Ramachari: ಚಾರು ಬದುಕೋದು ಕಷ್ಟ ಅಂದ ಡಾಕ್ಟರ್, ಕಂಗಾಲಾಗಿದ್ದಾನೆ ಚಾರಿ!

Published : Oct 26, 2022, 01:15 PM ISTUpdated : Oct 26, 2022, 02:41 PM IST
Ramachari: ಚಾರು ಬದುಕೋದು ಕಷ್ಟ ಅಂದ ಡಾಕ್ಟರ್, ಕಂಗಾಲಾಗಿದ್ದಾನೆ ಚಾರಿ!

ಸಾರಾಂಶ

ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಚಾರುವಿನ ಸ್ಥಿತಿ ರಾಮಾಚಾರಿಯನ್ನು ಕಂಗೆಡಿಸಿದೆ..

ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಅವಳ ಅಮ್ಮನ ಕುತಂತ್ರಕ್ಕೆ ಅವಳೇ ಬಲಿಯಾಗ್ತಿರುವ ಹಾಗಿದೆ. ದೊಡ್ಡ ಉದ್ಯಮಿ ಜೈ ಶಂಕರ್‌ಗೆ ಇಬ್ಬರು ಹೆಂಡತಿಯರು. ದೊಡ್ಡವಳು ಮಾನ್ಯತಾ. ಚಿಕ್ಕವಳು ಶರ್ಮಿಳಾ. ತನ್ನ ದರ್ಪ, ಕೆಟ್ಟತನ, ದುಡ್ಡಿನ ಮದದಿಂದ ಬೀಗುತ್ತಿದ್ದ ಮಾನ್ಯತಾಗೆ ಶರ್ಮಿಳಾ ಕಂಡರೆ ಸಿಟ್ಟು. ಆದರೆ ಒಳ್ಳೆ ಮನಸ್ಸಿನ ಜೈ ಶಂಕರ್‌ಗೆ ತನ್ನ ಮೊದಲ ಪತ್ನಿ ಮಾನ್ಯತಾ ಕೆಟ್ಟತನ, ಅವಳ ವರ್ತನೆ ಇಷ್ಟವಾಗಲ್ಲ. ತನ್ನ ಕಿರಿಯ ಪತ್ನಿ ಶರ್ಮಿಳಾಳ ಸಜ್ಜನಿಕೆ, ಒಳ್ಳೆಯ ಮನಸ್ಸೇ ಇಷ್ಟ. ಮಾನ್ಯತಾ ಕಂಪನಿಗೆ ವಂಚಿಸಿದ್ದು ಗೊತ್ತಾದ ಮೇಲೆ ಜೈ ಶಂಕರ್‌ ಮಾನ್ಯತಾಗೆ ನೀಡಿದ್ದ ಅಧಿಕಾರವನ್ನು ಕ್ಯಾನ್ಸಲ್ ಮಾಡಿ ಎಲ್ಲ ವಹಿವಾಟಿನ ಹೊಣೆಯನ್ನು ಶರ್ಮಿಳಾಗೆ ವಹಿಸುತ್ತಾನೆ. ಇದು ಮಾನ್ಯತಾಗೆ ಸಹಿಸೋಕೆ ಕಷ್ಟ ಆಗುತ್ತೆ. ಆಕೆ ಹಳೆಯ ಅಧಿಕಾರ ಮರಳಿ ಪಡೆಯಲೇ ಬೇಕೆಂದು ಹವಣಿಸುತ್ತಾಳೆ. ಅದಕ್ಕಾಗಿ ಶರ್ಮಿಳಾ ಕೊಲೆಗೆ ಪ್ಲಾನ್ ಮಾಡುತ್ತಾಳೆ. ಆದರೆ ಆ ಬಲೆಗೆ ತನ್ನ ಮಗಳು ಚಾರುಲತಾ ಬಿದ್ದುಬಿಡುತ್ತಾಳೆ. ಈ ವಿಷಯ ಗೊತ್ತಾಗಿ ಅವಳು ರಾಮಾಚಾರಿ ಬಳಿ ಪರಿಪರಿಯಾಗಿ ಚಾರುವನ್ನು ಉಳಿಸಿಕೊಡುವಂತೆ ಕೇಳಿಕೊಂಡಿದ್ದಾಳೆ.

