ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ಕೂದಲು ಕೊಟ್ಟರು, ಹೆಂಡ್ತಿ ಬೆಲೆ ಆಗ ಗೊತ್ತಾಗಿದ್ದು: ಶಿವರಾಜ್‌ಕುಮಾರ್

Published : Oct 24, 2022, 03:39 PM IST
ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ಕೂದಲು ಕೊಟ್ಟರು, ಹೆಂಡ್ತಿ ಬೆಲೆ ಆಗ ಗೊತ್ತಾಗಿದ್ದು: ಶಿವರಾಜ್‌ಕುಮಾರ್

ಸಾರಾಂಶ

ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಫ್ಯಾಮಿಲಿ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್. ಫ್ಯಾಮಿಲಿ ಬೆಲೆ ಗೊತ್ತಾಗಿದ್ದು ಯಾವಾಗ ಗೊತ್ತ?

ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್‌ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಹೆಮ್ಮೆಯ ಕನ್ನಡಿಗ ಅವಾರ್ಡ್‌ ನೀಡಲಾಗಿತ್ತು. ಡ್ಯಾನ್ಸ್‌ ಮಾಡುತ್ತಲೇ ವೇದಿಕೆ ಮೇಲೆ ಎಂಟ್ರಿ ಕೊಟ್ಟ ಶಿವಣ್ಣ ರವಿಚಂದ್ರನ್ ಜೊತೆ ಮಾತನಾಡಿದ್ದಾರೆ.

'ಜೀ ಕುಟುಂಬಕ್ಕೆ ಸೇರಿರುವುದಕ್ಕೆ ನನಗೆ ತುಂಬಾನೇ ಹೆಮ್ಮೆ ಇದೆ. ನಾನು ಬಂದಾಗಲೆಲ್ಲಾ ಅವಸರ ಪಡಿಸುವೆ ಲೇಟ್ ಆಗುತ್ತೆ ಬೈಕೊಳ್ಳುವುದು ಎಲ್ಲಾ ಆಗುತ್ತೆ ..ಇಷ್ಟು ಇದ್ರೂನು ನನ್ನನ್ನು ತಾಳ್ಕೊಂಡು ಇಲ್ಲಿವರೆಗೂ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ರಕ್ಷಿತಾ , ರಾಘು, ಚಿನ್ನಿ ಪ್ರಕಾಶ್‌ ಮತ್ತು ಪ್ರತಿಯೊಬ್ಬ ಸ್ಪರ್ಧಿನೂ ನನ್ನ ಜರ್ನಿನ ಬ್ಯೂಟಿಫುಲ್ ಮಾಡಿದ್ದರು. ಡ್ಯಾನ್ಸ್‌ನ ನಾನು ತುಂಬಾನೇ ಎಂಜಾಯ್ ಮಾಡುವೆ ನನಗೆ ಇಷ್ಟ ಹೀಗಾಗಿ ಯಾರೇ ಕರೆದ್ದರೂ ಹೋಗಿ ಡ್ಯಾನ್ಸ್ ಮಾಡುವೆ. ನನ್ನ ವೀಕ್‌ನೆಸ್‌ ಡ್ಯಾನ್ಸ್‌. ಸರಿಯಾಗಿ ಡ್ಯಾನ್ಸ್ ಮಾಡ್ತೀನಿ ಇಲ್ಲ ಗೊತ್ತಿಲ್ಲ ಆದರೆ ಮೂಮೆಂಟ್‌ ಮಾತ್ರ ಇರಬೇಕು. ಡ್ಯಾನ್ಸ್‌ ಮಾಡಲು attitude ಬೇಕು ಅಷ್ಟೆ.' ಎಂದು ಶಿವಣ್ಣ ಮಾತನಾಡಿದ್ದಾರೆ.

