 23, 2023, 12:55 PM IST
8 ವರ್ಷದ ಬಳಿಕ ಮತ್ತೆ ಬರ್ತಿದೆ ಛೋಟಾ ಚಾಂಪಿಯನ್;  ಈ ಬಾರಿ ನಿರೂಪಣೆ ಜವಾಬ್ದಾರಿ ಇವರಿಗೆ

ಸಾರಾಂಶ

ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದ ಛೋಟಾ ಚಾಂಪಿಯನ್ ಮತ್ತೆ ಬರ್ತಿದೆ. 8 ವರ್ಷಗಳ ಬಳಿಕ ಈ ಶೋ ಬರ್ತಿದ್ದು ಶ್ವೇತಾ ಚಂಗಪ್ಪ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.   

ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ಮಕ್ಕಳ ರಿಯಾಲಿಟಿ ಶೋ 'ಛೋಟಾ ಚಾಂಪಿಯನ್' ಮತ್ತೆ ಬರ್ತಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಈ ಶೋ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ಈಗಾಗಲೇ ಜೀ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಛೋಟಾ  ಚಾಂಪಿಯನ್ ಸೀಸನ್ 3ಅನ್ನು ಈ ಬಾರಿ ಖ್ಯಾತ ನಿರೂಪಕಿ ಶ್ವೇತಾ ಚಂಗಪ್ಪ ನಡೆಸಿಕೊಡುತ್ತಿದ್ದಾರೆ. ಶ್ವೇತಾ ಚಂಗಪ್ಪ ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಕ್ವೀನ್ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದರು. ಈ ಸೋ ಮುಗಿಯುತ್ತಿದ್ದಂತೆ ಶ್ವೇತಾ ಮಕ್ಕಳ ರಿಯಾಲಿಟಿ ಶೋ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

ಈ ಬಗ್ಗೆ ಶ್ವೇತಾ ಚಂಗಪ್ಪ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಮುಂದಿನ ಪ್ರಾಜೆಕ್ಟ್ ಎಂದು ಬರೆದುಕೊಂಡಿದ್ದಾರೆ. ಮುಂದಿನ ಪ್ರಾಜೆಕ್ಟ್ ಯಾವುದು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದರು. ಇದೀಗ ಛೋಟಾ ಚಾಂಪಿಯನ್ ಮೂಲಕ ಬರ್ತಿದ್ದೀನಿ ಎಂದು ಹೇಳಿದ್ದಾರೆ. 'ಹೇ ನನ್ನ ಪ್ರೀತಿಯ ಇನ್‌ಸ್ಟಾ ಕುಟುಂಬದವರೇ. ನನ್ನ ಮುಂದಿನ ಕಾರ್ಯಕ್ರಮದ ಬಗ್ಗೆ ಕೇಳುತ್ತಿದ್ದವರಿಗೆ ಇಲ್ಲಿದೆ ನೋಡಿ ಉತ್ತರ. ನಮ್ಮ ನೆಚ್ಚಿನ ಚಾನೆಲ್‌ನಲ್ಲಿ ಚೋಟಾ ಚಾಂಪಿಯನ್ ಪ್ರಸಾರವಾಗಲಿದೆ. ಇದಕ್ಕಾಗಿ ಇನ್ನೂ ಕಾಯಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪ್ರೋಮೋ ಹಂಚಿಕೊಂಡಿದ್ದಾರೆ.

ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಸಿನ ಲವ್‌ಸ್ಟೋರಿ ಅಮೃತಧಾರೆ

ಅಂದಹಾಗೆ ಛೋಟಾ ಚಾಂಪಿಯನ್‌ನಲ್ಲಿ ರಚಿತಾ ರಾಮ್ ಮತ್ತು ವಿಜಯ್ ರಾಘವೇಂದ್ರ ಹಾಗೂ ಕುರಿ ಪ್ರತಾಪ್ ಕೂಡ ಇದ್ದಾರೆ. ವಿಜಯ್ ರಾಘವೇಂದ್ರ ಮತ್ತು ರಚಿತಾ ಇಬ್ಬರೂ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕುರಿ ಪ್ರತಾಪ್ ಶ್ವೇತಾ ಚಂಗಪ್ಪ ಜೊತೆ ನಿರೂಪಣೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರೋಮೋ ಆಕರ್ಷಕವಾಗಿದ್ದು ಶೋ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಶೋನಲ್ಲಿ ಅನೇಕ ಮಕ್ಕಳು ಭಾಗಿಯಾಗುತ್ತಿದ್ದಾರೆ. 3 ರಿಂದ 6 ವರ್ಷದ ಮಕ್ಕಳು ಭಾಗಿಯಾಗುತ್ತಿದ್ದಾರೆ. ಈ ಶೋನಲ್ಲಿ ಮಕ್ಕಳು ಹೇಗೆ ಫನ್ ಮಾಡ್ತಾರೆ ಎಂದು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತಿದ್ದಾರೆ.

ಬಿಗ್ ಬಾಸ್‌ ವೈಷ್ಣವಿ ಬೀಚ್‌ ಫೋಟೋ ವೈರಲ್; ಜೊತೆಗಿರುವ ಅವನು ಯಾರು?

ಅಂದಹಾಗೆ  ಈ ಮೊದಲು ಛೋಟಾ ಚಾಂಪಿಯನ್‌ ಶೋ ಅನ್ನು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದರು. ಇದೀಗ ಆಗ ಜಾಗಕ್ಕೆ ಶ್ವೇತಾ ಚಂಗಪ್ಪ ಎಂಟ್ರಿ ಕೊಟ್ಟಿದ್ದಾರೆ. ಮಕ್ಕಳ ತುಂಟಾಟ, ತರ್ಲೆ  ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?