ರಾಮಾಚಾರಿಗೆ ಆ ಸಿದ್ಧಿಮಂಗಲ ಕಾಡಿನ ಇಂಚಿಂಚೂ ಪರಿಚಯವಿದೆ. ಚಾರುವಿನ ಅಪಹರಣವಾದಾಗ ಆತ ಆ ಕಾಡಿನ ನಡುವೆ ಇರುವ ದೇವಸ್ಥಾನದಲ್ಲೇ ಇದ್ದಾನೆ. ಆತನಿಗೆ ಚಾರು ಅಪಾಯಕ್ಕೆ ಸಿಲುಕಿದ್ದಾಳೆ ಅನ್ನುವ ವಿಚಾರ ಗೊತ್ತಾದಾಗ ಆತ ಅವಳನ್ನು ಹುಡುಕಿಕೊಂಡು ಹೊರಟಿದ್ದಾನೆ. ಆ ಕಾಡಿನದಲ್ಲಿ ಹುಲಿಗಳಿವೆ, ಕ್ರೂರ ವ್ಯಕ್ತಿಗಳಿದ್ದಾರೆ. ಚಾರುವಿನ ಜಾಡನ್ನು ಹಿಡಿದು ಹುಡುಕುತ್ತಾ ಹೋದ ರಾಮಾಚಾರಿ ಅರಿವಿಲ್ಲದೇ ತಾನೇ ಅಪಾಯಕ್ಕೆ ಸಿಲುಕಿದ್ದ. ಕಾಡಿನ ನಡುವೆ ಒಂದು ಒಂಟಿಮನೆ. ಆ ಮನೆಯಲ್ಲಿ ರೌಡಿಗಳು ಚಾರುವನ್ನು ಕೂಡಿ ಹಾಕಿದ್ದಾರೆ. ರಾಕ್ಷಸನ ಹಾಗಿರುವ ಒಬ್ಬ ವ್ಯಕ್ತಿಯನ್ನು ಕಾವಲಿಗೆ ನೇಮಿಸಿದ್ದಾರೆ. ಆತ ಎಂಥಾ ದೈತ್ಯ ಅಂದರೆ ಆತನ ಎದುರು ನಿಲ್ಲಲೂ ಎದೆಗಾರಿಕೆ ಬೇಕು. ರಾಮಾಚಾರಿ ಅಂಥವನ ಜೊತೆ ಹೋರಾಡಿ ಚಾರುವನ್ನು ಉಳಿಸಿಕೊಳ್ಳಬೇಕು. ಇತ್ತ ಚಾರು ಅನ್ನ ನೀರು ಇಲ್ಲದೆ ಇಲಿಗಳ ಕಾಟದ ನಡುವೆ ಆ ಒಂಟಿಮನೆಯಲ್ಲಿ ಇದ್ದಾಳೆ. ಛಾವಣಿ ಅವಳ ಮೇಲೆ ಬಿದ್ದಿದೆ. ಇತ್ತ ಚಾರುವನ್ನು ಹುಡುಕಿಕೊಂಡು ಬಂದ ರಾಮಾಚಾರಿಗೆ ಒಂದು ಹೊತ್ತಲ್ಲಿ ಆ ದೈತ್ಯನೇ ಚಾರುವನ್ನು ಕೊಂದಿರಬೇಕು ಅನ್ನೋ ಅನುಮಾನ ಬರುತ್ತೆ.

Kannadathi : ಡಿವೋರ್ಸ್ ಪೇಪರ್‌ಗೆ ಸೈನ್ ಮಾಡೇ ಬಿಟ್ರು ಹರ್ಷ ಭುವಿ, ಮುಂದೇನು?