'ನನ್ನ ಕೈಯಿಂದ ಅವಾರ್ಡ್‌ ಶಿವಣ್ಣ ಕೈ ಸೇರಿರುವುದೇ ನನಗೆ ದೊಡ್ಡ ಸಂತೋಷ. ನಾವಿಬ್ಬರೂ ನಮ್ಮಿಬ್ಬರ ಸ್ನೇಹನ ಮನಸ್ಸಿನಲ್ಲಿ ಇಟ್ಟುಕೊಂಡವರು ಅದನ್ನು ಪ್ರಪಂಚಕ್ಕೆ ಪರಿಚಯ ಮಾಡಿದ್ದು ಈ ಚಾನೆಲ್‌ನವರು. ಮನಸ್ಸಿನೊಳಗೆ ಪ್ರೀತಿ ಮತ್ತು ಗೌರವವಿತ್ತು. ನಮ್ಮಿಬ್ಬರಿಗೆ ಒಂದೇ ವ್ಯತ್ಯಾಸ ಅವರು ಮಚ್ಚು ಹಿಡಿದುಕೊಂಡು ಬಂದ್ರೂ ನಾನು ಹೂ ಹಿಡಿದುಕೊಂಡು ಬಂದೆ' ಎಂದು ರವಿಚಂದ್ರನ್ ಮಾತನಾಡಿದ್ದಾರೆ.

'1985 ರವಿ ಮದ್ವೆಗೆ ಹೋಗಿದ್ದೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಸಿನಿಮಾವೊಂದರಲ್ಲಿ ಬೆಡ್‌ರೂಮ್‌ ಸೀನ್ ಇರುವಾಗ ನಮ್ಮನ್ನು ಹೊರಗೆ ಕಳುಹಿಸಿದ್ದರು ಈಗ ಅದೇ ರವಿ ಅದೆಷ್ಟು ಬೆಡ್‌ರೂಮ್‌ ಸೀನ್‌ಗಳನ್ನು ಮಾಡಿದ್ದಾರೆ ನೋಡಿ. ಇನ್ನೊಂದು ಪೆಂಡಿಂಗ್ ಇದೆ ಆದಷ್ಟು ಬೇಗ ನಾವಿಬ್ಬರೂ ಒಂದು ಸಿನಿಮಾ ಮಾಡಬೇಕು' ಎಂದು ಶಿವಣ್ಣ ಹೇಳಿದ್ದಾರೆ.

Shivaraj Kumar; ಅತ್ತೆಯ ಹಾಗೆ ಗಟ್ಟಿ ನಿರ್ಧಾರ ಮಾಡಿದ ದೊಡ್ಮನೆಯ ದೊಡ್ಡ ಸೊಸೆ

ಶಿವಣ್ಣ-ರವಿ Rapid ಫಯರ್:

ರವಿ : ಚಿನ್ನ ಹೇಗಿದ್ಯಾ?
ಶಿವಣ್ಣ: ಫಸ್ಟ್‌ ಕ್ಲಾಸ್‌ ಆಗಿದ್ದೀನಿ
ರವಿ: ಆರೋಗ್ಯ ಹೇಗಿದೆ:
ಶಿವಣ್ಣ: ಚೆನ್ನಾಗಿದೆ.
ರವಿ: ಫ್ಯಾಮಿಲಿ ಹೇಗಿದೆ?
ಶಿವಣ್ಣ: ಚೆನ್ನಾಗಿದ್ದಾರೆ.
ರವಿ: ಮಗಳು ಹೇಗಿದ್ದಾಳೆ?
ಶಿವಣ್ಣ: ಇಬ್ಬರೂ ಚೆನ್ನಾಗಿದ್ದಾರೆ. ದೊಡ್ಡ ಮಗಳ MS ಆಗಿದೆ. ಆರೋಗ್ಯ ಸರಿಯಾಗಿರಲಿಲ್ಲ ಅದರೆ ಈಗ ಚೆನ್ನಾಗಾಗಿದ್ದಾಳೆ. ಅಳಿಯ ವೈದೇಹಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ಮಗಳು ನಿವೇದಿತಾ ವೆಬ್‌ ಸೀರಿಸ್‌ನ ನಿರ್ಮಾಣ ಮಾಡುತ್ತಿದ್ದಾಳೆ. ಗೀತಾ ಅವರು ಈಗ ಶಕ್ತಿದಾಮ ಪ್ರೆಸಿಡೆಂಟ್, ನನ್ನ ತಾಯಿ ಜಾಗಕ್ಕೆ ಗೀತಾ ಬಂದಿದ್ದಾರೆ. ಏಂಜಲ್ಸ್‌ ಅಂತ ಒಂಡು ಪ್ರಾಡೆಕ್ಟ್‌ನ ಲಾಂಚ್ ಮಾಡಿದ್ದೀವಿ ಇದರಿಂದ ಬರುವ ಹಣ ಶಕ್ತಿದಾಮ ಮಕ್ಕಳಿಗೆ ಸಹಾಯವಾಗುತ್ತದೆ.
ರವಿ: ಗೀತಾನ ಮದುವೆ ಆಗಿಬೇಕಾದರೆ ಇವಾಗ ಇರುವ ಗೀತಗೂ ಏನೂ ವ್ಯತ್ಯಾಸ?
ಶಿವಣ್ಣ: ಆಗ ಎಷ್ಟು ಮೆಚ್ಯೂರ್ ಆಗಿದ್ದರೂ ಈಗ ಅಷ್ಟೇ ಮೆಚ್ಯೂರ್ ಆಗಿದ್ದಾರೆ. ಅವಾಗ ನನ್ನನ್ನು ಎಷ್ಟು ಖಡಕ್ ಆಗಿ ಇಟ್ಕೊಂಡಿದ್ದರು ಇವಾಗಲೂ ಅಷ್ಟೇ ಖಡಕ್ ಆಗಿ ಇಟ್ಕೊಂಡಿದ್ದಾರೆ.
ರವಿ: ಯಾವಾಗಲೂ ಗೀತ ನಿಮ್ಮ ಜೊತೆಗಿದ್ದರು?
ಶಿವಣ್ಣ: ಈ ರೀತಿ ನಾನು ಯಾಕೆ ಹೇಳುತ್ತಿರುವೆ ಅಂದ್ರೆ ಬ್ರೈನ್‌ನಲ್ಲಿ ನನಗೆ ಸಣ್ಣ ಸಮಸ್ಯೆ ಆಗಿತ್ತು. 10 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಳ್ಳಲು ಪ್ಯಾರಿಸ್‌ಗೆ ಹೋಗಿದೆ. ನನ್ನ ಇಬ್ಬರು ತಮ್ಮಂದಿರಿಗೂ ವೀಸ ಸಿಗಲಿಲ್ಲ. ರಿಸ್ಕ್‌ ಫ್ಯಾಕ್ಟರ್ ಜಾಸ್ತಿ ಇತ್ತು ನನಗೆ ಆತಂಕ ಹೆಚ್ಚಿತ್ತು. ಆ ಸಮಯದಲ್ಲಿ ಗೀತ ನನ್ನ ಜೊತೆ ನಿಂತಿದ್ದರ. ನನ್ನ ಆರೋಗ್ಯ ಸರಿ ಆದರೆ ಕೂದಲು ಕೊಡುವುದಾಗಿ ಹೇಳಿದ್ದರು. ಹೆಣ್ಣು ಮಕ್ಕಳು ಕೂದಲನ್ನು ತುಂಬಾ ಇಷ್ಟ ಪಡುತ್ತಾರೆ ಈ ರೀತಿ ಕೊಡಲು ಇಷ್ಟ ಪಡುವುದಿಲ್ಲ. ಆ ಕ್ಷಣ ನಾನು ಜೀವನದಲ್ಲಿ ಮರೆಯುವುದಿಲ್ಲ. ಆಗ ಗೊತ್ತಾಗುತ್ತದೆ ಹೆಂಡತಿ ಬೆಲೆ ಏನೂ ಎಂದು.
ರವಿ: ಇದನ್ನು ನೇರವಾಗಿ ಹೇಳುವ ಧೈರ್ಯ ಇರುವುದಿಲ್ಲ ಅಥವಾ ಅವಕಾಶ ಸಿಗುವುದಿಲ್ಲ..ಈ ಮೂಲಕ ಏನು ಹೇಳುವುದಕ್ಕೆ ಇಷ್ಟ ಪಡುತ್ತೀರಿ?
ಶಿವಣ್ಣ: ಒಮ್ಮೊಮ್ಮೆ ನನ್ನ ನೋಡೆ ಗೀತಾ...ನಿನ್ನ ನಗುವೇ ನನಗೆ ಸಂಗೀತ (ಹಾಡು ಹಾಡಿದ್ದಾರೆ)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?