ಕೊನೆಗೂ ಆತನಿಗೆ ಚಾರು ಸಿಗುತ್ತಾಳೆ. ಆದರೆ ಅವಳ ಜೀವವೇ ಹೋದ ಹಾಗಿರುತ್ತದೆ. ನಾಡಿ ಮಿಡಿತವೂ ಸಿಗುವುದಿಲ್ಲ. ಅವಳನ್ನು ಹೊತ್ತೊಯ್ಯುತ್ತಿರುವಾಗಲೇ ಆ ದೈತ್ಯ ಎದುರಾಗ್ತಾನೆ. ಆತನ ಏಟಿಗೆ ರಾಮಾಚಾರಿ ಕಾಲಿಗೆ ಪೆಟ್ಟಾಗುತ್ತದೆ. ಆದರೂ ಆತ ಆ ದೈತ್ಯದ ಭುಜದ ಮೇಲೇರಿ ಆತನನ್ನು ಬಗ್ಗು ಬಡಿದು ಚಾರುವನ್ನು ಎತ್ತಿಕೊಂಡು ಹೋಗುತ್ತಾನೆ. ಅವಳನ್ನು ಎತ್ತಿಕೊಂಡೇ ಆಸ್ಪತ್ರೆ (Hospital)ಗೆ ಸಾಗಿಸಿದಾಗ ಡಾಕ್ಟರ್‌ ಆಕೆಯ ಮನೆಯವರ ಬಗ್ಗೆ ವಿಚಾರಿಸುತ್ತಾರೆ. ರಾಮಾಚಾರಿ ಆಕೆಗೆ ಏನಾಗಬೇಕು ಅಂತ ಕೇಳ್ತಾರೆ. ರಾಮಾಚಾರಿಗೆ ಒಂದು ಕ್ಷಣ ಏನೂ ತೋಚದೇ ಇದ್ದರೂ ಆತ ತಾನವಳ ಕೊಲೀಗ್(Colleague) ಅಂತ ಹೇಳಿ, ಆಕೆಯ ಆರೋಗ್ಯ ವಿಚಾರಿಸಿದಾಗ, ಬೇಗ ಆಕೆಯ ಮನೆಯವರನ್ನು ಕರೆತರುವಂತೆ ಡಾಕ್ಟರ್ ಹೇಳ್ತಾರೆ. ಆಕೆಯ ಪಲ್ಸ್‌ ರೇಟ್‌(Pulse) ನಿಂತಿರಲಿಲ್ಲ. ಆದರೆ ಕ್ಷೀಣವಾಗಿತ್ತು. ಈಗ ರಕ್ತದೊತ್ತಡ(Blood pressure)ದಲ್ಲಿ ಏರುಪೇರಾಗ್ತಿದೆ. ಆಕೆ ಉಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.

ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಮನೆಹಾಳು ಹೆಣ್ಣಾಗಿ ಎಂಟ್ರಿಕೊಟ್ಟ ಚಿ ಸೌ ಸಾವಿತ್ರಿ ನಟಿ ಗೌತಮಿ

ಇದನ್ನು ಕೇಳಿ ರಾಮಾಚಾರಿ ಕಣ್ಣು ತೇವವಾಗುತ್ತೆ. ಆತ ಚಾರುವನ್ನು ಉಳಿಸಿಕೊಳ್ತಾನಾ, ಚಾರು ತನಗೆ ಆ ಮಟ್ಟಿನ ಅನ್ಯಾಯ ಮಾಡಿದ್ದರೂ ಆತನಿಗೆ ಒಳಗೊಳಗೇ ಆಕೆಯ ಬಗ್ಗೆ ಕಾಳಜಿ(Care) ಯಾಕೆ, ಚಾರು ಒಂದು ವೇಳೆ ಉಳಿದರೂ ಆಕೆ ರಾಮಾಚಾರಿಯನ್ನು ನೋಡುವ ದೃಷ್ಟಿಕೋನ ಬದಲಾಗುತ್ತಾ ಅನ್ನೋದನ್ನೆಲ್ಲ ನೋಡಲು ಇನ್ನಷ್ಟು ದಿನ ಕಾಯಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?